Thursday 26 March 2015

Swarachitha kavanagalu by Anandraj.L

ನೀನೊಬ್ಬಳೆ  ಚೆಲುವೆ   :
ಬಣ್ಣಬಣ್ಣದ ಲೆಕ್ಕಾಚಾರದ ಕನಸುಗಳ 
ಕಟ್ಟಿಕೊಡುವವಳು ನೀನೆ . ,
ಮೋಡದ ಮರೆಯಲ್ಲಿ ಕಪ್ಪಾಗಿ ಕಾಣದೆ ಕುಳಿತು 
ಮತ್ತೆ ನಗುವಿನ ಬೆಳಕಾ ಎದೆತಟ್ಟಿ ನೀಡುವವಳು ನೀನೆ ., 
ನನಗೊಂದು ನಿನ್ನದೇ ಆದ ಕನಸೊಂದನ್ನು ಕೊಡು 
ನನಸಾಗಿಸಿ ಸಾಯುವೆ ........ ,
ಆದರೆ ನೀನೆ ನನಗೆ ಬಣ್ಣಬಣ್ಣದ ಕನಸಾಗದಿರು !
ಏಕೆಂದರೆ......ನನಗಿರುವವಲು ನೀನೊಬ್ಬಳೆ ಚೆಲುವೆ .... ! ರಚನೆ : ಆನಂದರಾಜು .ಎಲ್ 

ಅವಕಾಶ :
ಒಂದು ಬೇಸಿಗೆಕಾಲ 
ಸೂರ್ಯನದ್ದೆ  ರಾಜ್ಯಭಾರ 
ಅವನಿಗೋ ನೆರಳನ್ನು ಮೀರಿ ನಿಲ್ಲುವೆ 
ಎಂಬ ಅಹಂಕಾರ 
ಸಿಟ್ಟು ಹೆಚ್ಚಾದಾಗ ನಮ್ಮ ತಲೆಗೆ 
ನಾವೇ ಚಚ್ಚಿಕೊಂಡು ಗೀಳಿಡುವಂತೆ 
ಆಗಾಗ ಭಾಸವಾಗಿ 
ಭಾರಿ ಮಜವೆನಿಸುವುದು ಬೇರೆಯವರಿಗೆ 
ಏನೋ ಶಕ್ತಿ ಇದೆ ಸೂರ್ಯನ ಶಾಖಕ್ಕೆ
 ಕ್ಷಣಮಾತ್ರದಲ್ಲಿ ಮಾಯವಾಗುವುದು ವಿಶೇಷವು ಕೋಪಕ್ಕೆ .....
 ಗೆಳತಿ ನಿನ್ನ ಚೆಲ್ಲಾಟ ಎಷ್ಟು ಸೂಕ್ತ 
ದಿನವೂ ಹೆಣಗಾಡಿ ಭಾವನೆಗಳ ಹೆಣೆದೂ ಹೆಣೆದೂ..... ನಾನಾದೆ ಅಶಕ್ತ 
ನಿನ್ನ ಚೆಂದದ ನಗುವು 
ಮುಂಗುರುಳಾಗಿ ಬಿಗಿದಿದೆ ಎನ್ನ ಕಂಠವ 
ನನಗೊಮ್ಮೆ ನೀಡು 
ನಿನ್ನ ಸೋಲಿಸುವ ಅವಕಾಶವ ....... 
ಸರಿಗಟ್ಟುವೆ ನಿನ್ನ ಸಾಧನೆ - ವೇದನೆ  ಎಲ್ಲವ
ನಿನಗೆಂದು ಇರುವವನು ನಾನೊಬ್ಬನೇ ..... ನಾನೆಂದು ನಿನ್ನವ. 
ರಚನೆ : ಆನಂದರಾಜು .ಎಲ್ 

ಒಂದಂತೂ  ನಿಜ !
ಜೀವನದಲ್ಲಿ ಎಲ್ಲರನ್ನೂ ಪ್ರೀತ್ಸೋಕ್ಕಾಗಲ್ಲ 
ಕೋಪದ ಒಳ್ಳೆಗುಣ ಅದು ಜಾಸ್ತಿ ಸಮಯ ಇರೋದಿಲ್ಲ 
ಆನಂದ ಅನ್ನೋದು ಎಲ್ಲೋ ಸಿಗೋ ವಸ್ತು ಅಲ್ಲ 
ಕೆಲವರನ್ನು ಮರೆಯೋಕ್ಕಾಗೋದಿಲ್ಲ 
ಆದ್ರೆ ... ಒಂದಂತು ನಿಜ...ಏನು ಗೊತ್ತಾ?
ನಾವಿಸ್ಟ ಪಡೋ ಹೃದಯ ನಮ್ ಜೊತೆ ಇದ್ರೆ 
ಬೇಜಾರ್ ಅನ್ನೋ ಮಾತೆ ಇಲ್ಲ....!
ರಚನೆ : ಆನಂದರಾಜು .ಎಲ್ 

ಇಷ್ಟ - ಕಷ್ಟ 
ಇಷ್ಟ ಇಲ್ದೆ ಇರೋದನ್ನ 
ಇಷ್ಟ ಆದ್ರು  ಮಾಡಬಾರದು 
ಇಷ್ಟ ಇರೋದನ್ನ 
ಕಷ್ಟ ಆದ್ರು ಬಿಡಬಾರದು ....!
ರಚನೆ : ಆನಂದರಾಜು .ಎಲ್ 

ಅಪ್ಪಣೆ 
ಕೊಳ್ಳೇಗಾಲದಲ್ಲಿ ಕೋಳಿ ಕುಯ್ಯಿಸಿ 
ಸತ್ತಿಗಾಲದಲ್ಲಿ ಶುದ್ಧಮಾಡಿಸಿ 
ಲೊಕ್ಕನಹಳ್ಳಿಯಲ್ಲಿ ಕುಕ್ಕರ್ ಕೂಗಿಸಿ 
ನಮ್ ಸಿದ್ರಾಜ್ ಸರ್ ಮನೇಲಿ ಊಟ  ಹಾಕಿಸಿ 
ಸಾವಧಾನ ಮಾಡಿಸುವುದೇ....ಯಶೋಧೆ ?
ಅಪ್ಪಣೆ ಕೊಡಿ ಬೇಗ ಎಲ್ಲಾನು ರೆಡಿ ಇದೆ !
ರಚನೆ : ಆನಂದರಾಜು .ಎಲ್ 

ಹೆಸರೇ ಸಾಕು 
ಪದೇ ಪದೇ ಹೇಳುವ 
ಅವಳ ಹೆಸರೇ ಸಾಕು 
ಎಲ್ಲಾ ಜನುಮದಲ್ಲಿ ನನ್ನವಳಿಗೆ ನಾನೇ ಸಿಗಬೇಕು 
ಸೂರ್ಯನಂತೆ ಬೆಳಕಾದೆ 
ಚಂದ್ರನಂತೆ ತಂಪಾದೆ 
ನೀನನ್ನ ಹೃದಯ ಸ್ಪರ್ಶಿಸಲು 
ಜಗವನ್ನೇ ನಾ ಮರೆತುಹೋದೆ 
ರಚನೆ : ಆನಂದರಾಜು .ಎಲ್ 

ಮುದ್ದು ಯಶು 
ಸಂಜೆ ಸೂರ್ಯ ಕೇಸರಿ 
ಅಸ್ತಂಗತ ದೃಶ್ಯ ಐಸಿರಿ 
ಆನಂದನ ಮನಸು ಸಾಫ್ಟ್ ರೀ 
ನಮ್ ಯಶು ಮಾತ್ರ .....
ತುಂಬಾ ಕ್ಯೂಟ್ ರೀ ....!
ರಚನೆ : ಆನಂದರಾಜು .ಎಲ್ 

ಆಕರ್ಷಣೆ 
ಹೂಗಳಿಗೆ ದುಂಬಿಯ ಆಕರ್ಷಣೆ 
ಮಂಜಿನ ಹನಿಗೆ ಹಸಿರೆಲೆಯ ಆಕರ್ಷಣೆ 
ಭುವಿಗೆ ಮಳೆಯ ಆಕರ್ಷಣೆ 
ಅಲೆಗಳಿಗೆ ಚಂದಮಾಮನ ಆಕರ್ಷಣೆ 
ಈ ಹೃದಯಕ್ಕೆ ನನ್ನವಳ ಪಿಸುಮಾತೇ ಆಕರ್ಷಣೆ ...!

ರಚನೆ : ಆನಂದರಾಜು .ಎಲ್ 

ಪ್ರೇಮಿಯ ಆಸೆ
ಸಂಜೆ ತಾರೆಯನೆಲ್ಲವ ನೀವರಿಸಿ 
ಮಳೆಹನಿಗಳೆಲ್ಲವ ತಂಪಾಗಿಸಿ 
ಕುರುಂಜಿ ಹೂಗಳ ಮೊಗ್ಗಿನ ಜಡೆಯಾಗಿಸಿ 
ಮಗುವಿನಂತೆ ಮನದರಸಿಯ ಎದೆಗೊರಗಿಸಿ 
ಇಡೀ ಲೋಕವನ್ನೇ ಮೆರೆಸುವಾಸೆ 
ಹೀಗಿರಬಹುದಾ...? ಪ್ರತಿಯೊಬ್ಬ ಪರಿಶುದ್ಧ ಪ್ರೇಮಿಯ ಆಸೆ....! 
ರಚನೆ : ಆನಂದರಾಜು .ಎಲ್ 

Do you know?

Indian armed forces


History


Geography

General knowledge

Economics


Computer knowledge


Indian constitution


Mathematics


Science and technology


Mental ability


India


Karnataka


Articles


Wednesday 25 March 2015

current events

ನವದೆಹಲಿ (ಪಿಟಿಐ): ಮಾಹಿತಿ ತಂತ್ರಜ್ಞಾನ ಕಾಯ್ದೆಯ ವಿವಾದಾತ್ಮಕ ಕಲಂ 66 (ಎ) ರದ್ದುಗೊಳಿಸಿ ಮಂಗಳವಾರ ಮಹತ್ವದ ತೀರ್ಪು  ನೀಡಿರುವ ಸುಪ್ರೀಂಕೋರ್ಟ್‌,    ಅಂತರ್ಜಾಲ  ಮತ್ತು ಸಾಮಾಜಿಕ ಜಾಲತಾಣಗಳ ಬಳಕೆದಾರರ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಎತ್ತಿ ಹಿಡಿದಿದೆ.
ಕಲಂ 66 (ಎ)ನಲ್ಲಿ ಏನಿತ್ತು?
ಮಾಹಿತಿ ತಂತ್ರಜ್ಞಾನ ಕಾಯ್ದೆ ಕಲಂ 66(ಎ)ನಲ್ಲಿ ಸಾಮಾಜಿಕ ಜಾಲತಾಣ, ಅಂತರ್ಜಾಲಗಳಲ್ಲಿ ಆಕ್ಷೇಪಾರ್ಹ ಅಥವಾ ಪ್ರಚೋದನಾಕಾರಿ ಸಂದೇಶ ಪ್ರಕಟಿಸುವ ವ್ಯಕ್ತಿಗಳನ್ನು ಬಂಧಿಸಲು ಪೊಲೀಸರಿಗೆ ಅಧಿಕಾರ ನೀಡಲಾಗಿತ್ತು. ಈ ಆರೋಪ ಸಾಬೀತಾದಲ್ಲಿ ಗರಿಷ್ಠ ಮೂರು ವರ್ಷ ಶಿಕ್ಷೆ ಮತ್ತು ದಂಡ ವಿಧಿಸಬಹುದಾಗಿತ್ತು.
ಜಾರಿಯಲ್ಲಿರುವ  ‘ಕಲಂ’ಗಳು: ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ ತರುವ ಕಾರಣಕ್ಕೆ ಮಾಹಿತಿ ತಂತ್ರಜ್ಞಾನ ಕಾಯ್ದೆಯ ವಿವಾದಾತ್ಮಕ ಕಲಂ 66(ಎ) ರದ್ದು ಮಾಡಿದ ಸುಪ್ರೀಂಕೋರ್ಟ್‌, ಇದೇ ಕಾಯ್ದೆಯ ಕಲಂ 69(ಎ) ಮತ್ತು ಕಲಂ 79 ಕೆಲವು ನಿರ್ಬಂಧಗಳೊಂದಿಗೆ ಜಾರಿಯಲ್ಲಿರುವುದಾಗಿ ಹೇಳಿದೆ.
ಕಲಂ 69(ಎ): ಕಂಪ್ಯೂಟರ್‌ ಮಾಧ್ಯಮದ ಮೂಲಕ ಯಾವುದೇ ಮಾಹಿತಿ ಸಾರ್ವಜನಿಕರಿಗೆ ತಲುಪದಂತೆ ಅಥವಾ ಪ್ರಸಾರವಾಗದಂತೆ ತಡೆಹಿಡಿಯಲು ಸರ್ಕಾರಕ್ಕೆ ನಿರ್ದೇಶನ ನೀಡುವ ಅಧಿಕಾರ ನೀಡುತ್ತದೆ.
ಕಲಂ 79:  ಸೇವಾದಾತ ಅಂತರ್ಜಾಲ ಸಂಸ್ಥೆಗಳು ಮತ್ತು ಜಾಲತಾಣಗಳು ವಿಚಾರಗಳಿಗೆ ವೇದಿಕೆಯನ್ನು ಮಾತ್ರ ಒದಗಿಸುತ್ತವೆ. ಬಳಕೆದಾರರು ಪ್ರಕಟಿಸಿದ ವೈಯಕ್ತಿಕ ವಿಚಾರಗಳಿಗೆ ಸೇವಾದಾತ ಸಂಸ್ಥೆಗಳು ಬಾಧ್ಯಸ್ಥರಾಗುವುದಿಲ್ಲ.

Sat, 03/28/2015
ನವದೆಹಲಿ (ಪಿಟಿಐ): ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರಿಗೆ ಶುಕ್ರವಾರ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ‘ಭಾರತರತ್ನ’ವನ್ನು ಪ್ರದಾನ ಮಾಡಲಾಯಿತು.
ಶಿಷ್ಟಾಚಾರ ಬದಿಗಿಟ್ಟು ವಾಜಪೇಯಿ   ಅವರ ನಿವಾಸಕ್ಕೆ ತೆರಳಿದ ರಾಷ್ಟ್ರಪತಿ ಪ್ರಣವ್‌ ಮುಖರ್ಜಿ ಪ್ರಶಸ್ತಿ ಪ್ರದಾನ ಮಾಡಿದರು. ವಾಜಪೇಯಿ ಕಳೆದ ಹಲವಾರು ವರ್ಷಗಳಿಂದ ವೃದ್ಧಾಪ್ಯ ಸಹಜ  ಕಾಯಿಲೆಗಳಿಂದ ಬಳಲುತ್ತಿರುವುದರಿಂದ ಅವರ ನಿವಾಸದಲ್ಲಿಯೇ ಭಾರತ ರತ್ನ ಪ್ರದಾನ ಮಾಡಲು ಸರ್ಕಾರ ನಿರ್ಧರಿಸಿತ್ತು