Thursday 20 November 2014

Spoken English,ಆಗು–ಹೋಗು 2014 ಫೆಬ್ರುವರಿ

ಗುಂಪು ಅಧ್ಯಯನ ಹೀಗಿರಲಿ

ಗುಂಪು ಅಧ್ಯಯನ ಯಾವ ವಯೋಮಾನದಲ್ಲಿ ಒಳಿತು ಎಂಬುವುದರ ಬಗ್ಗೆ ಹಲವಾರು ವಾದಗಳಿವೆ. ಅದರೆ ಸಾಮಾನ್ಯವಾಗಿ ಹದಿಹರೆಯದ ಮಕ್ಕಳು ಗುಂಪು ಅಧ್ಯಯನಕ್ಕೆ ಮುಂದಾಗುತ್ತಾರೆ. ಎಸ್‌ಎಸ್‌ಎಲ್‌ಸಿಯ ಮಕ್ಕಳು ಈಗಾಗಲೇ ತಮ್ಮಿಷ್ಟದ ಸ್ನೇಹಿತರೊಂದಿಗೆ ಓದುವ ಯೋಜನೆಯನ್ನು ಹಾಕಿಕೊಂಡು, ಓದು ಆರಂಭಿಸಿಯೂ ಇರುತ್ತಾರೆ. ಆದರೆ ಯಾವ ವಯಸ್ಸಿನವರು ಎಷ್ಟು ಜನರು, ಹೇಗೆ ಮಾಡಿದರೆ ಒಳಿತು ಎನ್ನುವುದು ಗೊತ್ತೆ?
ಹದಿಹರೆಯದ ಮಕ್ಕಳು ಒಂದೆಡೆ ಸೇರಿದರೆ ಗುಂಪು ಅಧ್ಯಯನಕ್ಕಿಂತಲೂ ಹಾಳು ಹರಟೆ ಹೆಚ್ಚಾಗಬಹುದು ಎನ್ನುವ ಅನುಮಾನ ಹೆತ್ತವರಿಗಿದ್ದೇ ಇರುತ್ತದೆ. ಈ ಅನುಮಾನ ಪರಿಹರಿಸುವ ಹೊಣೆ ಯಾವತ್ತಿದ್ದರೂ ಮಕ್ಕಳ ಮೇಲೆಯೇ ಇರುತ್ತದೆ. ಆದಷ್ಟೂ ತಮ್ಮ ಸ್ನೇಹಿತರು, ಅವರ ಪಾಲಕರೊಡನೆ ಪರಿಚಯ ಇರುವವರ ಮನೆಯಲ್ಲಿಯೇ ಗುಂಪು ಅಧ್ಯಯನಕ್ಕೆ ತೊಡಗುವುದು ಸೂಕ್ತ. ಸುರಕ್ಷಿತ. 
ವಯಸ್ಸು
ಗ್ರೂಪ್ ಸ್ಟಡಿ ರೂಪುರೇಷೆ ಯಾವಾಗಲೂ ಮಕ್ಕಳ ವಯಸ್ಸನ್ನು ಅವಲಂಬಿಸಿರುತ್ತದೆ. ಪ್ರಾಥಮಿಕ ಹಂತದಿಂದ ಪ್ರೌಢಶಾಲೆವರೆಗೆ ಮಕ್ಕಳ ಶಿಕ್ಷಕರ ಮಾರ್ಗ­ದರ್ಶನ ಹಾಗು ಮೇಲ್ವಿಚಾರಣೆ ತುಂಬಾ ಮಹತ್ವದ್ದು. ಪ್ರಾಥಮಿಕ ಹಂತದಲ್ಲಿ ಶಾಲೆಯಲ್ಲಿಯೇ ಗುಂಪು ಅಧ್ಯಯನದ ಪರಿಕಲ್ಪನೆಯನ್ನು ಪರಿಚಯಿಸಬಹುದಾಗಿದೆ. ಅತಿಜಾಣ, ಜಾಣ ಹಾಗೂ ಸಾಮಾನ್ಯ ವಿದ್ಯಾರ್ಥಿಗಳ ಗುಂಪುಗಳನ್ನು ರಚಿಸಿ ಓದಲು ಪ್ರೇರೇಪಿಸಬಹುದಾಗಿದೆ. ಸಾಂಘಿಕ ಯತ್ನ ಮತ್ತು ಪರಸ್ಪರ ಸಹಕಾರ ಗುಣಗಳನ್ನು ಬೆಳೆಸಲು ಇದು ಅನುಕೂಲವಾಗುತ್ತದೆ. ಪ್ರತಿ ಗುಂಪಿನಲ್ಲಿಯೂ ಪರಸ್ಪರ ಮತ್ಸರವಿರದಂತೆ ಸಾಂಘಿಕ ಗುಣವನ್ನು ಬೆಳೆಸುವುದು ಶಿಕ್ಷಕರ ಹೊಣೆಯಾಗಿರುತ್ತದೆ. ಮೇಲರಿಮೆ–ಕೀಳರಿಮೆಗಳಿಲ್ಲದೇ ಮಕ್ಕಳು ಬೆಳೆಯಲು ಅನುಕೂಲವಾಗುತ್ತದೆ.
ಶಾಲಾ ಶಿಕ್ಷಣದಲ್ಲಿ ಗುಂಪು ಅಧ್ಯಯನ ಶಿಕ್ಷಕರ ಮಾರ್ಗದರ್ಶನದಲ್ಲಿ ನಡೆಯುವುದರಿಂದ ಕೆಲವು ಋಣಾತ್ಮಕ ಪರಿಣಾಮಗಳಿದ್ದರೂ ನಗಣ್ಯ ಎನಿಸುತ್ತವೆ ಎನ್ನುತ್ತಾರೆ ಬೇಗೂರು ಸರ್ಕಾರಿ ಪ್ರೌಢಶಾಲೆಯ ಗಣಿತ ಶಿಕ್ಷಕಿ ಎನ್.ಎ. ರಾಧಾ.
‘ಮಾರ್ಗದರ್ಶನ ಎಂದಾಕ್ಷಣ ಮಕ್ಕಳಲ್ಲಿ ಭಯ ಹುಟ್ಟಿಸಿ ಅಥವಾ ಒತ್ತಾಯಕ್ಕೆ ಅಧ್ಯಯನ ನಡೆಸುವಂತೆ ಮಾಡುವುದಲ್ಲ. ಕಲಿಕೆಗೆ ಅನುಕೂಲ­ವಾಗುವಂತೆ, ಅಧ್ಯಯನ ವಿಷಯಾಂತರ­ವಾಗದಂತೆ ಹಾಗೂ ಕಾಡು ಹರಟೆಗೆ ಪರಿವರ್ತನೆ ಆಗದಂತೆ ನಿಯಂತ್ರಿಸುವ ಮತ್ತು ಉತ್ತೇಜನ ನೀಡುವ ಜಾಣ್ಮೆ ಮಾರ್ಗದರ್ಶಕರಿ­ಗೆ ಇರಬೇಕಾಗುತ್ತದೆ’ ಎನ್ನುವುದು ಅವರ ಅಭಿಮತ. ವಾಸ್ತವದಲ್ಲಿ ಶಾಲಾ ಮಟ್ಟದಲ್ಲಿ ನಡೆಯುವ ಅದೆಷ್ಟೋ ‘ಗ್ರೂಪ್ ಸ್ಟಡಿ’ ಸಾಮಾನ್ಯವಾಗಿ ಗುಂಪಾಗಿ ಕುಳಿತು­ ತಮ್ಮಷ್ಟಕ್ಕೆ ತಾವು ಓದಿಕೊಳ್ಳು­ವುದಕ್ಕೆ ಸೀಮಿತವಾಗಿರುತ್ತದೆ. ಇಲ್ಲಿ ಚರ್ಚೆ­ಗಾಗಲೀ, ವಿಚಾರ ವಿನಿಮ­ಯವಾಗಲೀ ನಡೆಯುವುದೇ ಇಲ್ಲ.
ಮನಸ್ಥಿತಿ
ವಯಸ್ಸಿನ ಜತೆಗೆ ವಿದ್ಯಾರ್ಥಿಗಳ ಮನಸ್ಥಿತಿಯೂ ಗ್ರೂಪ್‌ ಸ್ಟಡಿ ಯಶಸ್ಸಿಗೆ ಬಹಳಾನೇ ಮುಖ್ಯ. ಅವರ ನಡುವಿನ ಹೊಂದಾಣಿಕೆ, ಸ್ಪರ್ಧೆಗಿಂತ ಸಹಕಾರ ಮುಖ್ಯವಾಗುತ್ತದೆ. ಈ ಹಿನ್ನೆಲೆಯಲ್ಲಿ ಹತ್ತನೇ ತರಗತಿಯಿಂದ ಗುಂಪು ಅಧ್ಯಯನದ ಸ್ವರೂಪವು ಬದಲಾಗುತ್ತದೆ. ಸಮಾನ ಮನಸ್ಕರು ತಮಗೆ ಕಠಿಣವೆನಿಸುವ ವಿಷಯಗಳನ್ನು ಚರ್ಚಿಸುತ್ತ, ಮನನ ಮಾಡಿಕೊಳ್ಳಲು ಗುಂಪು ಅಧ್ಯಯನವನ್ನು ಅವಲಂಬಿಸುತ್ತಾರೆ. ಎಲ್ಲ ವಿಷಯಗಳಿಗೂ ಗುಂಪುಗೂಡಿ ಓದುವ ಬದಲು, ತಮಗೆ ಕಠಿಣವೆನಿಸಿದ ಅಧ್ಯಾಯ, ವಿಷಯಗಳನ್ನು ಒಂದೆಡೆ ಕಲೆತು ಓದುವ ಅಭ್ಯಾಸ ಮಾಡಿಕೊಳ್ಳುತ್ತಾರೆ. ಪರಸ್ಪರ ಚರ್ಚೆಯ ನಂತರವೂ ವಿಷಯ ತಿಳಿಗೊಳ್ಳದಿದ್ದರೆ ಅಧ್ಯಾಪಕರ ಸಹಾಯ ಯಾಚಿಸುವುದು ಈ ಗುಂಪಿನ ಉದ್ದೇಶವಾಗಿರುತ್ತದೆ.
ಒಬ್ಬರೇ ಓದಿರುವುದನ್ನು ಮನನ ಮಾಡಿಕೊಳ್ಳುವುದು, ಸ್ಮರಣೆಯಲ್ಲಿ ಉಳಿಯುವುದಕ್ಕಿಂತಲೂ ಪರಸ್ಪರ ಚರ್ಚೆಯಿಂದ ತಿಳಿದುಕೊಳ್ಳುವುದು ಬಹುಪಾಲು ಮಟ್ಟಿಗೆ ಓದಿದ್ದು ಮನದಟ್ಟಾಗುತ್ತದೆ. ಈ ವ್ಯತ್ಯಾಸದಿಂದಲೇ ಬಹುಪಾಲು ವಿದ್ಯಾರ್ಥಿಗಳು ಗುಂಪು ಅಧ್ಯಯನವನ್ನು ಅವಲಂಬಿಸಿರುತ್ತಾರೆ. ಪ್ರತಿ ಗುಂಪಿನಲ್ಲಿಯೂ ಒಬ್ಬಿಬ್ಬರು ವಿದ್ಯಾರ್ಥಿಗಳಲ್ಲಿ ಏಕಾಗ್ರತೆಯ ಕೊರತೆ ಇದ್ದೇ ಇರುತ್ತದೆ. ಅಂಥವರು ತಾವೂ ಓದದೇ ಇತರರನ್ನು ಮಾತಿಗೆಳೆಯುವ ಯತ್ನದಲ್ಲಿರುತ್ತಾರೆ. ಆದರೆ ಗುರಿ ಸ್ಪಷ್ಟ ಇರುವ ವಿದ್ಯಾರ್ಥಿಗಳು ಇಂಥವರನ್ನು ಕ್ರಮೇಣ ಗುಂಪಿನಿಂದ ದೂರ ಮಾಡುತ್ತಾರೆ, ಇಲ್ಲವೇ ಅವರನ್ನೂ ಓದಿನ ಹಾದಿಗೆಳೆಯುತ್ತಾರೆ. ಯಾವುದಕ್ಕೂ ಬಹುಪಾಲು ಜನರು ಓದಿನ ಬಗ್ಗೆ ಸ್ಪಷ್ಟ ಚಿತ್ರಣವಿದ್ದಲ್ಲಿ ಆ ಗುಂಪು ಅಧ್ಯಯನ ಯಶಸ್ಸಿನ ಹಾದಿಯಲ್ಲಿ ಸಾಗುತ್ತಿದೆ ಎಂದೇ ಅರ್ಥ.
ಒಂದು ತರಗತಿಯಲ್ಲಿ ಗ್ರೂಪ್‌ ಸ್ಟಡಿ ಎನ್ನುವುದು ಸಾಮಾನ್ಯವಾಗಿ ಮೂರು ವಿಭಾಗವಾಗಿ ರೂಪುಗೊಳ್ಳುತ್ತದೆ ಎನ್ನುತ್ತಾರೆ ಸೆ. ಆ್ಯನೆ ಮಹಿಳಾ ಕಾಲೇಜಿನ ಸಹಾಯ ಉಪನ್ಯಾಸಕ ಆರ್‌.ಎಂ. ಸಂತೋಷ್‌ ಕುಮಾರ್‌. ರ್‍ಯಾಂಕ್‌ ಬರುವ ವಿದ್ಯಾರ್ಥಿಗಳು ಬೇರೆ ವಿದ್ಯಾರ್ಥಿಗಳೊಂದಿಗೆ ಹೆಚ್ಚಾಗಿ ಬೆರೆಯಲು ಇಷ್ಟಪಡುವುದಿಲ್ಲ. ಸದಾ ಇಬ್ಬರಿಂದ ಮೂವರು ಸೇರಿ ಜತೆಯಲ್ಲೇ ಇರುತ್ತಾರಾದರೂ ಕಲಿಕೆಗೆ ಸಂಬಂಧಿಸಿದ ಎಲ್ಲಾ ವಿಷಯಗಳನ್ನೂ ಮುಕ್ತವಾಗಿ ಚರ್ಚಿಸುವುದಿಲ್ಲ. ಇನ್ನು ಶೇ 60ರಿಂದ ಶೇ 80ರ ಮಧ್ಯೆ ಅಂಕ ಪಡೆಯುವ ವಿದ್ಯಾರ್ಥಿಗಳು ತಮ್ಮ ಅಂಕ ಸುಧಾರಿಸಿಕೊಳ್ಳಲು ನಿರ್ಧರಿಸಿ ಒಂದು ಗುಂಪು ಕಟ್ಟಿಕೊಳ್ಳುತ್ತಾರೆ. ಅಂತೆಯೇ ಕೊನೆಯದಾಗಿ ಫೇಲಾಗುವ ಭಯವಿರುವ ಅಥವಾ ಕೇವಲ ಪಾಸಾಗುವಷ್ಟು ಅಂಕ ಪಡೆಯುವ ವಿದ್ಯಾರ್ಥಿಗಳು ತಮಗಿಂತ ಹೆಚ್ಚು ಅಂಕ ಪಡೆಯುವವರ ಸ್ನೇಹ ಸಂಪಾದಿಸಿ ಅವರೊಂದಿಗೆ ಗುಂಪು ಕಲಿಕೆ ನಡೆಸುತ್ತಾರೆ. ಈ ಎರಡೂ ಹಂತಗಳಲ್ಲಿ ಗ್ರೂಪ್‌ ಸ್ಟಡಿ ಹೆಚ್ಚು ಮಹತ್ವ ಪಡೆದುಕೊಳ್ಳುತ್ತದೆ ಎನ್ನುತ್ತಾರೆ ಅವರು.
ಗುಂಪಿನ ರಚನೆ
ಗ್ರೂಪ್ ಸ್ಟಡಿ ನಡೆಸಲು ಮುಖ್ಯವಾಗಿ ಸಮಾನ ಮನಸ್ಕರು, ಓದಿನಲ್ಲಿ ಆಸಕ್ತಿ ಇರುವವರು ಅತ್ಯಗತ್ಯ. ಅಂತೆಯೇ ಎಲ್ಲರ ಮನೆಯೂ ಹತ್ತಿರದಲ್ಲೇ ಇದ್ದರೆ, ಗ್ರೂಪ್ ಸ್ಟಡಿಗೆಂದು ಎಲ್ಲರೂ ಒಂದೆಡೆ ಸೇರಲು ಹೆಚ್ಚು ಸಮಯ ವ್ಯರ್ಥವಾಗುವುದು ತಪ್ಪುತ್ತದೆ. ಅಲ್ಲದೆ ಮನೆಯವರಿಗೂ ಉಳಿದ ಮಕ್ಕಳ ಬಗ್ಗೆ ತಿಳಿದಿರುತ್ತದೆ.
ನಿರ್ದಿಷ್ಟ ಸಮಯ
ಇದೇ ರೀತಿಯಾಗಿ ಇದರ ಯಶಸ್ಸಿಗೆ ಗ್ರೂಪ್ ಸ್ಟಡಿ ನಡೆಯುವ ಸಮಯ ಕೂಡ ತನ್ನದೇ ಆದ ಪಾತ್ರವನ್ನು ನಿರ್ವಹಿಸುತ್ತದೆ. ಬಹುತೇಕ ಮಕ್ಕಳು ನೀರವವೆನಿಸುವ ರಾತ್ರಿಯನ್ನು ಅಥವಾ ಬೆಳಗಿನ ಜಾವವನ್ನು ಅಧ್ಯಯನಕ್ಕೆ ಆಯ್ಕೆ ಮಾಡಿಕೊಳ್ಳುತ್ತಾರೆ. ಪರೀಕ್ಷೆಗಳು ಸಮೀಪವಿದ್ದಾಗ ಯಾವುದೇ ಸದ್ದುಗದ್ದಲಗಳಿರದ ಈ ಸಮಯ ಓದುವುದಕ್ಕೆ ಅನುಕೂಲವೆಂಬುದು ಅನೇಕ ವಿದ್ಯಾರ್ಥಿಗಳ ನಂಬಿಕೆ. ಗುಂಪು ಓದಿಗೆ ಅನುಕೂಲವಿರುವ ಮನೆಗಳನ್ನು ಗುರುತಿಸಿಕೊಳ್ಳುವುದು ಒಳಿತು.
ಖಾಲಿ ಹೊಟ್ಟೆಯಲ್ಲಿ ಓದುವ ಬದಲು ಹಾಲು, ಹಣ್ಣಿನ ಸೇವನೆಯು ಓದಿಗೆದ್ದು ಬೇಗ ಗ್ರಹಿಸಲು ಅನುಕೂಲವಾಗುತ್ತದೆ. ಗಾಳಿ ಬೆಳಕಿನ ತೊಂದರೆ ಇರಬಾರದು. ಎಲ್ಲಕ್ಕೂ ಹೆಚ್ಚಾಗಿ ಓದುವುದರಿಂದ ಗಮನ ಭಂಗವಾಗುವ ಯಾವುದೇ ಚಟುವಟಿಕೆಗಳು ಸುತ್ತಮುತ್ತ ಇರಬಾರದು. ಇವನ್ನೆಲ್ಲ ಗಮನದಲ್ಲಿರಿಸಿಕೊಂಡರೆ ಗುಂಪು ಅಧ್ಯಯನ ಖಂಡಿತವಾಗಿಯೂ ವ್ಯಕ್ತಿತ್ವವಿಕಸನಕ್ಕೆ, ಉತ್ತಮ ಅಂಕಗಳ ಗಳಿಕೆಗೆ ಸಹಾಯವಾಗುತ್ತದೆ.

ಗುಂಪು ಅಭ್ಯಾಸ: ಯಶಸ್ಸಿಗೆ ಪೂರಕ

ಸ್ಪರ್ಧಾತ್ಮಕ ಪರೀಕ್ಷೆಗಳು ವ್ಯಕ್ತಿಯ ಬಹುಮುಖ ವ್ಯಕ್ತಿತ್ವವನ್ನು ಅಳೆಯುತ್ತವೆ. ಈ ವ್ಯಕ್ತಿತ್ವ ರೂಢಿಸಿಕೊಳ್ಳಲು ಗುಂಪು ಅಭ್ಯಾಸ ಸಹಕಾರಿ ಎನ್ನುವುದು ಯಶಸ್ವಿ ವ್ಯಕ್ತಿಗಳ ಗುಟ್ಟನ್ನು ಪರಾಮರ್ಶಿಸಿದಾಗ ತಿಳಿದು ಬರುವ ಸತ್ಯ. ಗುಂಪು ಅಭ್ಯಾಸವನ್ನು ಹೀಗೆ ಮಾಡಬೇಕು ಎಂದು ನಿರ್ದಿಷ್ಟವಾದ ಯಾವುದೇ ತತ್ವಗಳಿಲ್ಲ. ಆದರೆ ಆರೋಗ್ಯಕರವಾಗಿ ಮತ್ತು ಕಡಿಮೆ ಅವಧಿಯಲ್ಲಿ ಯಶಸ್ಸು ಸಾಧಿಸಲು ಕೆಲ ತತ್ವಗಳನ್ನು ಪಾಲಿಸುವುದು ಅವಶ್ಯ.
ಗುಂಪು ಅಭ್ಯಾಸ ಸದಸ್ಯರ ಮಧ್ಯ ಆರೋಗ್ಯಕರವಾದ ಸ್ಪರ್ಧಾತ್ಮಕ ವಾತಾವರಣ ನಿರ್ಮಿಸುವುದರಿಂದ ಬೇರೆಯವರೊಂದಿಗೆ ಹೋಲಿಸಿಕೊಂಡು ತಮ್ಮ ತಪ್ಪನ್ನು ಸರಿಪಡಿಸಿಕೊಳ್ಳಬಹುದು. ಗುಂಪು ಅಭ್ಯಾಸದಲ್ಲಿ ಮೂರರಿಂದ ನಾಲ್ಕು ಜನ ಇರುವುದು ಸೂಕ್ತ. ಹೆಚ್ಚು ಜನರಿಂದ ಕೂಡಿದ್ದರೆ ಹರಟೆ ಮತ್ತು ವೈಮನಸ್ಸಿನಂತಹ ಸಮಸ್ಯೆಗಳು ಸೃಷ್ಟಿಸುತ್ತವೆ.
ಅಭ್ಯಾಸ ಮಾಡುತ್ತಲೇ ವಿಷಯದ ಕುರಿತು ಮತ್ತು ತಲೆದೋರುವ ಸಮಸ್ಯೆಗಳ ಕುರಿತು ಚರ್ಚೆ ಮಾಡಬಾರದು. ಇದರಿಂದ ಇತರರಿಗೆ ತೊಂದರೆಯಾಗುತ್ತದೆ. ಕೆಲವೊಮ್ಮೆ ವಿಷಯಾಂತರವಾಗಿ ಬೇರೊಂದು ವಿಷಯಕ್ಕೆ ದಾರಿ ಮಾಡಿಕೊಡುವ ಅವಕಾಶಗಳಿಂದ ಅಭ್ಯಾಸ ಅರ್ಧದಲ್ಲಿಯೇ ನಿಲ್ಲುತ್ತದೆ. ಆದ್ದರಿಂದ ಒಂದು ನಿರ್ದಿಷ್ಟ ಅವಧಿಯಲ್ಲಿ ಎಲ್ಲರೂ ಒಂದೇ ವಿಷಯ ಅಭ್ಯಾಸ ಮಾಡಿದ ನಂತರ ಆ ವಿಷಯದಲ್ಲಿ ಉದ್ಭವಿಸುವ ಸಮಸ್ಯೆಗಳನ್ನು ಅಥವಾ ಸಂದೇಹಗಳನ್ನು ಚರ್ಚೆಯ ಮೂಲಕ ಬಗೆಹರಿಸಿಕೊಳ್ಳಬಹುದು.
ಎಲ್ಲರೂ ಒಂದೇ ವಿಷಯವನ್ನು ಅಭ್ಯಾಸ ಮಾಡಿದ್ದರೂ ನೋಡುವ ದೃಷ್ಟಿಕೋನ ಮತ್ತು ವೈಚಾರಿಕತೆ ಬೇರೆ ಬೇರೆಯಾಗಿರುತ್ತದೆ. ಇದು ವಿಷಯ ವಸ್ತುವಿನ ಕುರಿತು ವಿಮರ್ಶಾತ್ಮಕವಾಗಿ ಉತ್ತರ ತಯಾರಿಸಲು ಸೂಕ್ತ. ಸ್ಪರ್ಧಾತ್ಮಕ ಪರೀಕ್ಷೆಯ ತರಬೇತಿಗೆ ಹೋಗಲು ಆಗದಿರುವವರಿಗೆ ಇದು ಒಳ್ಳೆಯ ವಿಧಾನ. ಗುಂಪು ಚರ್ಚೆಯಿಂದ ಗೊತ್ತಿಲ್ಲದ ವಿಷಯಗಳು ಗೊತ್ತಾಗುತ್ತವೆ ಮತ್ತು ಗೊತ್ತಿರುವ ವಿಷಯ ಪುನರ್‌ಮನನವಾಗುವುದರಿಂದ ಗಟ್ಟಿಗೊಳ್ಳುತ್ತದೆ.
ಒಂದೇ ಪರೀಕ್ಷೆಗೆ ತಯಾರಿ ನಡೆಸುವವರು, ಒಂದೇ ಮಾನಸಿಕ ಸ್ಥಿತಿ ಹೊಂದಿದವರೊಡನೆ ಗುಂಪು ಅಭ್ಯಾಸದಲ್ಲಿ ತೊಡಗುವುದು ಸೂಕ್ತ. ಇಲ್ಲದೇ ಇದ್ದರೇ ಕೇವಲ ಸಮಯದ ದುರುಪಯೋಗವಾಗುತ್ತದೆ.
ಗುಂಪು ಅಭ್ಯಾಸ ಸಹಕಾರಿ
‘ ಗುಂಪು ಅಭ್ಯಾಸ ರೂಮ್‌ ಮಾಡಿಕೊಂಡು ಓದುವವರಿಗೆ ಅತ್ಯುತ್ತಮ ವಿಧಾನ. ಆದರೆ ಅಭ್ಯಾಸದಲ್ಲಿ ತೊಡಗಿಕೊಂಡಾಗ ಅನಾವಶ್ಯಕ ರಾಜಕಾರಣದ ಚರ್ಚೆ ಮತ್ತು ವೈಯಕ್ತಿಕ ಸಮಸ್ಯೆಗಳ ಚರ್ಚೆಯಿಂದ ದೂರ ಇರಬೇಕು. ನನ್ನ ಯಶಸ್ಸಿನಲ್ಲಿ ಹೆಂಡತಿಯ ಪಾತ್ರವು ಇದೆ. ಏಕೆಂದರೆ ನಾವಿಬ್ಬರೂ ವಿಷಯವನ್ನು ಹಂಚಿಕೊಂಡು  ಓದುತ್ತಿದ್ದೆವು. ಆದರೆ ನಾವಿಬ್ಬರೂ ಇನ್ನೂ ಯುಪಿಎಸ್‌ಸಿಗಾಗಿ ಅಭ್ಯಾಸ ನಿರತರಾಗಿದ್ದೆವೆ’
-ಮೇಜರ್‌ ಸಿದ್ದಲಿಂಗಯ್ಯ ಹಿರೇಮಠ
ಜಿಲ್ಲಾಧಿಕಾರಿಗಳು, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಧಾರವಾಡ
ಪರಸ್ಪರ ಯಶಸ್ಸು
‘ಗುಂಪು ಅಭ್ಯಾಸವಿಲ್ಲದೇ ನಾವು ಐಎಎಸ್‌ ಪರೀಕ್ಷೆ ಪಾಸಾಗಲು ಆಗುತ್ತಿರಲಿಲ್ಲ. ನಾವು ನಾಲ್ಕು ಜನರೊಂದಿಗೆ ಅಭ್ಯಾಸ ನಿರತರಾಗಿದ್ದೆವು. ಅದರಲ್ಲಿ ನಾನು ಮತ್ತು ಹೆಗಡೆ ಯಶಸ್ವಿಯಾದೆವು. ಉಳಿದ ಇಬ್ಬರು ನನ್ನ ಯಶಸ್ಸಿನ ಸೂತ್ರಧಾರಿಗಳು ಎನ್ನಬಹುದು’
-ಲಕ್ಷ್ಮಣ ನಿಂಬರಗಿ 2013ರ ಯುಪಿಎಸ್‌ಸಿ ಪರೀಕ್ಷೆಯಲ್ಲಿ 104ನೇ ರ್‍ಯಾಂಕ್‌
ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕಲೆ, ವಿಜ್ಞಾನ, ವಾಣಿಜ್ಯ ಎಂದು ಕೇವಲ ನಿರ್ದಿಷ್ಟ ವಿಷಯದ ಮೇಲೆ ಪ್ರಶ್ನೆ ಕೇಳಲಾಗುವುದಿಲ್ಲ. ಇಲ್ಲಿ ಎಲ್ಲ ಕ್ಷೇತ್ರಗಳ ಪ್ರಶ್ನೆಗಳನ್ನು ಕೇಳುವುದರಿಂದ ವಿವಿಧ ಕ್ಷೇತ್ರಗಳಲ್ಲಿ ಹೆಚ್ಚು ಜ್ಞಾನ ಹೊಂದಿದವರೊಂದಿಗೆ ಚರ್ಚೆ ಅವಶ್ಯ. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಅಲ್ಪ ಅವಧಿಯಲ್ಲಿಯೇ ಯಶಸ್ಸು ಸಿಗುವುದು ಕಷ್ಟ. ಆದ್ದರಿಂದ ದೀರ್ಘ ಅವಧಿಯಲ್ಲಿ ನಡೆಯುವ ಅಭ್ಯಾಸದಲ್ಲಿ ಕಾಡುವ ಏಕಾಂಗಿತನವನ್ನು ತಡೆಯಲು ಗುಂಪು ಅಭ್ಯಾಸವೇ ಸೂಕ್ತ.
ಈ ವಿಧಾನದಿಂದ ಒಬ್ಬರಿಗೊಬ್ಬರು ಪರೀಕ್ಷೆಗಳಲ್ಲಿ ಮಾಡುವ ತಪ್ಪುಗಳನ್ನು ಸರಿಪಡಿಸಲು ಒಳ್ಳೆಯ ಮಾರ್ಗ. ಪರೀಕ್ಷೆಗಳು ಹತ್ತಿರ ಬಂದಾಗ ವಿಷಯ ವ್ಯಾಪ್ತಿ ಹೆಚ್ಚು ಇರುವುದರಿಂದ ಗುಂಪು ಅಭ್ಯಾಸದ ಮೂಲಕ ಪ್ರತಿಯೊಬ್ಬರು ಆಸಕ್ತಿದಾಯಕ ವಿಷಯದ ಪುಸ್ತಕಗಳನ್ನು ಓದಿ ನಂತರ ಇತರರೊಂದಿಗೆ ಹಂಚಿಕೊಳ್ಳುವುದರಿಂದ ಸಮಯ ಉಳಿಸಬಹುದು.
ಕೆಲವೊಂದು ಸ್ಪರ್ಧಾತ್ಮಕ ಪರೀಕ್ಷೆಗಳಾದ ಆರ್ಮಿ ಮತ್ತು ಎಂಬಿಎಯ ಕ್ಯಾಟ್‌ನಂತಹ ಪರೀಕ್ಷೆಗಳಲ್ಲಿ ಗುಂಪು ಚರ್ಚೆಗೆ ಅಂಕಗಳನ್ನು ನಿಗದಿ ಪಡಿಸಿರುವುದರಿಂದ ಗುಂಪು ಅಭ್ಯಾಸ ವಿಷಯದ ಅಭಿವ್ಯಕ್ತಿಗೆ ದಾರಿ ಮಾಡಿಕೊಡುತ್ತದೆ.
ಕೇಂದ್ರ ಸರ್ಕಾರದ ಎಸ್‌ಎಸ್‌ಸಿ ಪರೀಕ್ಷೆಯನ್ನೇ ಮಾದರಿಯನ್ನಾಗಿ ತೆಗೆದುಕೊಳ್ಳಿ ಅದರಲ್ಲಿ ನಾಲ್ಕು ಘಟಕಗಳಿರುತ್ತವೆ ಅವು ಮಾನಸಿಕ ಸಾಮರ್ಥ್ಯ, ಸಾಮಾನ್ಯ ಜ್ಞಾನ, ಇಂಗ್ಲಿಷ್್ ಜ್ಞಾನ, ಅಭಿಕ್ಷಮತಾ ಪರೀಕ್ಷೆ (aptitude test) ಇದರಲ್ಲಿ ವಿಜ್ಞಾನ ವಿಭಾಗದವರು ಮಾನಸಿಕ ಪರೀಕ್ಷೆ ಮತ್ತು ಬೌದ್ಧಿಕ ಸಾಮರ್ಥ್ಯ ಪರೀಕ್ಷೆಗಳಲ್ಲಿ ಹೆಚ್ಚು ಪರಿಣಿತರಾದರೆ,  ಸಾಮಾನ್ಯ ಜ್ಞಾನ, ಇಂಗ್ಲಿಷ್ ಜ್ಞಾನದಲ್ಲಿ ಕಲಾ ವಿಭಾಗದವರು ಹೆಚ್ಚು ಪರಿಣಿತರಿರುತ್ತಾರೆ ಗುಂಪು ಅಭ್ಯಾಸದಲ್ಲಿ ಎರಡು ವಿಭಾಗದವರು ತೊಡಗಿಕೊಂಡಿದ್ದರೆ ಬೇಗ ಯಶಸ್ಸು ಹೊಂದಬಹುದು.

ಪ್ಯಾಸಿವ್‌ ವಾಯ್ಸ್‌ನ ಉಪಯೋಗ

ಭಾಷೆಯ ವ್ಯಾಕರಣಕ್ಕೂ ಅರ್ಥವಂತಿಕೆಗೂ ಇರುವ ಸಂಬಂಧವನ್ನು ಗ್ರಹಿಸುವುದು ಭಾಷಾ ಕಲಿಕೆಯಲ್ಲಿ ಅತಿಮುಖ್ಯ ಅಂಶ. ಈ ನಿಟ್ಟಿನಲ್ಲಿ Passive voice ಮತ್ತು active voice ಗಳ ರಚನೆ ಮತ್ತು ಅರ್ಥವ್ಯಾಪ್ತಿಗಳನ್ನು ಸರಿಯಾಗಿ ಕಲಿಯುವುದರಿಂದ ನಮ್ಮ ಭಾಷೆಯ ಸಂವಹನ ಶಕ್ತಿ ಹೆಚ್ಚುತ್ತದೆ.
ಯಾವುದೇ ವಾಕ್ಯದಲ್ಲಿನusubject  ಕರ್ತೃವಾಗಿದ್ದರೆ, ಅಂತಹ ವಾಕ್ಯದಲ್ಲಿನ ಕ್ರಿಯಾಪದವು active voiceನಲ್ಲಿರುತ್ತದೆ.
ಉದಾ: 1. Sita loves flowers.
2. Ram writes a letter.
3. The teacher taught the lesson.
ಈ ಎಲ್ಲಾ ವಾಕ್ಯಗಳಲ್ಲಿ Sita, Ram, The teacher, ಎಂಬ subsubjectಗಳು ಕರ್ತೃಗಳಾಗಿವೆ (agents of action) ಹಾಗಾಗಿ, loves, writes, taught ಎಂಬ ಕ್ರಿಯಾಪದಗಳು active voiceನಲ್ಲಿವೆ.
ಹಾಗೆಯೇ, ಯಾವುದೇ ವಾಕ್ಯದಲ್ಲಿನ subject ಕ್ರಿಯೆಗೆ ಒಳಪಟ್ಟಿದ್ದರೆ, ಅಂತಹ ವಾಕ್ಯದಲ್ಲಿನ ಕ್ರಿಯಾಪದವು Passive voiceನಲ್ಲಿರುತ್ತದೆ. ಉದಾ:
1.Flowers are loved by Sita.
2. A letter is written by Ram
3. The lesson was taught by the teacher.
Flowers, A letter, The lesson ಈ ಮೇಲಿನ ವಾಕ್ಯಗಳಲ್ಲಿನ subject ಗಳು. ಇಲ್ಲಿ, ಇವು ಕ್ರಿಯೆಯನ್ನು ಮಾಡುತ್ತಿಲ್ಲ. ಆದರೆ ಕ್ರಿಯೆಗೆ ಒಳಪಟ್ಟಿವೆ ಎಂಬುದನ್ನು ಗಮನಿಸಬೇಕು. Passive voiceನ ಮುಖ್ಯಲಕ್ಷಣವೇ (identifying feature) ಇದು.
ಸಾಮಾನ್ಯವಾಗಿ Passive voice ಅನ್ನು ಬಳಸುವ ಕೆಲವು ಸಂದರ್ಭಗಳನ್ನು ಇಲ್ಲಿ ಗಮನಿಸಿ:
*ನಮಗೆ ಕ್ರಿಯೆಯನ್ನು ಮಾಡಿದವರು ಯಾರು ಎಂದು ತಿಳಿಯದೆ ಇದ್ದಾಗ 1. passive voice ಅನ್ನು ಬಳಸುತ್ತೇವೆ.
ಉದಾ: My purse was stolen last night.
(ಇಲ್ಲಿ ಪರ್ಸನ್ನು ಕದ್ದವರಾರು ಎಂಬ ಮಾಹಿತಿ ಇಲ್ಲ.)
*ಕ್ರಿಯೆ ನಡೆಸಿದವರು ಮುಖ್ಯವಲ್ಲದೆ ಇದ್ದಾಗ passive voice ಅನ್ನು ಬಳಸಬಹುದು.
ಉದಾ: The building is constructed very quickly.
(ಇಲ್ಲಿ ಕಟ್ಟಡವನ್ನು ಕಟ್ಟಿದವರಾರು ಎಂಬುದು ಮುಖ್ಯವಲ್ಲ. ಅದಕ್ಕೆ ಬದಲಾಗಿ, ಕಟ್ಟಡ ನಿರ್ಮಾಣವಾಗಿರುವುದಷ್ಟೇ ಮುಖ್ಯ.)
*ಕ್ರಿಯೆಯ ಗುರಿ ಯಾರು ಎಂಬ ಅಂಶವನ್ನು ಎತ್ತಿ ತೋರಿಸಬೇಕಾದ ಸಂದರ್ಭಗಳಲ್ಲಿ  passive voice ಬಳಸುತ್ತೇವೆ.
ಉದಾ: Ashok was chosen the best singer of his school.
(ಇಲ್ಲಿ Ashokಗೆ ಹೆಚ್ಚು ಪ್ರಾಮುಖ್ಯ ಕೊಡಲಾಗಿದೆಯೇ ಹೊರತು, ಯಾರು ಅವನನ್ನು ಆಯ್ಕೆ ಮಾಡಿದರು ಎಂಬುದು ಮುಖ್ಯವಲ್ಲ)
*ಘೋಷಣೆಗಳು ಹಾಗೂ ಸೂಚನೆಗಳನ್ನು ಕೊಡುವ ಸಂದರ್ಭದಲ್ಲಿ passive voiceನ ಬಳಕೆ ಸೂಕ್ತ.
ಉದಾ: PPatrons are asked not to smoke. Application form should be filled in black ink.
*ಮಾಧ್ಯಮದ ಬರವಣಿಗೆಯಲ್ಲಿಯೂ passive voice ಇರುವಂತಹ ವಾಕ್ಯಗಳು ಹೆಚ್ಚಾಗಿ ಕಾಣುಸಿಗುತ್ತವೆ.
Passive voiceeನ ಬಗ್ಗೆ ನಾವು ತಿಳಿದುಕೊಳ್ಳಬೇಕಾದ ಇನ್ನೊಂದು ಮುಖ್ಯವಾದ ವಿಷಯವೆಂದರೆ, ಇದನ್ನು French ಅಥವಾ Germanನಂತಹ ಬೇರೆ  European ಭಾಷೆಗಳಿಗಿಂತ ಇಂಗ್ಲಿಷ್ ಭಾಷೆಯಲ್ಲಿಯೇ ಹೆಚ್ಚಾಗಿ ಬಳಸುತ್ತೇವೆ ಹಾಗೂ passive voice ಇರುವ ವಾಕ್ಯರಚನೆಗಳನ್ನು ಹೆಚ್ಚು ವಿಸ್ತಾರವಾಗಿ ಅಧಿಕೃತ ಕಾಗದ ಪತ್ರಗಳು (official documents) ಹಾಗೂ ವಿಜ್ಞಾನ ಬರವಣಿಗೆಯಲ್ಲಿ (scientific writing) ಕಾಣುತ್ತೇವೆ.
ಇಂಗ್ಲಿಷ್ ಭಾಷೆಯಲ್ಲಿ passive voiceನ ಉಪಯೋಗಗಳನ್ನು ತಿಳಿದುಕೊಳ್ಳುವುದರ ಜೊತೆಗೆ, ವಾಕ್ಯಗಳನ್ನು active voice ನಿಂದ passive voice ಬದಲಾಯಿಸುವುದನ್ನು ಕಲಿಯುವುದೂ ಮುಖ್ಯ.
ಮೊದಲಿಗೆ ಎಂತಹ ವಾಕ್ಯಗಳು ಈ ಬದಲಾವಣೆಗೆ ಒಳಪಡುತ್ತವೆ ಎಂಬುದನ್ನು ತಿಳಿದುಕೊಳ್ಳೋಣ:
subject ಮತ್ತು oobject ಎರಡೂ ಅಂಶಗಳು ಇರುವಂತಹ ವಾಕ್ಯಗಳನ್ನು ಮಾತ್ರ active voiceನಿಂದ passive voiceಗೆ ಬದಲಾಯಿಸಬಹುದು.
ಉದಾ: Ashok sings a song.
She has submitted the form.
They can draw the picture.
ಈ ಎಲ್ಲಾ ವಾಕ್ಯಗಳಲ್ಲಿ, Ashok, She, They ಎಂಬುವು subject ಗಳಾದರೆ, a song, the form, the picture ಎಂಬುವು objectಗಳು. ಹಾಗಾಗಿ, ಈ ವಾಕ್ಯಗಳನ್ನು activeನಿಂದ passiveಗೆ ಬದಲಾಯಿಸಬಹುದು. ಇಂತಹ ವಾಕ್ಯಗಳಲ್ಲಿನ verbಗಳನ್ನು transitive verbs ಎಂದು ಕರೆಯುತ್ತೇವೆ.
ಈ ಮೇಲಿನ ವಾಕ್ಯಗಳನ್ನು passive voiceಗೆ ಬದಲಿಸಿದನಂತರ ಹೀಗಿರುತ್ತವೆ:
A song is sung by Ashok.
The form has been submitted by her.
The picture can be drawn by them.
ಈ ರೀತಿಯ ಬದಲಾವಣೆಯನ್ನು ಮಾಡಬೇಕಾದಾಗ ನಾವು ಅನುಸರಿಸಬೇಕಾದ ಕೆಲವು ನಿಯಮಗಳನ್ನು ಗಮನಿಸಿ:
1. ಕ್ರಿಯಾಪದದ ಕಾಲವನ್ನು (tense)  ಬದಲಾಹಿಸಬಾರದು.
2. ಒಂದು ಸೂಕ್ತವಾದ -be-verbನ (am, is, are, was, were, be, been, being) ಕ್ರಿಯಾಪದದ past participleನ ರೂಪವನ್ನು ಸೇರಿಸಬೇಕು.
ಈ ಮೇಲಿನ ಉದಾಹರಣೆಗಳಲ್ಲಿನ is sung, has been submitted, can be drawn ಎಂಬ vverbಗಳನ್ನು ಗಮನಿಸಿದಾಗ, is, been, be ಎಂಬುವು be-verb ಗಳಾದರೆ, sung, submitted, drawn ಎಂಬುವು past - participlee ರೂಪದಲ್ಲಿರುವ ಕ್ರಯಾಪದಗಳಾಗಿವೆ. ಹಾಗಾಗಿ, ಒಂದು ವಾಕ್ಯ Passive voiceನಲ್ಲಿರಬೇಕಾದರೆ, ಒಂದು bbe-verb ಹಾಗೂ past-participlee ರೂಪದ ಒಂದು ಕ್ರಿಯಾಪದವು ಕಡ್ಡಾಯವಾಗಿ ಇರಲೇಬೇಕು.
ವಾಕ್ಯಗಳನ್ನು active voice ನಿಂದ passive voiceeಗೆ ರೂಪಾಂತರಿಸುವ ಸಂದರ್ಭದಲ್ಲಿ ನಾವು ತಿಳಿದುಕೊಳ್ಳಬೇಕಾದ ಇನ್ನೊಂದು ವಿಷಯವೆಂದರೆ, ಎಲ್ಲಾ ವಾಕ್ಯಗಳೂ ಈ ರೀತಿಯ ಬದಲಾವಣೆಗೆ ಒಳಪಡುವುದಿಲ್ಲ. ಹಾಗೆ ಬದಲಾವಣೆಗೆ ಒಳಪಡದ ವಾಕ್ಯಗಳಲ್ಲಿನ ಕ್ರಿಯಾಪದಗಳನ್ನು intransitive verbs ಎಂದು ಕರೆಯುತ್ತೇವೆ.
ಉದಾ: The dog barks.
           The sky is blue.
           The birds fly in the sky.
ಈ ಎಲ್ಲಾ ವಾಕ್ಯಗಳಲ್ಲಿ object ಇಲ್ಲದಿರುವುದರಿಂದ, barks, is, fly ಎಂಬ verbಗಳು iintransitive verbಗಳಾಗಿದ್ದು, ಇವುಗಳನ್ನು passive voiceeಗೆ ರೂಪಾಂತರಿಸಲು ಸಾಧ್ಯವಿಲ್ಲ.
ಈ active / passive voiceಗಳ ನಿಯಮಗಳು ತುಸು ರಗಳೆಯೆನಿಸಿದರೆ ಚಿಂತಿಸಬೇಡಿ. ರೂಢಿಯಾದಂತೆಲ್ಲಾ, ಈ ವ್ಯಾಕರಣ ನಿಯಮಗಳು ನಮ್ಮ ಸುಪ್ತಪ್ರಜ್ಞೆಯ ಭಾಗವಾಗಿ ಹೋಗುತ್ತವೆ ಹಾಗೂ ನಮ್ಮ ಭಾಷಾ ಕಲಿಕೆಯ ಪಯಣ ಹಂತಹಂತವಾಗಿ ನಿರಾಳವೆನಿಸುತ್ತದೆ.
ಮಾಹಿತಿಗೆ: 98452 13417 

ಕೊನೆಗೆ ನಂದುವ ದೀಪ ಯಾವುದು?

ಬೇಕಾಗುವ ಸಲಕರಣೆ: ಸಾಮಗ್ರಿ: ಒಂದೇ ಗಾತ್ರದ ಮೂರು ಗಾಜಿನ ಗ್ಲಾಸುಗಳು, ಒಂದೇ ಅಳತೆಯ ಮೂರು ಮೋಂಬತ್ತಿಗಳು, ಬೆಂಕಿ ಪೆಟ್ಟಿಗೆ, ನುಣುಪು ಮೇಲ್ಮೈಯುಳ್ಳ ಟೇಬಲ್.
ವಿಧಾನ: 1) ಚಿತ್ರದಲ್ಲಿ ತೋರಿಸಿದಂತೆ ಒಂದೇ ಅಳತೆಯ ಒಂದು, ಎರಡು ಹಾಗೂ ಮೂರು ಮೋಂಬತ್ತಿಗಳನ್ನು ಹಚ್ಚಿ ಟೇಬಲ್ ಮೇಲೆ ಇಡಿ. ಅವುಗಳಿಗೆ ಅ, ಬ, ಕ ಎಂದು ಹೆಸರಿಸಿರಿ.
2) ಒಂದೇ ವೇಳೆಗೆ ಚಿತ್ರದಲ್ಲಿ ತೋರಿಸಿದಂತೆ, ಒಂದೇ ಗಾತ್ರಗಳ ಗಾಜಿನ ಗ್ಲಾಸುಗಳನ್ನು, ಮೋಂಬತ್ತಿಗಳ ಮೇಲೆ ನಿಮ್ಮ ಸ್ನೇಹಿತರ ಸಹಾಯದಿಂದ ಬೋರಲು ಹಾಕಿರಿ.
ಪ್ರಶ್ನೆ: 1) ಯಾವ ಮೋಂಬತ್ತಿಗಳು ಮೊದಲು ಹಾಗೂ ಯಾವ ಮೋಂಬತ್ತಿ ಕೊನೆಗೆ ನಂದುತ್ತವೆ? ಯಾಕೆ?
ಉತ್ತರ: 1) ‘ಕ’ ಗ್ಲಾಸಿನ ಕೆಳಗಿರುವ ಮೋಂಬತ್ತಿಗಳು ಮೊದಲು ಹಾಗೂ ‘ಅ’ ಗ್ಲಾಸಿನ ಕೆಳಗಿರುವ ಮೋಂಬತ್ತಿ ಕೊನೆಗೆ ನಂದುತ್ತವೆ. ಮೋಂಬತ್ತಿ ಉರಿಯಲು ಆಕ್ಸಿಜನ್ ಅನಿಲದ ಅವಶ್ಯಕತೆ ಇದೆ.
ಎಲ್ಲ ಗ್ಲಾಸುಗಳು ಒಂದೇ ಗಾತ್ರದವು ಇರುವುದರಿಂದ ಅವುಗಳಲ್ಲಿಯ ಆಕ್ಸಿಜನ್ ಸಮ ಪ್ರಮಾಣದಲ್ಲಿರುತ್ತದೆ.  ‌ಮೂರು ಮೋಂಬತ್ತಿಗಳು ಉರಿಯಲಿಕ್ಕೆ ಹೆಚ್ಚು ಆಕ್ಸಿಜನ್ ಅನಿಲ ಬೇಕಲ್ಲವೇ? ಹಾಗಾಗಿ ‘ಕ’ ದಲ್ಲಿ ಹೆಚ್ಚು ಆಕ್ಸಿಜನ್ ಬಳಕೆಯಾಗಿ, ಮೋಂಬತ್ತಿಗಳು ಮೊದಲು ನಂದುತ್ತವೆ.

ಉಪಯುಕ್ತ ಇಂಗ್ಲಿಷ್ ಪದಪುಂಜ

Word cluster ಗಳನ್ನು ತಿಳಿದುಕೊಳ್ಳುವ ಮುಖಾಂತರ ನಮ್ಮ ಶಬ್ದಭಂಡಾರವನ್ನು ಹೇಗೆ ಹೆಚ್ಚಿಸಿಕೊಳ್ಳಬಹುದು ಎಂಬುದನ್ನು ನಾವು ಈಗಾಗಲೇ ತಿಳಿದಿದ್ದೇವೆ. ನಮ್ಮ ಪದಸಂಪತ್ತನ್ನು ವಿಸ್ತರಿಸಿಕೊಳ್ಳಲು ಇನ್ನಷ್ಟು clusterಗಳನ್ನು ಗಮನಿಸೋಣ:
ಮನಶಾಸ್ತ್ರದಲ್ಲಿ phobia ಎನ್ನುವ ಒಂದು ಪರಿಕಲ್ಪನೆಯಿದೆ. Phobia ಎಂದರೆ ಭಯ. ಇದು ಭೀತಿಯ ಒಂದು ಸ್ವರೂಪ. ಸಾಮಾನ್ಯವಾಗಿ ನಾವು ತಿಳಿದುಕೊಳ್ಳಬೇಕಾದ phobiaಗಳೆಂದರೆ -
Acrophobia – fear of heights
Aqua phobia – fear of water
Glossophobia – fear of speaking in public
Gynophobia – fear of women
Androphobia – fear of men
Haemophobia – fear of //boold//
Necrophobia – fear of death
Nyctophobia – fear of darkness
Somniphobia – fear of sleep
Photophobia – fear of light
ಇವು ಒಂದು cluster ಆದರೆ, ಮನಸ್ಸಿನ ನಾನಾ ಭಾವನೆಗಳನ್ನು ಒಂದು cluster ಎಂದು ಪರಿಗಣಿಸಬಹುದು. ಮೂಲಭೂತವಾಗಿ, ನಾವು 8 ರೀತಿಯ ಭಾವನೆಗಳನ್ನು ವ್ಯಕ್ತಪಡಿಸುತ್ತೇವೆ - happiness (ಸಂತೋಷ), sadness (ದುಃಖ), anger (ಕೋಪ), confusion (ಗೊಂದಲ), fear (ಭಯ), guilt (ಅಪರಾಧಿ ಮನೋಭಾವ), weakness (ದೌರ್ಬಲ್ಯ), stength (ದೃಢತೆ).
ಸಂತೋಷ (happiness) ಕ್ಕೆ ಸಂಬಂಧಪಟ್ಟ ಪದಗಳನ್ನು ಗಮನಿಸಿ:
ಉತ್ಕಟವಾದ ಸಂತೋಷವಾದಾಗ ಉಪಯೋಗಿಸುವ ಪದಗಳು elated, excited, overjoyed, delighted, ecstatic...
ಮಧ್ಯತೀವ್ರತೆಯ ಸಂತೋಷವನ್ನು ವ್ಯಕ್ತಪಡಿಸುವಾಗ ಉಪಯೋಗಿಸಬಹುದಾದ ಪದಗಳು–cheerful, satisfied, contented, fine, pleased... ಹಾಗೆಯೇ, ದುಃಖ (sadness)ದ ತೀವ್ರತೆ ಹೆಚ್ಚಿದಾಗ ಬಳಸುವ ಪದಗಳು –depressed, hurt, dejected, crushed, sorrowful.. ಅದರ ತೀವ್ರತೆ ಕಡಿಮೆ ಇದ್ದಾಗ unhappy, disappointed, dissatisfied, upset ಮುಂತಾದವುಗಳನ್ನು ಉಪಯೋಗಿಸಬಹುದು.
ಕೋಪ (anger) ತೀವ್ರವಾಗಿದ್ದಾಗ ಬಳಸಬಹುದಾದ ಪದಗಳನ್ನು ಗಮನಿಸಿ: furious, enraged, outraged, seething, livid... ಮಧ್ಯತೀವ್ರತೆಯ ಕೋಪವನ್ನು ಈ ಪದಗಳು ಬಿಂಬಿಸುತ್ತವೆ – annoyed, frustrated, agitated, disgusted, irritated... ನಮ್ಮ ಮನಸ್ಸು ಗೊಂದಲಕ್ಕೊಳಗಾದಾಗ (confusion) ಹಾಗೂ ಅದರ ತೀವ್ರತೆ ಹೆಚ್ಚಿದ್ದಾಗ ಬಳಸುವ ಪದಗಳು– bewildered, baffled, troubled, lost...
ಅದರ ತೀಕ್ಷ್ಣತೆ ಕಡಿಮೆಯಾದಾಗ foggy, disoriented, unsure, puzzled, perplexed ಮುಂತಾದ ಪದಗಳನ್ನು ಉಪಯೋಗಿಸಬಹುದು. ಭಯದ ತೀವ್ರತೆ ಕಡಿಮೆಯಿದ್ದಾಗ scared, frightened, nervous, apprehensive ಎನ್ನುವಂತಹ ಪದಗಳನ್ನು ಬಳಸಬಹುದು.
ದುರ್ಬಲಸ್ಥಿತಿ (weakness)ಯನ್ನು ವ್ಯಕ್ತಪಡಿಸುವಾಗ helpless, hopeless, drained, exhausted, rundown, shaky ಮುಂತಾದವುಗಳನ್ನು ಬಳಸಬಹುದು. ನಮ್ಮ ದೃಢ ಮನಸ್ಸನ್ನು (firmness) ಸೂಚಿಸಲು determined, confident, energetic, proud, capable ಎನ್ನುವಂತಹ ಪದಗಳ ಉಪಯೋಗ ಸೂಕ್ತ.
ಅಪರಾಧಿ ಮನೋಭಾವ (guilt) ಇದ್ದಾಗ ಉಪಯೋಗಿಸುವ ಪದಗಳೆಂದರೆ ashamed, unworthy, worthless, embarrassed...  ಈ ಪದಗಳನ್ನು ನಿಮ್ಮದೇ ಆದ ಸ್ವಂತ ಇಂಗ್ಲಿಷ್ ವಾಕ್ಯಗಳಲ್ಲಿ ಬಳಸಿ. ಉತ್ತಮ dictionary ಯೊಂದರಲ್ಲಿ ಮಾದರಿ ವಾಕ್ಯಗಳನ್ನು ನೋಡಿದಾಗ ನಿಮಗೆ ನಿಮ್ಮ ವಾಕ್ಯಗಳ ಸರಿ, ತಪ್ಪುಗಳು ಸ್ಪಷ್ಟವಾಗುತ್ತವೆ. ಇದು ಇಂಗ್ಲಿಷ್ ವಾಕ್ಯಗಳ ಮೇಲೆ ಪ್ರಬುದ್ಧತೆಯನ್ನು ಸಾಧಿಸಲು ಇರುವ ತುಂಬ ಒಳ್ಳೆಯ ವಿಧಾನ.
ಶಬ್ದಭಂಡಾರವನ್ನು ಹೆಚ್ಚಿಸಿಕೊಳ್ಳುವ ಹಾದಿಯಲ್ಲಿ ಇನ್ನೂ ಕೆಲವು cluster ಗಳನ್ನು ಗಮನಿಸಿ:
Altruism, anarchy, autocracy, bigotry, caucus, chaos, conspiracy, monarchy- ಇವುಗಳನ್ನು political termmಗಳ ಒಂದು cluster ಎಂದು ಪರಿಗಣಿಸಬಹುದು.
Altruism (ಆಲ್ಟ್ರೂಯಿಸಮ್) ಇನ್ನೊಬ್ಬರ ಒಳಿತಿಗಾಗಿ ತಮ್ಮನ್ನು ತಾವು ತ್ಯಾಗಮಾಡಿಕೊಳ್ಳುವುದು.
Anarchy (ಅನಾರ್ಕಿ) ದೇಶದಲ್ಲಿ ವ್ಯವಸ್ಥೆ ಅಥವಾ ನಿಯಂತ್ರಣ ಇಲ್ಲದಿರುವ ಸ್ಥಿತಿ.
Autocracy (ಆಟೋಕ್ರಸಿ) ಒಬ್ಬರ ಕೈಯಲ್ಲಿ ಮಿತಿ ಇಲ್ಲದಿರುವಂತಹ ಅಧಿಕಾರವಿರುವ ಸ್ಥಿತಿ.
Bigotry(ಬಿಗಟ್ರಿ) ಇನ್ನೊಬ್ಬರ ನಂಬಿಕೆ, ಅಭಿಪ್ರಾಯಗಳೆಡೆಗಿರುವ ಅಸಹಿಷ್ಣುತೆ.
Caucus(ಕಾಕಸ್) ಅಭ್ಯರ್ಥಿಯನ್ನು ಆಯ್ಕೆ ಮಾಡುವುದಕ್ಕಾಗಲೀ ಅಥವಾ ಪಕ್ಷದ ನೀತಿಯನ್ನು ನಿರ್ಧರಿಸುವುದಕ್ಕಾಗಲೀ ಅಥವಾ ಪಕ್ಷದ ನೀತಿಯನ್ನು ನಿರ್ಧರಿಸುವುದಕ್ಕಾಗಿಯಾಗಲೀ, ಒಂದು ರಾಜಕೀಯ ಪಕ್ಷವು ಆಯೋಜಿಸುವ ಗುಪ್ತ ಸಭೆ (closed meetingg).
Chaos (ಖೆಯೋಸ್) - ಸಂಪೂರ್ಣ ಅವ್ಯವಸ್ಥೆಯ ಸ್ಥಿತಿ.
Conspiracy (ಕಾನ್‌ಸ್ಪಿರಸಿ)- ಪಿತೂರಿ.
Monarchy(ಮೊನಾರ್ಕಿ) ವಂಶಪಾರಂಪರ್ಯವಾಗಿ ಬಂದ ಪರಮಾಧಿಕಾರ.
ಧಾರ್ಮಿಕ ನಂಬಿಕೆಗಳಿಗೆ ಸಂಬಂಧಪಟ್ಟ cluster ಎಂದರೆ animism, asceticism, atheism, theism, blasphemy, monotheism, nihilism, agnosticism.
Animism (ಅನಿಮಿಸಮ್) ಎಲ್ಲದರಲ್ಲೂ (ಪ್ರಾಣಿ, ಗಿಡ, ವಸ್ತುಗಳು) ಚೇತನವಿದೆ ಎನ್ನುವ ನಂಬಿಕೆ.
Asceticism (ಅಸೆಟಿಸಿಸಮ್) ಎಲ್ಲಾ ಪ್ರಾಪಂಚಿಕ ಸುಖಗಳನ್ನು ತ್ಯಜಿಸಿದಂತಹ ಜೀವನದ ಸ್ಥಿತಿ.
Atheism (ಏತಿಯಿಸಮ್)- ನಾಸ್ತಿಕವಾದ.
Theism (ತೀಯಿಸಮ್) ಅಸ್ತಿವಾದ
Blasphemy (ಬ್ಲಾಸ್‌ಫೆಮಿ) ದೇವರು ಅಥವಾ ಧರ್ಮಕ್ಕೆ ಅವಮಾನವೆಸಗುವಂತಹ ವರ್ತನೆ ಅಥವಾ ಭಾಷೆ.
Monotheism (ಮಾನೋತೀಯಿಸಮ್) ದೇವರೊಬ್ಬನೇ ಎನ್ನುವ ನಂಬಿಕೆ.
Nihilism (ನೀಯಿಲಿಸಮ್) ಎಲ್ಲಾ ಸಾಂಪ್ರದಾಯಿಕ ನಂಬಿಕೆಗಳು ಅರ್ಥವಿಲ್ಲದ್ದು ಹಾಗೂ ಮಾನವ ಜೀವನವೇ ಅರ್ಥರಹಿತವಾದದ್ದು ಎನ್ನುವ ದೃಷ್ಟಿಕೋನ (ಶೂನ್ಯವಾದ).
Agnosticism (ಅಗ್ನೋಸ್ಟಿಸಿಸಮ್) ದೇವರ ಅಸ್ತಿತ್ವದ ಪ್ರಶ್ನೆಗೆ ನಿರ್ದಿಷ್ಟ ಉತ್ತರ ಮನಸ್ಸಿಗೆ ನಿಲುಕುವಂತದ್ದಲ್ಲ ಎಂಬ ನಂಬಿಕೆ. ಇನ್ನೊಂದು ಮುಖ್ಯವಾಗಿ ತಿಳಿದುಕೊಳ್ಳಬಹುದಾದ cluster ಎಂದರೆ, ಉದ್ಯೋಗಗಳಿಗೆ ಸಂಬಂಧಪಟ್ಟದ್ದು. ಅದನ್ನು ಇಲ್ಲಿ ಗಮನಿಸಿ: chef, florist, dustman, pharmacist, plumber, traffic warden, lifeguard, fireman/fire fighter.
Chef (ಶೆಫ್)- ಹೋಟೆಲಿನಲ್ಲಿ ಅಡುಗೆ ಮಾಡುವವನು.
Florist (ಫ್ಲೋರಿಸ್ಟ್)- ಹೂ ಮಾರುವವನು / ಹೂ ಅಂಗಡಿಯ ಮಾಲೀಕ.
Dustman (ಡಸ್ಟ್ ಮ್ಯಾನ್) ಕಸ ಆಯುವವನು.
Pharmacist (ಫಾರ್ಮಸಿಸ್ಟ್) ಔಷಧ ವ್ಯಾಪಾರಿ.
Plumber(ಪ್ಲಂಬರ್)-ನೀರಿನ ವ್ಯವಸ್ಥೆ ಅಥವಾ ಕೊಳವೆಗಳನ್ನು ದುರಸ್ತಿ ಮಾಡುವವನು.
Traffic warden (ಟ್ರಾಫಿಕ್ ಗಾರ್ಡ್)- ನಿರ್ಬಂಧಿ ಸ್ಥಳದಲ್ಲಿ ವಾಹನವನ್ನು ನಿಲ್ಲಿಸದಂತೆ ನೋಡಿಕೊಳ್ಳಲು ಗಸ್ತು ತಿರುಗುವವನು.
Life guard (ಲೈಫ್ ಗಾರ್ಡ್)- ಸಮುದ್ರತೀರ ಅಥವಾ ಈಜುಕೊಳದಲ್ಲಿ ಜೀವರಕ್ಷಣೆಗಾಗಿ ನಿಯೋಜಿತವಾಗಿರುವವನು.
Fireman / Fire fighter (ಫೈಯರ್ ಮ್ಯಾನ್ / ಫೈಯರ್ ಫ್ಯೆಟರ್) ಅನಾಹುತಕಾರಿ ಬೆಂಕಿಯನ್ನು ಆರಿಸುವವನು.
ಹೀಗೆ ನಮ್ಮ ಭಾಷಾ ಸಾಮರ್ಥಕ್ಕನುಸಾರವಾಗಿ cluster ಗಳನ್ನು ಬಳಸುತ್ತಾ ನಮ್ಮ ಶಬ್ದಸಂಪತ್ತನ್ನು ವೃದ್ಧಿಸಿಕೊಳ್ಳಬಹುದು.
ಮಾಹಿತಿಗೆ: 98452 13417

2014 ವಿದ್ಯಮಾನ– ಮಾಹಿತಿ ಮನನ

*ಭಾರತ ಸರ್ಕಾರ ಪ್ರತಿ ವರ್ಷ ಜನವರಿಯಲ್ಲಿ (7ರಿಂದ 9ರವರೆಗೆ) ‘ಪ್ರವಾಸಿ ಭಾರತೀಯ ದಿವಸ’ವನ್ನು ಆಚರಿಸುತ್ತದೆ. ಇದನ್ನು ‘ಅನಿವಾಸಿ ಭಾರತೀಯರ ದಿವಸ’ ಎಂದು ಸಹ ಕರೆಯಲಾಗುತ್ತದೆ. ವಿಶ್ವದ ನಾನಾ ಭಾಗಗಳಲ್ಲಿ ನೆಲೆಸಿರುವ ಭಾರತೀಯರು ಭಾಗವಹಿಸುತ್ತಾರೆ. ದೇಶದ ಸಂಸ್ಕೃತಿ, ಬಂಡವಾಳ ಹೂಡಿಕೆ, ಶಿಕ್ಷಣ, ಪ್ರವಾಸೋಧ್ಯಮ ಕುರಿತಂತೆ ಈ ಸಮಾವೇಶದಲ್ಲಿ ಚರ್ಚಿಸಲಾಗುವುದು. 2003ರಲ್ಲಿ ಮೊದಲ ಪ್ರವಾಸಿ ಭಾರತೀಯ ದಿವಸವನ್ನು ಆಚರಿಸಲಾಯಿತು.
*80ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ 2014ರ ಜನವರಿ 7, 8 ಮತ್ತು 9ರಂದು ಮಡಿಕೇರಿಯಲ್ಲಿ ನಡೆಯಿತು. ಸಮ್ಮೇಳನವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಿದರು. ನಾ.ಡಿಸೋಜ ಅವರು ಸಮ್ಮೇಳನದ ಅಧ್ಯಕ್ಷರಾಗಿದ್ದರು. ಇದು ಮಡಿಕೇರಿಯಲ್ಲಿ ನಡೆದ ಮೂರನೇ ಕನ್ನಡ ಸಾಹಿತ್ಯ ಸಮ್ಮೇಳನವಾಗಿದೆ.
*ಸಂಪೂರ್ಣವಾಗಿ ಸ್ವದೇಶಿ ನಿರ್ಮಿತ ಕ್ರಯೋಜೆನಿಕ್‌ ಎಂಜಿನ್‌ ಅಭಿವೃದ್ಧಿಪಡಿಸುವ ಮೂಲಕ ಭಾರತವು ಬಾಹ್ಯಾಕಾಶ ತಂತ್ರಜ್ಞಾನದಲ್ಲಿ ಹೊಸ ದಾಖಲೆ ಬರೆದಿದೆ. ಈ ರಾಕೆಟ್‌ ಮೂಲಕ ಜನವರಿ 5ರಂದು ಜಿಎಸ್‌ಎಲ್‌ವಿ–ಡಿ ಉಪಗ್ರಹವನ್ನು ಯಶಸ್ವಿಯಾಗಿ ಉಡಾವಣೆ ಮಾಡಲಾಯಿತು. ಕ್ರಯೋಜಿನಿಕ್‌ ತಂತ್ರಜ್ಞಾನದಲ್ಲಿ ತಂಪಾಗಿರುವ ದ್ರವ ಇಂಧನ (cold liquid fuel) ಬಳಸಲಾಗುತ್ತದೆ. ಇದರಿಂದ ಭಾರೀ ತೂಕದ ಉಪಕರಣಗಳನ್ನು ಬ್ಯಾಹ್ಯಾಕಾಶಕ್ಕೆ ಸುಲಭವಾಗಿ ರವಾನಿಸಬಹುದು.
*ಭಾರತದಲ್ಲಿ ಬಾರೀ ಸಂಚಲನ ಉಂಟುಮಾಡಿದ್ದ ಜನ ಲೋಕಪಾಲ ಮಸೂದೆಗೆ ಜನವರಿ 1ರಂದು ರಾಷ್ಟ್ರಪತಿ ಪ್ರಣಬ್‌ ಮುಖರ್ಜಿ ಅಂಕಿತ ಹಾಕಿದರು. ಜನ ಲೋಕಪಾಲ ಮಸೂದೆ ಜಾರಿಗೆ ಆಗ್ರಹಿಸಿ ಹಿರಿಯ ಗಾಂಧಿವಾದಿ ಅಣ್ಣಾ ಹಜಾರೆ ಅವರು ಹೋರಾಟ ನಡೆಸಿದ್ದರು. 1968ರಿಂದ 2001ರ ನಡುವೆ ವಿವಿಧ ಸರ್ಕಾರಗಳು ಲೋಕಪಾಲ ಮಸೂದೆಯನ್ನು 8 ಸಲ ಮಂಡನೆ ಮಾಡಿದ್ದವು ಆದರೆ ಈ ಮಸೂದೆ ಅಂಗೀಕಾರ ಪಡೆದಿರಲಿಲ್ಲ.
*ಜೈಪುರ ಸಾಹಿತ್ಯ ಉತ್ಸವ ಜನವರಿ 17 ರಿಂದ 21ರವರೆಗೆ ಜೈಪುರದಲ್ಲಿ ನಡೆಯಿತು. ನೊಬೆಲ್‌ ಪ್ರಶಸ್ತಿ ಪುರಸ್ಕೃತ ಅರ್ಥಶಾಸ್ತ್ರಜ್ಞ ಅಮರ್ತ್ಯ ಸೇನ್‌ ಈ ಸಾಹಿತ್ಯ ಉತ್ಸವವನ್ನು ಉದ್ಘಾಟಿಸಿದರು. ಈ ಉತ್ಸವದಲ್ಲಿ ಸೈರಸ್‌ ಮಿಸ್ತ್ರಿ ಅವರು ಬರೆದ ‘ಕ್ರಾನಿಕಲ್‌ ಆಫ್‌ ಎ ಕಾರ್ಫ್‌ ಬೇರರ್‌ (ಅನುವಾದಿತ) ಕೃತಿ 30 ಲಕ್ಷ ರೂಪಾಯಿ ಬಹುಮಾನ ಪಡೆಯಿತು.
*ಮಿ.ಸೆಕ್ಯೂರಿಟಿ ಎಂದೇ ಗುರುತಿಸಿಕೊಂಡಿದ್ದ ಇಸ್ರೇಲ್‌ನ ಮಾಜಿ ಪ್ರಧಾನಿ ಏರಿಯಲ್‌ ಶೆರೂನ್‌ (82)  ಜನವರಿ 11ರಂದು ನಿಧನರಾದರು. ಶೆರೂನ್‌ ಲೆಬನಾನ್‌ ಮತ್ತು ಇಸ್ರೇಲ್‌ ದೇಶಗಳ ಮೇಲೆ ದಾಳಿ ಮಾಡಿದ್ದರು. ಅವರು ಎಂಟು ತಿಂಗಳಿನಿಂದ ಕೋಮಾದಲ್ಲಿದ್ದರು.
*ಜನವರಿ 7ರಂದು ಭಾರತದ ಅತಿ ದೊಡ್ಡ ವಿಮಾನ ವಾಹಕ ನೌಕೆ ‘ಐಎನ್‌ಎಸ್‌ ವಿಕ್ರಮಾದಿತ್ಯ’ ಕಾರವಾರ ಬಂದರು ನೆಲೆಗೆ ಬಂದಿತು. ರಷ್ಯಾ ನಿರ್ಮಾಣದ ಈ ನೌಕೆಯನ್ನು ಭಾರತ ಸರ್ಕಾರ 14,260 ಕೋಟಿ ರೂಪಾಯಿ ನೀಡಿ ಖರೀದಿಸಿದೆ. ಸ್ವದೇಶಿ ನಿರ್ಮಿತ ಇಂತಹದ್ದೇ ನೌಕೆ ಕೊಚ್ಚಿಯಲ್ಲಿ ಅಭಿವೃದ್ಧಿಪಡಿಸಲಾಗುತ್ತಿದ್ದು ಅದು 2018ರ ವೇಳೆಗೆ ನೌಕಪಡೆಗೆ ಸೇರಲಿದೆ.
*ರಾಜ್ಯದ ಖ್ಯಾತ ಪಕ್ಷಿ ತಜ್ಞ ಮತ್ತು ಪರಿಸರ ಹೋರಾಟಗಾರ ಡಾ.ಜೆಮ್ಸ್‌ ಚೆನ್ನಪ್ಪ ಉತ್ತಂಗಿ (98) ಅವರು ಜನವರಿ *ರಂದು ನಿಧನರಾದರು. ಇವರು ಪಕ್ಷಿಗಳು ಮತ್ತು ಪರಿಸರ ಕುರಿತಂತೆ ಹಲವಾರು ಸಂಶೋಧನಾ ಪ್ರಬಂಧಗಳನ್ನು ಮಂಡಿಸಿದ್ದಾರೆ. ಉತ್ತರ ಕರ್ನಾಟಕ ಮತ್ತು ‘ಉತ್ತರ ಗುಜರಾತಿನ ಕಪ್ಪೆಗಳು’, ‘ಅವಿಭಜಿತ ಧಾರವಾಡ ಜಿಲ್ಲೆಯಲ್ಲಿನ ಪಕ್ಷಿಗಳು’ ಪ್ರಮುಖ ಸಂಶೋಧನಾ ಪ್ರಬಂಧಗಳು. ಇವರು ಸಾಹಿತಿ ಉತ್ತಂಗಿ ಚೆನ್ನಪ್ಪ ಅವರ ಮಗ.
*ಭಾರತ ಸರ್ಕಾರದ ಅತ್ಯುನ್ನತ ನಾಗರಿಕ ಪ್ರಶಸ್ತಿಗಳಾದ ಪದ್ಮ ಪ್ರಶಸ್ತಿಗಳನ್ನು 127 ಸಾಧಕರಿಗೆ ನೀಡಲಾಗಿದೆ. ಪದ್ಮ ಪ್ರಶಸ್ತಿಗಳಲ್ಲಿ 101 ಪದ್ಮ ಪ್ರಶಸ್ತಿ, 24  ಪದ್ಮಭೂಷಣ ಮತ್ತು ಎರಡು ಪದ್ಮವಿಭೂಷಣ ಪ್ರಶಸ್ತಿಗಳು ಸೇರಿವೆ. ಪ್ರಸೂತಿ ತಜ್ಞೆ ಕಾಮಿನಿ ರಾವ್‌, ಯೋಗ ಗುರು ಬಿ.ಕೆ.ಎಸ್‌ ಅಯ್ಯಂಗಾರ್‌ ಅವರು ಸೇರಿದಂತೆ ರಾಜ್ಯದ ಏಳು ಸಾಧಕರಿಗೆ ಪದ್ಮ ಪ್ರಶಸ್ತಿಗಳನ್ನು ನೀಡಲಾಗಿದೆ.
*ಜನವರಿಯಲ್ಲಿ ನಡೆದ ‘2014ರ ಆಸ್ಟ್ರೇಲಿಯನ್‌ ಓಪನ್‌ ಟೂರ್ನಿಯಲ್ಲಿ ಚೀನಾದ ಲೀ ನಾ (ಮಹಿಳೆಯರ), ಸ್ವಿಟ್ಜರ್‌ಲೆಂಡ್‌ನ ಸ್ಟಾನಿಸ್ಲಾಸ್‌ ವಾವ್ರಿಂಕ್‌ (ಪುರುಷರ) ಸಿಂಗಲ್ಸ್‌ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡರು. ಲೀ ನಾ 16.69 ಕೋಟಿ ರೂಪಾಯಿ ಮತ್ತು ವಾವ್ರಿಂಕಾ 14.57 ಕೋಟಿ ರೂಪಾಯಿ ಬಹುಮಾನ ಗೆದ್ದರು. ಇದೇ ಟೂರ್ನಿಯ ಮಿಶ್ರ ಡಬಲ್ಸ್‌ ಫೈನಲ್‌ ಪಂದ್ಯದಲ್ಲಿ ಭಾರತದ ಸಾನಿಯಾ ಮಿರ್ಜಾ ಮತ್ತು ರುಮೇನಿಯಾದ ಹೊರಿಯ ಟಿಕಾವ್‌ ಅವರು ಪರಾಭವಗೊಂಡರು.
*ಜಪಾನ್‌ ಪ್ರಧಾನಿ ಶಿಂಜೋ ಅಬೆ ಅವರು ಭಾರತದ 65ನೇ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಪ್ರಮುಖ ಎಂಟು ಒಪ್ಪಂದಗಳಿಗೆ ಉಭಯ ದೇಶಗಳು ಸಹಿ ಹಾಕಿದವು. 2013ರ ಡಿಸೆಂಬರ್‌ ತಿಂಗಳಲ್ಲಿ ಜಪಾನ್‌ ರಾಜ ಅಕಿ ಹಿಟೊ ಅವರು ಭಾರತಕ್ಕೆ ಭೇಟಿ ನೀಡಿದ್ದರು.
*ಯಾವುದೇ ಕಾರಣಗಳಿಲ್ಲದೆ ರಾಷ್ಟ್ರಪತಿ ಕ್ಷಮಾದಾನ ಅರ್ಜಿಯನ್ನು ಇತ್ಯರ್ಥ ಪಡಿಸಲು ವಿಳಂಬ ಮಾಡಿದರೆ ಅಂತಹ ಅಪರಾಧಿಗಳ ಮರಣದಂಡನೆ ಶಿಕ್ಷೆಯನ್ನು ಜೀವಾವಧಿ ಶಿಕ್ಷೆಗೆ ಪರಿವರ್ತಿಸಬಹುದು ಎಂದು ಸುಪ್ರೀಂ ಕೋರ್ಟ್‌ ಜನವರಿ 21ರಂದು ಮಹತ್ವದ ತೀರ್ಪು ಪ್ರಕಟಿಸಿತು.
*ರಾಜ್ಯ ಸರ್ಕಾರ ಜನವರಿ 22ರಂದು ‘ಕನ್ನಡ ಯೂನಿಕೋಡ್‌’ ಅನ್ನು ಬಿಡುಗಡೆ ಮಾಡಿತು. ಇದನ್ನು ಹಾಸನದ ಮಾರುತಿ ತಂತ್ರಾಂಶ ಸಂಸ್ಥೆ ಅಭಿವೃದ್ಧಿಪಡಿಸಿದೆ. ಇದರಲ್ಲಿ 12 ಬಗೆಯ ಅಕ್ಷರ ವಿನ್ಯಾಸಗಳು, 12 ಪರಿವರ್ತಕಗಳು ಸೇರಿದಂತೆ ಮೊಬೈಲ್‌ ಮತ್ತು ಬ್ರೈಲ್‌ ಲಿಪಿ ಅಪ್ಲಿಕೇಶಗಳು ಸೇರಿವೆ.
*ರಾಜ್ಯ ಸರ್ಕಾರ ಜನವರಿಯಲ್ಲಿ ‘ಜ್ಯೋತಿ ಸಂಜೀವಿನಿ’ ಎಂಬ ಹೊಸ ಯೋಜನೆಯನ್ನು ಪರಿಚಯಿಸಿತು. ಈ ಆರೋಗ್ಯ ಯೋಜನೆಯನ್ನು ಸರ್ಕಾರಿ ನೌಕರರು ಮಾತ್ರ ಪಡೆಯಬಹುದು. ಇದರ ಅನ್ವಯ ನೌಕರರ ಅಥವಾ ಅವರ ಕುಟುಂಬದವರ ಚಿಕಿತ್ಸಾ ವೆಚ್ಚವನ್ನು ಸರ್ಕಾರವೇ ಭರಿಸಲಿದೆ.
*ರಾಷ್ಟ್ರೀಯ ಪೊಲೀಸ್‌ ಅಕಾಡೆಮಿಯ ಮೊದಲ ಮಹಿಳಾ ಮುಖ್ಯಸ್ಥರಾಗಿ ಅರುಣಾ ಬಹುಗುಣ ನೇಮಕ­ಗೊಂಡಿದ್ದಾರೆ. ಇವರು ಆಂಧ್ರ ಪ್ರದೇಶದ 1979ರ ಐಪಿಎಸ್‌  ಬ್ಯಾಚ್‌ನ  ಅಧಿಕಾರಿ.
ಆಗು–ಹೋಗು 2014 ಫೆಬ್ರುವರಿ
2015ರ ಹೊಸಿಲಿಗೆ ಬಂದು ನಿಂತಿದ್ದೇವೆ. ಕಳೆದೊಂದು ವರ್ಷದಲ್ಲಿ ನಡೆದ ಮಹತ್ವದ ಘಟನೆಗಳನ್ನು ಸಂಕ್ಷಿಪ್ತವಾಗಿ ನೀಡಲಿರುವ ಸರಣಿ ಲೇಖನದ ಎರಡನೇ ಭಾಗವಿದು. ಫೆಬ್ರುವರಿ ತಿಂಗಳ  ಮಹತ್ವದ ಆಗುಹೋಗುಗಳ ವಿವರ ಇಲ್ಲಿದೆ...
*ಭಾರತೀಯ ಮೂಲದ ಸತ್ಯ ನಾದೆಲ್ಲಾ ಅವರು ಮೈಕ್ರೋ ಸಾಫ್ಟ್‌ ಕಂಪೆನಿಯ ಸಿಇಒ ಆಗಿ ಫೆಬ್ರುವರಿ ನಾಲ್ಕರಂದು ನೇಮಕಗೊಂಡರು.
*ಫೆ. 4ರಂದು ಕ್ರಿಕೆಟಿಗ ಸಚಿನ್‌ ತೆಂಡೂಲ್ಕರ್‌ ಮತ್ತು ರಾಜ್ಯದ ವಿಜ್ಞಾನಿ ಸಿ.ಎನ್‌.ಆರ್‌ ರಾವ್‌ ಅವರಿಗೆ ರಾಷ್ಟ್ರಪತಿ ಪ್ರಣವ್‌ ಮುಖರ್ಜಿ ಅವರು  ಭಾರತ ರತ್ನ ಪ್ರಶಸ್ತಿ ನೀಡಿದರು.
*ಭಾರತದ ಉಪರಾಷ್ಟ್ರಪತಿ ಹಮೀದ್‌ ಅನ್ಸಾರಿ ಅವರು 26ರಂದು ‘ಅಂಬೇಡ್ಕರ್‌ ಅವೆಕಿಂಗ್‌ ಇಂಡಿಯಾಸ್‌ ಸೋಶಿಯಲ್‌ ಕಾನ್ಸಿಯೆನ್ಸ್‌ (Ambedkar Awakening India’s Social Conscience) ಎಂಬ ಪುಸ್ತಕವನ್ನು ಬಿಡುಗಡೆ ಮಾಡಿದರು. ಇದನ್ನು ನರೇಂದ್ರ ಜಾಧವ್‌ ಬರೆದಿದ್ದಾರೆ. ನರೇಂದ್ರ ಜಾಧವ್‌ ಯೋಜನಾ ಆಯೋಗದ ಸದಸ್ಯರು ಹೌದು.
*2014ರ ರಾಷ್ಟ್ರೀಯ ಬಿಲಿಯರ್ಡ್ಸ್‌ ಚಾಂಪಿಯನ್‌ಶಿಪ್‌ನಲ್ಲಿ ಅಲೋಕ್‌ ಕುಮಾರ್‌ ಅವರನ್ನು ಮಣಿಸಿದ ಸೌರವ್‌ ಕೋಠಾರಿ ಚಾಂಪಿಯನ್‌ ಆದರು. ಈ ಪಂದ್ಯಾವಳಿಯನ್ನು ಉತ್ತರ ಪ್ರದೇಶದ ರಾಜಧಾನಿ ಲಖನೌದಲ್ಲಿ ಆಯೋಜಿಸಲಾಗಿತ್ತು.
‌*ರಾಷ್ಟ್ರೀಯ ಹಸಿರು ನ್ಯಾಯಾಧೀಕರಣ ಮಂಡಳಿ (ಎನ್‌ಜಿಟಿ)ಯು ಸಾರ್ವಜನಿಕ ಸ್ಥಳಗಳಲ್ಲಿ ಟೈರ್‌ ಸುಡುವುದನ್ನು ನೀಷೇಧಿಸಿ ಫೆಬ್ರುವರಿ 7ರಂದು ಮಹತ್ವದ ಆದೇಶವನ್ನು ಹೊರಡಿಸಿತು.
*ಸ್ಪೇನ್‌ ದೇಶದ ಹೆಸರಾಂತ ಗೀಟಾರ್‌ ವಾದಕ ಪಾಕೊ ಡೆ ಲೂಸಿಯಾ (66) ಫೆ. 25ರಂದು ನಿಧನರಾದರು. ತಮ್ಮ ಹದಿನೆಂಟನೆ ವಯಸ್ಸಿನಲ್ಲಿ ಮ್ಯಾಡ್ರಿಡ್‌ ಎಂಬ ಸಂಗೀತ ಆಲ್ಬಂ ಹೊರತರುವ ಮೂಲಕ ವಿಶ್ವದ ಗಮನ ಸೆಳೆದಿದ್ದರು. 2004 ಮತ್ತು 2012 ರಲ್ಲಿ ಲ್ಯಾಟಿನ್‌ ಗ್ರ್ಯಾಮಿ ಪ್ರಶಸ್ತಿ  ಪಡೆದಿದ್ದರು.
*ಮಧ್ಯಪ್ರದೇಶದಲ್ಲಿ ದೇಶದ ಅತಿದೊಡ್ಡ 130 ಮೆಗಾ ವ್ಯಾಟ್‌ನ ಸೌರ ವಿದ್ಯುತ್‌ ಉತ್ಪಾದನಾ ಘಟಕವನ್ನು ಸ್ಥಾಪಿಸಲಾಗಿದೆ.  ಇದು  ನೀಮುಚ್‌ ಪ್ರದೇಶದ ಭಗವಾನ್‌ ಪುರದಲ್ಲಿದೆ. 1100 ಕೋಟಿ ರೂಪಾಯಿ ವೆಚ್ಚದ ಈ ಘಟಕ 305 ಹೆಕ್ಟೇರ್‌ ಪ್ರದೇಶದಲ್ಲಿದೆ.
*ರೈಲ್ವೆ ಸಚಿವ ಮಲ್ಲಿಕಾರ್ಜುನ ಖರ್ಗೆ ಅವರು ಫೆಬ್ರುವರಿ 12ರಂದು 2014–15ನೇ ಸಾಲಿನ ಮಧ್ಯಂತರ ರೈಲ್ವೆ ಬಜೆಟ್‌ ಮಂಡಿಸಿದರು.
*64ನೇ ಬರ್ಲಿನ್‌ ಅಂತರರಾಷ್ಟ್ರೀಯ ಚಿತ್ರೋತ್ಸವದಲ್ಲಿ ಅವಿನಾಶ್‌ ಅರುಣ್‌ ನಿರ್ದೇಶನದ ‘ಕಿಲ್ಲಾ’ ಮರಾಠಿ ಸಿನಿಮಾ ‘ಕ್ರಿಸ್ಟಿಯಲ್‌ ಬಿಯರ್‌’ ಪ್ರಶಸ್ತಿಗೆ ಭಾಜನವಾಯಿತು.
*ಫೆ. 14ರಂದು ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಅವರು ರಾಜೀನಾಮೆ ನೀಡಿದರು. ಜನಲೋಕಪಾಲ್‌ ಮಸೂದೆಯನ್ನು ಅಂಗೀಕರಿಸಲು ವಿಫಲರಾದ ಹಿನ್ನೆಲೆಯಲ್ಲಿ ರಾಜೀನಾಮೆ ಸಲ್ಲಿಸಿದರು. ಫೆಬ್ರುವರಿ 17ರಂದು ದೆಹಲಿ ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತವನ್ನು ಜಾರಿ ಮಾಡಲಾಯಿತು.
*ಸ್ವಾತಂತ್ರ್ಯ ಹೋರಾಟಗಾರ ಭಗತ್‌ ಸಿಂಗ್‌ ವಾಸವಿದ್ದ ಮನೆ ಮತ್ತು ಶಾಲೆ ನವೀಕರಣಕ್ಕೆ ಭಾರತ ಸರ್ಕಾರ 8 ಕೋಟಿ ರೂಪಾಯಿ ಬಿಡುಗಡೆ ಮಾಡಿತು. ಪಾಕಿಸ್ತಾನದ ಫೈಸಲಾಬಾದ್‌ ಜಿಲ್ಲೆಯ ಸಮೀಪದ ಕುಗ್ರಾಮದಲ್ಲಿ ಭಗತ್‌ ಸಿಂಗ್‌ ಮನೆ ಇದೆ. ಪಾಕಿಸ್ತಾನ ಸರ್ಕಾರ ಕೂಡ ರಾಷ್ಟ್ರೀಯ ಸ್ಮಾರಕ ಎಂದು ಘೋಷಿಸಿದೆ.
*ಬಿಸಿಸಿಸಿ (Broadcast Content Complaints Council)ನ ಮುಖ್ಯಸ್ಥರಾಗಿ ನ್ಯಾ. ಮುಕುಲ್‌ ಮುದ್ಗಲ್‌ ಅವರನ್ನು ಫೆಬ್ರುವರಿ 14ರಂದು ನೇಮಕ ಮಾಡಲಾಯಿತು. ಇವರು ಪಂಜಾಬ್‌ ಮತ್ತು ಹರಿಯಾಣ ರಾಜ್ಯದ ಮಾಜಿ ಮುಖ್ಯ ನ್ಯಾಯಮೂರ್ತಿಗಳು.
*ಫೆಬ್ರುವರಿ 15ರಂದು ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರು ‘ವಿನಾಯಕ ಡೋಂಗ್ರೆ ಮತ್ತು ಪ್ರೊ.ಗುಚೆಂಗ್‌ ಜಾಂಗ್‌ ಅವರಿಗೆ 2013ನೇ ಸಾಲಿನ ಅಂತರರಾಷ್ಟ್ರೀಯ ಗಾಂಧಿ ಪ್ರಶಸ್ತಿಯನ್ನು ಪ್ರದಾನ ಮಾಡಿದರು. ಕುಷ್ಠ ರೋಗ ನಿವಾರಣೆಗಾಗಿ ಸಲ್ಲಿಸಿದ ಅಸಾಮಾನ್ಯ ಸೇವೆಗಾಗಿ ಈ ಪ್ರಶಸ್ತಿಯನ್ನು ನೀಡಲಾಗಿದೆ.
*ಲಂಡನ್‌ನಲ್ಲಿ ಫೆಬ್ರುವರಿ 16ರಂದು 67ನೇ ಬಾಪ್ತಾ ಪ್ರಶಸ್ತಿಗಳನ್ನು ನೀಡಲಾಯಿತು. ಬಾಪ್ತಾ ಪ್ರಶಸ್ತಿಗಳನ್ನು ಬ್ರಿಟಿಷ್‌ ಅಕಾಡೆಮಿ   ಅತ್ಯುತ್ತಮ ಸಿನಿಮಾ ಮತ್ತು ಸಾಕ್ಷ್ಯ ಚಿತ್ರಗಳಿಗೆ ನೀಡುತ್ತದೆ. 2013ರಲ್ಲಿ ತೆರೆಕಂಡ 12 ಈಯರ್ಸ್‌ ಎ ಸ್ಲೇವ್‌ (12 Years a Slave) ಅತ್ಯುತ್ತಮ ಚಿತ್ರ ಪ್ರಶಸ್ತಿಯನ್ನು ಪಡೆಯಿತು.
*ಕೇಂದ್ರ ಸರ್ಕಾರ ಫೆಬ್ರುವರಿ 20ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಒಡಿಯಾ ಭಾಷೆಗೆ ಶಾಸ್ತ್ರೀಯ ಭಾಷಾ ಸ್ಥಾನಮಾನ ನೀಡಲು ತೀರ್ಮಾನಿಸಿತು. ಇಂಡೋ–ಆರ್ಯನ್‌ ಭಾಷಾ ಗುಂಪಿನಲ್ಲಿ ಒಡಿಯಾ ಮೊದಲ ಶಾಸ್ತ್ರೀಯ ಸ್ಥಾನಮಾನ ಪಡೆಯುವ ಭಾಷೆಯಾಗಿದೆ. ಒಡಿಯಾ ಒಡಿಶಾ ರಾಜ್ಯದ ಅಧಿಕೃತ ಆಡಳಿತ ಭಾಷೆಯಾಗಿದೆ.
*ಫೆ. 20ರಂದು ಲೋಕಸಭೆಯಲ್ಲಿ ಆಂಧ್ರಪ್ರದೇಶ ಇಬ್ಭಾಗ ಮಸೂದೆ–2014’ ಅನ್ನು ಅಂಗೀಕರಿಸಲಾಯಿತು.
*ಫೆ. 26ರಂದು ಸಿಕ್ಕಿಂ ವಿಧಾನಸಭೆಯು ಸಿಕ್ಕಿಂ ಲೋಕಾಯುಕ್ತ ಮಸೂದೆಯನ್ನು ಅವಿರೋಧವಾಗಿ ಅಂಗೀಕರಿಸಿತು.
*ಕೇಂದ್ರ ಹಣಕಾಸು ಸಚಿವ ಪಿ.ಚಿದಂಬರಂ ಅವರು ಫೆ. 17ರಂದು ಮಧ್ಯಂತರ ಬಜೆಟ್‌ ಮಂಡಿಸಿದರು. ಈ ಬಜೆಟ್‌ ಕೇಂದ್ರದ 83ನೇ ಬಜೆಟ್‌ ಆಗಿದೆ.
*ದೆಹಲಿಯಲ್ಲಿ ನೆಲೆಸಿರುವ ಈಶಾನ್ಯ ರಾಜ್ಯಗಳ ಜನರಿಗಾಗಿ ದೆಹಲಿ ಪೊಲೀಸರು ಸಹಾಯವಾಣಿ (1093)ಯೊಂದನ್ನು ಆರಂಭಿಸಿದ್ದಾರೆ. ಜನಾಂಗೀಯ ನಿಂದನೆಯಂತಹ ದೂರಗಳನ್ನು ಈ ಸಹಾಯವಾಣಿಯ ಮೂಲಕ ದಾಖಲಿಸಬಹುದು.
*ಕರ್ನಾಟಕ ತಂಡ ಐದನೇ ಭಾರಿಗೆ ಇರಾನಿ ಕಪ್‌ ಟ್ರೋಫಿಯನ್ನು ಗೆದ್ದುಕೊಂಡಿತು. ಜೆಡ್‌. ಆರ್‌ ಇರಾನಿ ಅವರ ಸ್ಮರಣಾರ್ಥ ಇರಾನಿ ಕಪ್‌ ಕ್ರಿಕೆಟ್‌ ಪಂದ್ಯಾವಳಿಯನ್ನು ಆಯೋಜಿಸಲಾಗುತ್ತದೆ. 1998ರಲ್ಲಿ ವೆಂಕಟೇಶ್‌ ಪ್ರಸಾದ್‌ ನೇತೃತ್ವದ ಕರ್ನಾಟಕ ಇರಾನಿ ಕಪ್‌ ಅನ್ನು ಗೆದ್ದು ಕೊಂಡಿತ್ತು.
*ಭಾರತೀಯ ನೌಕಾ ಪಡೆಯ ಮುಖ್ಯಸ್ಥರಾದ ದೇವೇಂದ್ರ ಕುಮಾರ್‌ ಜೋಶಿ ಅವರು 26ರಂದು ರಾಜೀನಾಮೆ ನೀಡಿದರು. ಮುಂಬೈನಲ್ಲಿ ಸಂಭವಿಸಿದ್ದ ಐಎನ್‌ಎಸ್‌ ಸಿಂಧೂರತ್ನ ಜಲಾಂತರ್ಗಾಮಿ ಅಪಘಾತ ದುರಂತದ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಿದರು. ಸಿಂಧೂರತ್ನ ಜಲಾಂತರ್ಗಾಮಿಯನ್ನು ರಷ್ಯಾ ತಂತ್ರಜ್ಞಾನದೊಂದಿಗೆ ನಿರ್ಮಾಣ ಮಾಡಲಾಗಿತ್ತು.
*ಮಹೀಂದ್ರ ಅಂಡ್‌ ಮಹೀಂದ್ರ ಲಿಮಿಟೆಡ್‌ ಕಂಪೆನಿಯು ಫೆ.27ರಂದು ಭೂತಾನ್‌ ದೇಶದ ರಾಜಧಾನಿ ಥಿಂಪುವಿನಲ್ಲಿ ಎಲೆಕ್ಟ್ರಿಕ್‌ ಕಾರ್‌ ‘ಇ–20’ಯನ್ನು ಬಿಡುಗಡೆ ಮಾಡಿತು.
*ಪ್ರತ್ಯೇಕ ಬೋಡೊಲ್ಯಾಂಡ್‌ ರಾಜ್ಯ ರಚನೆ ಅಧ್ಯಯನಕ್ಕೆ ಕೇಂದ್ರ ಸರ್ಕಾರ ಕೇಂದ್ರದ ಮಾಜಿ ಗೃಹ ಕಾರ್ಯದರ್ಶಿ ಜಿ.ಕೆ. ಪಿಳೈ ಅವರ ನೇತೃತ್ವದ ಏಕ ಸದಸ್ಯ ಸಮಿತಿಯನ್ನು ಫೆ. 27ರಂದು ಸಂವಿಧಾನ ಬದ್ಧವಾಗಿ ರಚನೆ ಮಾಡಿತು. ಪಿಳೈ ಅವರು 9 ತಿಂಗಳಲ್ಲಿ ರಾಜ್ಯ ರಚನೆ ಕುರಿತಂತೆ ವರದಿ ನೀಡಬೇಕಿದೆ. ಅಸ್ಸಾಂ ರಾಜ್ಯದಿಂದ ಬೋಡೋಲ್ಯಾಂಡ್‌ ಪ್ರತ್ಯೇಕವಾಗಲಿದೆ. 

ಅಲಂಕಾರಗಳ ಬೆಡಗಿನ ಲೋಕ

ನಮ್ಮ ಭಾಷೆಯನ್ನು ಸತ್ವಯುತಗೊಳಿಸಲು ಅಲಂಕಾರಗಳು (figures of speech) ಒಂದು ಉತ್ತಮ ಸಾಧನ. ಜಾಹೀರಾತು ಪ್ರಪಂಚದ ಭಾಷೆಯ ಜೀವಾಳವೇ ಈ ಅಲಂಕಾರಗಳು ಎಂಬುದನ್ನು ಗಮನಿಸಬೇಕು. ನಾವು ಸಾಧಾರಣವಾಗಿ ಉಪಯೋಗಿಸುವ ಭಾಷೆಗಿಂತ ಅಲಂಕಾರಗಳು ವಿಶಿಷ್ಟ ರೀತಿಯಲ್ಲಿ ಭಿನ್ನವಾಗಿರುತ್ತವೆ. ಇವುಗಳಿಂದ ನಮ್ಮ ಸಂವಹನ, ಆಕರ್ಷಕವಾಗಿಯೂ, ಪರಿಣಾಮಕಾರಿಯಾಗಿಯೂ ಇರುತ್ತದೆ.
ಇಂಗ್ಲಿಷ್‌ನಲ್ಲಿ ಸಾಮಾನ್ಯವಾಗಿ ಕಂಡುಬರುವ ಅಲಂಕಾರಗಳೆಂದರೆ simile(ಸಿಮಿಲಿ), metaphor(ಮೆಟಫರ್), personification (ಪರ್ಸಾನಿಫಿಕೇಶನ್), hyperbole (ಹೈಪರ್‌ಬಲಿ), alliteration (ಅಲಿಟರೇಶನ್), pun(ಪನ್), onomatopoeia (ಒನಮಟೊಪಿಯ), antithesis (ಆನ್ಟಿತೆಸಿಸ್) ಮುಂತಾದವು. ಇವು ಸಾಹಿತ್ಯ ವಿದಾರ್ಥಿಗಳಿಗೆ ಗೊತ್ತಿರುವ ವಿಷಯವೇ. ಈ ಅಲಂಕಾರಗಳು ಜಾಹೀರಾತು ಭಾಷೆಯಲ್ಲಿ ಹೇಗೆ ಬಳಕೆಯಾಗುತ್ತವೆ ಎಂಬುದನ್ನು ಸೂಕ್ಷ್ಮವಾಗಿ ಗಮನಿಸಿದಾಗ, ನಾವು ಉಪಯೋಗಿಸುವ ಭಾಷೆಯ ಶಕ್ತಿಯನ್ನು, ಸೂಕ್ಷ್ಮತೆಯನ್ನು ವೃದ್ಧಿಸಿಕೊಳ್ಳುವ ಸಾಧ್ಯತೆ ಇರುತ್ತದೆ. ಈ ನಿಟ್ಟಿನಲ್ಲಿ ಕೆಲವು ಉದಾಹರಣೆಗಳನ್ನು ನೋಡೋಣ.
1. As thin as a giraffee
ಈ ಸಾಲನ್ನು Noblia Watchನ ಜಾಹಿರಾತಿನಲ್ಲಿ ಕಾಣಬಹುದು. ವಾಚೊಂದು, ಜಿರಾಫೆಯಷ್ಟೇ ತೆಳುವಾಗಿ, ಆಕರ್ಷಕವಾಗಿದೆ ಎಂದು ಸೂಚಿಸುವಂತಹ ಈ ಸಾಲಿನಲ್ಲಿ, simileಎಂಬ ಅಲಂಕಾರ ಕಂಡುಬರುತ್ತದೆ. Simileಯಲ್ಲಿ ಒಂದು ವಸ್ತುವನ್ನು ಇನ್ನೊಂದು ವಿಭಿನ್ನವಾದ ವಸ್ತುವಿಗೆ ಹೋಲಿಸಲಾಗುತ್ತದೆ (Simile is a kind of comparison).
2. If you want to get read, use red.
Panasonic copiersನ ಜಾಹೀರಾತಿನಲ್ಲಿ ಕಂಡುಬರುವ ಸಾಲಿದು. ಇದರಲ್ಲಿ, paronomasia (ಪ್ಯಾರನಮೇಸಿಯ) ಎಂಬ ಅಲಂಕಾರವನ್ನು ಕಾಣಬಹುದು. Paronomasia ದಲ್ಲಿ ಬೇರೆ ಬೇರೆ ಅರ್ಥ ಹೊಮ್ಮಿಸುವ ಹಾಗೂ ಒಂದೇ ಉಚ್ಚಾರಣೆಯುಳ್ಳ ಪದಗಳನ್ನು ಕಾಣಬಹುದು. ಮೇಲಿನ ಉದಾಹರಣೆಯಲ್ಲಿ, read(ರೆಡ್) ಮತ್ತು red(ರೆಡ್) ಅನ್ನು paronomasia ಎಂದು ಪರಿಗಣಿಸಬಹುದು.
3. FiIt makes salads, dressings.. and it won’t bite ಎಂಬ ಸಾಲನ್ನು cuisinart food processorನ ಜಾಹೀರಾತಿನಲ್ಲಿ ಬಳಸಲಾಗಿದೆ. ತರಕಾರಿ ಹೆಚ್ಚುವಂತಹ ಕ್ರಿಯೆಯನ್ನು ಕೂಡ ಹಿಂಸೆಯಿಲ್ಲದೆ, ಅತಿ ನಾಜೂಕಾಗಿ ಈ ಫುಡ್ ಪ್ರೊಸೆಸರ್ ಮಾಡುತ್ತದೆಂಬ ಅರ್ಥ ಈ ವಾಕ್ಯದಲ್ಲಿ ಅಡಕವಾಗಿದೆ. ಇಲ್ಲಿ ಕಂಡುಬರುವ ಅಲಂಕಾರವೆಂದರೆ personification. Personificationನಲ್ಲಿ ಜಡ ವಸ್ತುಗಳಿಗೆ ಜೀವಲಕ್ಷಣಗಳನ್ನು ಆರೋಪಿಸಲಾಗುತ್ತದೆ.
4.Clean, clear, confident.
Clean & Clear face washನ ಜಾಹೀರಾತಿನಲ್ಲಿ ಕಂಡುಬರುವ ಸಾಲಿದು. ಇದರಲ್ಲಿ alliteration ಎಂಬ ಅಲಂಕಾರವಿದೆ. Alliterationನಲ್ಲಿ ಒಂದೇ ರೀತಿಯ ಶಬ್ದದಿಂದ ಪ್ರಾರಂಭವಾಗುವ ಹಲವು ಪದಗಳಿರುತ್ತವೆ. ಮೇಲಿನ ಉದಾಹರಣೆಯಲ್ಲಿ Clean, clear, confident ಎಂಬ ಪದಗಳು ‘ಕ’ ಶಬ್ದದಿಂದ ಪ್ರಾರಂಭವಾಗುತ್ತವೆ. Alliterationನ ಬಳಕೆಯಿಂದ ಜಾಹೀರಾತಿನಲ್ಲಿರುವ ಪದಗಳು ಕೇಳಲು ಹಿತವಾಗಿದ್ದು, ಕೇಳುಗರ ಮನಸ್ಸನ್ನು ಸೆಳೆಯುತ್ತದೆ.
ಅಲಂಕಾರಗಳು, ಭಾಷೆಗೆ ಹೊಳಪು ನೀಡುತ್ತವಾದರೂ ಅವುಗಳ ಬಳಕೆ ಅತಿಯಾಗದಂತೆ ಎಚ್ಚರ ವಹಿಸುವುದು ಅಗತ್ಯ. ಜಾಹೀರಾತುಗಳಲ್ಲಿ ಮತ್ತು ದಿನನಿತ್ಯದ ಭಾಷೆಯಲ್ಲಿ ಕಂಡು ಬರುವ ಇನ್ನೂ ಕೆಲವು ಅಲಂಕಾರಗಳನ್ನು ಇಲ್ಲಿ ಗಮನಿಸಿ:
Monita, finest to put you finest.
Monita cameraದ ಜಾಹೀರಾತಿನಲ್ಲಿ ಕಂಡುಬರುವ ಈ ಸಾಲಿನಲ್ಲಿ Repetition ಎಂಬ ಅಲಂಕಾರವಿದೆ. ಮೊದಲನೆಯ ಬಾರಿ ಕಂಡುಬರುವ finest ಎಂಬ ಪದ ಕ್ಯಾಮೆರಾವನ್ನು ಪ್ರಶಂಸಿಸುವುದಕ್ಕಾಗಿ ಉಪಯೋಗಿಸಿದ್ದರೆ, ಎರಡನೆಯ ಬಾರಿ, ಗ್ರಾಹಕರನ್ನು ಪ್ರಶಂಸಿಸುವುದಕ್ಕಾಗಿ ಬಳಸಲಾಗಿದೆ.
ಈ ಜಾಹೀರಾತಿನಲ್ಲಿ, ಪದಗಳ repetition ಇದ್ದರೆ, Raymond suitingssನ ಜಾಹಿರಾತಿನಲ್ಲಿ ಕಂಡುಬರುವ Feels like heaven, feels like Raymond ಎಂಬ ಸಾಲಿನಲ್ಲಿ ಪದಗಳಷ್ಟೇ ಅಲ್ಲದೆ ವಾಕ್ಯರಚನೆಯಲ್ಲಿಯೂ repetition ಕಂಡುಬರುತ್ತದೆ. ಈ ರೀತಿಯ repetitionಅನ್ನು Parallelism ಎನ್ನುತ್ತೇವೆ. ಈ ಅಲಂಕಾರದ ಬಳಕೆಯಿಂದ ನಮ್ಮ ಭಾವನೆಗಳ ಲಯವನ್ನು ಒತ್ತುಕೊಟ್ಟು, ಮನ ಮುಟ್ಟುವಂತೆ ಅಭಿವ್ಯಕ್ತಿಗೊಳಿಸಲು ಸಾಧ್ಯವಾಗುತ್ತದೆ. Parallelismನ ಇನ್ನೊಂದು ಉದಾಹರಣೆಯನ್ನು Smith Corona Electronic Typewriter ಜಾಹೀರಾತಿನ ಈ ಸಾಲಿನಲ್ಲಿ ನೋಡಿ.
It catches your mistakes. Finds it. Erases it. Even helps you to spell it.
Warehouse Clearance. Their Loss, your Gain.
Clearance sale ಜಾಹೀರಾತಿನಲ್ಲಿ ಕಾಣಸಿಗುವ ಈ ಸಾಲಿನಲ್ಲಿ, Antithesis ಎಂಬ ಅಲಂಕಾರವಿದೆ. Anetithesis ನಲ್ಲಿ ಸಾಮಾನ್ಯವಾಗಿ ಎರಡು ವಿರುದ್ಧ ಅಭಿಪ್ರಾಯಗಳನ್ನು ಒಂದೇ ವಾಕ್ಯದಲ್ಲಿ ಸೂಚಿಸಲಾಗಿರುತ್ತದೆ.
Antithesis ಹೇಳಿರುವ ‘To err is human, to forgive, divine’ ಎಂಬ ವಾಕ್ಯದಲ್ಲಿಯೂ ಹಾಗೂ Neil Armstrong ಹೇಳಿರುವ ‘That’s one small step for am man, one giant heap for mankind’ ಎಂಬ ವಾಕ್ಯದಲ್ಲಿಯೂ ಅಡಕವಾಗಿದೆ.
Make your hair glimmer, shimmer, or simply glow ಎಂಬ ಸಾಲು, Clairol hair colourನ ಜಾಹೀರಾತಿನಲ್ಲಿ ಕಂಡುಬರುತ್ತದೆ. ಇಲ್ಲಿ ಉಪಯೋಗಿಸಲಾದ ಅಲಂಕಾರವೆಂದರೆ Imagery.. ನಾವು ಉಪಯೋಗಿಸುವ ಭಾಷೆ, ನಮ್ಮ ಇಂದ್ರಿಯಾನುಭವಕ್ಕೆ ಥಟ್ಟನೆ ದಕ್ಕುವಂತಿದ್ದರೆ, ಅಲ್ಲಿ imageryಯ ಉಪಯೋಗವಾಗಿದೆ ಎಂದರ್ಥ. IImageryಯಲ್ಲಿ ಐದು ವಿಧಗಳಿವೆ- vivisual imagery (sight), auditory imagery (hearing), olfactory imagery (smell), gustatory imagery (taste), kinaesthetic imagery (touch).
ಮೇಲಿನ ಉದಾಹರಣೆಯಲ್ಲಿರುವ glimmer, shimmer, glow ಎಂಬ ಪದಗಳು ದೃಶ್ಯಾಧಾರಿತ(vision based) ವಾಗಿರುವುದರಿಂದ, ಇವು visual imageryಯ ರೂಪಗಳಾಗಿವೆ. ಯಾವುದೇ ವಿಷಯದ ಉತ್ಕಟತೆಯನ್ನು (intensity) ಪ್ರಕಟಗೊಳಿಸಲು,  Hyperbole ಎಂಬ ಅಲಂಕಾರಿಕ ಅತಿ ಉಪಯುಕ್ತ. ಮೊಬೈಲೊಂದರ ಜಾಹೀರಾತಿನಲ್ಲಿ ಉಪಯೋಗಿಸಿರುವ LG Optimus, outshines the sun ಎಂಬ ವಾಕ್ಯ hhyperboleಯ ಒಂದು ಉದಾಹರಣೆ.
ನಮ್ಮ ದಿನನಿತ್ಯದ ಸಂಭಾಷಣೆಯಲ್ಲಿ, I am so hungry that I can eat an elephant ಎಂಬ ವಾಕ್ಯದಲ್ಲೂ, I have told you a thousand times ಎಂಬಂತಹ ಅಭಿವ್ಯಕ್ತಿಯಲ್ಲಿಯೂ, hyperbole ಅನ್ನು ಕಾಣಬಹುದು.

ಇಂಗ್ಲಿಷ್ ಬರವಣಿಗೆಯಲ್ಲಿ ಜೋಡಣಾ ಪದಗಳ ಪಾತ್ರ

ನಾವು ಬರೆಯುವ ಯಾವುದೇ ಪ್ಯಾರಾಗ್ರಾಫ್‌ನಲ್ಲಿ, ಅದರ ಸಾವಯವ ಸಂಬಂಧವನ್ನು (Organic unity) ಸಾಧಿಸುವಲ್ಲಿ Cohesive devices (ಜೋಡಣಾ ಪದಗಳು) ಮುಖ್ಯ ಪಾತ್ರ ವಹಿಸುತ್ತವೆ. ಬೇರೆ ಬೇರೆ ಕಾರಣಗಳಿಗೆ, ವಿವಿಧ ರೀತಿಯ ಜೋಡಣಾ ಪದಗಳನ್ನು ಬಳಸುತ್ತೇವೆ. ಯಾವ ಯಾವ ಸಂದರ್ಭಗಳಲ್ಲಿ ಎಂತಹ ಜೋಡಣಾ ಪದಗಳನ್ನು ಬಳಸಬಹುದು ಎಂಬುದನ್ನು ಇಲ್ಲಿ ಗಮನಿಸಿ:
ಒಂದು ವಾಕ್ಯಕ್ಕೆ ವಿರುದ್ಧವಲ್ಲದ ಇನ್ನೊಂದು ವಾಕ್ಯ/ ಅಭಿಪ್ರಾಯವನ್ನು ಜೋಡಿಸಬೇಕಾದರೆ ಕನ್ನಡದಲ್ಲಿ ‘ಹಾಗೂ’, ‘ಮತ್ತು’, ‘ಅದಲ್ಲದೆ’, ‘ಮುಂದೆ’, ‘ಅದರ ಜೊತೆಗೆ’, ‘ನಂತರ’ ಎನ್ನುವಂತಹ ಪದಗಳನ್ನು ಬಳಸುವ ಹಾಗೆ ಇಂಗ್ಲಿಷ್‌ನಲ್ಲಿ and, also, besides, in addition, further, moreover, next ಅಂತಹ ಜೋಡಣಾ ಪದಗಳನ್ನು ಬಳಸಬಹುದು.
ಉದಾ: 1. I started cooking. Besides, I had to wash clothes also.
2. We reached the place on time. Further, we started searching for a hotel.
3. I have written my last exam today. And at last, the day has come to plan for my vacation.
ಕಾರಣ/ ಪರಿಣಾಮಗಳನ್ನು ಸೂಚಿಸುವ ವಾಕ್ಯಗಳನ್ನು ಜೋಡಿಸುವ ಸಂದರ್ಭದಲ್ಲಿ, ಕನ್ನಡದಲ್ಲಿ ‘ಆದ್ದರಿಂದ’, ‘ಅದರ ಪರಿಣಾಮವಾಗಿ’, ‘ಹಾಗಾಗಿ’, ‘ಅದಕ್ಕಾಗಿ’, ‘ಆದ ಕಾರಣ’, ‘ಅದಕ್ಕೋಸ್ಕರ’ ಎನ್ನುವಂತಹ ಪದಗಳನ್ನು ಉಪಯೋಗಿಸಿದರೆ, ಇಂಗ್ಲಿಷ್‌ನಲ್ಲಿ so, as s result, consequently, hence, therefore, thus ಎನ್ನುವ ಜೋಡಣಾ ಪದಗಳನ್ನು ಉಪಯೋಗಿಸಬಹುದು.
ಉದಾ: 1.Everyday, the atmosphere at home was strained and bitter. Consequently, the children were full of discontent.
2.We worked hard. As a result, we won.
3.They misbehaved in public.Therefore, they were punished.
ವಿಭಿನ್ನ ಅಭಿಪ್ರಾಯ/ ಅರ್ಥವನ್ನು ಸೂಚಿಸುವ ವಾಕ್ಯವನ್ನು ಹಿಂದಿನ ವಾಕ್ಯಕ್ಕೆ ಜೋಡಿಸಬೇಕಾದರೆ ‘ಅದರ’, ‘ಅದಕ್ಕೆ ಬದಲಾಗಿ’, ‘ಆದರೂ’, ‘ಆದರೂ ಕೂಡ’. ‘ಹಾಗಿದ್ದರೂ’, ‘ಆದಾಗ್ಯೂ’ ಎನ್ನುವಂತಹ ಪದಗಳಿಗೆ ಸಮಾನಾರ್ಥವಾಗಿ but, however, instead, nevertheless, on the other hand, still,  ಎನ್ನುವಂತಹ ಜೋಡಣಾ ಪದಗಳು ಉಪಯುಕ್ತ.
ಉದಾ: 1.We may not succeed in changing them. Nevertheless, it is important that we don’t stop trying.
2.The teacher urged the students to be more enthusiastic towards the activities in the college. Yet, they were least bothered about anything.
3.She did not replay. Instead, she left the room abruptly.
ಸರಿಯಾದ ಜೋಡಣಾ ಪದಗಳ (cohesive devices) ಉಪಯೋಗದಿಂದ ಕ್ಲಿಷ್ಟ ವಿಷಯಮಂಡನೆಯನ್ನು ಕೂಡ ಸುಲಭವಾಗಿ ಮಾಡಬಹುದು. ಇವುಗಳ ಸರಿಯಾದ ಬಳಕೆಯಿಂದ ವಾಕ್ಯಗಳ ನಡುವಿನ ಅಂತರ್ ಸಂಬಂಧವನ್ನು ಕರಾರುವಾಕ್ಕಾಗಿ ಸೂಚಿಸಬಹುದು. ಸ್ಪಷ್ಟತೆ ಒಳ್ಳೆಯ ಬರವಣಿಗೆಯ ಒಂದು ಬಹು ಮುಖ್ಯ ಗುಣ. ಜೋಡಣಾ ಪದಗಳು ಈ ನಿಟ್ಟಿನಲ್ಲಿ ಸಹಾಯ ಮಾಡುತ್ತವೆ.
Cohesive devices ಅನ್ನು linkers ಎಂದೂ ಕರೆಯುತ್ತೇವೆ. ಇನ್ನೂ ಕೆಲವು ಲಿಂಕರ್ಸ್‌ಗಳನ್ನು ಇಲ್ಲಿ ಗಮನಿಸಿ: ಹೋಲಿಕೆಯನ್ನು ಕೊಡುವ ಸಂದರ್ಭದಲ್ಲಿ, ಕನ್ನಡದಲ್ಲಿ ಉಪಯೋಗಿಸಬಹುದಾದ linkers ಹೀಗಿವೆ:
‘ಅದೇ ರೀತಿ’, ‘ಹಾಗೆಯೇ’, ‘ಅದೇ ತರಹ’ ಮುಂತಾದವುಗಳು. ಇವಕ್ಕೆ ಸಮನಾದ linkers ಅನ್ನು ಇಂಗ್ಲಿಷ್‌ನಲ್ಲಿ ಗಮನಿಸಿ:
Similarly, likewise, in the same way, in a similar fashion, by the same token, in like manner....
ಉದಾ: when the others talk negatively about us, we feel sad. In the same way, we should understand that when we talk negatively about others, they also feel sad.
ನಮ್ಮ ಬರವಣಿಗೆಯ ಅಂತ್ಯದಲ್ಲಿ ಕನ್ನಡದಲ್ಲಿ ಬಳಸಬಹುದಾದ linkers ಎಂದರೆ, ‘ಕೊನೆಯದಾಗಿ’, ‘ಆದ್ದರಿಂದ’, ‘ಹಾಗಾಗಿ’ ಮುಂತಾದವುಗಳು ಇಂಗ್ಲಿಷ್‌ನಲ್ಲಿ at last, finally, in brief, to conclude, on the whole, to sum up ಎಂಬವುಗಳನ್ನು ಬಳಸಬಹುದು.
ಉದಾ: 1.They had applied for the job two years ago. And there was an interview last year. They were all waiting for the short list to be announced. Finally, it is announced today.
ಉದಾಹರಣೆಗಳನ್ನು ಕೊಡುವಂತಹ ಸಂದರ್ಭದಲ್ಲಿ, ಕನ್ನಡದಲ್ಲಿ ‘ಉದಾಹರಣೆಗೆ’ ಎನ್ನುವಂತೆ, ಇಂಗ್ಲಿಷ್‌ನಲ್ಲಿ as an example, for example, like, for instance, to illustrate ಎನ್ನುವಂತಹ ಪದಗಳು/ಪದಪುಂಜಗಳನ್ನು ಉಪಯೋಗಿಸಬಹುದು.
ಉದಾ: 1.There are a few food items which aggravate allergy. For example, brinjal, egg, biiter gourd etc.
ನಮ್ಮ ಹೇಳಿಕೆಗೆ ಒತ್ತನ್ನು ಕೊಡುವಾಗ, ಕನ್ನಡದಲ್ಲಿ ‘ಖಂಡಿತವಾಗಿ’, ‘ಮುಖ್ಯವಾಗಿ’ ಎಂದು ಬಳಸುವಂತೆ ಇಂಗ್ಲಿಷ್‌ನಲ್ಲಿ in fact, of course, indeed, do, yes ಎನ್ನುವಂತಹ ಪದಗಳನ್ನು ಬಳಸಬಹುದು.
ಉದಾಹರಣೆಗೆ:
1.The joy of giving is indeed, the ultimate pleasure.
2.I do agree with what you say.
3.Yes, you are correct.
4.Of course, he is wrong.
ಸಮಯಾಂತರವನ್ನು (time transitions) ಸೂಚಿಸುವಾಗ ಕನ್ನಡದಲ್ಲಿ ಈ linkers ಅನ್ನು ಉಪಯೋಗಿಸಬಹುದು. ‘ನಂತರ’, ‘ಈ ಹಿಂದೆಯೇ’, ‘ಜೊತೆ ಜೊತೆಯಾಗಿ’, ‘ಇದುವರೆಗೂ’, ‘ಅದೇ ಸಮಯದಲ್ಲಿ’, ‘ಪ್ರಸ್ತುತ’, ‘ಈ ಮಧ್ಯೆ’, ಇವಕ್ಕೆ ಸಮನಾಗಿ ಇಂಗ್ಲಿಷ್‌ನಲ್ಲಿ later, formerly, simultaneously, till now, at the same time, currently, meanwhile ಎಂಬುವುಗಳನ್ನು ಬಳಸಬಹುದು.
ಸರಿಯಾದ linkers ಅನ್ನು ನಾವು ಬಳಸಿದಾಗ ವಾಕ್ಯಗಳ ಮಧ್ಯೆ ಶಕ್ತಿಯುತವಾದ ಬಂಧ (cohesion) ಏರ್ಪಡುತ್ತದೆ. ಇದರಿಂದ ನಮ್ಮ ವಾಕ್ಯಗಳಲ್ಲಿನ ಅರ್ಥವಂತಿಕೆ ಗೊಂದಲವಿಲ್ಲದೆ ಚಲಿಸುತ್ತಾ ಓದುಗರನ್ನು ಮುಟ್ಟುತ್ತದೆ.
ಮಾಹಿತಿಗೆ: 98452 14004

ವಿಸರಣ ಕ್ರಿಯೆ

ಬೇಕಾಗುವ ಸಲಕರಣೆಗಳು:
ಸ್ವಚ್ಛವಾದ ಮೂರು ಗಾಜಿನ ಗ್ಲಾಸುಗಳು, ಬಿಸಿ ನೀರು, ಫ್ರಿಜ್‌ನಲ್ಲಿಟ್ಟ ನೀರು, ಕೋಣೆಯ ತಾಪಮಾನದಲ್ಲಿರುವ ನೀರು, ಪೆನ್ನಿಗೆ ಹಾಕುವ ಮಸಿ.
ವಿಧಾನ: 1) ಒಂದೇ ಗಾತ್ರದ ಮೂರು ಸ್ವಚ್ಛವಾದ ಗಾಜಿನ ಗ್ಲಾಸುಗಳನ್ನು ತೆಗೆದುಕೊಂಡು, ಅವುಗಳಿಗೆ ‘ಅ’, ‘ಬ’ ಮತ್ತು ‘ಕ’ ಎಂದು ಹೆಸರಿಸಿರಿ.
2) ‘ಅ’ ಗ್ಲಾಸಿನಲ್ಲಿ ಫ್ರಿಜ್‌ನಲ್ಲಿಟ್ಟ ನೀರನ್ನು, ‘ಬ’ ದಲ್ಲಿ ಕೋಣೆಯ ತಾಪಮಾನದಲ್ಲಿಯ ನೀರನ್ನು ಮತ್ತು ‘ಕ’ ದಲ್ಲಿ ಬಿಸಿ ನೀರನ್ನು ಸಮ ಪ್ರಮಾಣದಲ್ಲಿ ತೆಗೆದುಕೊಳ್ಳಿರಿ.
3) ಪ್ರತಿಯೊಂದು ಗ್ಲಾಸಿಗೆ ಒಂದೆರಡು ಹನಿ ಪೆನ್ನಿಗೆ ಹಾಕುವ ಮಸಿಯನ್ನು ಹಾಕಿ ವೀಕ್ಷಿಸಿರಿ. (ಪೊಟ್ಯಾಸಿಯಮ್ ಪರಮಾಂಗನೇಟಿನ ಹರಳುಗಳನ್ನೂ ಹಾಕಬಹುದು).
ಪ್ರಶ್ನೆ: 1) ಮಸಿ ಕರಗುವ ಕ್ರಿಯೆಯ ಹೆಸರೇನು? 2) ಯಾವ ನೀರಿನಲ್ಲಿ ಮಸಿ ಸಾವಕಾಶವಾಗಿ ಅಥವಾ ತ್ವರಿತವಾಗಿ ಕರಗುತ್ತದೆ? ಯಾಕೆ?
ಉತ್ತರ:
 ಇದಕ್ಕೆ ‘ವಿಸರಣ’ (Diffusion) ಕ್ರಿಯೆಯೆನ್ನುತ್ತಾರೆ. ಫ್ರಿಜ್‌ನಲ್ಲಿಯ ನೀರಿನಲ್ಲಿ ಅತಿ ಸಾವಕಾಶವಾಗಿ ಹಾಗೂ ಬಿಸಿ ನೀರಿನಲ್ಲಿ ಅತಿ ತ್ವರಿತವಾಗಿ ಮಸಿ ಕರಗುತ್ತದೆ. ತಾಪಮಾನ ಹೆಚ್ಚಿದಂತೆ ವಿಸರಣ ಕ್ರಿಯೆ ಹೆಚ್ಚುತ್ತದೆ. ಹೆಚ್ಚಿನ ಉಷ್ೞತೆಯನ್ನು ಹೀರಿಕೊಂಡ ಮಸಿಯ ಅಣುಗಳು ತ್ವರಿತವಾಗಿ ಚಲಿಸುತ್ತವೆ. ಬಿಸಿ ಹಾಲಿನಲ್ಲಿ ಸಕ್ಕರೆ ತೀವ್ರವಾಗಿ ಕರಗುತ್ತದೆ. ತಣ್ಣನೆಯ ಹಾಲಿನಲ್ಲಿ ಕರಗಲು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. 
10