Wednesday, 25 March 2015

current events

ನವದೆಹಲಿ (ಪಿಟಿಐ): ಮಾಹಿತಿ ತಂತ್ರಜ್ಞಾನ ಕಾಯ್ದೆಯ ವಿವಾದಾತ್ಮಕ ಕಲಂ 66 (ಎ) ರದ್ದುಗೊಳಿಸಿ ಮಂಗಳವಾರ ಮಹತ್ವದ ತೀರ್ಪು  ನೀಡಿರುವ ಸುಪ್ರೀಂಕೋರ್ಟ್‌,    ಅಂತರ್ಜಾಲ  ಮತ್ತು ಸಾಮಾಜಿಕ ಜಾಲತಾಣಗಳ ಬಳಕೆದಾರರ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಎತ್ತಿ ಹಿಡಿದಿದೆ.
ಕಲಂ 66 (ಎ)ನಲ್ಲಿ ಏನಿತ್ತು?
ಮಾಹಿತಿ ತಂತ್ರಜ್ಞಾನ ಕಾಯ್ದೆ ಕಲಂ 66(ಎ)ನಲ್ಲಿ ಸಾಮಾಜಿಕ ಜಾಲತಾಣ, ಅಂತರ್ಜಾಲಗಳಲ್ಲಿ ಆಕ್ಷೇಪಾರ್ಹ ಅಥವಾ ಪ್ರಚೋದನಾಕಾರಿ ಸಂದೇಶ ಪ್ರಕಟಿಸುವ ವ್ಯಕ್ತಿಗಳನ್ನು ಬಂಧಿಸಲು ಪೊಲೀಸರಿಗೆ ಅಧಿಕಾರ ನೀಡಲಾಗಿತ್ತು. ಈ ಆರೋಪ ಸಾಬೀತಾದಲ್ಲಿ ಗರಿಷ್ಠ ಮೂರು ವರ್ಷ ಶಿಕ್ಷೆ ಮತ್ತು ದಂಡ ವಿಧಿಸಬಹುದಾಗಿತ್ತು.
ಜಾರಿಯಲ್ಲಿರುವ  ‘ಕಲಂ’ಗಳು: ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ ತರುವ ಕಾರಣಕ್ಕೆ ಮಾಹಿತಿ ತಂತ್ರಜ್ಞಾನ ಕಾಯ್ದೆಯ ವಿವಾದಾತ್ಮಕ ಕಲಂ 66(ಎ) ರದ್ದು ಮಾಡಿದ ಸುಪ್ರೀಂಕೋರ್ಟ್‌, ಇದೇ ಕಾಯ್ದೆಯ ಕಲಂ 69(ಎ) ಮತ್ತು ಕಲಂ 79 ಕೆಲವು ನಿರ್ಬಂಧಗಳೊಂದಿಗೆ ಜಾರಿಯಲ್ಲಿರುವುದಾಗಿ ಹೇಳಿದೆ.
ಕಲಂ 69(ಎ): ಕಂಪ್ಯೂಟರ್‌ ಮಾಧ್ಯಮದ ಮೂಲಕ ಯಾವುದೇ ಮಾಹಿತಿ ಸಾರ್ವಜನಿಕರಿಗೆ ತಲುಪದಂತೆ ಅಥವಾ ಪ್ರಸಾರವಾಗದಂತೆ ತಡೆಹಿಡಿಯಲು ಸರ್ಕಾರಕ್ಕೆ ನಿರ್ದೇಶನ ನೀಡುವ ಅಧಿಕಾರ ನೀಡುತ್ತದೆ.
ಕಲಂ 79:  ಸೇವಾದಾತ ಅಂತರ್ಜಾಲ ಸಂಸ್ಥೆಗಳು ಮತ್ತು ಜಾಲತಾಣಗಳು ವಿಚಾರಗಳಿಗೆ ವೇದಿಕೆಯನ್ನು ಮಾತ್ರ ಒದಗಿಸುತ್ತವೆ. ಬಳಕೆದಾರರು ಪ್ರಕಟಿಸಿದ ವೈಯಕ್ತಿಕ ವಿಚಾರಗಳಿಗೆ ಸೇವಾದಾತ ಸಂಸ್ಥೆಗಳು ಬಾಧ್ಯಸ್ಥರಾಗುವುದಿಲ್ಲ.

Sat, 03/28/2015
ನವದೆಹಲಿ (ಪಿಟಿಐ): ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರಿಗೆ ಶುಕ್ರವಾರ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ‘ಭಾರತರತ್ನ’ವನ್ನು ಪ್ರದಾನ ಮಾಡಲಾಯಿತು.
ಶಿಷ್ಟಾಚಾರ ಬದಿಗಿಟ್ಟು ವಾಜಪೇಯಿ   ಅವರ ನಿವಾಸಕ್ಕೆ ತೆರಳಿದ ರಾಷ್ಟ್ರಪತಿ ಪ್ರಣವ್‌ ಮುಖರ್ಜಿ ಪ್ರಶಸ್ತಿ ಪ್ರದಾನ ಮಾಡಿದರು. ವಾಜಪೇಯಿ ಕಳೆದ ಹಲವಾರು ವರ್ಷಗಳಿಂದ ವೃದ್ಧಾಪ್ಯ ಸಹಜ  ಕಾಯಿಲೆಗಳಿಂದ ಬಳಲುತ್ತಿರುವುದರಿಂದ ಅವರ ನಿವಾಸದಲ್ಲಿಯೇ ಭಾರತ ರತ್ನ ಪ್ರದಾನ ಮಾಡಲು ಸರ್ಕಾರ ನಿರ್ಧರಿಸಿತ್ತು

No comments:

Post a Comment