2014 ಆಗು–ಹೋಗು: ಮೇ
ಮೇ.1: ಕೇಂದ್ರ ಸಚಿವ ಸಂಪುಟವು ಮಹತ್ವದ ಪೋಲವರಂ ನೀರಾವರಿ ಯೋಜನೆಗೆ ಒಪ್ಪಿಗೆ ನೀಡಿತು. 16 ಸಾವಿರ ಕೋಟಿ ರೂಪಾಯಿ ವೆಚ್ಚದ ಈ ಯೋಜನೆಯಿಂದ ಆಂಧ್ರಪ್ರದೇಶ, ತೆಲಂಗಾಣ, ಒಡಿಶಾ ರಾಜ್ಯದ ಬರಡು ಜಿಲ್ಲೆಗಳಿಗೆ ಅನುಕೂಲವಾಗಲಿದೆ.
*ಮೇ. 2: ಭಾರತೀಯ ಮೂಲದ ಮಣೀಶ್ ಶಾ ಅಮೆರಿಕದ ಇಲಿನೊಯಿಸ್‌ನ (Illinois) ಫೆಡರಲ್ ನ್ಯಾಯಾಧೀಶರಾಗಿ ಆಯ್ಕೆಯಾದರು. ಇವರ ಪರವಾಗಿ ಅಮೆರಿಕದ ಸೆನೆಟ್‌ನಲ್ಲಿ 95 ಮತಗಳು ಬಿದ್ದವು.*ಮೇ. 4: ಭಾರತ ಸರ್ಕಾರದ ಬಯೋಟೆಕ್ನಾಲಜಿ ವಿಭಾಗದ ಕಾರ್ಯದರ್ಶಿ ಕೃಷ್ಣಸ್ವಾಮಿ ವಿಜಯರಾಘವನ್ ಅಮೆರಿಕ ವಿಜ್ಞಾನ ಆಕಾಡೆಮಿಯ ವಿದೇಶಾಂಗ ಸಹಾಯಕರಾಗಿ ನೇಮಕಗೊಂಡರು.
*ಮೇ. 3: ಭಾರತದ ಸಾನಿಯಾ ಮಿರ್ಜಾ ಮತ್ತು ಕಾರಾ ಬ್ಲಾಕ್ ಅವರು ಡಬ್ಲ್ಯೂಟಿಎ ಪೊರ್ಚ್‌ಗಲ್ ಓಪನ್ ಟೆನಿಸ್ ಟೂರ್ನಿ (2014)ಯ ಮಹಿಳೆಯರ ಡಬಲ್ಸ್ ಪಂದ್ಯದಲ್ಲಿ ಪ್ರಶಸ್ತಿ ಗೆದ್ದರು. ಇವರು ರಷ್ಯಾದ ಎವಾ ಹರ್ಡಿನೋವಾ ಹಾಗೂ ವಲೇರಿಯಾ ಅವರನ್ನು ಸೋಲಿಸಿದರು.
*ಮೇ. 3: ಅಮೆರಿಕಾದ ಹೆಸರಾಂತ ಅರ್ಥಶಾಸ್ತ್ರಜ್ಞ ಹಾಗೂ ನೊಬೆಲ್ ಪ್ರಶಸ್ತಿ ಪುರಸ್ಕೃತ ಗ್ರೇ ಬೇಕರ್ (93) ನಿಧನರಾದರು. ಇವರು ಮಾನವ ಸ್ವಭಾವ ಮತ್ತು ಅಪರಾಧವನ್ನು ಅರ್ಥಶಾಸ್ತ್ರದ ಹಿನ್ನೆಲೆಯಲ್ಲಿ ವಿಶ್ಲೇಷಣೆ ಮಾಡಿದ್ದರು.
*ಮೇ. 6: ಇಂಗ್ಲೆಂಡ್‌ನಲ್ಲಿ ನಡೆದ 2014ನೇ ಸಾಲಿನ ವಿಶ್ವ ಸ್ನೋಕರ್ ಚಾಂಪಿಯನ್‌ಶಿಪ್‌ನಲ್ಲಿ ಮಾರ್ಕ್ ಸೆಲ್ಬಿ ಟ್ರೋಫಿ ಗೆದ್ದರು. ಇವರು ಮೊದಲ ಬಾರಿ ಗೆದ್ದ ಟ್ರೋಫಿ ಇದು. 2007ರಲ್ಲಿ ಈ ಟ್ರೋಫಿ ಗೆಲ್ಲುವಲ್ಲಿ ಸೆಲ್ಬಿ ವಿಫಲರಾಗಿದ್ದರು.
*ಮೇ. 6: ಹತ್ತು ವರ್ಷಕ್ಕೆ ಮೇಲ್ಪಟ್ಟ ಅಪ್ರಾಪ್ತರು ಬ್ಯಾಂಕ್‌ಗಳಲ್ಲಿ ಖಾತೆ ತೆರೆಯಬಹುದು ಎಂದು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಪ್ರಕಟಿಸಿತು. ಇವರು ಎಟಿಎಂ, ಚೆಕ್ ಪುಸ್ತಕಗಳನ್ನು ನಿರ್ವಹಣೆ ಮಾಡಬಹುದು ಎಂದು ಆರ್‌ಬಿಐ ತಿಳಿಸಿತು.
*ಮೇ. 7: ಸುಪ್ರೀಂ ಕೋರ್ಟ್ ‘ಜಲ್ಲಿಕಟ್ಟು’ ಮತ್ತು ಎತ್ತಿನಗಾಡಿ ಸ್ಪರ್ಧೆಗಳನ್ನು ನಿಷೇಧಿಸುವಂತೆ ಕೇಂದ್ರ ಸರ್ಕಾರಕ್ಕೆ ಮಹತ್ವದ ನಿರ್ದೇಶನ ನೀಡಿತು. ಪ್ರಾಣಿ ದಯಾ ಸಂಘದವರು ಈ ಸ್ಪರ್ಧೆಗಳನ್ನು ನಿಷೇಧಿಸುವಂತೆ ಅರ್ಜಿ ಸಲ್ಲಿಸಿದ್ದರು. ಕೆ.ಎಸ್. ರಾಧಕೃಷ್ಣ ಮತ್ತು ಪಿನಾಕಿ ಚಂದ್ರ ಅವರಿದ್ದ ನ್ಯಾಯಪೀಠ ಜಲ್ಲಿಕಟ್ಟು ನಿಷೇಧಿಸುವಂತೆ ಸೂಚಿಸಿತು.
*ಮೇ 9: ಅಮೆರಿಕ ಸಿನಿಮಾ ಉತ್ಸವದಲ್ಲಿ ಭಾರತದ ‘ಸೈಲೆಂಟ್ ಕ್ರೀಮ್’ ಸಾಕ್ಷ್ಯಚಿತ್ರ ವಿವಿಧ ವಿಭಾಗಗಳಲ್ಲಿ ಮೂರು ಪ್ರಶಸ್ತಿಗಳನ್ನು ಪಡೆಯಿತು. ಪ್ರಿಯಾ ಸೋಮಯ್ಯ ಈ ಚಿತ್ರದ ನಿರ್ದೇಶಕರು. ಇದು ಭಾರತದಲ್ಲಿ ನಡೆಯುತ್ತಿರುವ ಅತ್ಯಾಚಾರ ಪ್ರಕರಣಗಳ ಮೇಲೆ ಬೆಳಕು ಚೆಲ್ಲುತ್ತದೆ. ಇಂತಹ ಪ್ರಕರಣಗಳಲ್ಲಿ ಹಣ ಮತ್ತು ರಾಜಕೀಯ ಹೇಗೆ ಕೆಲಸ ಮಾಡುತ್ತದೆ ಎಂಬುದೇ ಇದರ ಕಥಾ ಹಂದರ.
*ಮೇ. 9: ಫ್ರಾನ್ಸ್ ದೇಶದ ಖಾಸಗಿ ವಿಮಾನ ನಿರ್ಮಾಣ ಸಂಸ್ಥೆಯೊಂದು ಬ್ಯಾಟರಿ ಚಾಲಿತ ವಿಮಾನವನ್ನು ತಯಾರಿಸಿರುವುದಾಗಿ ಪ್ರಕಟಿಸಿತು. ಇದು ಲಿಥೇನ್–ಅಯಾನ್– ಪಾಲಿಮಾರ್ ಬ್ಯಾಟರಿಗಳಿಂದ ಚಾಲನೆಯಾಗಲಿದೆ. ಇದಕ್ಕೆ ‘ಇ–ಪ್ಯಾನ್’ ಎಂದು ಹೆಸರಿಡಲಾಗಿದೆ.
*ಮೇ. 13: ಇಸ್ರೇಲ್ ದೇಶದ ಮಾಜಿ ಪ್ರಧಾನಿ ಈದ್ ಆಲ್‌ಮಾರ್ಟ್ ಅವರಿಗೆ ತೆಲ್ ಅವಿವ್ ಜಿಲ್ಲಾ ನ್ಯಾಯಾಲಯ ಜೀವಾವಧಿ ಶಿಕ್ಷೆ ನೀಡಿತು. ಆಲ್‌ಮಾರ್ಟ್ ಅವರು ಹೋಲಿಲ್ಯಾಂಡ್ ಪ್ರಕರಣದಲ್ಲಿ ಸಾವಿರಾರು ಕೋಟಿ ರೂಪಾಯಿ ಅವ್ಯವಹಾರ ನಡೆಸಿದ್ದರು.
*ಮೇ. 14: ಇತಿಹಾಸ ತಜ್ಞ ಬ್ಯಾರಿ ಕ್ಲಿಫ್‌ಪೋರ್ಡ್ ನೇತೃತ್ವದ ತಂಡ 500 ವರ್ಷಗಳ ಹಿಂದಿನ ಕ್ಲಿಸ್ಟಫರ್ ಕೊಲಂಬಸ್ ಅವರ ‘ಸಂತಾ ಮಾರಿಯಾ’ ಹಡಗಿನ ಅವಶೇಷಗಳನ್ನು ಕೆರಿಬಿಯನ್ ಸಾಗರದ ತಟದಲ್ಲಿ ಪತ್ತೆ ಮಾಡಿತು. ಹೈಟಿ ದೇಶದ ಉತ್ತರ ಕರಾವಳಿ ತೀರದಲ್ಲಿ ಹಡಗಿನ ಅವಶೇಷಗಳು ದೊರೆತವು.
*ಮೇ.14: ಕೇಂದ್ರ ಸರ್ಕಾರ ಎಲ್‌ಟಿಟಿಈ (ಲಿಬರೇಶನ್ ಟೈಗರ್ಸ್ ಅಫ್ ತಮಿಳ್ ಈಳಂ) ಸಂಘಟನೆ ಮೇಲೆ ಮತ್ತೆ 5 ವರ್ಷಗಳವರೆಗೆ ನಿಷೇಧವನ್ನು ಮುಂದುವರೆಸಿತು. 1967ರ ಅಪರಾಧ ಕಾಯ್ದೆ ಅಡಿಯಲ್ಲಿ (ಕಾನೂನು ಬಾಹಿರ) ನಿಷೇಧಿಸಿತು.
*ಮೇ. 15: ಕೇಂದ್ರೀಯ ಜಲ ಮಂಡಳಿಯ ಅಧ್ಯಕ್ಷರನ್ನಾಗಿ ಎ.ಬಿ. ಪಾಂಡ್ಯ ಅವರನ್ನು ಕೇಂದ್ರ ಸರ್ಕಾರ ನೇಮಕಮಾಡಿ ಆದೇಶ ಹೊರಡಿಸಿತು.
*ಮೇ. 15: ದೇಶದಲ್ಲಿ ಕಾಗದದ ನೋಟಿನ ಬದಲಾಗಿ ಪ್ಲಾಸ್ಟಿಕ್ ನೋಟುಗಳನ್ನು ಬರುವ 2015ನೇ ವರ್ಷದಲ್ಲಿ ಪರಿಚಯಿಸುವುದಾಗಿ ಭಾರತೀಯ ರಿಸರ್ವ್ ಬ್ಯಾಂಕ್‌ನ ಗೌರ್ನರ್ ರಘುರಾಂ ರಾಜನ್ ಪ್ರಕಟಿಸಿದರು. ಇದಕ್ಕೆ ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದೆ. ಪ್ಲಾಸ್ಟಿಕ್ ನೋಟಿನ ಬಳಕೆಯಿಂದ ನಕಲಿ ನೋಟುಗಳ ಹಾವಳಿ ತಪ್ಪಲಿದೆ ಎಂಬುದು ಹಣಕಾಸು ತಜ್ಞರ ಅಭಿಪ್ರಾಯ.
*ಮೇ.17: ಲೋಕಸಭೆ ಚುನಾವಣೆಯ ಸೋಲಿನ ಹಿನ್ನೆಲೆಯಲ್ಲಿ ಬಿಹಾರದ ಮುಖ್ಯಮಂತ್ರಿ ನಿತಿಶ್‌ಕುಮಾರ್ ರಾಜೀನಾಮೆ ಸಲ್ಲಿಸಿದರು. 40 ಸ್ಥಾನಗಳ ಪೈಕಿ ನಿತಿಶ್ ಕುಮಾರ್ ನೇತೃತ್ವದ ಸಂಯುಕ್ತ ಜನತಾದಳ ಪಕ್ಷ ಕೇವಲ ಎರಡು ಸ್ಥಾನಗಳನ್ನು ಪಡೆಯಿತು.
*ಮೇ.17: ಭಾರತೀಯ ಯೋಜನಾ ಆಯೋಗದ ಉಪಾಧ್ಯಕ್ಷ ಮಾಂಟೆಕ್ ಸಿಂಗ್ ಅಹ್ಲುವಾಲಿಯ ರಾಜೀನಾಮೆ ನೀಡಿದರು. ಯೋಜನಾ ಆಯೋಗದಲ್ಲಿ 8 ಜನ ಸದಸ್ಯರು ಇರುತ್ತಾರೆ. ಪ್ರಧಾನ ಮಂತ್ರಿ ಯೋಜನಾ ಆಯೋಗದ ಅಧ್ಯಕ್ಷರಾಗಿರುತ್ತಾರೆ.
*ಮೇ.18: ಅರುಣಾಚಲ ಪ್ರದೇಶದ ಮುಖ್ಯಮಂತ್ರಿಯಾಗಿ ನಬಮ್ ತುಕಿ ಇಟಾನಗರದಲ್ಲಿ ಅಧಿಕಾರ ಸ್ವೀಕರಿಸಿದರು. ಜೆ.ಗ್ಯಾಮ್ಲಿನ್ ಅವರು ರಾಜೀನಾಮೆ ನೀಡಿದ್ದರಿಂದ ಮುಖ್ಯಮಂತ್ರಿಯಾದರು. ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರಾದ ತುಕಿ ಅವರು ಕೃಷಿ, ನೀರಾವರಿ ಮತ್ತು ಆಹಾರ ಸಚಿವರಾಗಿ ಸೇವೆ ಸಲ್ಲಿಸಿದ್ದರು.
*ಮೇ.18: ಹಿರಿಯ ಪರಮಾಣು ವಿಜ್ಞಾನಿ ಎನ್.ಶ್ರೀನಿವಾಸನ್ ನಿಧನರಾದರು. ಇವರು ಪರಮಾಣು ವಿಭಾಗದ ವಿವಿಧ ಅಕಾಡೆಮಿ ಮತ್ತು ಸಮಿತಿಗಳಲ್ಲಿ ಕೆಲಸ ಮಾಡಿದ್ದರು. ಇವರಿಗೆ ಭಾರತ ಸರ್ಕಾರ ಪದ್ಮಭೂಷಣ(2000) ಪುರಸ್ಕಾರ ನೀಡಿತ್ತು.
*ಮೇ. 22: ಗುಜರಾತ್ ರಾಜ್ಯದ ಮೊದಲ ಮಹಿಳಾ ಮುಖ್ಯಮಂತ್ರಿಯಾಗಿ ಆನಂದಿ ಬೆನ್ ಪಟೇಲ್ ಅಧಿಕಾರ ಸ್ವೀಕರಿಸಿದರು.
ಈ ಹಿಂದೆ ನರೇಂದ್ರ ಮೋದಿ ಮುಖ್ಯಮಂತ್ರಿಯಾಗಿದ್ದರು.
*ಮೇ.25: ಆಂಧ್ರಪ್ರದೇಶದ 13 ವರ್ಷದ ಬಾಲಕಿ ಮಲವತ್ ಪೂರ್ಣ ಮೌಂಟ್ ಎವರೆಸ್ಟ್ ಶಿಖರ ಹತ್ತಿದ್ದ ಅತ್ಯಂತ ಕಿರಿಯ ಪರ್ವತಾರೋಹಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
*ಮೇ.26: ಭಾರತದ 15ನೇ ಪ್ರಧಾನಮಂತ್ರಿಯಾಗಿ ನರೇಂದ್ರ ಮೋದಿ ಪ್ರಮಾಣ ವಚನ ಸ್ವೀಕರಿಸಿದರು.
ಇವರೊಂದಿಗೆ 23 ಸಚಿವರು ಅಧಿಕಾರ ವಹಿಸಿಕೊಂಡರು.
ಈ ಸಮಾರಂಭಕ್ಕೆ ಸಾರ್ಕ್ ರಾಷ್ಟ್ರಗಳ ಮುಖ್ಯಸ್ಥರು ಆಗಮಿಸಿದ್ದರು.
*ಮೇ.27: ಮಾಜಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ 35ನೇ ರಾಷ್ಟ್ರೀಯ ಕ್ರೀಡಾಕೂಟದ ರಾಯಭಾರಿಯಾಗಿ ನೇಮಕಗೊಂಡರು.
ಕೇರಳದಲ್ಲಿ 2015ರ ಜನವರಿ ಮತ್ತು ಫೆಬ್ರುವರಿಯಲ್ಲಿ ರಾಷ್ಟ್ರೀಯ ಕ್ರೀಡಾಕೂಟ ನಡೆಯಲಿದೆ.
*ಮೇ. 28: ಮುಕುಲ್ ರೊಹಟಗಿ ಭಾರತದ 14ನೇ ಅಟಾರ್ನಿ ಜನರಲ್ ಆಗಿ ನೇಮಕಗೊಂಡರು.
ಈ ಸ್ಥಾನದಲ್ಲಿ ಗುಲಾಂ ವಾಹನ್ವತಿ ಅವರಿದ್ದರು.
ರೊಹಟಗಿ ಗುಜರಾತ್ ಹೈಕೋರ್ಟ್ ಹಾಗೂ ಸುಪ್ರೀಂ ಕೋರ್ಟ್‌ನಲ್ಲಿ ಕಾರ್ಯನಿವರ್ಹಿಸಿದ್ದರು.
*ಮೇ. 29: ಹಿಂದಿಯ ಹೆಸರಾಂತ ಸಾಹಿತಿ ವಿಶ್ವನಾಥ್ ತ್ರಿಪಾಠಿ ಅವರು ಪ್ರತಿಷ್ಠಿತ ‘ವ್ಯಾಸ್ ಸಮ್ಮಾನ್’ ಪುರಸ್ಕಾರವನ್ನು ಪಡೆದರು.
ಈ ಪ್ರಶಸ್ತಿ 2.5 ಲಕ್ಷ ರೂಪಾಯಿ ನಗದು ಹಾಗೂ ಸ್ಮರಣಿಕೆಯನ್ನು ಒಳಗೊಂಡಿದೆ.
ನ.1: 1984ರಲ್ಲಿ ಭೋಪಾಲ್ (ಮಧ್ಯಪ್ರದೇಶದ ರಾಜಧಾನಿ) ಅನಿಲ ದುರಂತಕ್ಕೆ ಕಾರಣವಾಗಿದ್ದ ಯೂನಿಯನ್ ಕಾರ್ಬೈಡ್ ಕಂಪೆನಿಯ ಮುಖ್ಯಸ್ಥರಾಗಿದ್ದ ವಾರನ್ ಆ್ಯಂಡರ್‌ಸನ್‌ನಿಧನರಾದರು.
ಅವರಿಗೆ 92 ವರ್ಷ ವಯಸ್ಸಾಗಿತ್ತು. ವಿವಿಧ ಸ್ವಯಂ ಸೇವಾ ಸಂಸ್ಥೆಗಳು ಅವರ ವಿರುದ್ಧ ಹಲವು ಪ್ರಕರಣಗಳನ್ನು ದಾಖಲಿಸಿದ್ದವು. ಭಾರತೀಯ ನ್ಯಾಯಾಲಯದಲ್ಲಿ ಆ ಪ್ರಕರಣಗಳು ಇನ್ನೂ ವಿಚಾರಣೆ ಹಂತದಲ್ಲಿವೆ.
ಅವರಿಗೆ 92 ವರ್ಷ ವಯಸ್ಸಾಗಿತ್ತು. ವಿವಿಧ ಸ್ವಯಂ ಸೇವಾ ಸಂಸ್ಥೆಗಳು ಅವರ ವಿರುದ್ಧ ಹಲವು ಪ್ರಕರಣಗಳನ್ನು ದಾಖಲಿಸಿದ್ದವು. ಭಾರತೀಯ ನ್ಯಾಯಾಲಯದಲ್ಲಿ ಆ ಪ್ರಕರಣಗಳು ಇನ್ನೂ ವಿಚಾರಣೆ ಹಂತದಲ್ಲಿವೆ.
* ನ. 2: ವಿಶ್ವದ ಖ್ಯಾತ ಕ್ಲಾರಿಯೋನೆಟ್ ವಾದಕ ಅಕರ್ ಬಿಕ್ ಲಂಡನ್‌ನಲ್ಲಿ ನಿಧನರಾದರು. ಅವರ ‘ಜಾಜ್’ ಆಲ್ಬಂ ಭಾರೀ ಜನಪ್ರಿಯ ಪಡೆದಿತ್ತು.
* ನ.3: ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಜಪಾನ್ ದೇಶದ ಪ್ರತಿಷ್ಠಿತ ಗೌರವ ಪ್ರಶಸ್ತಿ ‘ದಿ ಗ್ರ್ಯಾಂಡ್ ಕಾರ್ಡನ್ ಆಫ್ ದಿ ಆರ್ಡರ್ ಆಫ್ ದಿ ಪೌಲೊವಿನಾ ಫ್ಲವರ್–2014’(The Grand Cordon of the Order of the Paulownia Flowers 2014)ಗೆ ಆಯ್ಕೆಯಾಗಿದ್ದಾರೆ.
* ನ. 4: ಭಾರತ ಮತ್ತು ಶ್ರೀಲಂಕಾ ದೇಶಗಳ ವಿಶೇಷ ಸೇನಾ ಪಡೆಗಳ ಜಂಟಿ ಸಮರ ಅಭ್ಯಾಸಕ್ಕೆ ಚಾಲನೆ ನೀಡಲಾಯಿತು. ಇದಕ್ಕೆ ‘ಮಿತ್ರ ಶಕ್ತಿ’ ಎಂದು ಹೆಸರಿಡಲಾಗಿದೆ. ಇದು ಮೂರು ವಾರ ನಡೆಯಲಿದೆ.
* ನ 5: ರಾಜ್ಯದ ಹಂಪಿ ಸಮೀಪದಲ್ಲಿ ಹರಪ್ಪ ಕಾಲದ (ಸಿಂಧೂ ನಾಗರಿಕತೆ) ಚಿತ್ರಗಳು ಮತ್ತು ಲಿಪಿಗಳು (ಕಲ್ಲಿನ ಮೇಲೆ ಕೆತ್ತನೆ ಮಾಡಿರುವ) ಪತ್ತೆಯಾಗಿವೆ ಎಂದು ಇತಿಹಾಸ ಮತ್ತು ಪ್ರಾಕ್ತಾನಶಾಸ್ತ್ರ ಇಲಾಖೆಯ ಅಧಿಕಾರಿಗಳು ಪ್ರಕಟಿಸಿದರು.
* ನ 6: ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಅವರ ಆತ್ಮಕಥೆ ‘ಪ್ಲೇಯಿಂಗ್ ಇಟ್ ಮೈ ವೇ’ ಪುಸ್ತಕ ಅನಾವರಣಗೊಂಡಿತು. ಈ ಸಂದರ್ಭದಲ್ಲಿ ಸಚಿನ್ ಕುಟುಂಬದವರು ಮತ್ತು ಗೆಳೆಯರು ಉಪಸ್ಥಿತರಿದ್ದರು.
* ನ, 07 : ಯೂರೋಪ್ ಮತ್ತು ಅಮೆರಿಕದ ಔಷಧಿ ವಿಜ್ಞಾನಿಗಳ ತಂಡ ಆ್ಯಂಟಿಬಯೊಟಿಕ್ ಔಷಧಿಗೆ ಪರ್ಯಾಯವಾಗಿ‘ ಸ್ಟಪೆಫ್’ ಎಂಬ ಔಷಧಿಯನ್ನು ಸಿದ್ಧಪಡಿಸಿರುವುದಾಗಿ ಪ್ರಕಟಿಸಿತು.
* ನ 8: ಗೋವಾ ಮುಖ್ಯಮಂತ್ರಿ ಮನೋಹರ್ ಗೋಪಾಲಕೃಷ್ಣ ಪ್ರಭು ಪರಿಕ್ಕರ್ ರಾಜಿನಾಮೆ ನೀಡಿದರು. ಕೇಂದ್ರ ಸಚಿವ ಸಂಪುಟಕ್ಕೆ ಸೆರ್ಪಡೆಯಾಗಲಿರುವ ಹಿನ್ನೆಲೆಯಲ್ಲಿ ರಾಜೀನಾಮೆ ಸಲ್ಲಿಸಿದರು.
* ನ 9: ಕ್ರಿಕೆಟಿಗ ವಿರಾಟ್ ಕೊಹ್ಲಿ ಏಕದಿನ ಕ್ರಿಕೆಟ್‌ನಲ್ಲಿ ಅತಿ ಕಡಿಮೆ ಪಂದ್ಯಗಳಲ್ಲಿ ಆರು ಸಾವಿರ ರನ್ ಪೂರೈಸುವ ಮೂಲಕ ಹೊಸ ಇತಿಹಾಸ ಬರೆದರು. ವೆಸ್ಟ್‌ಇಂಡಿಸ್‌ನ ವಿವಿಯನ್ ರಿಚರ್ಡ್ಸ್ ದಾಖಲೆಯನ್ನು ಕೊಹ್ಲಿ ಮುರಿದರು.
* ನ, 10: ಪ್ರಧಾನಿ ನರೇಂದ್ರ ಮೋದಿ ಮೊದಲ ಬಾರಿಗೆ ಸಂಪುಟ ವಿಸ್ತರಣೆ ಮಾಡಿದರು. ಈ ಸಂದರ್ಭದಲ್ಲಿ 21 ಸಚಿವರು ಪ್ರಮಾಣ ವಚನ ಸ್ವೀಕರಿಸಿದರು.
* ನ, 11: ಹಿಂದಿ ಕವಿ ಕೇದಾರನಾಥ್ ಸಿಂಗ್ ಅವರಿಗೆ 2013ನೇ ಸಾಲಿನ ‘ಜ್ಞಾನಪೀಠ ಪ್ರಶಸ್ತಿಯನ್ನು ಘೋಷಿಸಲಾಯಿತು. ಭಾರತೀಯ ಸಾಹಿತ್ಯಕ್ಕೆ ಅವರು ನೀಡಿದ ಕೊಡುಗೆಯನ್ನು ಪರಿಗಣಿಸಿ ಈ ಪ್ರಶಸ್ತಿ ನೀಡಲಾಗಿದೆ.
* ನ, 12: ಕೇರಳ ರಾಜ್ಯ ಶೇ.100% ರಷ್ಟು ಬ್ಯಾಂಕ್ ಖಾತೆ ಹೊಂದಿರುವ ದೇಶದ ಮೊದಲ ರಾಜ್ಯ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು.
* ನ, 13: ಕ್ರಿಕೆಟಿಗ ರೋಹಿತ್ ಶರ್ಮಾ ಏಕದಿನ ಕ್ರಿಕೆಟ್ ಪಂದ್ಯದಲ್ಲಿ 264 ರನ್ ಗಳಿಸುವ ಮೂಲಕ ನೂತನ ದಾಖಲೆ ಬರೆದರು. ರೋಹಿತ್ ಶರ್ಮಾ ಎರಡು ಸಲ ದ್ವಿಶತಕ ಬಾರಿಸಿದ್ದಾರೆ.
* ನ, 14: 2014ನೇ ಸಾಲಿನ ಗಾಂಧಿ ಫಿಲಾಸಫಿ ಮತ್ತು ಪಬ್ಲಿಕ್ ಸರ್ವಿಸ್ ಬ್ರಾಡ್‌ಕಾಸ್ಟಿಂಗ್ ಪ್ರಶಸ್ತಿಯನ್ನು ಜಮ್ಮು ಕಾಶ್ಮೀರ ರೇಡಿಯೋ ಪಡೆಯಿತು.
* ನ, 15: ಅಲ್ಪಸಂಖ್ಯಾತ ಯುವಕರಿಗೆ ಕೌಶಲ ತರಬೇತಿ ನೀಡುವ ಸಲುವಾಗಿ ಕೇಂದ್ರ ಸರ್ಕಾರ ಮೌಲಾನಾ ಆಜಾದ್ ರಾಷ್ಟ್ರೀಯ ಕೌಶಲಾಭಿವೃದ್ಧಿ ಅಕಾಡೆಮಿಯನ್ನು ಪ್ರಾರಂಭಿಸುವುದಾಗಿ ಪ್ರಕಟಿಸಿತು.
* ನ, 16: ಸೈನಾ ನೆಹ್ವಾಲ್ ಮತ್ತು ಕೆ. ಶ್ರೀಕಾಂತ್ ಅವರು ಕ್ರಮವಾಗಿ ಮಹಿಳೆ ಮತ್ತು ಪುರುಷರ ಚೀನಾ ಓಪನ್ ಬ್ಯಾಡ್ಮಿಂಟನ್ ಸಿಂಗಲ್ಸ್ ಟ್ರೋಫಿಯನ್ನು ಮುಡಿಗೇರಿಸಿಕೊಂಡರು.
* ನ, 17: 2014ನೇ ಸಾಲಿನ ಜಿ–20 ಶೃಂಗಸಭೆಯು ಬ್ರಿಸ್‌ಬೇನ್‌ನಲ್ಲಿ ನಡೆಯಿತು. ಈ ಸಮಾವೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಪಾಲ್ಗೊಂಡಿದ್ದರು. ಇದೇ ಸಂದರ್ಭದಲ್ಲಿ ಆಸ್ಟ್ರೇಲಿಯಾ ಸಂಸತ್‌ನಲ್ಲಿ ಮೋದಿ ಹಿಂದಿಯಲ್ಲಿ ಭಾಷಣ ಮಾಡಿದರು.
* ನ, 18: ಇಂಗ್ಲೆಂಡ್‌ನಲ್ಲಿ ಮೊದಲ ಬಾರಿಗೆ ಚರ್ಚ್ ಆಫ್ ಇಂಗ್ಲೆಂಡ್ ಸಂಪ್ರದಾಯವನ್ನು ಮುರಿದು ಮಹಿಳಾ ಬಿಷಪ್ ನೇಮಕ ಮಾಡಿತು. ಇದನ್ನು ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ನೂತನ ಕ್ರಾಂತಿ ಎಂದು ಬಣ್ಣಿಸಲಾಗಿದೆ.
* ನ, 19: ಭಾರತೀಯ ಮೂಲದ ನೇಹಾ ಗುಪ್ತ ಅವರು 2014ನೇ ಸಾಲಿನ ಅಂತರರಾಷ್ಟ್ರೀಯ ಮಕ್ಕಳ ಶಾಂತಿ ಪ್ರಶಸ್ತಿಗೆ ಆಯ್ಕೆಯಾದರು.
* ನ, 20: ಭಾರತೀಯ ಮೂಲದ ಹೊಟೇಲ್ ಕಾವಲುಗಾರ ಕೊಟ್ಟರಪಟ್ಟು ಚಟ್ಟು ಅವರು ಶ್ರೀಲಂಕಾದಲ್ಲಿ ನಿಧನರಾದರು. ಅವರು ಗಾಂಧೀಜಿ, ಮೌಂಟ್‌ಬ್ಯಾಟನ್ ಅವರು ತಂಗಿದ್ದ ಕೋಣೆಗಳಿಗೆ ಕಾವಲುಗಾರನಾಗಿ ಕೆಲಸ ಮಾಡಿದ್ದರು.
* ನ, 21: ಅಂತರರಾಷ್ಟ್ರೀಯ ಖ್ಯಾತಿಯ ಗಣಿತ ತಜ್ಞ ಅಲೆಕ್ಸಾಂಡರ್ ಗ್ರೋಂಥೆಡಿಕ್ ಅವರು ಫ್ರಾನ್ಸ್‌ನಲ್ಲಿ ನಿಧನರಾದರು. ಅವರಿಗೆ 86 ವರ್ಷ ವಯಸ್ಸಾಗಿತ್ತು.
* ನ, 22: ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಅವರು ಜನವರಿ 26ರಂದು ಗಣರಾಜ್ಯೋತ್ಸವ ದಿನಾಚರಣೆಗೆ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ ಎಂದು ಪ್ರಧಾನಮಂತ್ರಿ ಕಾರ್ಯಾಲಯ ಅಧಿಕೃತವಾಗಿ ಪ್ರಕಟಿಸಿತು.
* ನ, 23: ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಹಾಗೂ ಮಾಜಿ ಕೇಂದ್ರ ಸಚಿವ ಮುರುಳಿ ದೇವ್ರಾ ಮುಂಬೈನಲ್ಲಿ ನಿಧನರಾದರು. ಅವರಿಗೆ 80 ವರ್ಷ ವಯಸ್ಸಾಗಿತ್ತು.
* ನ, 24: ಕೇಂದ್ರ ಲೋಕಸೇವಾ ಆಯೋಗದ ಅಧ್ಯಕ್ಷರನ್ನಾಗಿ ದೀಪಕ್ ಗುಪ್ತ ಅವರನ್ನು ಕೇಂದ್ರ ಸರ್ಕಾರ ನೇಮಕ ಮಾಡಿತು.
* ನ, 25: ಹಿರಿಯ ಕಥಕ್ ನೃತ್ಯಗಾರ್ತಿ ಸಿತಾರ ದೇವಿ ಮುಂಬೈನಲ್ಲಿ ನಿಧನರಾದರು. ಅವರಿಗೆ 92 ವರ್ಷ ವಯಸ್ಸಾಗಿತ್ತು. ಪದ್ಮಭೂಷಣ ಸೇರಿದಂತೆ ಹಲವಾರು ಪ್ರಶಸ್ತಿಗಳನ್ನು ಪಡೆದಿದ್ದರು.
* ನ, 28: ಲೋಕಸಭೆಯ ನೂತನ ಪ್ರಧಾನ ಕಾರ್ಯದರ್ಶಿಯನ್ನಾಗಿ ಅನೂಪ್ ಮಿಶ್ರಾ ಅವರನ್ನು ನೇಮಕ ಮಾಡಲಾಯಿತು. ಅವರು ಈ ಹಿಂದೆ ಉತ್ತರ ಪ್ರದೇಶ ಸರ್ಕಾರದ ಮುಖ್ಯ ಕಾರ್ಯದರ್ಶಿಯಾಗಿದ್ದರು.
* ನ, 30: ಪಾಕಿಸ್ತಾನದ ಪ್ರಧಾನಿ ನವಾಜ್ ಷರೀಫ್ ಅವರು ಚೀನಾ ಸರ್ಕಾರದ ಜೊತೆ ‘ಪಾಕ್–ಚೀನಾ ಆರ್ಥಿಕ ಕಾರಿಡಾರ್’ ಯೋಜನೆಗೆ ಸಹಿ ಹಾಕಿದರು. ಈ ಯೋಜನೆ ಪಾಕ್ ಆಕ್ರಮಿತ ಕಾಶ್ಮೀರವನ್ನು ಒಳಗೊಂಡಿದೆ ಎಂದು ಷರೀಫ್ ಪ್ರಕಟಿಸಿದರು.
ಹೋಮ್‌ವರ್ಕ್ ಮಾಡಿಸುವುದು ಹೇಗೆ?
ದೊಡ್ಡ
ಮಕ್ಕಳಂತೂ ತಮ್ಮ ಹೋಮ್ ವರ್ಕ್ ಮಾಡಿಕೊಳ್ಳುತ್ತಾರೆ. ಅವರಿಗೆ ತರಗತಿಯಲ್ಲಿ
ಅವಮಾನಕ್ಕೆ ಒಳಗಾಗುವುದಕ್ಕಿಂತ ಮನೆಪಾಠ ಮುಗಿಸುವುದು ಒಳಿತು ಎನಿಸುತ್ತದೆ. ಆದರೆ ಪುಟ್ಟ
ಮಕ್ಕಳ ಮನೆಪಾಠವನ್ನು ಮುಗಿಸುವುದೆಂತು?
ಕ್ಷಣಕ್ಷಣಕ್ಕೂ ಚಂಚಲಚಿತ್ತರಾಗುವ ತುಂಟ ಮಕ್ಕಳನ್ನು ಹಿಡಿದು ಕೂಡಿಸುವುದೇ ಸಾಹಸದ ಕೆಲಸ. ಇನ್ನು ದಿನಕ್ಕೆ ಎರಡು ಮೂರು ವಿಷಯಗಳ ಮನೆಪಾಠ ಮಾಡಿಸುವುದರಲ್ಲಿ ಅಮ್ಮಂದಿರ ಸಹನೆಯೂ ಕರಗಿ ಹೋಗಿರುತ್ತದೆ. ಮೊದಲೆರಡು ವಿಷಯ ಮುಗಿಸಿದಂತೆ ಕೊನೆಯದ್ದು ಮುಗಿಸಲಾಗದು. ಮಗುವಿಗೂ ಸುಸ್ತಾಗಿ ನಿರಾಸಕ್ತಿ ತೋರುತ್ತಿದ್ದರೆ, ಅಮ್ಮನಿಗೂ ಸಂಯಮ ಮೀರಿ ಸಿಡುಕುತ್ತಿರುತ್ತಾರೆ.
ಕೊನೆ ಕ್ಷಣಗಳನ್ನು ನಿರ್ವಹಿಸುವುದು ಹೇಗೆ?
*ಆದಷ್ಟೂ ಹೋಮ್ ವರ್ಕ್‌ನ ನಂತರ ಅವರಿಗಿಷ್ಟದ ಆಟ, ಟಿ.ವಿ. ಶೋ ಅಥವಾ ತಿಂಡಿಯ ಆಮಿಶ ನೀಡಿ.
*ಬರೆಯುವಾಗ ಆದಷ್ಟೂ ಬೇರೆ ವಿಷಯಗಳನ್ನು ಹೇಳುತ್ತಲೇ ಪುಸಲಾಯಿಸಿ.
*ಅವರ ಕೈಬರಹವನ್ನು ಹೊಗಳಿ.
*ವೇಗವನ್ನು ಹೆಚ್ಚಿಸುವಂತೆ, ಅವರ ಕ್ಷಮತೆಯನ್ನು ಹೆಚ್ಚುಗಾರಿಕೆಯೆಂಬಂತೆ ಹೇಳಿ.
*ಬರೆಯುತ್ತಿರುವುದನ್ನು ತಿರುವು ಮರುವಾಗಿ ಹೇಳಿ, ಅವರಲ್ಲಿ ನಗೆಯುಕ್ಕಿಸಿ.
*ಮತ್ತೆ ಮನೆಪಾಠ ಮಾಡುವಲ್ಲಿ ಅವರೇ ಹೆಚ್ಚು ಉತ್ಸಾಹಿತರು ಎಂಬಂಥ ಚಿತ್ರಣ ನೀಡಿ.
*ಪ್ರತಿ ಮನೆಪಾಠ ಮುಗಿದಾಗಲೂ ಅವರ ಶಾಲೆಯಲ್ಲಿ ನಡೆದ ವಿಷಯಗಳನ್ನು ಗಮನವಿಟ್ಟು ಕೇಳಿ.
*ಪ್ರತಿಯೊಂದು ವಿಷಯದ ನಡುವೆಯೂ ಒಂದಷ್ಟು ಬಿಡುವು ನೀಡಿ, ಮುಂದುವರಿಸುವುದು ಒಳಿತು.
*ಅವರ ತರಗತಿಯ ತುಂಟ ಹುಡುಗರ ಬಗ್ಗೆ ವಿಚಾರಿಸಿ, ಜಾಣ ಮಕ್ಕಳ ಬಗ್ಗೆಯೂ ಕೇಳಿ. ಯಾವುದೇ ಕಾರಣಕ್ಕೂ ಅವರೊಂದಿಗೆ ನಿಮ್ಮ ಮಕ್ಕಳನ್ನು ಹೋಲಿಸಬೇಡಿ.
ಮನೆಪಾಠದ ಸಮಯ ನಿಮ್ಮಿಬ್ಬರಿಗೆ ಮಾತ್ರ ಮೀಸಲಾಗಿರಲಿ. ಈ ಸಮಯದಲ್ಲಿ ಟಿ.ವಿ ನೋಡುವುದಾಗಲೀ, ಫೋನ್ ಮಾಡುವುದಾಗಲೀ ಬೇಡ. ಮಕ್ಕಳೊಂದಿಗೆ ಮಕ್ಕಳಾಗುತ್ತಲೇ ಓದಿಸಿದರೆ ಅದು ಸಂತಸದ ಸಮಯವಾಗಬಲ್ಲದು.

ಬೆರಳು ಕತ್ತರಿಸುವ ನೀರು
ಬೇಕಾಗುವ ಸಲಕರಣೆ ಒಂದು ಪಾರದರ್ಶಕ ಗಾಜಿನ ಗ್ಲಾಸು/ಬೀಕರ್, ನೀರು, ಪೆನ್.
ವಿಧಾನ: ಒಂದು ಬೀಕರಿನಲ್ಲಿ ಮುಕ್ಕಾಲು ಭಾಗ ನೀರು ತೆಗೆದುಕೊಳ್ಳಿ. ನೀರಿನಲ್ಲಿ ಒಂದು ಪೆನ್ ಇಡಿ. ಪೆನ್ ಹೊರ ತೆಗೆದು ನಿಮ್ಮ ಒಂದು ಬೆರಳನ್ನು ನೀರಿನಲ್ಲಿ ಅದ್ದಿರಿ.
ಪ್ರಶ್ನೆ: ನೀರಿನಲ್ಲಿ ಮುಳುಗಿರುವ ಹಾಗೂ ನೀರಿನ ಹೊರಗಿರುವ ಪೆನ್ ಹೇಗೆ ಕಾಣುತ್ತದೆ? ನಮ್ಮ ಇಡೀ ಬೆರಳು ಹೇಗೆ ಕಾಣುತ್ತದೆ? ಯಾಕೆ?
ಉತ್ತರ: 1) ಬೆರಳು ಕತ್ತರಿಸಿದಂತೆ ಕಾಣುತ್ತದೆ. ಯಾಕೆಂದರೆ ಬೆರಳಿನ ಕೆಳಭಾಗ (ತುದಿ) ದಿಂದ ಬರುವ ಕಿರಣಗಳು ತ್ರಿಜ್ಯೀಯ ರೇಖೆ ಮೂಲಕ ಬಂದು ನಮ್ಮ ಕಣ್ಣುಗಳನ್ನು ಸೇರುವುದಿಲ್ಲ. ಕಿರಣಗಳು ಕೋನವನ್ನು ಮಾಡುವುದರಿಂದ ಹಾಗೂ ಅವು ವಾತಾವರಣವನ್ನು ಪ್ರವೇಶಿಸುವುದರಿಂದ ಕತ್ತರಿಸಿದಂತೆ ಭಾಸವಾಗುತ್ತದೆ. ಯಾವುದೇ ವಸ್ತುವಿನಿಂದ ಬರುವ ಕಿರಣಗಳು ದಟ್ಟ ಮಾಧ್ಯಮದಿಂದ ಕಡಿಮೆ ದಟ್ಟ ಮಾಧ್ಯಮದ ಕಡೆಗೆ ಅಥವಾ ಕಡಿಮೆ ದಟ್ಟ ಮಾಧ್ಯಮದಿಂದ ಹೆಚ್ಚು ದಟ್ಟ ಮಾಧ್ಯಮದ ಕಡೆಗೆ ಚಲಿಸಿದಾಗ ಅವು ಬಾಗುತ್ತವೆ.
2) ನೀರಿನಲ್ಲಿ ಒಂದು ಪೆನ್/ಪೆನ್ಸಿಲ್ ಇಳಿ ಬಿಟ್ಟು ನೋಡಿ ಅದೂ ಕತ್ತರಿಸಿದಂತೆ ಗೋಚರಿಸುತ್ತದೆ.

ಸಂಭಾಷಣೆಯಲ್ಲಿ ಪ್ರಿಫಿಕ್ಸ್ ಉಪಯೋಗ
ನಮ್ಮ ಪದ ಸಂಪತ್ತನ್ನು (ವೊಕ್ಯಾಬ್ಯುಲರಿಯನ್ನು) ಹೆಚ್ಚಿಸಿಕೊಳ್ಳುವಲ್ಲಿ prefix ಮತ್ತು suffixಗಳ ಪಾತ್ರ ಮಹತ್ವದ್ದು. ಪದವೊಂದನ್ನು ಮೂಲಪದ (root word), ಪೂರ್ವ ಪ್ರತ್ಯಯ (prefix) ಹಾಗೂ ಅಂತ್ಯಪ್ರತ್ಯಯ (suffix) ಎಂಬ ಮೂರು ಭಾಗಗಳಾಗಿ ವಿಂಗಡಿಸಬಹುದು.
ಯಾವುದಾದರೊಂದು ಮೂಲಪದದ ಹಿಂದೆ ಕೆಲವು ಅಕ್ಷರಗಳನ್ನು ಸೇರಿಸಿ, ಇನ್ನೊಂದು ಅರ್ಥಪೂರ್ಣವಾಗಿರುವ ಪದವನ್ನು ಸೃಷ್ಟಿಸಬಹುದು. ಅಂತಹ ಅಕ್ಷರಗಳನ್ನು prefix ಎನ್ನುತ್ತೇವೆ.ಉದಾ: 1. Kind ಎನ್ನುವ ಮೂಲಪದದ ಹಿಂದೆ ‘un’ ಎನ್ನುವ 2 ಅಕ್ಷರಗಳ prefix ಅನ್ನು ಸೇರಿಸಿ unkind ಎನ್ನುವ ಇನ್ನೊಂದು ಪದವನ್ನು ಮಾಡಬಹುದು.
2. Agreeಯ ಹಿಂದೆ dis ಎನ್ನುವ 3 ಅಕ್ಷರಗಳ prefix ಅನ್ನು ಸೇರಿಸಿದಾಗ disagree ಎನ್ನುವ ಬೇರೊಂದು ಪದದ ಸೃಷ್ಟಿಯಾಗುತ್ತದೆ.
3. Activeನ ಹಿಂದೆ hyper ಎನ್ನುವ 4 ಅಕ್ಷರಗಳ prefix ಅನ್ನು ಸೇರಿಸಿ hyperactive ಮಾಡಬಹುದು.
ಇಂಗ್ಲಿಷ್ ಪದಗಳು ಸಾಮಾನ್ಯವಾಗಿ ಈ ಕೆಳಗಿನ prefix ಗಳೊಂದಿಗೆ ಕಾಣಿಸಿಕೊಳ್ಳುತ್ತವೆ:
Un, dis, mis, il, im, ir, de, sub, re, pre, hyper, hypo, over, under...
PPrefixಗಳನ್ನು ಸರಿಯಾಗಿ ಬಳಸಿದಾಗ ಮಾತ್ರ ಅರ್ಥಪೂರ್ಣವಾದ ಪದಗಳು ಸೃಷ್ಟಿಯಾಗುತ್ತಾ ಹೋಗುತ್ತವೆ. ಬೇರೆ ಬೇರೆ ರೀತಿಯ ಪದಗಳನ್ನು ರಚಿಸಬೇಕಾದರೆ, ವಿವಿಧ prefix ಗಳನ್ನು ಉಪಯೋಗಿಸಬೇಕಾಗುತ್ತದೆ.
ಮೂಲಪದದ ವಿರುದ್ಧಾರ್ಥವನ್ನು ಸೂಚಿಸಲು un, im, il, ir, de, dis, mis ಎನ್ನುವಂತಹ prefixಗಳನ್ನು ಉಪಯೋಗಿಸಬೇಕಾಗುತ್ತದೆ.
ಉದಾ: kind - unkind,
Possible - impossible,
Legal - illegal,
Regular - irregular,
Hydrate - dehydrate,
Agree - disagree,
Management - mismanagement
Re ಎನ್ನುವ prefix, ಮತ್ತೆ ಎನ್ನುವ ಅರ್ಥವನ್ನು ಸೂಚಿಸುತ್ತದೆ.
ಉದಾ: open – reopen
Act – react
Organise – reorganise
Pre ಎನ್ನುವ prefix ಅನ್ನು ‘ಮುಂಚೆ’ ಎಂಬ ಅರ್ಥವನ್ನು ಸೂಚಿಸಲು ಉಪಯೋಗಿಸಬಹುದು.
ಉದಾ: Paid – prepaid,
Caution – precaution,
Requisite – prerequisite...
Co ಎಂಬ prefix, ‘ಜೊತೆಗೆ’ ಎನ್ನುವ ಅರ್ಥವನ್ನು ಸೂಚಿಸುತ್ತದೆ.
ಉದಾ: Operate – cooperate,
Ordinate – coordinate,
Education – coeducation
Hyper, hypo ಎನ್ನುವ prefix ಗಳು ಕೂಡ ‘ಅತಿ ಹೆಚ್ಚು’ ಹಾಗೂ ‘ತುಂಬಾ ಕಡಿಮೆ’ ಎನ್ನುವ ಅರ್ಥಗಳನ್ನು ಸೂಚಿಸುತ್ತವೆ.
ಉದಾ: hyperthyroid, hypothyroid...
Over, under ಎನ್ನುವ prefix ಗಳು ಕೂಡ ‘ಅತಿ ಹೆಚ್ಚು’ ಹಾಗೂ ‘ತುಂಬಾ ಕಡಿಮೆ’ ಎನ್ನುವ ಅರ್ಥಗಳನ್ನು ಸೂಚಿಸಲು ಸಹಾಯ ಮಾಡುತ್ತವೆ.
ಉದಾ: active – overactive,
Paid – underpaid.
Sub ಎನ್ನುವ prefix, ‘ಕೆಳ’/‘ಒಳ’ ಎನ್ನುವ ಅರ್ಥಗಳನ್ನು ಸೂಚಿಸುತ್ತವೆ.
ಉದಾ: Conscious – subconscious,
Branch – subbranch
ಈ ಮೇಲೆ ಕೊಟ್ಟಿರುವ ಉದಾಹರಣೆಗಳು, ಇಂಗ್ಲಿಷ್‌ನ ಸಾಮಾನ್ಯ ಬಳಕೆಯಲ್ಲಿರುವಂತಹ prefixಗಳು. ಹೀಗೆ, ಅವುಗಳ ಜ್ಞಾನ, ಉದ್ದೇಶ ಹಾಗೂ ಅರ್ಥಗಳನ್ನು ತಿಳಿದುಕೊಂಡು ಬಳಸುತ್ತಾ ಹೋದಂತೆ, ನಾವು ಮೂಲ ಪದಗಳ ಜೊತೆಜೊತೆಗೆ ಅವುಗಳಿಂದ ಹುಟ್ಟುವ ಇನ್ನೂ ಹಲವಾರು ಪದಗಳನ್ನು ತಿಳಿದುಕೊಂಡು, ಬಳಸಿ, ನಮ್ಮ ವೊಕ್ಯಾಬ್ಯುಲರಿಯನ್ನು ಹೆಚ್ಚಿಸಿಕೊಳ್ಳಬಹುದು. ಅಷ್ಟೇ ಅಲ್ಲದೆ prefixಗಳ ಬಳಕೆಯಿಂದ ನಮ್ಮ ಸಂಭಾಷಣೆಗೆ ಆಕರ್ಷಕವಾದ ಸಂಕ್ಷಿಪ್ತತೆ ದೊರಕುತ್ತದೆ.
Prefix ಗಳ ಬಳಕೆಯ ಜೊತೆಗೆ suffix ಗಳ ಬಳಕೆಯ ಬಗ್ಗೆಯೂ ತಿಳಿದು ಕೊಳ್ಳುವುದು ಮುಖ್ಯ. ಮೂಲಪದದ ಮುಂದೆ ಕೆಲವು ಅಕ್ಷರಗಳನ್ನು ಸೇರಿಸಿ ಇನ್ನೊಂದು ಅರ್ಥಪೂರ್ಣವಾಗಿರುವ ಪದವನ್ನು ಮಾಡಬಹುದು. ಅಂತಹ ಅಕ್ಷರಗಳನ್ನು suffix ಎಂದು ಕರೆಯುತ್ತೇವೆ.
ಉದಾ: Kind ಎನ್ನುವ ಮೂಲ ಪದದ ಮುಂದೆ ly ಎನ್ನುವ suffixಅನ್ನು ಸೇರಿಸಿ, kindly ಎನ್ನುವ ಇನ್ನೊಂದು ಪದವನ್ನು ಮಾಡಬಹುದು.
ಒಂದೊಂದು ರೀತಿಯ suffix ಅನ್ನು ಸೇರಿಸಿದಾಗ, ಮೂಲಪದವು ಒಂದೊಂದು ರೀತಿಯಲ್ಲಿ ಬದಲಾಗುತ್ತಾ ಹೋಗುತ್ತದೆ.
Er, est ಎನ್ನುವ suffixಗಳನ್ನು ಸಣ್ಣ ಗಾತ್ರದ adjective ಗಳಿಗೆ ಸೇರಿಸಿದಾಗ, ಅವುಗಳ ಹೋಲಿಕೆಯ ಪ್ರಮಾಣವನ್ನು (degree of comparison) ಸೂಚಿಸಬಹುದು.
ಉದಾ: strongಗೆ ‘er’ ಸೇರಿಸಿ stronger ಹಾಗೂ ‘est’ ಸೇರಿಸಿ strongest ಮಡಬಹುದು. ಅದೇ ರೀತಿ ಇನ್ನೂ ಕೆಲವು ಪದಗಳನ್ನು ಗಮನಿಸಿ:
Tall, taller, tallest
Short, shorter, shortest
S ಎನ್ನುವ suffix ಅನ್ನು ಯಾವುದಾದರೂ common nounನ ಮುಂದೆ ಬಳಸಿದಾಗ, ಅದು ಬಹುವಚನವಾಗುತ್ತದೆ.
ಉದಾ: table – tables, pen-pens
ಆದರೆ, s/es/ies ಎನ್ನುವ suffix ಅನ್ನು ಯಾವುದಾದರೂ ಕ್ರಿಯಾಪದದ ಮುಂದೆ ಬಳಸಿದಾಗ, ಅದು ಏಕವಚನವಾಗುತ್ತದೆ.
ಉದಾ: come – comes, go–goes, study-studieses ಹಾಗೆಯೇ, verbಗಳ tense ಅನ್ನು ಬದಲಾಯಿಸಬೇಕಾದರೆ ಸೂಕ್ತ ರೀತಿಯ suffixಗಳನ್ನು ಉಪಯೋಗಿಸಬೇಕು.
ED/d/ied ಎನ್ನುವ suffixನಿಂದ ವರ್ತಮಾನ ಕಾಲದ ಕ್ರಿಯಾಪದವನ್ನು ಭೂತಕಾಲದ ಕ್ರಿಯಾಪದವನ್ನಾಗಿ ಬದಲಾಯಿಸಬಹುದು.
ಉದಾ: start–started,
Charge–charged,
Study-studied
Ing ಎನ್ನುವusuffix ಅನ್ನು ಕ್ರಿಯಾಪದದ ಮುಂದೆ ಬಳಸಿದಾಗ continuous tense ಆಗುತ್ತದೆ.
ಉದಾ: go–going
Learn–learning
Write - writing
ಕೆಲವು ಸಂದರ್ಭಗಳಲ್ಲಿ ing ಅನ್ನುssuffix ಆಗಿ ಬಳಸಿದಾಗ ಕ್ರಿಯಾಪದವು ನಾಮಪದವಾಗಿ ಬದಲಾಗುತ್ತದೆ.
ಉದಾ: meet - meeting
ಇಲ್ಲಿ ನಾವು ಗಮನಿಸಬೇಕಾದ ವಿಷಯವೆಂದರೆ, ನಮ್ಮ ಸಂಭಾಷಣೆ ಸರಳವಾಗಿರಬೇಕಾದರೆ, ನಾಮಪದದ ರೂಪದಲ್ಲಿರುವ ಶಬ್ದವನ್ನು ಆದಷ್ಟು ಮಟ್ಟಿಗೆ ಕ್ರಿಯಾಪದದ ರೂಪದಲ್ಲಿ ಉಪಯೋಗಿಸಲು ಪ್ರಯತ್ನಿಸಬೇಕು.
ಉದಾ: I have a meeting (noun) with the director.- ಈ ರೀತಿಯ ವಾಕ್ಯಕ್ಕೆ ಬದಲಾಗಿ,
II have to meet (verb) the director. - ಈ ರೀತಿಯ ವಾಕ್ಯವು ನಮ್ಮ ಸಂಭಾಷಣೆಗೆ ಸರಳತೆ ಮತ್ತು ಖಚಿತತೆಯನ್ನು ತಂದುಕೊಡುತ್ತದೆ.
Lyಅನ್ನು adjectiveಗಳ ಮುಂದೆ ಸೇರಿಸಿದಾಗ adverbಗಳಾಗುತ್ತವೆ.
ಉದಾ: beautiful – beautifully
Quick - quickly
Dom/ion/nessಎಂಬ suffixಗಳನ್ನು ಪದಗಳಿಗೆ ಸೇರಿಸಿದಾಗ, ಆ ಪದಗಳು nounಗಳಾಗಿ ಪರಿವರ್ತನೆಗೊಳ್ಳುತ್ತವೆ.
ಉದಾ: stardom
Examination
Cleanlinessss
ಈ ಮೇಲಿನ ಉದಾಹಣೆಗಳಿಂದ ನಾವು ತಿಳಿಯಬಹುದಾದ ಒಂದು ಸ್ವಾರಸ್ಯಕರವಾದ ವಿಷಯವೆಂದರೆ, s ಎಂಬ suffixಅನ್ನು ಹೊಂದಿರುವ ಪದಗಳು ಸಾಮಾನ್ಯವಾಗಿ noun ಅಥವಾ verb ಆಗಿರುತ್ತವೆ.
Ed/ing/en, suffix ಆಗಿದ್ದರೆ, ಅವು ಬಹುತೇಕ verb ಗಳಾಗಿರುತ್ತವೆ.
Ly, suffix ಆಗಿದ್ದರೆ, ಆ ಪದಗಳು ಸಾಮಾನ್ಯವಾಗಿ adverbbಗಳಾಗಿರುತ್ತವೆ ಹಾಗೂ dom/ion/ness, suffix ಆಗಿದ್ದರೆ, ಆ ಪದಗಳು ಸಾಮಾನ್ಯವಾಗಿ nounಗಳಾಗಿರುತ್ತವೆ.
suffixಗಳ ಸಹಾಯದಿಂದ ಪದಗಳು ಯಾವ ಗುಂಪಿಗೆ ಸೇರುತ್ತವೆ ಎಂಬುದನ್ನು ಸುಲಭವಾಗಿ ಗುರುತಿಸಬಹುದು.
ಮಾಹಿತಿಗೆ: 98452 13417
ಗುರುತ್ವ ಕೇಂದ್ರ
ವಿಧಾನ: ಚಿತ್ರ
1ರಲ್ಲಿ ತೋರಿಸಿದಂತೆ ಒಂದು ಕುರ್ಚಿಯ ಮೇಲೆ ಎದೆ ಸೆಟಿಸಿ, ನೆಟ್ಟಗೆ ಕುಳಿತುಕೊಳ್ಳಿರಿ.
ನಿಮ್ಮ ದೇಹವನ್ನು ಹಾಗೂ ಕೈಕಾಲುಗಳನ್ನು ಹಿಂದಕ್ಕೆ ಮುಂದಕ್ಕೆ ಬಾಗಿಸಬೇಡಿ. ಚಿತ್ರ
2ರಲ್ಲಿ ತೋರಿಸಿದಂತೆ ಸ್ವಲ್ಪ ಮುಂದಕ್ಕೆ ಬಾಗಿ.
ಪ್ರಶ್ನೆ: 1) ಚಿತ್ರ 1ರಲ್ಲಿ ತೊರಿಸಿದಂತೆ ಕುಳಿತುಕೊಂಡು ಮೇಲೇಳಿ. ಸಾಧ್ಯವಾಯಿತೇ? ಯಾಕೆ?
ಚಿತ್ರ 2ರಲ್ಲಿ ತೋರಿಸಿದಂತೆ ಮುಂದಕ್ಕೆ ಬಾಗಿ ಏಳಿ. ಸಾಧ್ಯವಾಯಿತೆ? ಯಾಕೆ?
ಉತ್ತರ: ಚಿತ್ರ 1ರಲ್ಲಿ ತೋರಿಸಿದಂತೆ ಕುಳಿತುಕೊಂಡಾಗ, ಗುರುತ್ವ ಕೇಂದ್ರ (Center of gravity) ದಗುಂಟ ಎಳೆದ ಶೃಂಗೀಯ ರೇಖೆಯು (Vertical line), ಪಾಯದಲ್ಲಿ ಹಾಯ್ದುಹೋಗಿ ದೇಹವು ಸ್ಥಿರವಾಗಿರುತ್ತದೆ. ಇಲ್ಲಿ ನಿಮ್ಮ ದೇಹದ ಗುರುತ್ವ ಕೇಂದ್ರವು ನಿಮ್ಮ ಕಾಲುಗಳ ಒಳಗೆ ಬೀಳುವುದರಿಂದ ಮೇಲೇಳಲು ಆಗುವುದೇ ಇಲ್ಲ.
ಚಿತ್ರ 2ರಲ್ಲಿ ತೋರಿಸಿದಂತೆ ನೀವು ಬಾಗಿದಾಗ ಶೃಂಗೀಯ ರೇಖೆಯು ಪಾಯದ ಹೊರಗೆ ಬಿದ್ದು, ಅಂದರೆ ನಿಮ್ಮ ಪಾದಗಳಲ್ಲಿ ಬಿದ್ದು ದೇಹವು ಅಸ್ಥಿರವಾಗುತ್ತದೆ. ಆಗ ಮೇಲೇಳಲು ಸಾಧ್ಯವಾಗುತ್ತದೆ. ಹೀಗೆಯೇ ಗೋಡೆಗೆ ನೇರವಾಗಿ ನಿಂತುಕೊಂಡು, ಮುಂದೆ ಚಲಿಸದೇ ನಿಮ್ಮ ಮುಂದೆ ಕರವಸ್ತ್ರವನ್ನು ಹಾಕಿ ಎತ್ತಿಕೊಳ್ಳುವುದು ಅಷ್ಟೇ ಕಷ್ಟ.
ಕನ್ನಡದಲ್ಲಿ articlesಗೆ ಸಮಾನವಾದ ಪದಗಳಿಲ್ಲ. ಆದ್ದರಿಂದ ಇವುಗಳನ್ನು ನಾವು ಎಚ್ಚರಿಕೆಯಿಂದ ಬಳಸಬೇಕು. ಇಂಗ್ಲಿಷ್‌ನಲ್ಲಿ a, an, the ಎನ್ನುವ ಮೂರು adjectiveಗಳನ್ನು articles ಎಂದು ಕರೆಯುತ್ತೇವೆ. ಈ ಮೂರರಲ್ಲಿ a, an ಗಳನ್ನು indefinite articles ಎನ್ನುತ್ತೇವೆ ಹಾಗೂ the ಅನ್ನು definite article ಎಂದು ಕರೆಯುತ್ತೇವೆ. ಇಲ್ಲಿ definite ಎಂದರೆ ನಿರ್ದಿಷ್ಟ ಹಾಗೂ indefinite ಎಂದರೆ ನಿರ್ದಿಷ್ಟ ವಲ್ಲದುದು ಎಂದರ್ಥ. ನಮ್ಮ ಸಂಭಾಷಣೆಯಲ್ಲಿ ಯಾವುದಾದರೂ ವಸ್ತು/ವಿಷಯ/ವ್ಯಕ್ತಿಯ ಬಗ್ಗೆ ಮಾತನಾಡುವಾಗ ಅವುಗಳು ನಮಗೆ ನಿರ್ದಿಷ್ಟವಾಗಿ ತಿಳಿಯದೆ ಇದ್ದಾಗ a ಅಥವಾ an ಎನ್ನುವ indefinite articlesesಅನ್ನು ಬಳಸಬೇಕಾಗುತ್ತದೆ.
ಉದಾ: There is a letter for you.
An apple a day is good for health.
ಈ ಮೇಲಿನ ವಾಕ್ಯಗಳಲ್ಲಿ a letter, an apple ಎಂದರೆ ನಿರ್ದಿಷ್ಟವಲ್ಲದ ಯಾವುದೋ ಪತ್ರ ಹಾಗೂ ಯಾವುದಾದರೂ ಸೇಬು ಎಂದರ್ಥ.
ಹಾಗೆಯೇ, ನಾವು ಯಾರ ಬಗ್ಗೆ ಅಥವಾ ಯಾವುದರ ಬಗ್ಗೆ ಮಾತನಾಡುತ್ತಿದ್ದೇವೆ ಎನ್ನುವುದು ನಿರ್ದಿಷ್ಟವಾಗಿ ತಿಳಿದಿದ್ದಲ್ಲಿ, the ಎನ್ನುವ definite article ಅನ್ನು ಬಳಸಬೇಕಾಗುತ್ತದೆ.
ಉದಾ: I know the clinic - ಈ ವಾಕ್ಯದಲ್ಲಿ, the clinic ಎಂದರೆ ಒಂದು ನಿರ್ದಿಷ್ಟವಾದ clinic ಎಂದರ್ಥ.
Indefinite ಅನ್ನು ಬಳಸುವಾಗ ಎಲ್ಲಿ a ಹಾಗೂ ಎಲ್ಲಿ an ಬಳಸಬೇಕು ಎಂಬುದರ ಬಗ್ಗೆ ಗಮನಹರಿಸೋಣ. ಯಾವ ಪದಗಳು consonant sound ನಿಂದ ಪ್ರಾರಂಭವಾಗುತ್ತವೆಯೋ ಅವುಗಳ ಹಿಂದೆ a ಉಪಯೋಗಿಸಬೇಕು.
ಉದಾ:A boy, a girl...
ಆದರೆ, hour, honest, heir ಗಳಂತಹ ಪದಗಳನ್ನು ಬಳಸುವಾಗ a ಉಪಯೋಗಿಸದಂತೆ ಎಚ್ಚರವಹಿಸಬೇಕು. ಏಕೆಂದರೆ, ಈ ಪದಗಳಲ್ಲಿ h ಅನ್ನು ಉಚ್ಚರಿಸುವುದಿಲ್ಲ. ಹವರ್/ಹಾನೆಸ್ಟ್/ಹೇರ್ ಗೆ ಬದಲಾಗಿ ಅವರ್/ಆನೆಸ್ಟ್/ಏರ್ ಎಂದು ಉಚ್ಚರಿಸುತ್ತೇವೆ. ಹಾಗಾಗಿ, an hour, an honest man, an heir ಬಳಸಬೇಕಾಗುತ್ತದೆ.
A ಎನ್ನುವ article ಅನ್ನು ನಮ್ಮ ಸಂಭಾಷಣೆಯಲ್ಲಿ ಬಳಸುವಾಗ, ಅದರ ಉಚ್ಚಾರಣೆಯ ಕಡೆಗೂ ನಮ್ಮ ಗಮನವಿರಬೇಕು. ಅದನ್ನು ವಾಕ್ಯಗಳಲ್ಲಿ ಬಳಸುವಾಗ ಎ ಎನ್ನದೆ ಅ ಎಂದು ಉಚ್ಚರಿಸಬೇಕು.
ಉದಾ: I am a teacher - ಈ ವಾಕ್ಯವನ್ನು ಐಯಾಮ್ ಎ ಟೀಚರ್ ಎನ್ನದೆ ಐಯಾಮ್ ಅ ಟೀಚರ್ ಎಂದು ಉಚ್ಚರಿಸಬೇಕಾಗುತ್ತದೆ.
A, e, i, o, u ಎಂಬುವು vowels ಎಂಬುದು ಸಾಮಾನ್ಯ ತಿಳುವಳಿಕೆ. ಇದಕ್ಕೆ ಅಪವಾದಗಳೂ ಇವೆ ಎಂಬುದನ್ನು ಮುಂದೆ ನೋಡೋಣ. ಯಾವ ಪದಗಳು vowel sound ನಿಂದ ಪ್ರಾರಂಭವಾಗುತ್ತವೆಯೋ ಅವುಗಳ ಹಿಂದೆ an ಬಳಸಬೇಕು.
ಉದಾ: an orange, an umbrella...
ಆದರೆ, university, European, useful ಎನ್ನುವಂತಹ ಪದಗಳನ್ನು ಬಳಸುವಾಗ an ಉಪಯೋಗಿಸಬಾರದು. ಏಕೆಂದರೆ, ಈ ಪದಗಳ ಮೊದಲನೆಯ ಅಕ್ಷರ vowel ಆದರೂ ಸಹ ಇವುಗಳನ್ನು ಉಚ್ಚರಿಸಬೇಕಾದರೆ ‘yu’ (ಯು) ಎನ್ನುವ consonant sound ನಿಂದ ಪ್ರಾರಂಭವಾಗುತ್ತವೆ. ಹಾಗಾಗಿ a university, a European, a useful thing... ಎಂದು ಬಳಸಬೇಕಾಗುತ್ತದೆ.
Articles ನ ಸರಿಯಾದ ಬಳಕೆ ಬರಿ ಕಂಠಪಾಠದಿಂದ ದಕ್ಕುವಂತಹುದಲ್ಲ. ಕುಶಲ ಸಂಭಾಷಣಾಕಾರರ ಮಾತುಗಳನ್ನು ಗಮನವಿಟ್ಟು ಆಲಿಸಿ, ಈ articlesನ ಸೂಕ್ಷ್ಮಗಳನ್ನು ನಿಧಾನವಾಗಿ ಮನದಟ್ಟು ಮಾಡಿಕೊಳ್ಳಬೇಕು.
Definite articles ಉಪಯೋಗದ ಬಗ್ಗೆ ನೋಡೋಣ.
The ಎನ್ನುವ definite article ಅನ್ನು ಎಲ್ಲೆಲ್ಲಿ ಹಾಗೂ ಹೇಗೆ ಉಪಯೋಗಿಸಬಹುದು ಎಂಬುದನ್ನು ತಿಳಿದು ಕೊಳ್ಳೋಣ.
ನದಿ, ಸಮುದ್ರ, ದ್ವೀಪ ಅಥವಾ ಪರ್ವತಗಳನ್ನು ಕುರಿತು ಮಾತನಾಡುವಾಗ, ಅವುಗಳ ಹೆಸರಿನ ಹಿಂದೆ the ಬಳಸಬೇಕಾಗುತ್ತದೆ.
ಉದಾ: The Kaveri flows through the two states.
We can walk on some parts of the Arctic ocean, as it is frozen.
ಕೆಲವು ಪುಸ್ತಕಗಳ ಹೆಸರಿನ ಹಿಂದೆಯೂ the ಬಳುಸುತ್ತೇವೆ.
ಉದಾ: Valmiki wrote the Ramayana.
The Mahabharatha is a massive epic.
ನಮ್ಮ ಸಂಭಾಷಣೆಯಲ್ಲಿ, ಭೂಮಿ, ಆಕಾಶ, ಸೂರ್ಯ, ಚಂದ್ರ, ದಿಕ್ಕುಗಳು ಮುಂತಾದ ಅನನ್ಯ ಮತ್ತು ಏಕಮಾತ್ರ ವಾದವುಗಳ ಬಗ್ಗೆ ಮಾತನಾಡುವಾಗ, ಅವುಗಳ ಹಿಂದೆ the ಉಪಯೋಗಿಸುತ್ತೇವೆ.
ಉದಾ: The sun rises in the east.
The sky has grown very dark.
ವಾದ್ಯಗಳ ಹೆಸರಿನ ಹಿಂದೆಯೂ the ಬಳಸಬೇಕು.
ಉದಾ: He plays the guitar very effectively.
ಕ್ರಮಸೂಚಕಗಳ (first, second, third, ....) ಹಿಂದೆ the ಉಪಯೋಗಿಸುತ್ತೇವೆ.
ಉದಾ: I would be the first to admit my mistakes.
My child has secured the first rank.
ಇಲ್ಲಿ ಗಮನಿಸಬೇಕಾದ ವಿಷಯವೆಂದರೆ, ಕ್ರಮಸೂಚಕಗಳು noun ಅಥವಾ adjective ಆಗಿದ್ದ ಸಂದರ್ಭದಲ್ಲಿ ಮಾತ್ರ ಅವುಗಳ ಹಿಂದೆ the ಬಳಸುತ್ತೇವೆ. ಆದರೆ, ಅದೇ ಕ್ರಮಸೂಚಕಗಳು (ordinals) adverb ಆಗಿದ್ದರೆ, ಅವುಗಳ ಹಿಂದೆ the ಬಳಸಬಾರದು.
ಉದಾ: My child stood first in the class.
Tallest, strongest, most beautiful, most intelligent ಮುಂತಾದ ssuperlative degree adjective ಗಳ ಹಿಂದೆ the ಉಪಯೋಗಿಸಬೇಕು.
ಉದಾ: She is the cutest girl in the family.
He is the most intelligent boy in the class.
Proper nounಗಳ ಹಿಂದೆ the ಬಳಸಬಾರದು. ಹಾಗಾಗಿ, ಈ ಕೆಳಗೆ ಸೂಚಿಸಿರುವ ಸಾಮಾನ್ಯ ತಪ್ಪುಗಳಿಂದ ದೂರವಿರಿ:
1. The Bangalore is a place of opportunities (ತಪ್ಪು).
Bangalore is a place of opprotunities (ಸರಿ).
2. I am learning the English (ತಪ್ಪು).
II am learning English (ಸರಿ).
The ನ ಸರಿಯಾದ ಬಳಕೆಯ ಜೊತೆಗೆ, ಅದರ ಸರಿಯಾದ ಉಚ್ಚಾರಣೆಯೂ ನಮಗೆ ತಿಳಿದಿರಬೇಕು. Consonant sound ಇಂದ ಪ್ರಾರಂಭವಾಗುವ ಪದದ ಹಿಂದೆ the ಬಂದರೆ, ಅದನ್ನು ‘ದ’ ಎಂದೂ ಹಾಗೂ vowel sound ಇಂದ ಪ್ರಾರಂಭವಾಗುವ ಪದದ ಹಿಂದೆ the ಬಂದರೆ, ಅದನ್ನು ‘ದಿ’ ಎಂದು ಉಚ್ಚರಿಸಬೇಕು.
ಉದಾ: The end of the film is fascinating. ಈ ವಾಕ್ಯವನ್ನು ಓದುವ ರೀತಿ ಹೀಗಿದೆ:
ದಿ ಎಂಡ್ ಆಫ್ ದ ಫಿಲ್ಮ್ ಈಸ್‌ಫ್ಯಾಸಿನೇಟಿಂಗ್.
the ಎನ್ನುವ ಪದ ಇಂಗ್ಲಿಷ್ ಭಾಷೆಯಲ್ಲಿಯೇ ಅತಿ ಹೆಚ್ಚು ಉಪಯೋಗಸಲಾಗುವ ಪದ. ಅದರ ಸರಿಯಾದ ಬಳಕೆಯನ್ನು ಗಮನವಿಟ್ಟು ಕಲಿಯಬೇಕು

ಇಂಗ್ಲಿಷ್‌ನಲ್ಲಿ ಆರ್ಟಿಕಲ್ಸ್‌ಗಳ ಪಾತ್ರ