Thursday, 8 January 2015

Spoken English, Genetic Science


ಸಾಮಗ್ರಿ: ಎರಡು ಪಾರ್ಲೆ ಬಿಸ್ಕತ್, ಎರಡು ಕಪ್‌ ತಣ್ಣಗಿನ ಅಥವಾ ಬಿಸಿ ಚಹಾ/ಹಾಲು/ನೀರು.
ವಿಧಾನ: 1) ಒಂದು ಕಪ್ಪಿನಲ್ಲಿ ಪೂರ್ಣ ತಣ್ಣಗಿನ ಹಾಗೂ ಇನ್ನೊಂದರಲ್ಲಿ ಬಹಳ ಬಿಸಿಯುಳ್ಳ ಚಹಾ/ಹಾಲು/ನೀರು ತೆಗೆದುಕೊಳ್ಳಿರಿ.
2) ತಣ್ಣಗಿನ ಹಾಗೂ ಬಿಸಿ ಚಹಾದಲ್ಲಿ ಒಂದೊಂದು ಪಾರ್ಲೆ ಬಿಸ್ಕತ್ತನ್ನು ಅರ್ಧದಷ್ಟು ಅದ್ದಿ, ಕ್ಷಿತಿಜೀಯ (Horizontal) ವಾಗಿ ಹಿಡಿದುಕೊಳ್ಳಿರಿ.
ಪ್ರಶ್ನೆ: ತಣ್ಣಗಿರುವ ಹಾಗೂ ಬಿಸಿ ಇರುವ ಚಹಾದಲ್ಲಿ ಅದ್ದಿ ಹೊರತೆಗೆದ ಬಿಸ್ಕತ್‌ಗಳಿಗೆ ಏನಾಗುತ್ತದೆ? ಯಾಕೆ?
ಉತ್ತರ: ತಣ್ಣಗಿನ ಚಹಾದಲ್ಲಿ ಅದ್ದಿ ತೆಗೆದ ಬಿಸ್ಕತ್ ಬಹಳ ಸಮಯದ ನಂತರ ಮುರಿದು ಬೀಳುತ್ತದೆ. ಬಿಸಿ ಚಹಾದಲ್ಲಿ ಅದ್ದಿ ತೆಗೆದ ಬಿಸ್ಕತ್ ಸ್ವಲ್ಪೇ ಸಮಯದಲ್ಲಿ ಮುರಿದು ಬೀಳುತ್ತದೆ. ಯಾಕೆಂದರೆ- ಬಿಸ್ಕಿತ್ ತಯಾರಿಸಿದ ಹಿಟ್ಟಿನಲ್ಲಿ ಪಿಷ್ಟ, ಸೆಲ್ಯೂಲೋಸ್, ಪೆಕ್ಟಿನ್‌ಗಳಂಥ ಜಲಪ್ರೇಮಿ/ಜಲಪ್ರಿಯ (Hydrophilic) ವಸ್ತುಗಳಿರುತ್ತವೆ. ಅವುಗಳು ನೀರನ್ನು ಹೀರಿಕೊಂಡು ಉಬ್ಬುತ್ಯವೆ. ಈ ಕ್ರಿಯೆಗೆ ಇಂಬೈಬೀಶನ್ (Imbibition) ಎಂದು ಕರೆಯುತ್ತಾರೆ. ಹೆಚ್ಚಿನ ತಾಪಮಾನದಲ್ಲಿ ಈ ಪದಾರ್ಥಗಳು ಶೀಘ್ರಗತಿಯಲ್ಲಿ ನೀರನ್ನು ಹೀರಿ (Absorb) ಕೊಂಡು ಉಬ್ಬುತ್ತವೆ. ಬಿಸಿ ಚಹಾದಲ್ಲಿ ಈ ಕ್ರಿಯೆ ಬಹಳ ಕಡಿಮೆ ಸಮಯದಲ್ಲಿ ಜರುಗಿ ಮುಂದಿನ ಅರ್ಧಭಾಗದ ಭಾರ ಹೆಚ್ಚಿ, ಮುರಿದು ಬೀಳುತ್ತದೆ. ಮರದಿಂದ ಮಾಡಿದ ಕಿಟಕಿ/ಬಾಗಿಲಗಳು ಮಳೆಗಾಲದಲ್ಲಿ ಉಬ್ಬುವುದರಿಂದ ಅವುಗಳನ್ನು ತೆರೆಯುವುದು ಹಾಗೂ ಮುಚ್ಚುವುದು ಸ್ವಲ್ಪ ಕಠಿಣ. ಇದಕ್ಕೆ ಕಾರಣ ಇಂಬೈಬೀಶನ್.

ಫೋನೆಟಿಕ್ಸ್ ಮಾತು‌:

ಇಂಗ್ಲಿಷ್ ಭಾಷೆಯನ್ನು ಕಲಿಯುವಾಗ, ಪ್ರಾರಂಭದಲ್ಲಿ, English alphabetನ 26 ಅಕ್ಷರಗಳನ್ನು ಕಲಿಯುವುದು ಎಷ್ಟು ಮುಖ್ಯವೋ, ಆ ಭಾಷೆಯ speech sounds ಅನ್ನು ಕಲಿಯುವುದು ಅಷ್ಟೇ ಮುಖ್ಯ. ಸಾಮಾನ್ಯವಾಗಿ ಬಹುತೇಕ ಶಾಲೆಗಳಲ್ಲಿ, ಪ್ರಾರಂಭದ ತರಗತಿಗಳಲ್ಲಿ ಮಕ್ಕಳಿಗೆ Aಯಿಂದ Zವರೆಗಿನ ಅಕ್ಷರಗಳನ್ನು ಮಾತ್ರ ಕಲಿಸುತ್ತಾರೆಯೇ ಹೊರತು, ಆ ಅಕ್ಷರಗಳಲ್ಲಿ ಅಂತರ್ಗತವಾಗಿರುವ ಶಬ್ದಕಣಗಳ (phonemes) ಬಗ್ಗೆ ತಿಳುವಳಿಕೆ ನೀಡುವುದಿಲ್ಲ.
ಇಂಗ್ಲಿಷ್ ಭಾಷೆಯ speech soundsನ ಅಧ್ಯಯನವನ್ನು Phonetics(ಫೊನೆಟಿಕ್ಸ್) ಎಂದು ಕರೆಯುತ್ತೇವೆ. ಇಂಗ್ಲಿಷ್ ಭಾಷೆಯಲ್ಲಿ ಉಪಯೋಗಿಸುವ ಸುಮಾರು ಹತ್ತು ಲಕ್ಷ ಪದಗಳೆಲ್ಲವೂ 44 ಶಬ್ದಕಣಗಳಿಂದ ರಚಿತವಾಗಿವೆ. ಇಂಗ್ಲಿಷ್ ಅಕ್ಷರಮಾಲೆಯಲ್ಲಿ 5 vowels (a, e, i, o, u) ಮತ್ತು 21 consonantss (ಇನ್ನುಳಿದ ಅಕ್ಷರಗಳು) ಇದ್ದರೆ, ಇಂಗ್ಲಿಷ್ ಫೊನೆಟಿಕ್ಸ್‌ನ ಪ್ರಕಾರ ನಾವು ಉಪಯೋಗಿಸುವ 44 phonemesನಲ್ಲಿ 20vowel soundssಮತ್ತು  24 consonant soundss ಇವೆ.
ನಮ್ಮ ಉಚ್ಚಾರಣೆ ಸ್ಪಷ್ಟವಾಗಿಯೂ, ಸುಶ್ರಾವ್ಯವಾಗಿಯೂ ಇರಬೇಕಾದಲ್ಲಿ ನಮಗೆ ಈ 44 phonemeಗಳ ಮೇಲೆ ಹಿಡಿತವಿರಬೇಕು.
ಫೊನೆಟಿಕ್ಸ್‌ನ ಬಗ್ಗೆ ತಿಳುವಳಿಕೆ ಇಲ್ಲದೆ, ನಮ್ಮ ದಿನನಿತ್ಯದ ಭಾಷಾ ಬಳಕೆಯಲ್ಲಿ ನಮಗರಿವಿಲ್ಲದಂತೆಯೇ ಸುಮಾರು ತಪ್ಪುಗಳು ನುಸುಳಿರುತ್ತವೆ. ಇವುಗಳಲ್ಲಿ ಪ್ರಮುಖವಾದ ಕೆಲವನ್ನು ಈಗ ಗಮನಿಸೋಣ.
1. Abacus -ಇದು mmental mathematics ಅನ್ನು ಕಲಿಸಲು ಉಪಯೋಗಿಸುವ ಮಣಿಹಲಗೆ. ಈ ಪದವನ್ನು ಸಾಮಾನ್ಯವಾಗಿ ‘ಅಬಾಕಸ್’ ಎಂದು ಉಚ್ಚರಿಸುವುದನ್ನು ನಾವು ಕೇಳಿದ್ದೇವೆ. ಆದರೆ, ಇದರ ಸರಿಯಾದ ಉಚ್ಚಾರಣೆಯೆಂದರೆ ‘ಆಬಕಸ್’. ಈ ಪದದ ಮೊದಲನೆಯ ಅಕ್ಷರ ಇಲ್ಲಿ ‘ಆ’ ಎಂದು ಸೂಚಿಸಿದ್ದರೂ, ಇದರ ಉಚ್ಚಾರಣೆ  an, ant, apple ಎಂಬ ಪದಗಳಲ್ಲಿನ ಮೊದಲನೆಯ ಶಬ್ದದಂತೆ ಧ್ವನಿಸಬೇಕು. ಕನ್ನಡ ಅಕ್ಷರಮಾಲೆಯಲ್ಲಿ ಈ ಶಬ್ದಕ್ಕೆ ಸಮಾನವಾದ ಅಕ್ಷರ ವಿಲ್ಲದಿರುವುದರಿಂದ ಅದಕ್ಕೆ ಹತ್ತಿರವಾದ ‘ಆ’ ಎಂಬ ಅಕ್ಷರವನ್ನು ಇಲ್ಲಿ ಉಪಯೋಗಿಸಲಾಗಿದೆ.
2. Asthma - ‘ಉಬ್ಬಸ’ ಎಂಬ ಅರ್ಥವನ್ನು ಕೊಡುವ ಈ ಪದವನ್ನು ಸಾಮಾನ್ಯವಾಗಿ ‘ಆಸ್ತಮಾ’ ಎಂದು ಉಚ್ಚರಿಸುವುದನ್ನು ಕೇಳಿರಬಹುದು. ಆದರೆ ಇದನ್ನು ‘ಆಸ್ಮಾ’ ಎಂದೂ ಉಚ್ಚರಿಸಬಹುದೆಂದು ನಮ್ಮ ಗಮನದಲ್ಲಿರಬೇಕು. Abacus ಪದದ ಉಚ್ಚಾರಣೆಯಂತೆಯೇ, ‘ಆಸ್ಮಾ’ ಪದದಲ್ಲಿಯೂ, ಮೊದಲ ಶಬ್ದ  an, ant, apple ಎಂಬ ಪದಗಳ ಮೊದಲ ಶಬ್ದದಂತಿರಬೇಕು.
3. Academic - ಈ ಪದದ ಉಚ್ಚಾರಣೆ, ಸಾಮಾನ್ಯವಾಗಿ ‘ಅಕ್ಯಾಡೆಮಿಕ್’ ಎಂದು ಕೇಳಿಬರುತ್ತದೆ. ಆದರೆ ಇದರ ಸರಿಯಾದ ಉಚ್ಚಾರಣೆ ‘ಅಕಡೆಮಿಕ್’ ಎಂದು. ಈ ಪದದ ಉಚ್ಚಾರಣೆಯ ಮೊದಲನೆಯ ಸ್ವರ  an, antನ ಮೊದಲನೆಯ ಸ್ವರದಂತೆಯೇ ಇರಬೇಕೆಂದು ನಾವು ಮರೆಯಬಾರದು.
4. Athlete - ಓಟಗಾರ/ಓಟಗಾರ್ತಿ ಎಂಬ ಅರ್ಥ ಕೊಡುವ ಈ ಪದವನ್ನು ಸಾಮಾನ್ಯವಾಗಿ ‘ಅತ್ಲೆಟ್’ ಎಂದು ತಪ್ಪಾಗಿ ಉಚ್ಚರಿಸುವುದುಂಟು. ಆದರೆ, ಇದನ್ನು ‘ಅತ್ಲೀಟ್’ ಎಂದು ಉಚ್ಚರಿಸಬೇಕು.
5. Alarm - ಗಡಿಯಾರದಲ್ಲಿ  alarm ಅನ್ನು  set ಮಾಡು ಎಂದು ಹೇಳುವ ಸಂದರ್ಭದಲ್ಲಿ, ಈ ಪದವನ್ನು ಅಲಾರಮ್ ಎಂದು ಉಚ್ಚರಿಸುವುದನ್ನು ಕೇಳಿದ್ದೇವೆ. ಇದರ ಉಚ್ಚಾರಣೆ ಅಲಾಮೆಂದಿರಬೇಕು. ನಮ್ಮ ಸಂಭಾಷಣೆಯಲ್ಲಿ ಪದಗಳ ಉಚ್ಚಾರಣೆಗೆ ಸಂಬಂಧಿಸಿದಂತೆ ಇನ್ನೂ ಕೆಲವು ಉಪಯುಕ್ತ ವಿಷಯಗಳು ಹಾಗೂ ಸಾಮಾನ್ಯ ತಪ್ಪುಗಳನ್ನು ಗಮನಿಸೋಣ.
1.Suite- ಹೋಟೆಲ್ ರೂಮ್ ಎಂದು ಅರ್ಥ ಕೊಡುವ ಈ ಪದವನ್ನು ಸಾಮಾನ್ಯವಾಗಿ suit (ಒಂದು ರೀತಿಯ ಉಡುಪು) ಎಂಬ ಪದದಂತೆಯೇ ‘ಸೂಟ್’ ಎಂದು ಉಚ್ಚರಿಸುವುದನ್ನು ಕೇಳಿದ್ದೇವೆ. ಆದರೆ, ಇದರ ಉಚ್ಚಾರಣೆ ‘ಸ್ವೀಟ್’ ಎಂದಿರಬೇಕು. ssweet ಮತ್ತು suite- ಈ ಎರಡೂ ಪದಗಳಿಗೆ ಒಂದೇ ಉಚ್ಚಾರಣೆಯೆಂದು ನೆನಪಿಡಬೇಕು.
2. Film - ಈ ಪದವನ್ನು ‘ಫಿಲಮ್’ ಎಂದು ತಪ್ಪಾಗಿ ಉಚ್ಚರಿಸುವುದುಂಟು. ‘ಫಿಲ್ಮ್’ ಎನ್ನುವುದು ಈ ಪದದ ಸರಿಯಾದ ಉಚ್ಚಾರಣೆ.
3. Pronunciation- ‘ಉಚ್ಚಾರಣೆ’ ಎಂಬ ಅರ್ಥ ಕೊಡುವ ಈ ಪದವನ್ನು ತಪ್ಪಾಗಿ ‘ಪ್ರನೌನ್ಸಿಯೇಶನ್’ ಎಂದು ಉಚ್ಚರಿಸುವುದನ್ನು ನಾವು ಆಗಾಗ ಕೇಳಬಹುದು. Pronounce (ಕ್ರಿಯಾಪದ) ಎಂದ ಪದವನ್ನು ‘ಪ್ರನೌನ್ಸ್’ ಎಂದೂ, pronunciation (ನಾಮಪದ) ಎಂಬ ಪದವನ್ನು ‘ಪ್ರನನ್ಸಿಯೇಶನ್’ ಎಂದೂ ಉಚ್ಚರಿಸಬೇಕು.
4. Receipt - ಈ ಪದದ ಅರ್ಥ ರಸೀದಿ ಎಂದು. ಇದರ ಉಚ್ಚಾರಣೆ ‘ರೆಸಿಪ್ಟ್’ ಎಂದೇ ಹೆಚ್ಚಾಗಿ ಕೇಳಿಬರುತ್ತದೆ. ಆದರೆ, ಇದರ ಸರಿಯಾದ ಉಚ್ಚಾರಣೆ ‘ರಿಸೀಟ್’ ಎಂದು.  Receiptನಲ್ಲಿನ ‘-ceipt’ ಅನ್ನು seatಎಂಬ ಪದದಂತೆಯೇ ಉಚ್ಚರಿಸಬೇಕು.
5. Bruise - ‘ಬಲವಾದ ಪೆಟ್ಟಿನಿಂದಾದ ಗಾಯ’ ಎಂಬ ಅರ್ಥ ಬರುವ ಈ ಪದವನ್ನು ‘ಬ್ರೂಯಿಸ್’ ಎಂದು ಸಾಮಾನ್ಯವಾಗಿ ತಪ್ಪಾಗಿ ಉಚ್ಚರಿಸುವುದನ್ನು ಕೇಳಿದ್ದೇವೆ. ‘ಬ್ರೂಜ್’ ಸರಿಯಾದ ಉಚ್ಚಾರಣೆ.
6. Petrol- ಈ ಪದವನ್ನು ಸಮಾನ್ಯವಾಗಿ ‘ಪೆಟ್ರೋಲ್’ ಎಂದೇ ಉಚ್ಚರಿಸುತ್ತಾರೆ. ‘ಪೆಟ್ರಲ್’ಸರಿಯಾದ ಉಚ್ಚಾರಣೆ.
7. Picture- ‘ಚಿತ್ರ’ ಎಂಬ ಅರ್ಥವನ್ನು ಹೊಂದಿರುವ ಈ ಪದವನ್ನು ‘ಪಿಚ್ಚರ್’ ಎಂದು ಉಚ್ಚರಿಸುವುದುಂಟು. ಈ ಪದದಲ್ಲಿರುವ ‘c’ ಅಕ್ಷರ ಗಣನೆಗೆ ತೆಗೆದುಕೊಳ್ಳದೆ ಇದ್ದಾಗ ಆಗುವಂತಹ ಆಭಾಸವಿದು. ಇದರ ಸರಿಯಾದ ಉಚ್ಚಾರಣೆ ‘ಫಿಕ್ಚರ್’ ಎಂದು. ಈ ಉಚ್ಚಾರಣೆಯಲ್ಲಿ, ಮೊದಲನೆಯ ಸ್ವರ ಮಹಾಪ್ರಾಣವೆಂದು ಗಮನಿಸಬೇಕು.
8. etc. - ‘ಮುಂತಾದವು’ ಎನ್ನುವ ಸಂದರ್ಭದಲ್ಲಿ ಉಪಯೋಗಿಸುವಂತಹ  etc. ಎಲ್ಲರಿಗೂ ತಿಳಿದಂತಹ ಪದವೇ ಆಗಿದೆ. ಇದರ ಪೂರ್ಣರೂಪ e etcetera ಎಂದೂ, ಹಾಗೂ ಇದರ ಉಚ್ಚಾರಣೆ ‘ಎಟ್ಸೆಟ್ರ’ ಎಂದೂ ಗಮನದಲ್ಲಿರಬೇಕು. ಈ ಪದವನ್ನು ‘ಎಕ್ಸೆಟ್ರ’ ಎಂದು ತಪ್ಪಾಗಿ ಉಚ್ಚರಿಸಬಾರದು.
9. Resume - ಈ ಪದಕ್ಕೆ ಎರಡು ಅರ್ಥಗಳಿವೆ. ಮೊದಲನೆಯದು ‘ಪುನರಾರಂಭಿಸು’ ಎಂದು, ಎರಡನೆಯ ಅರ್ಥ bio-data ಎಂದು. ಪುನರಾರಂಭಿಸು ಎಂಬ ಅರ್ಥವನ್ನು ವ್ಯಕ್ತಪಡಿಸುವಾಗ ಮಾತ್ರ ಈ ಪದವನ್ನು ‘ರಿಝ್ಯೂಮ್’ (ಕ್ರಿಯಾಪದ) ಎಂದು ಉಚ್ಚರಿಸಬೇಕು.  Bio-data ಎಂಬ ಅರ್ಥವನ್ನು ಸೂಚಿಸಬೇಕಾದರೆ ಇದರ ಉಚ್ಚಾರಣೆ “ರಿಝ್ಯೂಮೆ’ (ನಾಮಪದ) ಎಂದು ಬದಲಾಗಬೇಕು.
‘ರೊಝ್ಯೂಮೆ’ ( resume’) ಎಂದು ಬರೆಯುವಾಗ ಕೊನೆಯ  ‘e’ಅಕ್ಷರದ ಮೇಲೆ, ತುಸು ಬಲಕ್ಕೆ ಬಾಗಿದ ಒಂದು ಸಣ್ಣ ಗೀರಿರುತ್ತದೆ. ಇದನ್ನು ನಾವು  Oxford Dictionary ಯಲ್ಲಿ ಗಮನಿಸಬಹುದು. ‘ರಿಝ್ಯೂಮೆ’ಗೆ ಸಮಾನವಾದ ಇನ್ನೊಂದು ಪದ  curriculum vitae(CV). ಇದರ ಉಚ್ಚಾರಣೆ ‘ಕರಿಕ್ಯುಲಮ್ ವೀಟಾಯ್’ ಎಂಬುದು ನೆನಪಿನಲ್ಲಿರಲಿ.









* ಡಿ. 1: ಅರುಣಾಚಲ ಪ್ರದೇಶದ ಮಾಜಿ ಮುಖ್ಯಮಂತ್ರಿ ಜೆ. ಗ್ಯಾಂಬ್ಲಿನ್‌ ಗುರ್‌ಗಾಂವ್‌ನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ 72 ವರ್ಷ ವಯಸ್ಸಾಗಿತ್ತು.
* ಡಿ. 2: ಭಾರತೀಯ ರಫ್ತು ಕ್ಷೇತ್ರದಲ್ಲಿ 2011 ಮತ್ತು 2012ನೇ ಸಾಲಿನಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದ ವಾಣಿಜ್ಯೋದ್ಯಮಿಗಳಿಗೆ ರಾಷ್ಟ್ರಪತಿ ಪ್ರಣವ್‌ ಮುಖರ್ಜಿ ಅವರು ‘ನಿರ್ಯಾತ ಶ್ರೀ’ ಮತ್ತು ‘ನಿರ್ಯಾತ ಬಂಧು’ ಪ್ರಶಸ್ತಿಗಳನ್ನು ನೀಡಿದರು.
* ಡಿ. 2: ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಅವರ ಜನ್ಮದಿನವನ್ನು (ಡಿಸೆಂಬರ್‌ 25) ‘ರಾಷ್ಟ್ರೀಯ ಉತ್ತಮ ಆಡಳಿತ ದಿನವನ್ನಾಗಿ’ ಆಚರಿಸಲಾಗುವುದು ಎಂದು ಕೇಂದ್ರ ಸರ್ಕಾರ ಪ್ರಕಟಿಸಿತು.
* ಡಿ. 3: ಸಿಬಿಐನ ನೂತನ ನಿರ್ದೇಶಕರನ್ನಾಗಿ ಅನಿಲ್‌ ಕುಮಾರ್‌ ಸಿನ್ಹಾ ಅವರನ್ನು ನೇಮಕ ಮಾಡಲಾಯಿತು. ಅವರು ಬಿಹಾರದ 1979ನೇ ಬ್ಯಾಚ್‌ನ ಐಎಎಸ್‌ ಅಧಿಕಾರಿ. ಈ ಹಿಂದೆ ರಂಜಿತ್‌ ಸಿನ್ಹಾ ಸಿಬಿಐ ನಿರ್ದೇಶಕರಾಗಿದ್ದರು.
* ಡಿ. 4 : ಮೇಘಾಲಯ ಸರ್ಕಾರ ಸ್ಥಳೀಯ ‘ಖಾಸಿ’ ಭಾಷೆಗೆ ಸಂವಿಧಾನಿಕ ಮಾನ್ಯತೆ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿತು. ಇದಕ್ಕಾಗಿ ಮೇಘಾಲಯ ಸರ್ಕಾರ ಸಮಿತಿಯೊಂದನ್ನು ರಚನೆ ಮಾಡಿದೆ. ಸಂವಿಧಾನದ 8ನೇ ಅನುಚ್ಛೇಧದಲ್ಲಿ ಪ್ರಾದೇಶಿಕ ಭಾಷೆಗಳ ಬಗ್ಗೆ ಮಾಹಿತಿ ಇದೆ.
* ಡಿ. 5: ಕೇಂದ್ರದ ಪರಿಸರ ಮತ್ತು ಅರಣ್ಯ ಸಚಿವಾಲಯ ಅರಬ್ಬಿ ಸಮುದ್ರದಲ್ಲಿ ಛತ್ರಪತಿ ಶಿವಾಜಿ ಅವರ ಪ್ರತಿಮೆಯನ್ನು ಪ್ರತಿಷ್ಠಾಪಿಸಲು ಅನುಮತಿ ನೀಡಿತು. ಅರಬ್ಬಿ ಸಮುದ್ರದಲ್ಲಿ ಪ್ರತಿಷ್ಠಾಪನೆ ಮಾಡಲಿರುವ ಭಾರತದ ಮೊದಲ ಪ್ರತಿಮೆ ಇದಾಗಿದೆ.
* ಡಿ. 6: ವಿಶ್ವಸಂಸ್ಥೆಯು 2015ನೇ ವರ್ಷವನ್ನು ‘ವಿಶ್ವ ಮಣ್ಣಿ’ನ ವರ್ಷವನ್ನಾಗಿ ಅಚರಿಸಲಾಗುವುದು ಎಂದು ಪ್ರಕಟಿಸಿತು. ಇದೇ ವೇಳೆ ಡಿಸೆಂಬರ್‌ 6ರಂದು ಪ್ರತಿವರ್ಷ ಮಣ್ಣಿನ ದಿನವನ್ನಾಗಿ ಅಚರಿಸಲಾಗುವುದು ಎಂದು ಸಹ ಘೋಷಿಸಲಾಯಿತು.
* ಡಿ. 8: ದಕ್ಷಿಣ ಆಫ್ರಿಕಾದ ಕೇಪ್‌ಟೌನ್‌ನಲ್ಲಿ ನಡೆದ ಅಂಧರ ವಿಶ್ವಕಪ್‌ ಕ್ರಿಕೆಟ್‌ ಟೂರ್ನಿಯಲ್ಲಿ ಭಾರತೀಯ ಅಂಧರ ತಂಡ ಪಾಕಿಸ್ತಾನವನ್ನು ಮಣಿಸಿ ವಿಶ್ವಕಪ್‌ ಗೆದ್ದುಕೊಂಡಿತು. ಇದು ನಾಲ್ಕನೇ ವಿಶ್ವಕಪ್‌ ಟೂರ್ನಿ ಆಗಿದೆ.
* ಡಿ. 9: ಭಾರತೀಯ ಮಾಜಿ ಹಾಕಿ ಆಟಗಾರ ನಂದಿ ಸಿಂಗ್‌ ನವದೆಹಲಿಯಲ್ಲಿ ನಿಧನರಾದರು. ಅವರಿಗೆ 88 ವರ್ಷ ವಯಸ್ಸಾಗಿತ್ತು. ನಂದಿ ಸಿಂಗ್‌ ಅವರು ಭಾರತ ಒಲಿಪಿಂಕ್ಸ್‌ನಲ್ಲಿ ಎರಡು ಬಾರೀ ಚಿನ್ನದ ಪದಕ ಗೆದ್ದ ತಂಡದಲ್ಲಿದ್ದರು.
* ಡಿ. 10: ನೊಬೆಲ್‌ ಪುರಸ್ಕೃತ ವಿಜ್ಞಾನಿ ಜೇಮ್ಸ್‌ ಡಿ ವ್ಯಾಟ್ಸನ್‌ ಅವರು ತಮ್ಮ ನೊಬೆಲ್‌ ಪದಕವನ್ನು 40.8 ಲಕ್ಷ ಅಮೆರಿಕನ್‌ ಡಾಲರ್‌ಗೆ ಮಾರಾಟ ಮಾಡಿದರು. ಈ ಹಣದಿಂದ ಡಿಎನ್‌ಎ ಕುರಿತು ಸಂಶೋಧನೆ ನಡೆಸುವುದಾಗಿ ಅವರು ಪ್ರಕಟಿಸಿದರು.
* ಡಿ. 11: ವಿಡಿಯೊ ಗೇಮ್ಸ್‌ ಜನಕ ಎಂದೇ ಖ್ಯಾತಿಯಾಗಿರುವ ರಾಲ್ಫ್‌ ಹೆನ್ರಿ ಬೇರ್‌ ಅವರು ಡಿಸೆಂಬರ್‌ 5ರಂದು ಲಂಡನ್‌ನಲ್ಲಿ ನಿಧನರಾದರು. ಅವರ ಅಂತ್ಯಕ್ರಿಯೆಯನ್ನು ಮ್ಯಾಂಚೆಸ್ಟರ್‌ನಲ್ಲಿ ನೇರವೇರಿಸಲಾಯಿತು.
* ಡಿ. 12: ಭಾರತದಲ್ಲಿ ಕ್ಸಿಯಾಮಿ ಮೊಬೈಲ್‌ ಫೋನ್‌ಗಳನ್ನು ಮಾರಾಟ ಮಾಡುವುದರ ಮೇಲೆ ದೆಹಲಿ ಹೈಕೋರ್ಟ್‌ ನಿಷೇಧ ಹಾಕಿತು. ಎರಿಕ್ಸ್‌ನ್‌ ಕಂಪೆನಿಯೊಂದಿಗಿನ ಪೇಟೆಂಟ್‌ ವಿಷಯವಾಗಿ ಈ ತೀರ್ಪು ನೀಡಿತು.
* ಡಿ. 13: ಬಾಲಿವುಡ್‌ನ ಹಿನ್ನೆಲೆ ಗಾಯಕಿ ಆಶಾ ಭೋಂಸ್ಲೆ ಅವರಿಗೆ ದುಬೈ ಇಂಟರ್‌ನ್ಯಾಷನಲ್‌ ಫಿಲಂ ಫೆಸ್ಟಿವಲ್‌ ಅಕಾಡೆಮಿ ‘ಜೀವಮಾನ ಶ್ರೇಷ್ಠ’ ಪ್ರಶಸ್ತಿ ನೀಡಿ ಗೌರವಿಸಿತು.
* ಡಿ. 15: 2014 ನೇ ಸಾಲಿನ ವಿಶ್ವಸುಂದರಿ ಕಿರೀಟವನ್ನು ದಕ್ಷಿಣ ಆಫ್ರಿಕಾದ ರೊಲೆನ್‌ ಸ್ಟ್ರಾಸ್‌  ಮುಡಿಗೇರಿಸಿಕೊಂಡರು. ಈ ವಿಶ್ವಸುಂದರಿ ಸ್ಪರ್ಧೆ ಲಂಡನ್‌ನಲ್ಲಿ ನಡೆದಿತ್ತು.
* ಡಿ. 17: ಕನ್ನಡ, ತೆಲುಗು ಮತ್ತು ತಮಿಳು ಸಿನಿಮಾಗಳ ಸಂಗೀತ ನಿರ್ದೇಶಕ ‘ಚಕ್ರಿ’ ನಿಧನರಾದರು. ಅನಾರೋಗ್ಯದಿಂದ ಬಳಲುತ್ತಿದ್ದ ಅವರಿಗೆ 48 ವರ್ಷ ವಯಸ್ಸಾಗಿತ್ತು. ಸುಮಾರು 15 ವರ್ಷಗಳಿಂದ ಸಿನಿಮಾರಂಗದಲ್ಲಿ ದುಡಿಯುತ್ತಿದ್ದರು.
* ಡಿ. 16: ಭಾರತದ ವಿಶ್ವನಾಥನ್‌ ಆನಂದ್‌ ಇಂಗ್ಲೆಡ್‌ನಲ್ಲಿ ನಡೆದ ‘ಲಂಡನ್‌ ಕ್ಲಾಸಿಕ್‌’ ಚೆಸ್‌ ಟ್ರೋಫಿಯನ್ನು ಗೆದ್ದುಕೊಂಡರು. ಈ ಪಂದ್ಯದಲ್ಲಿ ಬ್ರಿಟಿಷ್‌ ಗ್ರ್ಯಾಂಡ್‌ ಮಾಸ್ಟರ್‌ ಮೈಕಲ್‌ ಆ್ಯಡಮ್ಸ್‌ ಪರಾಭವಗೊಂಡರು
* ಡಿ. 18: ತೆಲಂಗಾಣ ರಾಜ್ಯ ಲೋಕಸೇವಾ ಅಯೋಗದ (ಟಿಎಸ್‌ಪಿಎಸ್‌ಸಿ) ಅಧ್ಯಕ್ಷರನ್ನಾಗಿ ಹಿರಿಯ ಪತ್ರಕರ್ತ ಘಂಟಾ ಚಕ್ರಪಾಣಿ ಅವರನ್ನು ನೇಮಕ ಮಾಡಲಾಯಿತು. ಇವರು ಟಿಎಸ್‌ಪಿಎಸ್‌ಸಿಯ ಮೊದಲ ಅಧ್ಯಕ್ಷರು ಹೌದು.
* ಡಿ.19: ಪಾಕಿಸ್ತಾನ ಮೂಲದ ಹಿರಿಯ ಕವಿ ಇಮ್ತಿಯಾಜ್‌ ಧರ್ಕರ್ ಅವರ ಇತ್ತೀಚಿನ ಕವನ ಸಂಕಲನ ‘ಓವರ್‌ ದಿ ಮೂನ್‌ ’ ಕೃತಿಗೆ ಬ್ರಿಟನ್‌ನ ‘ಕ್ವೀನ್ಸ್‌ ಗೊಲ್ಡ್‌ ಮೆಡಲ್‌’ ಪ್ರಸಸ್ತಿ ಲಭಿಸಿದೆ.
* ಡಿ. 20: ಮಂಗಳ ಗ್ರಹದ ಮೇಲೆ ನೀರು ಇರುವುದಾಗಿ ನಾಸಾ ಪ್ರಕಟಿಸಿತು. ಇದಕ್ಕೆ ಪುರಾವೆಯಾಗಿ ಸಾರ್ಸ್‌ ಸೆರೆ ಹಿಡಿದಿರುವ ಹಿಮದ ಚಿತ್ರಗಳನ್ನು ನಾಸಾ ಬಿಡುಗಡೆ ಮಾಡಿತು.
* ಡಿ. 22: ವಿಶ್ವಕಪ್‌ ಕಬ್ಬಡಿ ಟೂರ್ನಿಯಲ್ಲಿ ಭಾರತದ ಪುರುಷ ಮತ್ತು ಮಹಿಳಾ ತಂಡ ಟ್ರೋಫಿಯನ್ನು ಗೆದ್ದಿತು. ಫೈನಲ್‌ ಪಂದ್ಯಗಳಲ್ಲಿ  ಪುರುಷರ ತಂಡ ನ್ಯೂಜಿಲೆಂಡ್‌ ತಂಡವನ್ನು ಹಾಗೂ ಮಹಿಳಾ ತಂಡ ಪಾಕಿಸ್ತಾನ ತಂಡವನ್ನು ಮಣಿಸಿತು.
* ಡಿ. 23: ದಕ್ಷಿಣ ಭಾರತದ ಹೆಸರಾಂತ ಚಿತ್ರ ನಿರ್ದೇಶಕ ಮತ್ತು ನಿರ್ಮಾಪಕ ಕೆ. ಬಾಲಚಂದರ್‌ ಹೃದಯಾಘಾತ ದಿಂದ ಚೆನ್ನೈನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
                                                                                                                                   










Precis ಸರಳ ಸೂತ್ರಗಳು:

ಪಠ್ಯವೊಂದನ್ನು ಅದರ ಸಾರಸಂಗ್ರಹಕ್ಕೆ ಇಳಿಸುವ ಕ್ರಿಯೆ ಒಂದು ಅತಿ ಉಪಯುಕ್ತವಾದ ಕಲೆ. Prprecis–writing ಅದನ್ನು ಕಲಿಸುತ್ತದೆ. Precis ಎಂಬುದು ಫ್ರೆಂಚ್ ಭಾಷೆಯಿಂದ ಇಂಗ್ಲಿಷ್‌ಗೆ ಬಂದಿರುವ ಪದವಾಗಿದ್ದು, ಇದನ್ನು pray–see (ಪ್ರೇಯ್ಸೀ) ಎಂದು ಉಚ್ಚರಿಸುತ್ತೇವೆ. ಇದಕ್ಕೆ ಹತ್ತಿರವಾದ ಇಂಗ್ಲಿಷ್ ಪದವೆಂದರೆ precise (ಪ್ರಿಸೈಜ್) ಹಾಗೂ ಇದರ ಅರ್ಥ ‘ಸಾರಾಂಶ’ (summary). ಇದೇ ಅರ್ಥಕೊಡುವ ಇನ್ನೂ ಕೆಲವು ಇಂಗ್ಲಿಷ್ ಪದಗಳೆಂದರೆ substance, abridgement, abstract, condensed ಮುಂತಾದವುಗಳು.
Precis–writinggಗೂ paraphrasingಗೂ ಕೆಲವು ಮುಖ್ಯ ವ್ಯತ್ಯಾಸಗಳಿವೆಎಂಬುದನ್ನು ಗಮನಿಸಬೇಕು. paraphrasing ನಲ್ಲಿ ಯಾವುದೇ ಪಠ್ಯದ ಮುಖ್ಯವಿಷಯವನ್ನಷ್ಟೇ ಅಲ್ಲದೆ, ಅದರಲ್ಲಿರುವ ಎಲ್ಲಾ ವಿವರಗಳನ್ನೂ ಸರಳವಾಗಿ ಕೊಡಬೇಕಾಗುತ್ತದೆ. ಆದ್ದರಿಂದ, paraphrase ಪಠ್ಯದ ಗಾತ್ರದಷ್ಟೇ ದೊಡ್ಡದಾಗಿರುತ್ತದೆ. ಕೆಲವು ಬಾರಿ ಪಠ್ಯಕ್ಕಿಂತ ದೊಡ್ಡದಾಗಿಯೂ ಇರಬಹುದು. ಆದರೆ, Precis–writingನಲ್ಲಿ ಹಾಗಾಗುವುದಿಲ್ಲ.
ಸರಿಸುಮಾರಾಗಿ, ಮೂಲಪಠ್ಯದ ಮೂರನೇ ಒಂದು ಭಾಗದಷ್ಟು ಮಾತ್ರ ಅದರ precis ಇರುತ್ತದೆ. ಏಕೆಂದರೆ, Precis writingನಲ್ಲಿ, ಮೂಲ ಪಠ್ಯದ ಸಾರಾಂಶಗಳು (essence) ಮಾತ್ರ ದಾಖಲಾಗಿರುತ್ತವೆ. ಅದರಲ್ಲಿರುವ ಉದಾಹರಣೆಗಳು, ವಿವರಣೆಗಳು, ದೃಷ್ಟಾಂತಗಳನ್ನೆಲ್ಲಾ precisನಲ್ಲಿ ಕೊಡುವ ಅಗತ್ಯವಿಲ್ಲ.
ಈಗ ಪರಿಣಾಮಕಾರಿ Precis–writingಗೆ ಬೇಕಾದ ಕೆಲವು ಸರಳ ಸೂತ್ರಗಳನ್ನು ತಿಳಿದುಕೊಳ್ಳೋಣ. ಯಾವುದೇ ಪಠ್ಯದ precisಯನ್ನು ಬರೆಯಬೇಕಾದಾಗ, ಮೂರು ನಿಯಮಗಳನ್ನು ಖಂಡಿತವಾಗಿ ಪಾಲಿಸಬೇಕು–  reading the paragraph, writing the precis, revising.
ಮೊದಲಿಗೆ, ನಮ್ಮ ಮುಂದಿರುವ ಪಠ್ಯವನ್ನು ಒಂದು ಅಥವಾ ಎರಡು ಬಾರಿ ಓದಿ ಅದರಲ್ಲಿರುವ ಮುಖ್ಯ ಉದ್ದೇಶವನ್ನು ಅರ್ಥಮಾಡಿಕೊಳ್ಳಬೇಕು. ನಾವು ಓದುವಾಗ, ನಮಗೆ ನಾವು ಕೆಲವು ಪ್ರಶ್ನೆಗಳನ್ನು ಹಾಕಿಕೊಳ್ಳಬೇಕು.
1.  ನಾನು ಏನನ್ನು ಓದುತ್ತಿದ್ದೇನೆ?
2.  ಪಠ್ಯದಲ್ಲಿ ಲೇಖಕರು ಏನನ್ನು ಹೇಳಬಯಸುತ್ತಿದ್ದಾರೆ?
3.  ಮುಖ್ಯ ವಿಷಯವನ್ನು ಯಾವ ರೀತಿಯಲ್ಲಿ ಹೇಳುತ್ತಿದ್ದಾರೆ?
4.  ಅದರಲ್ಲಿರುವ ಮುಖ್ಯಾಂಶಗಳನ್ನು ಕೆಲವೇ ಪದಗಳಲ್ಲಿ ಹೇಳಲು ಸಾಧ್ಯವೇ?
ಈ ಪ್ರಶ್ನೆಗಳನ್ನು ಮನಸಿನಲ್ಲಿಟ್ಟುಕೊಂಡು ಓದಿದ ಮೇಲೆ, ಪಠ್ಯದಲ್ಲಿರುವ ಮುಖ್ಯಾಂಶವನ್ನು ಸೂಚಿಸುವ ವಾಕ್ಯಗಳಾವುವು ಹಾಗೂ ಅವಕ್ಕೆ ಪೂರಕವಾದ ಅಂಶಗಳನ್ನು (supporting details) ಸೂಚಿಸುವ ವಾಕ್ಯಗಳಾವುವು ಎಂಬುದನ್ನು ಸ್ಪಷ್ಟವಾಗಿ ಗುರುತಿಸಬೇಕು. ಆನಂತರ, ಆ ಪಠ್ಯದ ಮುಖ್ಯಾಂಶವನ್ನು ಸೂಚಿಸುವ ಒಂದು ತಲೆಬರಹವನ್ನು (title) ಕೊಡಬೇಕು.
ಇದಾದ ನಂತರ, precis ಯನ್ನು ಬರೆಯಲು ಪ್ರಾರಂಭಿಸುವುದಕ್ಕೆ ಮುಂಚೆ ಪಠ್ಯದಲ್ಲಿರುವ ಪದಗಳ ಸಂಖ್ಯೆಯನ್ನು ತಿಳಿದು, ಅದರ ಮೂರನೇ ಒಂದು ಭಾಗವೆಂದರೆ, ಎಷ್ಟು ಪದಗಳೆಂಬುದು ನಮ್ಮ ಮನಸಿನಲ್ಲಿರಬೇಕು. ಈಗ ಪಠ್ಯದ ಮುಖ್ಯವಾದ ಅಂಶಗಳನ್ನು ಒಂದೆಡೆ ಬರೆದುಕೊಳ್ಳಬೇಕು. ಇಲ್ಲಿ ಮುಖ್ಯಾಂಶಕ್ಕೆ ಸಂಬಂಧಿಸಿದ ಉದಾಹರಣೆಗಳು ಹಾಗೂ ವಿವರಣೆಗಳನ್ನು ಸೇರಿಸಬಾರದು. ನಾವು ಬರೆಯುವ precisಯಲ್ಲಿ ನಮ್ಮದೇ ಆದ ಸ್ವಂತ ವಾಕ್ಯಗಳಿರಬೇಕೇ ಹೊರತು ಪಠ್ಯದಲ್ಲಿರುವ ವಾಕ್ಯಗಳಲ್ಲ.
ಈ ರೀತಿಯಾಗಿ ಬರೆದ ಕರಡುಪ್ರತಿ (rough draft) ಯನ್ನು ಅಂತಿಮವಾಗಿ ಒಮ್ಮೆ ಪರಿಷ್ಕರಿಸಬೇಕು. ಈ ನಿಟ್ಟಿನಲ್ಲಿ, ನಾವು ಮೂಲಪಠ್ಯದ ಜೊತೆ ನಮ್ಮ precis ಯನ್ನು ಹೋಲಿಸಿ, ಮೂರನೇ ಒಂದು ಭಾಗಕ್ಕೆ ಇಳಿಸಿದ್ದೇವೆಯೇ ಹಾಗೂ ಎಲ್ಲಾ ಮುಖ್ಯಾಂಶಗಳನ್ನು ಸೇರಿಸಿದ್ದೇವೆಯೇ ಎಂದು ನೋಡಿ, spelling, punctuation, grammar ಅನ್ನು ಒಮ್ಮೆ ಪರಿಶೀಲಿಸಿ, ನಮ್ಮ precisಗೆ ಅಂತಿಮ ರೂಪವನ್ನು ಕೊಡಬೇಕು. ಇದರಲ್ಲಿ ನಮ್ಮ ಸ್ವಂತ ಅಭಿಪ್ರಾಯ, ಅನಿಸಿಕೆಗಳಿಗೆ ಎಡೆಯಿಲ್ಲ ಎಂಬುದನ್ನು ನೆನಪಿನಲ್ಲಿಡಬೇಕು. ಈ ಎಲ್ಲಾ ಅಂಶಗಳನ್ನೊಳಗೊಂಡ Precis–writingನ ಒಂದು ಉದಾಹರಣೆ ಮತ್ತುವಿಶ್ಲೇಷಣೆಯನ್ನು ಮುಂದೆ ನೋಡೋಣ.
Precis- ಒಂದು ಮಾದರಿ
ಈ ಕೆಳಗಿನ ಮೂಲಪಠ್ಯ ಮತ್ತದರ Precis ಯನ್ನು ನೋಡಿ.
Today there are 7 billion people in the world. Fifty years ago only about 2000 million people lived in it. If earth’s population were evenly distributed over its land surface, there would be about 1500 persons in every square mile.
But Earth has vast areas of forest, mountains and desert which are almost totally uninhabited. On the other hand, it has great cities each with millions of people concentrated in a few square miles.
To feed the fast growing population of our earth, scientists and planners have to discover new ways to produce more. One possible way is to bring more uncultivated land into food production. This can be done only in places where there is lot of land not used for productive purposes. In many places it is no longer possible, as all the arable land is already cultivated.
A second way is to make use of new types of seeds to produce more. Already a number of new varieties of paddy and wheat have been developed in different parts of the world. India is one of the countries where a lot of useful work has been done in the field of agriculture research.
Title: Growing Population and the Food ChallengeDuring the last fifty years, the world population has increased from 2000 million to 7 billion. It is unevenly distributed with millions of people concentrated in a few big cities. Scientists in India and abroad are, therefore, busy with agriculture research to find out new methods of increased food production to feed them all and they have already developed many new varieties of paddy and wheat.
ಇಲ್ಲಿನ ಮೂಲಪಠ್ಯದಲ್ಲಿ 195 ಪದಗಳಿವೆ ಹಾಗೂ ಅದರ precis ನಲ್ಲಿ ಮೂಲಪಠ್ಯದ ಸರಿಸುಮಾರು ಮೂರನೇ ಒಂದು ಭಾಗ ಎಂದರೆ 66 ಪದಗಳಿವೆ. ಮೂಲಪಠ್ಯವನ್ನು ಸೂಕ್ಷ್ಮವಾಗಿ ಗಮನಿಸಿದಾಗ, ಮೊದಲನೇ ಪ್ಯಾರಾದಲ್ಲಿ ಪ್ರಪಂಚದ ಜನಸಂಖ್ಯೆಯನ್ನು ಕುರಿತ ಅಂಕಿಅಂಶಗಳು ಹಾಗೂ ಅದರ ವಿವರಣೆಯನ್ನು ಹೆಚ್ಚಾಗಿ ಕಾಣಬಹುದು.
ಹಾಗಾಗಿ, precisನಲ್ಲಿ ಆ ವಿವರಣೆಗಳನ್ನು ಬಿಡಲಾಗಿದೆ. ಎರಡನೆಯ ಪ್ಯಾರಾದಲ್ಲಿ, ಬೆಳೆಯುತ್ತಿರುವ ಜನಸಂಖ್ಯೆಗಾಗಿ ಬೆಳೆಯ ಉತ್ಪತ್ತಿಯನ್ನು ಹೆಚ್ಚು ಮಾಡುವ ವಿಧಾನಗಳನ್ನು ವಿವರಿಸಲಾಗಿದೆ. ಹಾಗಾಗಿ, precis ನಲ್ಲಿ ವಿವರಣೆಗಳನ್ನು ಬಿಟ್ಟು, ಮುಖ್ಯಾಂಶವನ್ನು ಮಾತ್ರ ಕೊಡಲಾಗಿದೆ

ಆತಂಕದಿಂದ ದೂರವಿದ್ದರೆ ಅಂಕ:

ಈಗಾಗಲೆ ಎಸ್ಸೆಸ್ಸೆಲ್ಸಿ, ದ್ವಿತೀಯ ಪಿ.ಯು.ಸಿ. ಪಾಠ-ಪ್ರವಚನಗಳು ಪೂರ್ಣಗೊಂಡಿದ್ದು ಮುಖ್ಯ ಪರೀಕ್ಷೆಗೆ ತಯಾರಾಗುವ ನಿಟ್ಟಿನಲ್ಲಿ ಪೂರ್ವಭಾವಿ ಪರೀಕ್ಷೆಗಳು ನಡೆಯುತ್ತಿವೆ. ಎರಡನೆ ಪಿ.ಯು.ಸಿ.ಗೆ ಮಾರ್ಚ್ 12ರಿಂದ ಮತ್ತು ಎಸ್ಸೆಸ್ಸೆಲ್ಸಿಗೆ ಮಾರ್ಚ್ 30ರಿಂದ ಅಂತಿಮ ಪರೀಕ್ಷೆಗಳು ಆರಂಭವಾಗಲಿವೆ. ಅದರಲ್ಲೂ ಹತ್ತನೆ ತರಗತಿ ರಾಜ್ಯ ಪಠ್ಯಕ್ರಮದ ವಿದ್ಯಾರ್ಥಿಗಳಿಗೆ ಈ ವರ್ಷ ಹೊಸ ಪಠ್ಯದ ಜೊತೆಯಲ್ಲೆ ಪರೀಕ್ಷೆಯ ಮಾದರಿಯೂ ಬದಲಾಗಿದೆ.
ಸಮಗ್ರ ಮತ್ತು ನಿರಂತರ ಮೌಲ್ಯಮಾಪನ(ಸಿ.ಸಿ.ಇ.) ಎಂಬ ಈ ಹೊಸ ಪದ್ಧತಿಯಲ್ಲಿ ಪ್ರತಿ ವಿಷಯದ ಒಟ್ಟು ಅಂಕಗಳಲ್ಲಿ ಶೇ.20ಕ್ಕೆ ಆಂತರಿಕ ಮೌಲ್ಯಮಾಪನ ನಡೆಯಲಿದ್ದು, ಉಳಿದ ಶೇ.80 ಅಂಕಗಳಿಗೆ ಬಾಹ್ಯ ಪರೀಕ್ಷೆಯಿರುತ್ತದೆ. ವಿದ್ಯಾರ್ಥಿ ಜೀವನದ ಅತಿ ಮುಖ್ಯವಾದ ಈ ಪರೀಕ್ಷೆಗೆ ಸಿದ್ಧರಾಗುತ್ತಿರುವ ಮಕ್ಕಳಿಗೆ ಆತಂಕ ಆವರಿಸುತ್ತಿದೆ.
 ಬದುಕಿನ ಮಹತ್ತರ ತಿರುವಿಗೆ ಕಾರಣವಾಗುವ ಪರೀಕ್ಷಾ ಫಲಿತಾಂಶ ಸಹಜವಾಗಿ ವಿದ್ಯಾರ್ಥಿಗಳಲ್ಲಿ ವಿಪರೀತ ಒತ್ತಡ ಉಂಟುಮಾಡುತ್ತಿದೆ. ಹೆತ್ತವರ ಅತಿಯಾದ ನಿರೀಕ್ಷೆ, ಭವಿಷ್ಯದ ಚಿಂತೆ, ಬಾಹ್ಯ ಮತ್ತು ಆಂತರಿಕ ಒತ್ತಡಗಳು ವಿದ್ಯಾರ್ಥಿಗಳ ಮನಸ್ಸಲ್ಲಿ ಪರೀಕ್ಷೆ ಎಂದರೆ ಸಾಕು ಭಯದ ಅಲೆಯನ್ನೆಬ್ಬಿಸುತ್ತಿವೆ! ಸರಿಯಾದ ಕ್ರಮದಲ್ಲಿ, ಸಕಾರಾತ್ಮಕ ಮನೋಭಾವನೆಯ ಜೊತೆಯಲ್ಲಿ ನಿರ್ದಿಷ್ಟ ಗುರಿಯೊಂದಿಗೆ ಅಭ್ಯಾಸ ಮಾಡಿದಾಗ ಆತಂಕ ದೂರವಾಗಿ ಉತ್ತಮ ಅಂಕಗಳನ್ನು ಗಳಿಸಲು ಸಾಧ್ಯ.
ನಿಮ್ಮ ಅಭ್ಯಾಸ ಹೀಗಿರಲಿ:
ಓದುವ ಸ್ಥಳ ನಿಶ್ಯಬ್ಧವಾಗಿರಲಿ. ಮನೆಯಲ್ಲಿನ ಟೀವಿ, ರೇಡಿಯೊ ಶಬ್ಧ ನಿಮ್ಮ ಏಕಾಗ್ರತೆಗೆ ಭಂಗ ತಾರದಂತಿರಲಿ. ಓದುವ ಕೊಠಡಿಯಲ್ಲಿ ಗಾಳಿ, ಬೆಳಕು ಧಾರಾಳವಾಗಿರಲಿ. ಹೊರಗಿನ ದೃಶ್ಯಗಳು ನಿಮ್ಮ ಓದಿಗೆ ಅಡ್ಡಿಯಾಗುವುದನ್ನು ತಪ್ಪಿಸಲು ಕಿಟಕಿಗೆ ಬೆನ್ನು ಮಾಡಿ ಕೂರುವುದು ಒಳ್ಳೆಯದು. ಹಾಸಿಗೆಯಲ್ಲಿ, ನೆಲದಲ್ಲಿ ಮಲಗಿ ಓದುವುದು ಒಳ್ಳೆಯದಲ್ಲ. ಇದರಿಂದ ಏಕಾಗ್ರತೆಗೆ ತೊಂದರೆಯಾಗುತ್ತದೆ, ಅಲ್ಲದೆ ನಿದ್ದೆಯೂ ಆವರಿಸಬಹುದು.
ಓದುವಾಗ ಉತ್ಸಾಹವಿರಲಿ. ಆತ್ಮವಿಶ್ವಾಸವಿರಲಿ. ಈ ವಿಷಯ ತುಂಬಾ ಕಷ್ಟ, ಅರ್ಥವಾಗುವುದಿಲ್ಲ, ನನ್ನ ನೆನಪಿನಲ್ಲಿ ಉಳಿಯುವುದಿಲ್ಲ....ಎಂಬ ನಕಾರಾತ್ಮಕ ಯೋಚನೆಗಳು ಬೇಡ. ಕಷ್ಟಪಡದೆ ಇಷ್ಟಪಟ್ಟು ಅಭ್ಯಾಸ ಮಾಡಿದರೆ ಎಲ್ಲವೂ ಸುಲಭ, ಸಲೀಸು. ಉತ್ತರ ಗೊತ್ತಾಗದಿದ್ದರೆ ಸ್ನೇಹಿತರನ್ನೋ, ಶಿಕ್ಷಕರನ್ನೋ ಕೇಳಿ ಪರಿಹಾರ ಕಂಡುಕೊಳ್ಳಬೇಕು. ಇದಕ್ಕೆ ಯಾವುದೇ ಹಿಂಜರಿಕೆ ಬೇಡ.
ಒಮ್ಮೆ ಓದಲು ಕುಳಿತರೆ ಸತತವಾಗಿ ಮುಕ್ಕಾಲು ಗಂಟೆಯಿಂದ ಒಂದು ಗಂಟೆವರೆಗೂ ಓದಿ. ನಂತರ ಐದು ನಿಮಿಷ ವಿರಾಮಕೊಟ್ಟು ಮತ್ತೆ ಅಭ್ಯಾಸ ಮಾಡಲು ಆರಂಭಿಸಿ.ನಮ್ಮ ದೇಹದಲ್ಲಿಉತ್ಪತ್ತಿಯಾಗುವ ಉತ್ಸಾಹ, ಏಕಾಗ್ರತೆಯನ್ನು ಹೆಚ್ಚಿಸುವ ರಾಸಾಯನಿಕಗಳು ಸುಮಾರು ಮುಕ್ಕಾಲು ಗಂಟೆ ಮಾತ್ರ ರಕ್ತದಲ್ಲಿರುವುದರಿಂದ ಪುನಃ ಅವುಗಳ ಉತ್ಪತ್ತಿಗೆ ಈ ಪುಟ್ಟ ವಿಶ್ರಾಂತಿ ಅತೀ ಅಗತ್ಯ. ಹೀಗೆ ಮಾಡುವುದರಿಂದ ಮೆದುಳಿನ ತಾಜಾತನ ಹೆಚ್ಚಿ ನೆನಪಿನ ಕ್ರಿಯೆಗೆ ಸಹಕಾರಿಯಾಗುತ್ತದೆ.
ಓದುವಾಗ ಮುಖ್ಯ ಅಂಶಗಳು, ಸೂತ್ರಗಳು, ಪ್ರಮೇಯಗಳು, ಪ್ರಯೋಗಗಳು, ನಕ್ಷೆಗಳನ್ನು ಬರೆದಿಟ್ಟುಕೊಳ್ಳಬೇಕು. ಈ ಅಂಶಗಳ ಮೇಲೆ ಆಗಾಗ್ಗೆ ಗಮನಹರಿಸುವುದರಿಂದ ಅಭ್ಯಾಸದ ಪುನಾರಾವರ್ತನೆಯಾಗಿ ನೆನಪಿನ ಕೋಶಗಳಲ್ಲಿ ದಾಖಲಾಗಲು ಸುಲಭವಾಗುತ್ತದೆ.ವಿದ್ಯಾರ್ಥಿಗೆ ಪ್ರತಿದಿನ ಏಳರಿಂದ ಎಂಟುಗಂಟೆಗಳ ನಿದ್ದೆ ಅವಶ್ಯಕ.
ಪರೀಕ್ಷಾ ವೇಳೆಯಲ್ಲಿ ನಿದ್ದೆಯ ಅವಧಿಯನ್ನು ಕಡಿಮೆ ಮಾಡುವುದರಿಂದ ನೆನಪಿನ ಶಕ್ತಿ ಕುಂದುತ್ತದೆ. ಕಣ್ಣು ನೋವು, ಕಣ್ಣಲ್ಲಿ ನೀರು ಸುರಿಯುವುದು, ತಲೆನೋವು ಮುಂತಾದ ದೈಹಿಕ, ಮಾನಸಿಕ ತೊಂದರೆಗಳು ಕಾಣಿಸಿಕೊಳ್ಳುತ್ತವೆ. ಚೆನ್ನಾಗಿ ನಿದ್ದೆ ಮಾಡುವುದರಿಂದ ಮೆದುಳು ತಾಜಾಗೊಂಡು ದೈಹಿಕ, ಮಾನಸಿಕ ಆರೋಗ್ಯ ವೃದ್ದಿಸುತ್ತದೆ.ಮಾದರಿ ಪ್ರಶ್ನೆ ಪತ್ರಿಕೆ ಮತ್ತು ಹಳೇ ಪ್ರಶ್ನೆ ಪತ್ರಿಕೆಗಳನ್ನು ಬಿಡಿಸಿ. ಇದರಿಂದ ಆತ್ಮವಿಶ್ವಾಸ ಹೆಚ್ಚುವುದಲ್ಲದೆ ಪ್ರಶ್ನೆಗಳ ಮಾದರಿ ತಿಳಿಯುತ್ತದೆ.
ರಾತ್ರಿ ಹೊತ್ತು ಓದುವುದು ಅಥವಾ ಬೆಳಗಿನ ಜಾವ ಓದುವುದು ಅವರವರ ಅಭ್ಯಾಸಕ್ಕೆ ಬಿಟ್ಟಿದ್ದು. ಯಾರಿಗೆ ಯಾವ ಸಮಯ ಅನುಕೂಲವೋ ಹಾಗೆ ಮಾಡಬಹುದು. ಆದರೂ ಮುಂಜಾನೆ ಹೊತ್ತು ಪ್ರಶಾಂತವಾಗಿರುವುದರಿಂದ ಹಾಗೂ ನಿದ್ದೆಯ ನಂತರ ಮೆದುಳು ಪ್ರಫುಲ್ಲವಾಗಿರುವುದರಿಂದ ಬೆಳಗಿನ ಓದು ಒಳ್ಳೆಯದು.
ಬೆಳಗಿನ ಉಪಾಹಾರ ಸೇವನೆಯು  ಅಭ್ಯಾಸವನ್ನು ಚುರುಕುಗೊಳಿಸಿ ಬೆಳವಣಿಗೆಗೆ ಸಹಕರಿಸುತ್ತದೆ. ರಕ್ತದಲ್ಲಿ ಸಕ್ಕರೆಯ ಅಂಶ ಹೆಚ್ಚಿಸಿ ಆಸಕ್ತಿಯಿಂದ ಪಾಠ ಕೇಳಲು, ಹೊಸ ವಿಚಾರಗಳನ್ನು ಸುಲಭವಾಗಿ ನೆನಪಿಟ್ಟುಕೊಳ್ಳಲು ಸಹಕಾರಿ. ಹಾಗೆಯೇ ಮಾನಸಿಕ ಬೆಳವಣಿಗೆಗೂ ಇದು ಅವಶ್ಯಕ. ಆದ್ದರಿಂದ ಬೆಳಗಿನ ತಿಂಡಿಯನ್ನು ಚೆನ್ನಾಗಿ ತಿನ್ನುವ ಅಭ್ಯಾಸವನ್ನು ವಿದ್ಯಾರ್ಥಿಗಳು ರೂಢಿಸಿಕೊಳ್ಳಬೇಕು.
ಪರೀಕ್ಷಾ ವೇಳೆಯಲ್ಲಿ ತಿನ್ನುವ ಆಹಾರದ ಬಗ್ಗೆ ವಿಶೇಷ ಗಮನವಿರಲಿ. ಸುಲಭವಾಗಿ ಜೀರ್ಣವಾಗುವ ಸರಳ, ಸಾತ್ವಿಕ ಆಹಾರ ಸೇವನೆ ಒಳ್ಳೆಯದು. ಹೆಚ್ಚಿಗೆ ಮಸಾಲೆ ಹಾಕಿದ, ಅತಿ ಖಾರದ, ಹೆಚ್ಚು ಸಿಹಿಯಾದ ಅಥವಾ ಜಿಡ್ಡು ಜಾಸ್ತಿಯಿರುವ ಆಹಾರ ಬೇಡ. ಇದರಿಂದ ಪರೀಕ್ಷಾ ಸಮಯದಲ್ಲಿ ಅಜೀರ್ಣ ಕಾಡಬಹುದು. ಓದುವಾಗ ನಿದ್ದೆ ಓಡಿಸಲು ಅತಿಯಾದ ಕಾಫಿ, ಟೀ ಸೇವನೆ ಸಲ್ಲದು. ಕರಿದ ತಿಂಡಿ, ಜಂಕ್ ಫುಡ್, ಪೆಪ್ಸಿ, ಕೋಲಾ ಮುಂತಾದ ಆಹಾರ-ಪಾನೀಯಗಳಿಂದ ದೂರವಿರಿ.
ದಿನಕ್ಕೆ ಆರರಿಂದ ಎಂಟು ಗ್ಲಾಸ್ ಶುದ್ಧ ನೀರು ಕುಡಿಯುವ ಅಭ್ಯಾಸ ಬೆಳಸಿಕೊಂಡಾಗ ಜೀರ್ಣಕ್ಕೆ ಸಂಬಂಧಿಸಿದ ಬಹುತೇಕ ಸಮಸ್ಯೆಗಳನ್ನು ದೂರವಿಡಬಹುದು. ಲಿಂಬು ಬೆರೆಸಿದ ನೀರು ಉತ್ಸಾಹ ಹೆಚ್ಚಿಸಿ ಓದಲು ಸಹಕಾರಿ ಹಾಗೂ ಇದರಿಂದ ಒತ್ತಡದಿಂದ ಬರುವ ತಲೆನೋವನ್ನು ದೂರವಿಡಬಹುದು.

ತುದಿ ಬೆರಳಿಗಂಜುವ ಧನಿಯಾ ಪುಡಿ:









ಸಾಮಗ್ರಿಗಳು: ಅಗಲವಾದ ತಟ್ಟೆ, ನೀರು, ಸಾಬೂನಿನ ದ್ರಾವಣ, ಧನಿಯಾ ಪುಡಿ
ವಿಧಾನ: ಒಂದು ಅಗಲವಾದ ತಟ್ಟೆಯನ್ನು ತೆಗೆದುಕೊಂಡು ಅದಕ್ಕೆ ಮುಕ್ಕಾಲು ಭಾಗ ನೀರು ಹಾಕಿರಿ.
ನೀರಿನ ಮೇಲೆ ಒಂದೆರಡು ಚಿಟಿಕೆಯಷ್ಟು ಧನಿಯಾ ಪುಡಿಯನ್ನು ಉದುರಿಸಿರಿ.
ಪ್ರಶ್ನೆ:
ನಿಮ್ಮ ತೋರು ಬೆರಳನ್ನು ತಟ್ಟೆಯ ಮಧ್ಯದಲ್ಲಿ, ನೀರಿನಲ್ಲಿ ಹಗುರವಾಗಿ ಅದ್ದಿರಿ. ಧನಿಯಾ ಪುಡಿಯಲ್ಲಿ ಏನಾದರೂ ಬದಲಾವಣೆಗಳಾದವೇ?
ತುದಿ ಬೆರಳನ್ನು ಸಾಬೂನಿನ (Detergent) ದ್ರಾವಣದಲ್ಲಿ ಅದ್ದಿ, ತಟ್ಟೆಯ ಮಧ್ಯದ ನಿರಿಗೆ ಹಗುರವಾಗಿ ತಾಕಿಸಿರಿ. ಧನಿಯಾ ಪುಡಿಯಲ್ಲಾದ ಬದಲಾವಣೆಗಳೇನು? ಏನು ಕಾರಣ?
ಉತ್ತರ:
ಧನಿಯಾ ಪುಡಿಯಲ್ಲಿ ಯಾವ ಬದಲಾವಣೆಗಳು ಕಾಣುವುದಿಲ್ಲ. ನೀರಿನ ಮೇಲ್ಮೈ ಸೆಳೆತ (Surface tension) ದ ಕಾರಣದಿಂದ, ಧನಿಯಾ ಪುಡಿಯು ನೀರಿನ ಮೇಲೆ ಎಲ್ಲ ಕಡೆ ಹರಡಿ ತೇಲುತ್ತಿರುತ್ತದೆ. ಸಾಬೂನಿನ ದ್ರಾವಣವು ನೀರಿನ ಮೇಲ್ಮೈ ಸೆಳೆತವನ್ನು ತಗ್ಗಿಸುತ್ತದೆ. ನೀವು ಸಾಬೂನಿನ ದ್ರಾವಣದಲ್ಲಿ ಅದ್ದಿದ ತುದಿಬೆರಳನ್ನು ಪಾತ್ರೆಯ ಮಧ್ಯದಲ್ಲಿ ಅದ್ದಿದಾಗ  ನೀರಿನ ಮೇಲ್ಮೈ ಸೆಳೆಯ ಕುಗ್ಗಿ, ಹರಡಿದ ಧನಿಯಾ ಪುಡಿ ಅಂಚಿನ ಕಡೆಗೆ ಸರಿಯುತ್ತದೆ. ಒಂದು ಲೋಟದ ಬಾಯಿಗೆ ರಬ್ಬರ್ ಪರೆಯನ್ನು ಜಗ್ಗಿ ಹಾಕಿ, ಅನಂತರ ರಬ್ಬರನ್ನು ಮಧ್ಯದಲ್ಲಿ ಕತ್ತರಿಸಿದಾಗ, ಅದು ಲೋಟದ ಅಂಚಿನ ಕಡೆಗೆ ಹೋಗುವಂತೆ ತೇಲುವ ಪುಡಿ ಸರಿಯುತ್ತದೆ

ವಿರಾಮ ಚಿಹ್ನೆಗಳ ಉಪಯೋಗ:









ನಾವು ಸಂಭಾಷಿಸುವಾಗ, ನಮ್ಮ ಮಾತುಗಳಲ್ಲಿನ ಸ್ಪಷ್ಟತೆಯನ್ನು sstress, intonation, pauses, body languageಗಳ ಮುಖಾಂತರ ವ್ಯಕ್ತಪಡಿಸುವ ಹಾಗೆ ನಮ್ಮ ಬರವಣಿಗೆಯಲ್ಲಿನ ಸ್ಪಷ್ಟತೆಯನ್ನು ಸರಿಯಾದ ವಿರಾಮ ಚಿಹ್ನೆಗಳನ್ನು ಉಪಯೋಗಿಸುವುದರ ಮುಖಾಂತರ ವ್ಯಕ್ತಪಡಿಸಬಹುದು.
ಇಂಗ್ಲಿಷ್ ಭಾಷೆಯಲ್ಲಿ ಬಳಸುವ ವಿರಾಮ ಚಿಹ್ನೆಗಳು ಮತ್ತು ಅವುಗಳನ್ನು ಎಲ್ಲಿ, ಹೇಗೆ ಬಳಸಬೇಕೆಂಬುದನ್ನು ಇಲ್ಲಿ ಗಮನಿಸಿ:
Full stop (.)
ಅಮೆರಿಕನ್ನರು full stop ಅನ್ನು periodಎನ್ನುತ್ತಾರೆ. ಇದನ್ನು ಯಾವುದೇ ವಾಕ್ಯವು ಕೊನೆಗೊಳ್ಳುವುದನ್ನು ಸೂಚಿಸುವುದಕ್ಕಾಗಿ ಬಳಸಲಾಗುತ್ತದೆ.
ಉದಾ: WWe learn grammar. This helps us in the correct use of language. Abbreviation ಮತ್ತು initialಗಳನ್ನು ಬಳಸುವಾಗ ಸಹಾ full stop ಅನ್ನು ಉಪಯೋಗಿಸುತ್ತೇವೆ.
ಉದಾ: 1. M.A. for Master of Arts (abbreviation)
2. K. Ashok (initial)
Comma (,)
ನಮ್ಮ ಬರವಣಿಗೆಯಲ್ಲಿ ಸಾಕಷ್ಟು ಬಾರಿ ಉಪಯೋಗಿಸುವ ವಿರಾಮ ಚಿಹ್ನೆಯೆಂದರೆ comma. ಇದನ್ನು ನಾಲ್ಕು ಸಂದರ್ಭಗಳಲ್ಲಿ ಬಳಸಬಹುದು.
a). Listing comma - ಮೂರು ಅಥವಾ ಮೂರಕ್ಕಿಂತ ಹೆಚ್ಚು ಪದಗಳ/ಪದಪುಂಜಗಳನ್ನು, ಒಂದರಿಂದ ಇನ್ನೊಂದನ್ನು ಬೇರ್ಪಡಿಸಲು ಬಳಸುವ commaವನ್ನು listing comma ಎನ್ನಬಹುದು.
ಉದಾ: 1. Orange, white and green are the colours in the Indian flag.
2. Arjuna, Bheema, Nakula and Sahadeva are brothers.
b). Joining Comma -ಎರಡು ವಾಕ್ಯಗಳನ್ನು ಸೇರಿಸಿ ಒಂದು ವಾಕ್ಯವನ್ನಾಗಿ ಮಾಡಲು ಬಳಸುವ commaವನ್ನು joining comma ಎನ್ನಬಹುದು.
ಉದಾ:I could have lied to you, but I did not.
c) Gapping Comma - ಹಿಂದೊಮ್ಮೆ ಸೂಚಿಸಿದಂತಹ ಪದಗಳನ್ನು ಮತ್ತೆ ಪುನರಾವರ್ತಿಸುವ ಬದಲಾಗಿ comma ವನ್ನು ಉಪಯೋಗಿಸಿ ವಾಕ್ಯವನ್ನು ಸಂಕ್ಷಿಪ್ತಗೊಳಿಸಬಹುದು ಹಾಗೂ ಏಕತಾನತೆಯನ್ನು (monotony) ತಡೆಗಟ್ಟಬಹುದು. ಇಂತಹ commaವನ್ನು ggapping commaಎಂದು ಕರೆಯುತ್ತೇವೆ. ಉದಾ:Some writers use punctuation correctly; others, not.
d) Bracketing Comma - bracket  ಒಳಗೆ ಉಪಯೋಗಿಸಬಹುದಾದ ಪದಪುಂಜ ಅಥವಾ ಒಂದು ಚಿಕ್ಕ ವಾಕ್ಯವನ್ನು bbracket ಇಲ್ಲದೆಯೇ ಇನ್ನೊಂದು ವಾಕ್ಯದೊಳಗೆ ಸೇರಿಸುವಾಗ ಬಳಸುವಂತಹ commaವನ್ನು bbracketing comma ಎನ್ನಬಹುದು.
ಉದಾ: 1. Ashok, who is a resident of Bangalore, is a good singer.
2. Milton, the great English poet, was blind.
ಸಾಮಾನ್ಯವಾಗಿ. ಎಲ್ಲಿ comma ಉಪಯೋಗಿಸಬೇಕೆಂಬ ಸಂದೇಹ ಬಂದಾಗ ನಾವು ಮಾಡಬೇಕಾಗಿರುವ ಕೆಲಸ ಇಷ್ಟೆ. ವಾಕ್ಯವನ್ನು ಜೋರಾಗಿ ಓದಿ, ಎಲ್ಲಿ ಅರ್ಥಪೂರ್ಣವಾಗಿ ನಿಲ್ಲಿಸಬೇಕಾಗುತ್ತದೋ ಅಥವಾ ಉಸಿರನ್ನು ತೆಗೆದುಕೊಳ್ಳ ಬೇಕಾಗುತ್ತದೋ ಅಲ್ಲಿ comma ಹಾಕುವುದು ಸೂಕ್ತ. ಇದು ಬಹುತೇಕ ಸಂದರ್ಭಗಳಲ್ಲಿ ಉಪಯುಕ್ತ ವಿಧಾನ.
ಮತ್ತಷ್ಟು ವಿರಾಮ ಚಿಹ್ನೆಗಳು
ಸೈದ್ಧಾಂತಿಕವಾಗಿ, ನಾವು ಬರೆಯುವ ವಾಕ್ಯವೊಂದು ಎಷ್ಟಾದರೂ ಉದ್ದವಿರಬಹುದು. ಉದಾಹರಣೆಗೆ, James Joyce ಎನ್ನುವ ಕಾದಂಬರಿಕಾರನ Ulysses ಎಂಬ ಕಾದಂಬರಿಯ ಕೊನೆಯ ವಾಕ್ಯ ವಿರಾಮ ಚಿಹ್ನೆಗಳನ್ನು ಉಪಯೋಗಿಸದೆಯೇ ಬರೆದದ್ದಾಗಿದ್ದು, ಅನೇಕ ಪುಟಗಳಷ್ಟು ಉದ್ದವಿದೆ. ಆದರೆ ಸಾಮಾನ್ಯವಾಗಿ ಓದುಗರ ಮೇಲೆ ಈ ರೀತಿಯ ಒತ್ತಡವನ್ನು ಹೇರಬಾರದು. ನಮ್ಮ ಮೆದುಳಿಗೆ ಸೀಮಿತ ಗ್ರಹಣಶಕ್ತಿಯಿರುವುದರಿಂದ ವಿರಾಮ ಚಿಹ್ನೆಗಳನ್ನು ಉಪಯೋಗಿಸಿ ಬಳಸುವ ಭಾಷೆ ಓದುಗರಿಗೆ ಸುಲಭವಾಗಿ ಅರ್ಥವಾಗುತ್ತದೆ. ಈ ಕಾರಣಕ್ಕೆ ನಾವು ವಿರಾಮ ಚಿಹ್ನೆಗಳ ಉಪಯೋಗದ ಮೇಲೆ ಹಿಡಿತ ಸಾಧಿಸಬೇಕು. ಈಗ ಇನ್ನೂ ಕೆಲವು ವಿರಾಮ ಚಿಹ್ನೆಗಳ ಬಗ್ಗೆ ತಿಳಿದುಕೊಳ್ಳೋಣ.
Semi Colon (;)
ಒಂದಕ್ಕೊಂದು ಸಂಬಂಧವಿರುವ ಎರಡು ಉಪವಾಕ್ಯಗಳನ್ನು (clauses), full stop ನಿಂದ ಬೇರ್ಪಡಿಸಲಾಗದ ಸಂದರ್ಭದಲ್ಲಿ  semi colon ಉಪಯೋಗಿಸಿ ಬೇರ್ಪಡಿಸಬಹುದು.
ಉದಾ: People continue to worry about the future; our failure to conserve natural resources has put the future at risk.
ಕೆಲವು comma ಗಳಿರುವಂತಹ ದೊಡ್ಡ ವಾಕ್ಯದಲ್ಲಿನ ಉಪವಾಕ್ಯಗಳನ್ನು ಬೇರ್ಪಡಿಸಬೇಕಾದರೆ semi colon ಅನ್ನು ಬಳಸಬೇಕು.
ಉದಾ: I went for a movie with fun loving, young friends; and we all enjoyed the movie.
ಇಲ್ಲಿ ನಾವು ಗಮನಿಸಬೇಕಾದ ವಿಷಯವೆಂದರೆ, comma ಬಿಂಬಿಸುವಂತಹ ವಿರಾಮಕ್ಕಿಂತ, ಹೆಚ್ಚು ಮಹತ್ವವುಳ್ಳ ವಿರಾಮವನ್ನು semi colon ಬಿಂಬಿಸುತ್ತದೆ.
Colon (:)
Semi colon ಗಿಂತ ದೀರ್ಘವಾದ, ಆದರೆ full stop ಗಿಂತ ಕಡಿಮೆಯಾದ ವಿರಾಮವನ್ನು colonಬಿಂಬಿಸುತ್ತದೆ.
ಯಾವುದಾದರೂ ಪಟ್ಟಿಯನ್ನು ಪರಿಚಯಿಸುವಾಗ colonಬಳಸಬೇಕು. ಉದಾ: There are three colours in the Indian flag: Orange, white and green..
ಉದಾಹರಣೆ ಅಥವಾ ವಿವರಣೆಯನ್ನು ಒಂದು ವಾಕ್ಯದ ನಂತರ ಕೊಡುವಂತಹ ಸಂದರ್ಭದಲ್ಲಿ. Colon ಅನ್ನು ಉಪಯೋಗಿಸಿ ಪ್ರಾರಂಭಿಸಬೇಕು.
ಉದಾ:There is one challenge above all others: the alleviation of poverty.
ಯಾವುದಾದರೂ ಉಲ್ಲೇಖ (question) ವನ್ನು ಪರಿಚಯಿಸುವಂತಹ ಸಂದರ್ಭದಲ್ಲಿಯೂ colon ಬಳಸುತ್ತೇವೆ.
ಉದಾ: Swami Vivekananda says: “Arise, awake, stop not till you  reach the goal.”
Inverted Commas (“ ”) (‘ ’)
ಇವುಗಳನ್ನು quotation marks ಅಥವಾ  quotes  ಎಂದೂ ಕರೆಯುತ್ತೇವೆ. ಇನ್ನೊಬ್ಬರ ಮಾತುಗಳನ್ನು ಉಲ್ಲೇಖಿಸಬೇಕಾದರೆ double inverted commas ಬಳಸುತ್ತೇವೆ.
ಉದಾ: Hamlet’s famous speech begins with “to be or not to be, that is the question”
ಆದರೆ ಒಂದು quotation ಒಳಗಡೆ ಮತ್ತೊಂದು quotation ಇದ್ದಾಗ single inverted commas ಬಳಸಬೇಕು. ಉದಾ: My teacher told me, “your use of the phrase’old is gold’ is a cliché”h
ವಿಶೇಷ ಗುಣವಿರುವ ಪದವನ್ನು ಸೂಚಿಸಲು ಕೂಡ single inverted commas ಬಳಸುತ್ತೇವೆ.
ಉದಾ: Under the circumstances, her courage was ‘stupendous’

Note-Taking ಮತ್ತು Note-Making :

ನಾವು ಇಂಗ್ಲಿಷ್ ಭಾಷೆಯನ್ನು ಹಲವಾರು ಉನ್ನತ ಶಿಕ್ಷಣ ಸಂದರ್ಭಗಳಲ್ಲಿ ಉಪಯೋಗಿಸಬೇಕಾಗುತ್ತದೆ. ನಾವು ಕಾಲೇಜಿನ ಪ್ರಾಧ್ಯಾಪಕರ ಉಪನ್ಯಾಸಗಳನ್ನು ಕೇಳುವ ಸಂದರ್ಭಗಳಲ್ಲಾಗಲೀ ಅಥವಾ ನಮ್ಮ ಪಠ್ಯಕ್ಕೆ ಸಂಬಂಧಿಸಿದ ನೋಟ್ಸ್ ಮಾಡುವುದಕ್ಕಾಗಲೀ ಇಂಗ್ಲಿಷ್ ತುಂಬಾ ಉಪಯುಕ್ತವಾದ ಹಾಗೂ ಅಗತ್ಯವಾದ ಭಾಷೆ.
ಈ ನಿಟ್ಟಿನಲ್ಲಿ Note-taking ಮತ್ತು Note-making ಗಳನ್ನು ಕಲಿಯುವುದು ಅತ್ಯಂತ ಉಪಯುಕ್ತವಾದ ಕೌಶಲ(skill). Note-takingg ಮತ್ತು  Note-makingg ಗಳ ನಡುವೆ ಕೆಲವು ಸೂಕ್ಷ್ಮವ್ಯತ್ಯಾಸಗಳಿರುವುದನ್ನು ನಾವು ಗಮನದಲ್ಲಿ ಇಡಬೇಕು.
Note-takingg ನಲ್ಲಿ ಮೂಲ ವಿಷಯವನ್ನು ಹೇಗಿದೆಯೋ ಹಾಗೆ ರವಾನಿಸುವುದಕ್ಕೆ ಒತ್ತು ಕೊಡಲಾಗುತ್ತದೆ.
ಇದರಲ್ಲಿ ಪಠ್ಯದ ಯಾವುದೇ ಭಾಗಕ್ಕೆ ಹೆಚ್ಚಿನ ಮಹತ್ವ ಕೊಡುವುದಾಗಲೀ ಅಥವಾ ಯಾವುದೇ ಭಾಗವನ್ನು ಕಡೆಗಣಿಸುವುದಾಗಲೀ ಇರುವುದಿಲ್ಲ. ಈ ರೀತಿಯ Note-taking ನಮ್ಮ ದಿನನಿತ್ಯದ ಮರು ಓದಿಗಾಗಿ ಉಪಯೋಗವಾಗುತ್ತದೆ. ಆದ್ದರಿಂದ, Note-takingg ಒಂದು ತಟಸ್ಥದಾಖಲಾತಿಯ ಕ್ರಿಯೆ ಮಾತ್ರವಾಗಿರುತ್ತದೆ. ಆದರೆ Note-taking ಅನ್ನು acive approachhನ ಒಂದು ಮಾದರಿಯನ್ನಾಗಿ ಪರಿಗಣಿಸಬಹುದು. ಏಕೆಂದರೆ, Note-takingg ಪ್ರಕ್ರಿಯೆಯು ಮೂರು ಬೌದ್ಧಿಕ ಕ್ರಿಯೆಗಳ ಸಂಗಮವಾಗಿರುತ್ತದೆ.
1. ಆಯ್ಕೆ (selecting)
2. ವಿಶ್ಲೇಷಣೆ (analyzing)
3. ಸಾರಸಂಗ್ರಹ  (summarizing) ಇವುಗಳೇ ಆ ಮೂರು ಕ್ರಿಯೆಗಳು.
Note-making ನಲ್ಲಿ ಹಲವಾರು ವಿಧಗಳಿವೆ
1. Sequential / linear note-making
2. Pattern note-making / mind-mapping
3. Using shorthand or abbreviation to aid note-making
4. Using diagrams for note-making
5. Using mnemonics and groupings
6. Highlighting, annotating and underliningu
ಇವುಗಳಲ್ಲಿ ಹೆಚ್ಚಾಗಿ ಬಳಸುವ ವಿಧಾನವೆಂದರೆ SequeSequential/linear note-making. ಈ ವಿಧಾನದ ಬಗ್ಗೆ ಗಮನ ಹರಿಸೋಣ.
ಮೊದಲಿಗೆ, ಪಠ್ಯವನ್ನು ಎಚ್ಚರಿಕೆಯಿಂದ ಓದಬೇಕು. ಪಠ್ಯದ ಮುಖ್ಯ ವಿಷಯಕ್ಕೆ ಸಂಬಂಧ ಪಟ್ಟಂತಹ ಒಂದು heheadingg ಅನ್ನು ಕೊಡಬೇಕು. ನಂತರ, ಮುಖ್ಯವಾದ ವಿಷಯ ಯಾವ ರೀತಿಯಲ್ಲಿ ಬೆಳೆದು ಬಂದಿದೆ ಎಂಬುದಕ್ಕನುಸಾರವಾಗಿ sub-headings ಅನ್ನು ಕೊಡಬೇಕು. ಆ ನಂತರ, sub-headings  ಗೆ ಸಂಬಂಧಪಟ್ಟ ಅಂಶಗಳಿದ್ದರೆ, ಅವುಗಳನ್ನೂ ಬರೆಯಬೇಕು.
Note-makingg ನಲ್ಲಿ ಸಂಪೂರ್ಣ ವಾಕ್ಯಗಳನ್ನು ಬರೆಯುವ ಅವಶ್ಯಕತೆಯಿಲ್ಲ. ಅರ್ಥವಾಗುವ ರೀತಿಯಲ್ಲಿ words/phrases/clauses  ಬರೆಯಬಹುದು.
ಉದಾ:‘The passage should be complete’  ಎಂಬ ವಾಕ್ಯಕ್ಕೆ ಬದಲಾಗಿ ‘complete passage’ ಎಂದಿದ್ದರೆ ಸಾಕು. ಪ್ರಚಲಿತ  abbreviationsಗಳನ್ನೂ ಬಳಸಬಹುದು.
ಉದಾ: Govt. Dr. Etc.Sc. ಮುಂತಾದವುಗಳೂ.
ಎಲ್ಲಾ s-hsub-headingss ಅನ್ನು mmargin ನಿಂದ ಒಂದೇ ಅಂತರದಲ್ಲಿ ಬರೆಯಬೇಕು.
Note-makingg ನಲ್ಲಿ ಕೇಳುಗರ ಸ್ವಂತ ಆಯ್ಕೆ ಬಹು ಮುಖ್ಯ ಪಾತ್ರ ವಹಿಸುತ್ತದೆ. ಆದರೆ, Note-takinggg ನಲ್ಲಿ ಹೀಗಿರುವುದಿಲ್ಲ ಎಂಬುದನ್ನು ಗಮನದಲ್ಲಿಡಬೇಕು. Note-takinggg ಹಾಗೂ Note-makingggಯಶಸ್ವಿ study skillss ನ ಅವಿಭಾಜ್ಯ ಅಂಗ. ಇಂಗ್ಲಿಷ್ ಭಾಷೆಯನ್ನು, sstudy skillsನ ಮುಖ್ಯ ಆಯಾಮಗಳಾದ Note-takinggg ಹಾಗೂ Note-makinggಗಳಿಗಾಗಿ ಬಳಸುತ್ತಾ ಹೋದಂತೆ, ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವಲ್ಲಿ ನಮ್ಮ ಕಾರ್ಯಕ್ಷಮತೆ (competence) ಹೆಚ್ಚುತ್ತಾ ಹೋಗುತ್ತದೆ.
Linear note-making ನ ಒಂದು ಮಾದರಿ
The small village of Somnathpur contains an extraordinary temple, built around 1268 AA.D. by the Hoysalas of Karnataka – one of the most prolific temple-builders. Belur and Halebid are among their better-known works. While thse suffered during the invasion of the 14th century, the somnathpur temple stands more or less intact in near original condition.
This small temple captivates with the beauty and vitality of its detailed sculpture, covering almost every inch of the walls, pillars, and even ceilings. It has three shikharas and stands on a star-shaped, raised-platform with 24 corners. The outer walls have a profusion of detailed carvings: the entire surface run over by a carved plaques of stone.
There were vertical panels covered by exquisite figures of gods and goddesses, with many incarnations being depicted. There were nymphs too, some carrying an ear of maize, a symbol of plenty and prosperity. The elaborate ornamentation, very characteristic of Hoysala sculpture was a remarkable feature. On closer look-and it is worth it – the series of friezes on the outer wall reveals intricately carved caparisoned elephants, charging horseman, stylized flowers, warriors, musicians, crocodiles, and swans.
ಈಗ ಈ ಮೇಲಿನ ಪಠ್ಯಕ್ಕೆ ಸಂಬಂಧಿಸಿದಂತೆ ಮಾಡಿದ ಲೀನಿಯರ್ ನೋಟ್ಸ್ ನ ಮಾದರಿಯನ್ನು ಗಮನಿಸಿ.
SoSomnathpura Temple
A) Structural details & sculptural perfection
1. Structure
i) Has 3 shikharas
ii) Stands on a star-shaped, raised-platform with 24 edges
iii) Vertical panels covered by exquisite figures of gods and goddesses, with many incarnations depicted
iv) Nymphs-some with an ear of maize
2. Sculptural perfection
i)Extensive carvings of caparisoned elephants, charging horseman, stylized flowers, warriors, crocodiles & swans
ಇಲ್ಲಿನ Headingsgs  ಹಾಗೂ sub-headings ಅನ್ನು ಸೂಕ್ಷ್ಮವಾಗಿ ಗಮನಿಸಿ.
Sub-hsub-headings ಗೆ ಸಂಬಂಧ ಪಟ್ಟ ವಾಕ್ಯಗಳು, ಸಂಪೂರ್ಣ ವಾಕ್ಯಗಳಲ್ಲದಿರುವುದನ್ನೂ ಹಾಗೂ ಇವು ಪಠ್ಯದ ಮುಖ್ಯಾಂಶಗಳು ಮಾತ್ರವೆಂಬುದನ್ನೂ ಇಲ್ಲಿ ಕಾಣಬಹುದು.
Note-making ವಿವಿಧ ಅಂಶಗಳು ಅನೇಕ ಬಾರಿ memory triggerss ಆಗಿ ಕೆಲಸ ಮಾಡುತ್ತವೆ. ಅಂದರೆ ಇಲ್ಲಿ ಬಳಸುವ ಒಂದು ಪದ, ಒಂದು ಇಡೀ ಪರಿಕಲ್ಪನೆಯನ್ನು ಮನಸ್ಸಿನಲ್ಲಿ ಮೂಡಿಸಲು ಸಹಾಯ ಮಾಡುತ್ತದೆ.




ಗುಂಪು ಚರ್ಚೆಯ ಕೌಶಲ : 

ಸ್ಮಾರ್ಟ್ ಇಂಗ್ಲಿಷ್ ನಮ್ಮ ದೈನಂದಿನ ವೃತ್ತಿಪರ ಅಗತ್ಯಗಳಿಗೆ ಒದಗಿ ಬರುತ್ತದೆ. ಈ ನಿಟ್ಟಿನಲ್ಲಿ Group Discussion ಅಥವಾ GDಗೆ ಬೇಕಾಗಿರುವಂತಹ ಭಾಷಾ ಕೌಶಲಕ್ಕೆ ಸ್ಮಾರ್ಟ್ ಇಂಗ್ಲಿಷ್ ಹೇಗೆ ಅನ್ವಯಿಸುತ್ತದೆ ಎಂಬುದನ್ನು ನೋಡೋಣ. ಇಂದಿನ ಜಾಗತೀಕರಣದ ಹಿನ್ನೆಲೆಯಲ್ಲಿ ಯಾವುದೇ ಉತ್ತಮ ಉದ್ಯೋಗ ಅವಕಾಶವನ್ನು ಪಡೆದುಕೊಳ್ಳಲು ಸಂದರ್ಶನದ ಮೂರು ಸುತ್ತುಗಳ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಬೇಕು.
ಈ ಮೂರು ಹಂತಗಳೆಂದರೆ:
1. Written Exam (ಬರಹ ಪರೀಕ್ಷೆ)
2. Group Discussion (ಸಮೂಹ ಚರ್ಚೆ)
3. Face-to-face interview (ಮುಖಾಮುಖಿ ಸಂದರ್ಶನ)
ಬರಹ ಪರೀಕ್ಷೆಯಲ್ಲಿ ಉತ್ತೀರ್ಣರಾದಾಗ ಮಾತ್ರ ಸಮೂಹ ಚರ್ಚೆಗೆ ಅವಕಾಶ ದೊರೆಯುತ್ತದೆ. ಈ ಸುತ್ತಿನಲ್ಲಿ ಕಂಪೆನಿಯ ನಿರೀಕ್ಷೆಯ ಮಟ್ಟವನ್ನು ತಲುಪಿದಾಗ ಮಾತ್ರ ಮುಖಾಮುಖಿ ಸಂದರ್ಶನಕ್ಕೆ ಅವಕಾಶ.
Face-to-face interviewಗೆ ಮುಂಚೆ Group discussionನ ಸುತ್ತಿಗೆ ಹೆಚ್ಚು ಪ್ರಾಮುಖ್ಯ ಕೊಡಲಾಗುತ್ತದೆ. ಇದಕ್ಕೆ ಎರಡು ಕಾರಣಗಳಿವೆ. ಮೊದಲನೆಯದು, ಇಲ್ಲಿ, ಕಾರ್ಯಕ್ಷಮತೆ (competence) ಇಲ್ಲದ ಸಾಕಷ್ಟು ಅಭ್ಯರ್ಥಿಗಳನ್ನು ಒಂದೇ ಬಾರಿಗೆ ಕಂಡುಹಿಡಿಯಬಹುದು. ಎರಡನೆಯ ಕಾರಣವೆಂದರೆ, ಈ ಸುತ್ತಿನಲ್ಲಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಉಪಯೋಗಿಸುವ ಮಾನದಂಡ ಕಂಪೆನಿಯ ನಿರ್ದಿಷ್ಟ ಅಗತ್ಯಗಳನ್ನು ಅವಲಂಬಿಸಿರುತ್ತದೆ.
ಸಮೂಹ ಚರ್ಚೆಯಲ್ಲಿ ಯಶಸ್ವಿಯಾಗಲು ನಮಗೆ ಭಾಷಾನಿರರ್ಗಳತೆ, conversation etiquette ಹಾಗೂ body language awareness - ಈ ಮೂರೂ ಅಯಾಮಗಳ ಮೇಲೆ ಹಿಡಿತವಿರಬೇಕು. ಇಲ್ಲಿ ಪರೀಕ್ಷೆಗೊಳಗಾಗುವ ಕೆಲವು ಗುಣಗಳು ಇಂತಿವೆ  interpersonal skills, leadership, analytical, rational thinking, knowledge and personality traits. ಈ ಎಲ್ಲಾ ಗುಣಗಳ ಅಭಿವ್ಯಕ್ತಿಗೆ ಭಾಷೆಯೇ ಆಧಾರ ಎಂಬುದನ್ನು ಗಮನಿಸಬೇಕು.
Group discussionನಲ್ಲಿನ ಪ್ರಮುಖ ವಿಧಗಳು ಮೂರು  factual, abstract, case study. Factualನಲ್ಲಿ ಸಮಕಾಲೀನ ಮತ್ತು ವಿವಾದಾತ್ಮಕ ವಿಷಯಗಳ ಬಗೆಗಿನ ಚರ್ಚೆ ಹೆಚ್ಚು ಕಂಡುಬರುತ್ತದೆ. ಇಲ್ಲಿ ಸಾಮಾನ್ಯವಾಗಿ ವಿಷಯಗಳ ವ್ಯಾಪ್ತಿ ತುಂಬಾ ವಿಶಾಲವಾಗಿರುತ್ತದೆ. ಆರ್ಥಿಕತೆಗೆ ಸಂಬಂಧಿಸಿದ ವಾಣಿಜ್ಯ ವಹಿವಾಟಿನ ವಿಷಯಗಳು, ರಾಜಕೀಯ, ಮಾಧ್ಯಮ ಮತ್ತು ಪ್ರಚಲಿತ ವಿದ್ಯಾಮಾನಗಳು  ಯಾವುದೇ ವಿಷಯವಾದರೂ ಚರ್ಚೆಗೆ ಗ್ರಾಸವಾಗಬಹುದು. ಕೆಲವು  ಉದಾಹರಣೆಗಳು:
1. Are arranged marriages better or love marriages?
2. Has democracy failed in India?
3. Money – a blessing or a curse?
4. The pros and cons of privatization in India.

ದೇಹಭಾಷೆಯ ಸಂವಹನ ಕ್ರಿಯೆ : 

ನಮ್ಮ ಸಂಭಾಷಣೆಯಲ್ಲಿ ಮಾತು ಎಷ್ಟು ಮುಖ್ಯವೋ ಅದಕ್ಕಿಂತ ಹೆಚ್ಚು ಮುಖ್ಯವಾದುದು ಮಾತನ್ನು ಉಪಯೋಗಿಸದೆ, ದೇಹ ಭಾಷೆಯ ಮುಖಾಂತರ ಭಾಷೆಯ ಅರ್ಥವನ್ನು ಹೊಮ್ಮಿಸುವುದು. ದೇಹಭಾಷೆ non-verbal communicationನ ಒಂದು ಬಹು ಮುಖ್ಯ ಭಾಗ.
ದೇಹಭಾಷೆಯಲ್ಲಿ ನಾವು ಗಮನಿಸಬೇಕಾದ ಮುಖ್ಯ ಅಂಶಗಳೆಂದರೆ:ಅಂಗವಿನ್ಯಾಸ (body posture) ಸನ್ನೆಗಳು (gestures), ಮುಖದಲ್ಲಿನ ಅಭಿವ್ಯಕ್ತಿ (facial expression) ಹಾಗೂ ಕಣ್ಣಿನ ಚಲನೆಗಳು (eye movements).
ನಮ್ಮಲ್ಲಿ ವಿವಿಧ ರೀತಿಯ ಸನ್ನೆಗಳನ್ನು ಮಾಡುವ ಕೆಲಸವಾಗಲೀ ಅಥವಾ ಅರ್ಥಮಾಡಿಕೊಳ್ಳುವ ಕೆಲಸವಾಗಲೀ ನಮಗರಿವಿಲ್ಲದಂತೆಯೇ ನಡೆಯುತ್ತಿರುತ್ತದೆ. ಸಂಶೋಧನೆಯ ಪ್ರಕಾರ ನಮ್ಮ ಸಂಭಾಷಣೆಯಲ್ಲಿ ಶೇಕಡ 70 ರಷ್ಟು ಸಂವಹನವನ್ನು ದೇಹಭಾಷೆಯ ಮುಖಾಂತರ ಮಾಡಿದರೆ, ಶೇಕಡ 30 ರಷ್ಟು ಸಂವಹನವನ್ನು ಮಾತಿನ ಮುಖಾಂತರ ಮಾಡುತ್ತಿರುತ್ತೇವೆ.
ಹಾಗಾಗಿ, ನಾವು ದೇಹಭಾಷೆಯ ಬಗ್ಗೆ ಹೆಚ್ಚು ಗಮನ ಹರಿಸಬೇಕು. ನಮ್ಮಲ್ಲಿನ ಭಾವನೆಗಳನ್ನು ದೇಹಭಾಷೆಯ ಮುಖಾಂತರ ಸೂಕ್ಷ್ಮವಾಗಿ ವ್ಯಕ್ತಪಡಿಸುತ್ತಿರುತ್ತೇವೆ. ಅಷ್ಟೇ ಅಲ್ಲದೆ, ಈ ಚೆಹ್ನೆಗಳ ಮುಖಾಂತರ ಇವುಗಳನ್ನು ಉಪಯೋಗಿಸುವ ವ್ಯಕ್ತಿಯ ವ್ಯಕ್ತಿತ್ವದ ಬಗ್ಗೆಯೂ ಸ್ವಲ್ಪ ಮಟ್ಟಿಗೆ ತಿಳಿದುಬರುತ್ತದೆ.
ಕೆಲವು ಆಂಗಿಕ ಚಿಹ್ನೆಗಳು (gestures) ಮತ್ತು ಅವುಗಳ ಅರ್ಥವನ್ನು ಇಲ್ಲಿ ಗಮನಿಸಿ: ಕಣ್ಣುಗಳ ವಿವಿಧ ರೀತಿಯ ಚಲನೆಯಿಂದ ವ್ಯಕ್ತವಾಗುವ ಅರ್ಥಗಳನ್ನು ನೋಡೋಣ. ನಮ್ಮ ಕಣ್ಣುಗಳು ಬಲಗಡೆ ತಿರುಗಿದಾಗ ಅಥವಾ ಬಲಬದಿಯಿಂದ ಮೇಲೆ ನೋಡುವಾಗ, ನಾವು ಏನನ್ನಾದರೂ ಊಹಿಸುತ್ತಿರಬಹುದು ಅಥವಾ ಸುಳ್ಳು ಹೇಳುತ್ತಿರಬಹುದು ಅಥವಾ ಕಥೆ ಹೇಳುತ್ತಿರಬಹುದು.
ಬಲಬದಿಯಿಂದ ಕೆಳಗೆ ನೋಡುತ್ತಿದ್ದರೆ, ನಮ್ಮ ಭಾವನೆಗಳ ಬಗ್ಗೆ ಯೋಚಿಸುತ್ತಿರಬಹುದು. ಎಡಬದಿಯಲ್ಲಿ ದೃಷ್ಟಿ ಹರಿಸಿದಾಗ ಅಥವಾ ಎಡಬದಿಯಿಂದ ಮೇಲೆ ನೋಡುವಾಗ, ನಾವು ಏನನ್ನಾದರೂ ನೆನಪಿಸಿಕೊಳ್ಳುತ್ತಿರಬಹುದು. ಎಡಬದಿಯಿಂದ ಕೆಳಗೆ ದೃಷ್ಟಿ ಹರಿಸುತ್ತಿದ್ದರೆ, ನಮ್ಮಲ್ಲೇ ನಾವು ಯಾವುದಾದರೊಂದು ವಿಷಯದ ಬಗ್ಗೆ ತರ್ಕ ಮಾಡಿಕೊಳ್ಳುತ್ತಿರುತ್ತೇವೆ.
ನಾವು ಇನ್ನೊಬ್ಬರ ಮಾತನ್ನು ಕೇಳಬೇಕಾದರೆ, ಅವರನ್ನು ನೇರದೃಷ್ಟಿಯಿಂದ ನೋಡುತ್ತಿದ್ದರೆ, ಬಹಳ ಆಸಕ್ತಿಯಿಂದ ಆಲಿಸುತ್ತಿದ್ದೇವೆ ಅಥವಾ ಅವರ ಗಮನವನ್ನು ನಮ್ಮ ಕಡೆ ಸಳೆಯಲು ಪ್ರಯತ್ನಿಸುತ್ತಿದ್ದೇವೆ ಎಂದರ್ಥ. ಹಾಗೆಯೇ, ಕಣ್ಣರಳಿಸಿ ನೋಡಿದಾಗ, ಅದು ನಮ್ಮಲ್ಲಿರುವ ಆಸಕ್ತಿ ಅಥವಾ ಆಶ್ಚರ್ಯ ವ್ಯಕ್ತಪಡಿಸುವುದಷ್ಟೇ ಅಲ್ಲದೆ, ಇನ್ನೊಬ್ಬರಿಂದ ಸಂದರ್ಭಾನುಸಾರವಾಗಿ ಸಕಾರಾತ್ಮಕವಾದ ಪ್ರತಿಕ್ರಿಯೆಯನ್ನು ಆಹ್ವಾನಿಸುವಂತಹ ಸನ್ನೆಯಾಗಿರುತ್ತದೆ.
ಸಾಮಾನ್ಯವಾಗಿ, ಹೆಂಗಸರ ಕಣ್ಣರಳಿಸಿದ ನೋಟ, ವಾತ್ಸಲ್ಯದ ಸೂಚನೆ ಎಂಬುದು ಪರಿಣಿತರ ಅಭಿಪ್ರಾಯವಾಗಿದೆ. ಸಾಮಾನ್ಯವಾಗಿ ನಾವು ಒಂದು ನಿಮಿಷದಲ್ಲಿ ಆರರಿಂದ ಇಪ್ಪತ್ತು ಬಾರಿ ಕಣ್ಣು ಮಿಟುಕಿಸುತ್ತೇವೆ. ಇದಕ್ಕಿಂತ ಹೆಚ್ಚು ಬಾರಿ (ಸುಮಾರು ನೂರು ಬಾರಿಯವರೆಗೆ) ನಾವು ಕಣ್ಣು ಮಿಟುಕಿಸುತ್ತಿದ್ದರೆ, ಅದು ನಮ್ಮಲ್ಲಿ ಮನೆ ಮಾಡಿರುವ ಉದ್ವಿಗ್ನತೆ ಅಥವಾ ಒತ್ತಡವನ್ನು ಸೂಚಿಸುತ್ತದೆ.
ಹಬ್ಬು ಹಾರಿಸುವುದನ್ನು eyebrow flash ಎಂದು ಕರೆಯುತ್ತೇವೆ. ಇದು ಸಾಮಾನ್ಯವಾಗಿ ಅಭಿನಂದನೆ ಮತ್ತು ಅಂಗೀಕಾರದ ಚಿಹ್ನೆಯಾಗಿದೆ. ಸಂಭಾಷಣೆ ಕಲೆಯಲ್ಲಿ ನಮ್ಮ ಮಾತು ಮತ್ತು ದೇಹಭಾಷೆ ಒಂದುಕ್ಕೊಂದು ಹೊಂದಿಕೊಂಡಿದ್ದರೆ ನಮ್ಮ ಸಂವಹನ ಯಶಸ್ವಿಯಾಗಿರುತ್ತದೆ. 
ಸಂಭಾಷಣೆಯಲ್ಲಿ ಕೈಸನ್ನೆಗಳ ಪಾತ್ರ
ಕೈಗಳು ಸಾಮಾನ್ಯವಾಗಿ ನಮ್ಮ ಮನಃಸ್ಥಿತಿ ಹಾಗೂ ಭಾವನೆಗಳನ್ನು ಸೂಚಿಸುತ್ತವೆ. ನಮ್ಮ ದೇಹದಲ್ಲಿ ಮೆದುಳಿನ ಜೊತೆ ಹೆಚ್ಚು ನರಗಳ ಸಂಪರ್ಕವಿರುವುದು ಕೈಗಳಿಗೆ. ಆದ್ದರಿಂದ ನಮಗೆ ತಿಳಿದು ಹಾಗೂ ತಿಳಿಯದೆಯೂ ನಮ್ಮ ಕೈಗಳ ಚಲನೆಯಿಂದ ನಮ್ಮಲ್ಲಿರುವ ಭಾವನೆಗಳು ಹಾಗೂ ಯೋಚನೆಗಳು ಹೊರಹೊಮ್ಮುತ್ತವೆ. ಕೈಸನ್ನೆಗಳಿಂದ ವ್ಯಕ್ತವಾಗುವ ಕೆಲವು ಅರ್ಥಗಳನ್ನು ಇಲ್ಲಿ ಗಮನಿಸಿ:
ಕೈಕಟ್ಟಿ ನಿಲ್ಲುವ ಭಂಗಿ, ತಮ್ಮನ್ನು ತಾವು ಯಾವುದರಿಂದಲಾದರೂ ರಕ್ಷಿಸಿಕೊಳ್ಳುವಂತಹ ಅಥವಾ ದೂರವಿರಿಸಿಕೊಳ್ಳುವಂತಹ ಅರ್ಥವನ್ನು ಸುಚಿಸುತ್ತದೆ. ಇದಕ್ಕೆ ಹಲವಾರು ಕಾರಣಗಳಿರಬಹುದು- ಹಗೆತನ, ಬೇಸರ, ಆಸಕ್ತಿಯಿಲ್ಲದಿರುವುದು ಅಥವಾ ಭಯ.
ಮುಷ್ಟಿ ಬಿಗಿಹಿಡಿದು ಕೈಕಟ್ಟಿದ್ದರೆ, ಅದು ಹಟಮಾರಿತನ ಅಥವಾ ಹಗೆತನದ ಸೂಚನೆಯಿರಬಹುದು.
ತಮ್ಮ ತೋಳುಗಳನ್ನು ತಾವೇ ಗಟ್ಟಿಯಾಗಿ ಹಿಡಿದು ಕೊಂಡಿದ್ದರೆ (ತಮ್ಮನ್ನು ತಾವೇ ಅಪ್ಪಿಕೊಂಡಂತೆ), ಸಾಮಾನ್ಯವಾಗಿ ಅದು ಅಭದ್ರತೆಯ ಅಥವಾ ದುಃಖದ ಸನ್ನೆಯಾಗಿರುತ್ತದೆ. ಹಿಂದೆ ಕೈಕಟ್ಟಿದ್ದರೆ, ಅದು ಆತ್ಮವಿಶ್ವಾಸ ಅಥವಾ ಅಧಿಕಾರದ ಚಿಹ್ನೆಯಾಗಿರುತ್ತದೆ. ಪುಸ್ತಕ/ಫೈಲ್/ಪೇಪರ್‌ಗಳನ್ನು ಅಪ್ಪಿ ಹಿಡಿದುಕೊಳ್ಳುವುದು, ತಮ್ಮ ಅಂಗಿಯ ಕಾಲರ್ ಅಥವಾ ಕೈಯಲ್ಲಿನ ಗಡಿಯಾರವನ್ನು ಸರಿಮಾಡಿಕೊಳ್ಳುತ್ತಾ ಇರುವುದು, ಯಾವುದೇ ಪಾನೀಯವನ್ನು ತಮ್ಮ ಮುಂದೆ ಎರಡೂ ಕೈಗಳಲ್ಲಿ ಹಿಡಿದುಕೊಳ್ಳುವುದು, ತಮ್ಮ ತೋಳನ್ನು ಮುಟ್ಟಿಕೊಳ್ಳುತ್ತಾ ಅಥವಾ ಕೆರೆದುಕೊಳ್ಳುತ್ತಾ ಇರುವುದು- ಇವೆಲ್ಲವೂ ಆತಂಕದ ಲಕ್ಷಣಗಳು.
ನಾವು ಮಾತನಾಡುವಾಗ ನಮ್ಮ ಹಸ್ತ ಮೇಲ್ಮುಖವಾಗಿದ್ದು ತೆರೆದಿದ್ದರೆ, ಅದು ಬಿಚ್ಚು ಮನಸ್ಸಿನ ಅಥವಾ ಪ್ರಾಮಾಣಿಕತೆ ಹಾಗೂ ವಿನಮ್ರತೆಯ ಚಿಹ್ನೆಯೂ ಆಗಿರಬಹುದು.  ಕೆಳಮುಖವಾಗಿದ್ದರೆ, ಅದು ಅಧಿಕಾರ ಅಥವಾ ಸಾಮರ್ಥ್ಯದ ದ್ಯೋತಕವಾಗಿರುತ್ತದೆ.
ಸಂಭಾಷಣೆಯ ಸಮಯದಲ್ಲಿ ಕೈಯನ್ನು ಎದೆಯ ಎಡಭಾಗದ ಮೇಲಿಟ್ಟುಕೊಂಡು ಮಾತನಾಡುತ್ತಿದ್ದರೆ, ಅದು ತಮ್ಮನ್ನು ತಾವು ನಂಬಿಕಾರ್ಹ ಅಥವಾ ಪ್ರಾಮಾಣಿಕ ವ್ಯಕ್ತಿ ಎಂದು ಸೂಚಿಸುವಂತದ್ದಾಗಿರುತ್ತದೆ.
ತೋರುಬೆರಳನ್ನು ಮೇಲೆ, ಕೆಳಗೆ ಆಡಿಸುತ್ತಿದ್ದರೆ, ಅದು ಎಚ್ಚರಿಕೆಯನ್ನು ಕೊಡುವ ಸೂಚನೆ. ಕೈಯನ್ನು ಏನನ್ನಾದರೂ ಕತ್ತರಿಸುವ ರೀತಿಯಲ್ಲಿ ಮೇಲೆ, ಕೆಳಗೆ ಆಡಿಸುತ್ತಾ ಮಾತನಾಡುತ್ತಿದ್ದರೆ, ತಮ್ಮ ಮಾತುಗಳನ್ನು ಒತ್ತಿಹೇಳುವ ಪ್ರಯತ್ನವನ್ನು ಸೂಚಿಸುತ್ತದೆ. ಒಂದು ಕೈನ ಬೆರಳ ತುದಿಗಳಿಂದ ಇನ್ನೊಂದು ಕೈನ ಬೆರಳ ತುದಿಗಳನ್ನು ಸ್ಪರ್ಶಿಸುತ್ತಾ ಮಾತನಾಡುತ್ತಿದ್ದರೆ, ಅದು ಸಾಮಾನ್ಯವಾಗಿ ಆಲೋಚಿಸುತ್ತಾ ಮಾತನಾಡುವವರ ಲಕ್ಷಣ.
ಹಸ್ತಗಳನ್ನು ಒಂದಕ್ಕೊಂದು ಉಜ್ಜುತ್ತಾ ಮಾತನಾಡುತ್ತಿದ್ದರೆ, ಅದು ನಿರೀಕ್ಷಣೆಯ ಅಥವಾ ಯಾವುದಾದರೂ ಖುಷಿಕೊಡುವ ಕಾರ್ಯಕ್ಕೆ ಕೈಹಾಕುತ್ತಿರುವುದರ ಸಂಕೇತ. ಮೂಗನ್ನು ಮುಟ್ಟಿಕೊಳ್ಳುತ್ತಾ ಅಥವಾ ಕೆರೆದುಕೊಳ್ಳುತ್ತಾ ಮಾತನಾಡುತ್ತಿದ್ದರೆ, ಅದು ಸುಳ್ಳು ಹೇಳುತ್ತಿರುವ ಅಥವಾ ಅತಿಶಯೋಕ್ತಿಯ ಅಥವಾ ಅನುಮಾನದ ಚಿಹ್ನೆ ಆಗಿರಬಹುದು. ಗಲ್ಲವನ್ನು ಮುಟ್ಟಿಕೊಳ್ಳುತ್ತಾ ಮಾತನಾಡುತ್ತಿದ್ದರೆ, ಆಲೋಚನಾಪರರಾಗಿ ಮಾತನಾಡುತ್ತಿರಬಹುದು ಎಂದರ್ಥ.
ಕತ್ತನ್ನು ಕೆರೆದುಕೊಳ್ಳುತ್ತಾ ಮಾತನಾಡುವವರನ್ನು ನೋಡಿದಾಗ, ಅವರ ಮಾತುಗಳಲ್ಲಿನ ಅನುಮಾನ ಅಥವಾ ಅಪನಂಬಿಕೆ ವ್ಯಕ್ತವಾಗುತ್ತದೆ. ಕೈಕುಲುಕುವವರ ಹಸ್ತ ಕೆಳಮುಖವಾಗಿದ್ದರೆ, ಅದು ಅಧಿಕಾರದ ಸೂಚಕ, ಮೇಲ್ಮುಖವಾಗಿದ್ದರೆ, ಅದು ದಾಕ್ಷಿಣ್ಯಪರತೆಯ ಚಿಹ್ನೆ. ಕೈಕುಲುಕುವಾಗ ಎರಡೂ ಕೈಗಳನ್ನು ಉಪಯೋಗಿಸಿದರೆ, ಅದು ಅಪ್ಯಾಯತೆಯ/ ಪ್ರಾಮಾಣಿಕತೆಯ ಪ್ರತೀಕವಾಗಿರ ಬಹುದು.
ಕೈ ಕುಲುಕುವಾಗ ಇನ್ನೋಬ್ಬರ ಹಸ್ತವನ್ನು ಭದ್ರವಾಗಿ ಹಿಡಿದರೆ, ಅದು ಆತ್ಮವಿಶ್ವಾಸದ ಚಿಹ್ನೆ, ಇಲ್ಲದಿದ್ದರೆ, ಅದು ನಿರಾಸಕ್ತಿ ಅಥವಾ ಬೇಸರದ ದ್ಯೋತಕವಾಗಿರಬಹುದು. ಬಾಡಿ ಲ್ಯಾಂಗ್ವೇಜ್ ಸತತವಾಗಿ ವಿಕಾಸಗೊಳ್ಳುತ್ತಿರುವ ಒಂದು ಅಧ್ಯಯನಶಾಸ್ತ್ರ. ಇದರ ಸಾಮಾನ್ಯ ನಿಯಮಗಳನ್ನು  ಅಳವಡಿಸಿಕೊಂಡಾಗ, ನಮ್ಮ ಭಾಷೆಗೆ ಹಾಗೂ ಸಂಭಾಷಣೆಗೆ ಹೊಸ ಕಸುವು ದೊರೆಯುತ್ತದೆ.

ಇಂಗ್ಲಿಷ್‌ನಲ್ಲಿ ವರದಿ ವಾಕ್ಯ : 

ನಮ್ಮ ಅಥವಾ ಇತರರ ಮಾತುಗಳನ್ನು ಹಾಗೂ ಹೇಳಿಕೆಗಳನ್ನು ಇದ್ದ ಹಾಗೆಯೇ, ಯಾವುದೇ ಬದಲಾವಣೆಯನ್ನೂ ಮಾಡದೆ ಹೇಳಿದಾಗ ಅದನ್ನು Direct speech (D.S) ಎನ್ನುತ್ತೇವೆ. ಬರವಣಿಗೆಯಲ್ಲಿ, ಈ ಹೇಳಿಕೆಗಳನ್ನು inverted commasನಲ್ಲಿ ಹಾಕುತ್ತೇವೆ.
ಉದಾ: 1. He said, “I will come tomorrow’’
          2. I said, “How are you?”
ಆದರೆ, ಇನ್ನೊಬ್ಬರ ಅಥವಾ ನಮ್ಮ ಮಾತುಗಳನ್ನು ವರದಿ ಮಾಡಬೇಕಾದ ಸಂದರ್ಭದಲ್ಲಿ, Indirect speech (I.S) ಅನ್ನು ಉಪಯೋಗಿಸುತ್ತೇವೆ. ಸಾಮಾನ್ಯವಾಗಿ ಭೂತಕಾಲದಲ್ಲಾಡಿದ ಮಾತುಗಳನ್ನು ವರ್ತಮಾನದಲ್ಲಿ ವರದಿ ಮಾಡಲು indirect/reported speech ಅನ್ನು ಬಳಸಬಹುದು.
ಉದಾ: 1. He told that he would come the next day.
2. I asked how he was.
ನಮ್ಮ ಅಥವಾ ಇತರರ ಹೇಳಿಕೆಗಳು/ ಪ್ರಶ್ನೆಗಳು / ಭಾವನೆಗಳು/ ಸಲಹೆಗಳು/ ಕೋರಿಕೆಗಳು/ ಆಜ್ಞೆಗಳ ಬಗ್ಗೆ ನಾವು ಮಾತನಾಡಬೇಕಾದ ಸಂದರ್ಭದಲ್ಲಿ ಹೆಚ್ಚಾಗಿ reported speechhಅನ್ನು ಬಳಸುತ್ತೇವೆ. ಹಾಗಾಗಿ, reported speech ಅನ್ನು ಬಳಸುವಾಗ ಉಪಯೋಗಿಸುವಂತಹ ಕೆಲವು ಮುಖ್ಯ ನಿಯಮಗಳನ್ನು ತಿಳಿದುಕೊಳ್ಳುವುದು ಅವಶ್ಯಕ.
ಇಲ್ಲಿ ನಾವು ನಾಲ್ಕು ರೀತಿಯ ವಾಕ್ಯಗಳನ್ನು ಪರಿಗಣಿಸಬೇಕಾಗುತ್ತದೆ.
1. Assertive sentences (statements)
2. Interrogative sentences (questions)
3. Imperative sentences (request, order, advice....)
4. Exclamatory sentences (appreciation, wonder, excitement and other strong emotions)
Assertive sentenceಗಳನ್ನು reported speech ನಲ್ಲಿ ಹೇಳುವಾಗ ಉಪಯೋಗಿಸುವ ಕೆಲವು ನಿಯಮಗಳೆಂದರೆ, ‘that’ ಎಂಬ ಪದದಿಂದ ಹೇಳಿಕೆಯನ್ನು ಪ್ರಾರಂಭಿಸಬೇಕು ಹಾಗೂ ಹೇಳಿಕೆಯಲ್ಲಿನ ಕ್ರಿಯಾಪದವು present tenseನಲ್ಲಿದ್ದರೆ past tenseeಗೆ ಹಾಗೂ past tenseನಲ್ಲಿದ್ದರೆ past perfect tenseಗೆ ಬದಲಾಯಿಸಬೇಕು.
ಉದಾ: 1. D.S:  He said, “I will complete it”
I.S: He told that he would complete it.
2. D.S: She said, “I came last night”
I.S: she told that she had come the previous night.
ಈ ಸಂದರ್ಭದಲ್ಲಿ ನಾವು ನೆನಪಿನಲ್ಲಿಟ್ಟುಕೊಳ್ಳಬೇಕಾದ ವಿಷಯವೆಂದರೆ, direct speechನಲ್ಲಿನ ಹೇಳಿಕೆಗಳಲ್ಲಿ should, could, would ಎಂಬ ಪದಗಳು ಬಂದರೆ, reported speech ನಲ್ಲಿ ಆ ಪದಗಳನ್ನು ಬದಲಾಯಿಸದೇ ಹಾಗೆಯೇ ಉಳಿಸಿಕೊಳ್ಳಬೇಕು.
ಉದಾ: 1. D.S: The teacher said, “You should be disciplined”
I.S: The teacher told that I should be disciplined.
2. D.S: I said, “I could have done it better”
I.S: I told that I could have done it better.
Reported speech / Indirect speechh ಅನ್ನು ಕರಗತ ಮಾಡಿಕೊಂಡಾಗ ನಮಗೆ ವ್ಯಾಕರಣದ ಕೆಲವು ಸೂಕ್ಷ್ಮ ಪರಿವರ್ತನೆಗಳ ಬಗ್ಗೆ ಉಪಯುಕ್ತ ಒಳನೋಟಗಳು ದಕ್ಕುತ್ತವೆ, ಇದರಿಂದ ಇಂಗ್ಲಿಷ್ ಸಂಭಾಷಣೆಯ ಮೇಲಿನ ನಮ್ಮ ಹಿಡಿತ ದೃಢಗೊಳ್ಳುತ್ತದೆ.
ಮತ್ತಷ್ಟು ವರದಿ ವಾಕ್ಯಗಳು
Interrogative sentence (questions) ಗಳನ್ನು reported speechನಲ್ಲಿ ಬಳಸಬೇಕಾದರೆ ಉಪಯೋಗಿಸುವಂತಹ ಕೆಲವು ನಿಯಮಗಳನ್ನು ಇಲ್ಲಿ ಗಮನಿಸೋಣ.

ಪ್ರಶ್ನೆಗಳಲ್ಲಿ ಎರಡು ವಿಧ.
1. Wh-questions (what, when, which, why, where, how, whom, whose, who ಎಂಬ  wh-  ಪದಳಿಂದ ಪ್ರಾರಂಭವಾಗುವ ಪ್ರಶ್ನೆಗಳು)
2. Yes/no questions (yes ಅಥವಾ no ಎಂದು ಉತ್ತರಿಸಬಹುದಾದ ಎಲ್ಲಾ ಪ್ರಶ್ನೆಗಳು)
ಉದಾ: Are you alright?
Has she come to college?
ಮೊದಲನೆಯದಾಗಿ, ಪ್ರಶ್ನೆಗಳನ್ನು reported speechನಲ್ಲಿ ಹೇಳುವಾಗ that ಎನ್ನುವ ಪದದಿಂದ ಪ್ರಾರಂಭಿಸಬಾರದು. ಎರಡನೆಯ ಮುಖ್ಯ ನಿಯಮವೆಂದರೆ, ಪ್ರಶ್ನೆಯಲ್ಲಿನ verb-subject ಪದಕ್ರಮವನ್ನು reported speech ನಲ್ಲಿ, ssubject-verb ಪದಕ್ರಮವನ್ನಾಗಿ ಬದಲಾಯಿಸಿಬೇಕು ಹಾಗೂ ಕೊನೆಯದಾಗಿ, asked, inquired ಎನ್ನುವಂತಹ ಪದಗಳನ್ನು ಬಳಸಬೇಕು.
ಉದಾ: :1. D.S:  He said, “what are (verb) you (subject) doing?
I.S: He asked what I (subject) was (verb) doing.
2. D.S: She asked, “when will (verb) you (subject) complete the work?
I.S: She asked when I (subject) would (verb) complete the work.
ಹೀಗೆ ನಾವು ಪದಕ್ರಮವನ್ನು ಬದಲಾಯಿಸುವುದರಿಂದ, ಪ್ರಶ್ನೆಯನ್ನು ಹೇಳಿಕೆಯನ್ನಾಗಿ ಬದಲಾಯಿಸುತ್ತೇವೆ.
Yes/no ಪ್ರಶ್ನೆಗಳನ್ನು reported speechನಲ್ಲಿ ಹೇಳಬೇಕಾದಾಗ ನಾವು ಅನುಸರಿಸಬೇಕಾದ ಇನ್ನೊಂದು ನಿಯಮವೆಂದರೆ, iif/wheather ಎಂಬ ಪದದಿಂದ ಹೇಳಿಕೆಯನ್ನು ಪ್ರಾರಂಭಿಸಬೇಕು.
ಉದಾ: 1. D.S:  I said, “Is (verb) it (subject) alright?
I.S: I asked if it (subject) was (verb) alright.
Imperative sentenceಗಳನ್ನು (request, order, advice...) reported speechನಲ್ಲಿ ಹೇಳುವ ರಿತಿಯನ್ನು ನೋಡೋಣ:
1. D.S:  He said, “please wait for me’
    I.S: he requested me to wait for him.
2. D.S: She said, “post it immediately”
    I.S: She urged me to post it immediately.
3. D.S: I said to him, “complete the works as soon as possible”
I. S:  I suggested to him to complete the work as soon as possible.
ಇಲ್ಲಿ ನಾವು ಗಮನಿಸಬೇಕಾದ ಅಂಶವೆಂದರೆ, imperative sentenceಗಳ ಧ್ವನಿಯನ್ನು ಅನುಸರಿಸಿ, ಅದಕ್ಕೆ ಸರಿಹೊಂದುವಂತಹ ಪದಗಳನ್ನು (requested, urged, suggested....) ಉಪಯೋಗಿಸಬೇಕು.
Exclamatory sentenceಗಳಲ್ಲಿಯೂ, ಧ್ವನಿಯನ್ನು ಅನುಸರಿಸಿಯೇ ಪದಗಳ ಆಯ್ಕೆಯನ್ನು ಮಾಡಬೇಕು.
ಉದಾ: 1. D.S:  She said, “what a beautiful garden it is!”
I.S: She exclaimed that it was a very beautiful garden.
Reported speech ಅನ್ನು ನಮ್ಮ ಸಂಭಾಷಣೆಯಲ್ಲಷ್ಟೇ ಅಲ್ಲದೆ, ಮಾಧ್ಯಮದ ಬರವಣಿಗೆಯಲ್ಲಿಯೂ (media writing) ಹೆಚ್ಚಾಗಿ ಕಾಣುತ್ತೇವೆ.

Abstract ಮಾದರಿಯ ಸಮೂಹ ಚರ್ಚೆ : 

Abstract ಮಾದರಿಯ ಸಮೂಹ ಚರ್ಚೆಯಲ್ಲಿ, ಚರ್ಚೆಗೆ ಕೊಡುವಂತಹ ವಿಷಯಗಳು ಅಭ್ಯರ್ಥಿಗೆ ವಿಭಿನ್ನವಾಗಿಯೂ, ಸೃಜನಶೀಲವಾಗಿಯೂ ಯೋಚಿಸುವ (lateral thinking) ಸಾಮರ್ಥ್ಯವಿದೆಯೇ ಎಂಬುದನ್ನು ಪರೀಕ್ಷಿಸಲಾಗುತ್ತದೆ.
ಉದಾ: Why should we have 30 days and 31 days alternatively in the months of the year, why couldn’t we have had 30 days in the first 6 months and 31 days in the next 6 months?
Case-studyಯಲ್ಲಿ ಒಂದು ಸನ್ನಿವೇಶವನ್ನು ಅಭ್ಯರ್ಥಿಗಳಿಗೆ ಕೊಟ್ಟು, ಅದನ್ನು ವಿಶ್ಲೇಷಿಸುವ ಸವಾಲನ್ನು ಒಡ್ಡಲಾಗುವುದು. ಸಮೂಹ ಚರ್ಚೆಯ ಇತರ ಆಯಾಮಗಳನ್ನು ಮುಂದೆ ನೋಡೋಣ.
Launching Group Discussions
Group Discussionನಲ್ಲಿ ಅಭ್ಯರ್ಥಿಗಳಲ್ಲಿನ ಕೆಲವು ಮುಖ್ಯವಾದ ಕೌಶಲಗಳನ್ನು ಪರೀಕ್ಷಿಸಲಾಗುತ್ತದೆ.
*ಗುಂಪಿನಲ್ಲಿರುವ ಇತರರರೊಂದಿಗೆ ಅಭ್ಯರ್ಥಿಯ ಸಂವಹನ ಕೌಶಲ (group communication skills)
*ಇತರರೊಂದಿಗೆ ನಡೆದುಕೊಳ್ಳುವ ರೀತಿ
*ಇತರರ ಅಭಿಪ್ರಾಯಗಳನ್ನು ಸ್ವೀಕರಿಸುವ ಹಾಗೂ ಗೌರವಯುತವಾಗಿ ಪ್ರಶ್ನಿಸುವ ರೀತಿ
*Listening skills
*ಸೃಜನಶೀಲತೆ ಹಾಗೂ ತೀರ್ಮಾನ ಕೌಶಲ
*ವಿಶ್ಲೇಷಣಾ ಸಾಮರ್ಥ್ಯ ಹಾಗೂ ವಿಷಯ ಜ್ಞಾನ
*ಸಮಸ್ಯೆ ನಿವಾರಣಾ ಕೌಶಲ ಮತ್ತು ತರ್ಕಬದ್ಧ ಆಲೋಚನಾ ವಿಧಾನ ದೃಷ್ಟಿಕೋನ ಹಾಗೂ ಆತ್ಮವಿಶ್ವಾಸ
ಈ ಗುಣಗಳೆಲ್ಲಾ ಸಮೂಹ ಚರ್ಚೆಯಲ್ಲಿ ಪರೀಕ್ಷೆಗೊಳಪಡಿಸುವಂತಹವುಗಳು.
ಈ ನಿಟ್ಟಿನಲ್ಲಿ, ಅಭ್ಯರ್ಥಿಗಳು ಅನುಸರಿಸಬೇಕಾದ ಕೆಲವು ಪ್ರಮುಖ ಸೂತ್ರಗಳನ್ನು ಇಲ್ಲಿ ನೋಡೋಣ.
ಸಮೂಹ ಚರ್ಚೆಯಲ್ಲಿ ಯಾವುದೇ ಅಭ್ಯರ್ಥಿಯು ಮಾತನಾಡಬೇಕಾದರೆ ಗುಂಪಿನ ದೃಷ್ಟಿ ಸಂಪರ್ಕವನ್ನಿಟ್ಟುಕೊಳ್ಳಬೇಕು.
ಸಮೂಹ ಚರ್ಚೆಯನ್ನು ಮೂರು ಭಾಗಗಳನ್ನಾಗಿ ವಿಂಗಡಿಸಬಹುದು:
1. Initiating
2. Sustaining
3. Concluding
ಈ ಮೂರು ಭಾಗಗಳಲ್ಲಿ, ವಿಧವಿಧವಾದ questions ಮತ್ತು tags (eg: Shall we begin?), catalyzers(ಉತ್ತೇಜಕಗಳು  – that’s true, of course, I agree.... ) ಹಾಗೂ ಮುಕ್ತಾಯಗಳ (eg: lets sum up, lets get down to the bottom line, what is the consensus now?..) ಪ್ರಯೋಗಗಳಿರುತ್ತವೆ. ಇವುಗಳನ್ನು ಕ್ರಮಬದ್ಧವಾಗಿ ಅಭ್ಯಸಿಸಿದಾಗ ನಮ್ಮ ಸಮೂಹಚರ್ಚೆಯ ಸಾಮರ್ಥ್ಯ ಕ್ರಮೇಣ ಗಟ್ಟಿಗೊಳ್ಳುತ್ತದೆ.
ಕೊಟ್ಟ ವಿಷಯದ ಬಗ್ಗೆ ಚರ್ಚೆಯನ್ನು ಪ್ರಾರಂಭಿಸುವುದು ಸಮೂಹ ಚರ್ಚೆಯ ಒಂದು ಮುಖ್ಯವಾದ ಅಂಗ. ಚರ್ಚೆಯನ್ನು ಪರಿಣಾಮಕಾರಿಯಾಗಿ ಪ್ರಾರಂಭಿಸಬೇಕಾದರೆ, ವಿಷಯದ ಬಗ್ಗೆ ಆಳವಾದ ಜ್ಞಾನವನ್ನು ಹೊಂದಿರುವುದರ ಜೊತೆಗೆ, ಗುಂಪಿನ ಇತರರ ಮನಸ್ಸಿನ ಮೇಲೆ ಪ್ರಭಾವ ಬೀರುವ ಸಂವಹನ ಕಲೆಯನ್ನೂ ಕಲಿಯಬೇಕು.
ಸಮೂಹ ಚರ್ಚೆಯನ್ನು  ಪ್ರಾರಂಭಿಸಲು ಹಲವು ವಿಧಾನಗಳಿವೆ: Quotation (ಪ್ರಸಿದ್ಧ ಮತ್ತು ಸಮಯೋಚಿತ ಉಲ್ಲೇಖಗಳು) ಗಳ ಮೂಲಕ ಸಮೂಹ ಚರ್ಚೆಯನ್ನು ಪ್ರಾರಂಭಿಸಬಹುದು.
ಉದಾ: ‘Customer is king’ಎನ್ನುವಂತ ವಿಷಯ ಚರ್ಚೆಗೆ ಇದ್ದರೆ, Sam Waltonನ ‘There is only one boss, the customer. And he can fire everybody in the company... simply by spending his money somewhere else’ಎಂಬ ವಾಕ್ಯದೊಂದಿಗೆ ಚರ್ಚೆ ಪ್ರಾರಂಭಿಸಬಹುದು.
ವಿಷಯವನ್ನು/ವಿಷಯದಲ್ಲಿನ ಒಂದು ಮುಖ್ಯವಾದ ಆಯಾಮವನ್ನು ವಿವರಿಸುವುದರ ಮೂಲಕ ಚರ್ಚೆಯನ್ನು ಪ್ರಾರಂಭಿಸಬಹುದು.
ಉದಾ: Is Malthusian economic thought relevant today? ಎಂಬಂತಹ ವಿಷಯದಲ್ಲಿ ಅರ್ಥಶಾಸ್ತ್ರಜ್ಞ Malthusನ ಕಿರುಪರಿಚಯದೊಂದಿಗೆ ಚರ್ಚೆ ಪ್ರಾರಂಭಿಸಬಹುದು.
ಪ್ರಶ್ನೆಗಳ ಮುಖಾಂತರವೂ ಚರ್ಚೆಯನ್ನು ಆರಂಭಿಸುವುದು ಮತ್ತೊಂದು ಆಕರ್ಷಕ ವಿಧಾನ. ಸುಸೂತ್ರವಾಗಿ ಚರ್ಚೆಯನ್ನು ಮುಂದುವರೆಸಲು ಅನುಕೂಲವಾಗುವಂತಹ ಪ್ರಶ್ನೆಗಳಿಗೆ ವಿಶೇಷ ಮೌಲ್ಯವಿದೆ ಇಲ್ಲಿ, ಪ್ರಶ್ನೆಗಳ ಮುಖಾಂತರ ಮತ್ತೊಬ್ಬರನ್ನು ಅವಮಾನಿಸುವ ಮತ್ತು ಇನ್ನೊಬ್ಬರ ಅಜ್ಞಾನವನ್ನು ಎತ್ತಿತೋರಿಸುವ, ನಗೆಪಾಟಲಿಗೀಡು ಮಾಡುವ ಪ್ರವೃತ್ತಿಗಳಿಂದ  ಖಂಡಿತ ದೂರವಿರಬೇಕು.
ಇಷ್ಟೇ ಅಲ್ಲದೆ, ಒಂದು ಪ್ರಸಂಗ (anecdote) ಮುಖಾಂತರವಾಗಲೀ, ಅಶ್ಚರ್ಯಕರವಾದ ಅಂಕಿಅಂಶಗಳ ಮೂಲಕವಾಗಲೀ ಚರ್ಚೆಯನ್ನು ಪ್ರಾರಂಭಿಸಬಹುದು.
ಉದಾ: ಚರ್ಚಾ ವಿಷಯ India and Populationಗಿದ್ದರೆ, ‘Every year India adds the entire population of Australia to its numbers’s ಎಂಬಂತಹ ಹೇಳಿಕೆಯಿಂದ ಚರ್ಚೆಯನ್ನು ಪ್ರಾರಂಭಿಸಬಹುದು.
ಸಮೂಹ ಚರ್ಚೆಯನ್ನು ಸಮರ್ಥವಾಗಿ ಮುಂದುವರೆಸಿ ಕೊನೆಗೊಳಿಸುವ ಕೆಲವು ತಂತ್ರಗಳನ್ನು ಮುಂದೆ ನೋಡೋಣ

Wednesday, 7 January 2015

ಗ್ಯಾಜೆಟ್ ಲೋಕ , 2014 ಆಗು–ಹೋಗು, ಆಗಸ್ಟ್‌ / ಸರಣಿ– 8, spoken english

ನೋಶನ್ ಇಂಕ್ ಕೈನ್: ಕೈಗೆಟುಕುವ ಬೆಲೆಗೆ 2-ಇನ್-1



ಸ್ಮಾ ರ್ಟ್‌ಫೋನ್ ಮತ್ತು ಟ್ಯಾಬ್ಲೆಟ್ ಗಣಕಗಳನ್ನು ಮೊದಲು  ಮಾರುಕಟ್ಟೆಗೆ ತಂದಿದ್ದು ಆಪಲ್ ಕಂಪೆನಿ ಎಂದು ಹಲವು ಮಂದಿ ತಪ್ಪು ತಿಳಿದಿದ್ದಾರೆ. ಮೈಕ್ರೋಸಾಫ್ಟ್ ಕಂಪೆನಿ ಅದಕ್ಕಿಂತ ತುಂಬ ಮೊದಲೇ ತಂದಿತ್ತು. ಮೈಕ್ರೋಸಾಫ್ಟ್ 1999ರಲ್ಲಿ ಮಾರುಕಟ್ಟೆಗೆ ತಂದಿದ್ದ ಟ್ಯಾಬ್ಲೆಟ್ ನಿಜಕ್ಕೂ ಅತ್ಯುತ್ತಮವಾಗಿತ್ತು. ಆದರೆ ಅದು ತುಂಬ ತೂಕದ್ದಾಗಿದ್ದು, ಒಂದು ಕೈಯಲ್ಲಿ ಹಿಡಿದು ಕೆಲಸ ಮಾಡಲು ಕಷ್ಟಪಡಬೇಕಾದಂಥದ್ದಾಗಿತ್ತು.
ಆಪಲ್ ಐಪ್ಯಾಡ್ ನಂತರ ಆಂಡ್ರಾಯಿಡ್ ಟ್ಯಾಬ್ಲೆಟ್‌ಗಳು ಈಗ ಮಾರುಕಟ್ಟೆಯಲ್ಲಿ ಮುಂದಿವೆ. ಇಂತಹ ಸಂದರ್ಭದಲ್ಲಿ ಮೈಕ್ರೋಸಾಫ್ಟ್ ವಿಂಡೋಸ್ ಬಳಸುವ ಕೆಲವು ಪರಿವರ್ತಿಸಬಲ್ಲ (convertible, 2-in-1) ಅಂದರೆ ಟ್ಯಾಬ್ಲೆಟ್ ಆಗಿಯೂ ಲ್ಯಾಪ್‌ಟಾಪ್ ಆಗಿಯೂ ಬಳಸಬಲ್ಲ ಗಣಕಗಳು ಮಾರುಕಟ್ಟೆಯನ್ನು ಪ್ರವೇಶಿಸಿದವು. ಅಂತಹ ಒಂದು ಲೆನೋವೋ ಟ್ವಿಸ್ಟ್ ಮಾದರಿಯನ್ನು ಒಂದು ವರ್ಷದ ಹಿಂದೆ ಇದೇ ಅಂಕಣದಲ್ಲಿ ವಿಮರ್ಶೆ ಮಾಡಲಾಗಿತ್ತು. ಅದೇನೋ ದುಬಾರಿಯಾಗಿದ್ದು ಪೂರ್ತಿ ಪ್ರಮಾಣದ ಶಕ್ತಿಶಾಲಿಯಾದ ಲ್ಯಾಪ್‌ಟಾಪೇ ಆಗಿತ್ತು. ಈ ಸಲ ಕಡಿಮೆ ಬೆಲೆಯ ಲ್ಯಾಪ್‌ಟಾಪ್ ಆಗಿಯೂ ಟ್ಯಾಬ್ಲೆಟ್ ಆಗಿಯೂ ಬಳಸಬಲ್ಲ ಒಂದು ವಿಂಡೋಸ್ ಸಾಧನದ ಕಡೆಗೆ ಗಮನ ಹರಿಸೋಣ. ಅದುವೇ ನೋಶನ್ ಇಂಕ್ ಅವರ ಕೈನ್ 2-ಇನ್-1 (Notion Ink Cain 2 in 1).
ಗುಣವೈಶಿಷ್ಟ್ಯಗಳು
1.83 ಗಿಗಾಹರ್ಟ್ಸ್ ವೇಗದ ನಾಲ್ಕು ಹೃದಯಗಳ ಪ್ರೊಸೆಸರ್ (Intel® Z3735 Bay Trail), 2 ಗಿಗಾಬೈಟ್ ಪ್ರಾಥಮಿಕ ಮೆಮೊರಿ, 32 ಗಿಗಾಬೈಟ್ ಸಂಗ್ರಹ ಮೆಮೊರಿ, ಅಧಿಕ ಮೆಮೊರಿಗೆ ಮೈಕ್ರೊಎಸ್‌ಡಿ ಕಾರ್ಡ್ ಹಾಕಿಕೊಳ್ಳುವ ಸೌಲಭ್ಯ, 10 ಇಂಚು ಗಾತ್ರದ 1280x800 ರೆಸೊಲೂಶನ್‌ನ ಐಪಿಎಸ್ ಸ್ಪರ್ಶಸಂವೇದಿ ಪರದೆ, 2 ಮೆಗಾಪಿಕ್ಸೆಲ್ ರೆಸೊಲೂಶನ್‌ನ ಎರಡು ಕ್ಯಾಮೆರಾಗಳು, ಅಕ್ಸೆಲೆರೋಮೀಟರ್, 3ಜಿ ಸಿಮ್ ಹಾಕಲು ಹೆಚ್ಚಿಗೆ ಸೌಲಭ್ಯ (ಇದನ್ನು ಪ್ರತ್ಯೇಕವಾಗಿ ಕೊಂಡುಕೊಳ್ಳಬೇಕು), ಮೈಕ್ರೋ ಯುಎಸ್‌ಬಿ, ಯುಎಸ್‌ಬಿ 3, 3.5 ಮಿ.ಮೀ. ಇಯರ್‌ಫೋನ್, ಎಚ್‌ಡಿಎಂಐ ಕಿಂಡಿಗಳು, ವೈಫೈ, 7900 mAh ಶಕ್ತಿಯ ಬ್ಯಾಟರಿ, ಚಾರ್ಜ್ ಮಾಡಲು ಪ್ರತ್ಯೇಕ ಕಿಂಡಿ, 258x172x9.7 ಮಿ.ಮೀ. ಗಾತ್ರ, 630 ಗ್ರಾಂ ತೂಕ, ಜೋಡಿಸಬಲ್ಲ ಪ್ರತ್ಯೇಕಿಸಬಲ್ಲ ಕೀಬೋರ್ಡ್, ವಿಂಡೋಸ್ 8.1 ಕಾರ್ಯಾಚರಣ ವ್ಯವಸ್ಥೆ, ಇತ್ಯಾದಿ. ಇದನ್ನು ಟ್ಯಾಬ್ಲೆಟ್ ಆಗಿಯೂ ಲ್ಯಾಪ್‌ಟಾಪ್ ಆಗಿಯೂ ಬಳಸಬಹುದು. Snapdeal.com ಜಾಲತಾಣ ಮೂಲಕ ₹19,490 ಗೆ ಲಭ್ಯ.
ಇದನ್ನು ವಿನ್ಯಾಸ ಮಾಡಿದ್ದು ನಮ್ಮ ಬೆಂಗಳೂರಿನ ನೋಶನ್ ಇಂಕ್ ಲ್ಯಾಬೊರೇಟರಿಯವರು. ಇದರ ರಚನೆ ಮತ್ತು ವಿನ್ಯಾಸ ಅತ್ಯುತ್ತಮವಾಗಿದ್ದು ಮೊದಲ ನೋಟದಲ್ಲೇ ಮನಸೆಳೆಯುವಂತಿದೆ. ಕೀಲಿಮಣೆಗೆ ಟ್ಯಾಬ್ಲೆಟ್ ಗಣಕವನ್ನು ಜೋಡಿಸಿ ಅದನ್ನು ಲ್ಯಾಪ್‌ಟಾಪ್ ಮಾದರಿಯಲ್ಲಿ ಬಳಸಬಹುದು. ಕೀಲಿಮಣೆಯಲ್ಲಿ ಸ್ಪರ್ಶಸಂವೇದಿ ಪ್ಯಾಡ್ ಕೂಡ ಇದೆ. ಮೌಸ್ ಬಳಸುವವರಿಗಾಗಿ ಓಟಿಜಿ ಕೇಬಲ್ ಮತ್ತು ಒಂದು ನಿಸ್ತಂತು (ವಯರ್‌ಲೆಸ್) ಮೌಸ್ ಜೊತೆಗೆ ನೀಡಿದ್ದಾರೆ. ಕೀಲಿಮಣೆಯ ಹಿಂಭಾಗವನ್ನು ತ್ರಿಕೋನಾಕಾರದಲ್ಲಿ ಮಡಚಿ ಅದನ್ನು ಟ್ಯಾಬ್ಲೆಟ್‌ಗೆ ಆಧಾರವಾಗಿ ನಿಲ್ಲಿಸಲು ಬಳಸಬಹುದು. ಕೆಲಸ ಮುಗಿದಾಗ ಲ್ಯಾಪ್‌ಟಾಪ್ ಮಾದರಿಯಲ್ಲಿ ಮಡಚಬಹುದು. ಹೀಗೆ ಮಡಚಿದಾಗ ಒಂದು ದೊಡ್ಡ ಡೈರಿಯ ಮಾದರಿಯಲ್ಲಿ ಕಂಡುಬರುತ್ತದೆ. ಎಲ್ಲ ಜೋಡಣೆಗಳು ಮತ್ತು ಮಡಚುವಾಗ ಅಂಟಿಕೊಳ್ಳುವ ಜಾಗಗಳಲ್ಲಿ ಅಯಸ್ಕಾಂತಗಳಿವೆ. ಟ್ಯಾಬ್ಲೆಟ್ ಇರಲಿ, ಡೈರಿ ಮಾದರಿಯಲ್ಲಿ ಮಡಚಿದಾಗ ಇರಲಿ, ಕೈಯಲ್ಲಿ ಹಿಡಿದುಕೊಳ್ಳುವ ಅನುಭವ ತುಂಬ ಚೆನ್ನಾಗಿದೆ.
ಇದು ಬಳಸುವುದು ವಿಂಡೋಸ್ 8.1 ಕಾರ್ಯಾಚರಣ ವ್ಯವಸ್ಥೆಯನ್ನು (operating system). ಅದೂ ಟ್ಯಾಬ್ಲೆಟ್‌ಗಳಿಗೆಂದೇ ಪ್ರತ್ಯೇಕ ಬರುವ ಆವೃತ್ತಿಯಲ್ಲ. ಅಂದರೆ ನೀವು ವಿಂಡೋಸ್‌ನಲ್ಲಿ ಬಳಸುವ ಮಾಮೂಲಿ ತಂತ್ರಾಂಶಗಳನ್ನು (ಉದಾ- ಬರಹ) ಇದರಲ್ಲಿ ಬಳಸಬಹುದು. ಆದರೂ ಇದು ಶಕ್ತಿಶಾಲಿಯಾದ ಲ್ಯಾಪ್‌ಟಾಪ್‌ಗೆ ಬದಲಿ ಅಲ್ಲ ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಇದರಲ್ಲಿ ಹಾರ್ಡ್‌ಡಿಸ್ಕ್ ಇಲ್ಲ. 32 ಗಿಗಾಬೈಟ್ ಸಂಗ್ರಹ ಶಕ್ತಿ ಇದೆ. ಒಂದು ಮಟ್ಟಿನ ಕೆಲಸಗಳಿಗೆ ಇದು ಸಾಕು. ತುಂಬ ಶಕ್ತಿಯನ್ನು ಬೇಡುವ ಆಟಗಳನ್ನು ಆಡಲು, ಗ್ರಾಫಿಕ್ಸ್ ಕೆಲಸ ಮಾಡಲು ಅಥವಾ ವಿಡಿಯೊ ಎಡಿಟಿಂಗ್ ಮಾಡಲು ಇದನ್ನು ಬಳಸಲು ಸಾಧ್ಯವಿಲ್ಲ.
ಲೇಖನ ತಯಾರಿ, ಮೈಕ್ರೋಸಾಫ್ಟ್ ಆಫೀಸ್ ತಂತ್ರಾಂಶ ಬಳಕೆ, ಇಮೈಲ್, ಜಾಲತಾಣ ವೀಕ್ಷಣೆ, ವಿಡಿಯೊ ವೀಕ್ಷಣೆ –ಇಂತಹ ಕೆಲಸಗಳಿಗೆ ಇದು ಸಾಕು. ಇದಕ್ಕೆ ಹೊರಗಡೆಯಿಂದ ಹಾರ್ಡ್‌ಡಿಸ್ಕ್, ಸಿ.ಡಿ./ಡಿ.ವಿ.ಡಿ. ಡ್ರೈವ್ ಎಲ್ಲ ಜೋಡಿಸಬಹುದು. ನಾನು ಹಾರ್ಡ್‌ಡಿಸ್ಕ್ ಜೋಡಿಸಿ ಅದರಲ್ಲಿದ್ದ ಫೈಲ್‌ಗಳನ್ನು ಬಳಸಿ ಆರಾಮವಾಗಿ ಕಲಸ ಮಾಡಿದ್ದೇನೆ. ಯಾವುದೇ ತೊಂದರೆ ಕಂಡುಬರಲಿಲ್ಲ. ಇದರಲ್ಲಿ ಮೈಕ್ರೊಎಸ್‌ಡಿ ಕಾರ್ಡ್ ಹಾಕಿಕೊಳ್ಳಲೂ ಜಾಗವಿದೆ. ಯುಎಸ್‌ಬಿ ಮೂಲಕವೂ ಅಧಿಕ ಮೆಮೊರಿ ಜೋಡಿಸಿಕೊಳ್ಳಬಹುದು. ಆದುದರಿಂದ ಇದರಲ್ಲಿ ಹಾರ್ಡ್‌ಡಿಸ್ಕ್ ಇಲ್ಲ ಎಂಬುದು ಅಷ್ಟು ದೊಡ್ಡ ಕೊರತೆಯಾಗಬೇಕಾಗಿಲ್ಲ. ವಿಡಿಯೊ ವೀಕ್ಷಣೆ ಅನುಭವ ಚೆನ್ನಾಗಿದೆ.
ಹೈಡೆಫಿನಿಶನ್ ಮಾತ್ರವಲ್ಲ 4k ವಿಡಿಯೊಗಳನ್ನೂ ವೀಕ್ಷಿಸಬಹುದು. ಇದರ ಆಡಿಯೊ ಎಂಜಿನ್ ಚೆನ್ನಾಗಿದೆ. ಇದರ ಜೊತೆ ಯಾವುದೇ ಇಯರ್‌ಫೋನ್ ನೀಡಿಲ್ಲ. ಹಾಗೆ ನೀಡಲು ಇದು ಫೋನಂತೂ ಅಲ್ಲ ತಾನೆ? ಉತ್ತಮ ಗುಣಮಟ್ಟದ ಇಯರ್‌ಫೋನ್ ಜೋಡಿಸಿ ಆಲಿಸಿದಾಗ ಧ್ವನಿಯ ಗುಣಮಟ್ಟ ಉತ್ತಮವಾಗಿಯೇ ಇತ್ತು. ಅಂದರೆ ಉತ್ತಮ ಸಂಗೀತ ಆಲಿಸುವುದು ಅಥವಾ ಸಿನಿಮಾ ವೀಕ್ಷಣೆ ನಿಮ್ಮ ಪ್ರಮುಖ ಅಗತ್ಯಗಳಲ್ಲಿ ಒಂದಾಗಿದ್ದಲ್ಲಿ ಇದನ್ನು ಖಂಡಿತ ಕೊಳ್ಳಬಹುದು. ಇದರ ಬ್ಯಾಟರಿ ಶಕ್ತಿಶಾಲಿಯಾಗಿದೆ. ಸುಮಾರು 7ರಿಂದ 9 ಗಂಟೆ ಬಾಳಿಕೆ ಬರುತ್ತದೆ. ಬ್ಯಾಟರಿ ಚಾರ್ಜ್ ಮಾಡಲು ಚಾರ್ಜರ್ ನೀಡಿದ್ದಾರೆ. ಅದನ್ನು ಜೋಡಿಸಲು ಪ್ರತ್ಯೇಕ ಕಿಂಡಿ ಇದೆ. ಇದರಲ್ಲಿರುವ ಮೈಕ್ರೋಯುಎಸ್‌ಬಿ ಕಿಂಡಿಗೆ ನಿಮ್ಮ ಮನೆಯಲ್ಲಿರುವ ಯಾವುದೇ ಯುಎಸ್‌ಬಿ ಚಾರ್ಜರ್ ಜೋಡಿಸಿಯೂ ಇದನ್ನು ಚಾರ್ಜ್ ಮಾಡಬಹುದು. 
ದುಬಾರಿ ಬೆಲೆಯ ಸಾಧನಗಳಿಗಿಂತ ಇದು ಯಾವ ರೀತಿಯಲ್ಲೂ ಕಡಿಮೆಯಿಲ್ಲ. ಖ್ಯಾತ ಕಂಪೆನಿಗಳ, ಇಷ್ಟೇ ದೊಡ್ಡ ಟ್ಯಾಬ್ಲೆಟ್‌ಗಳಿಗೆ ₹40,000ದ ಆಸುಪಾಸಿನಲ್ಲಿ ಬೆಲೆಯಿದೆ. ಕೀಲಿಮಣೆ ಪ್ರತ್ಯೇಕ ಕೊಳ್ಳಬೇಕು. ಇದರಲ್ಲಿ ಟ್ಯಾಬ್ಲೆಟ್, ಕೀಲಿಮಣೆ, ಮೌಸ್ ಎಲ್ಲ ಸೇರಿ ಕೇವಲ ₹19,490 ಅಂದರೆ ಇದು ನಿಜಕ್ಕೂ ನೀಡುವ ಹಣಕ್ಕೆ ಅತ್ಯುತ್ತಮ ಉತ್ಪನ್ನ ಎಂದು ಖಡಾಖಂಡಿತವಾಗಿ ಹೇಳಬಹುದು. ಅದರಲ್ಲೂ ನೀವು ವಿಂಡೋಸ್ ಆಧಾರಿತ ತಂತ್ರಾಂಶಗಳನ್ನು, ಫಾಂಟ್‌ಗಳನ್ನು ಬಳಸುವವರಾದರೆ ನಿಮಗೆ ಇದು ಖಂಡಿತ ವಾಗಿಯೂ ಉತ್ತಮ ಕೊಳ್ಳುವಿಕೆ ಎನ್ನಬಹುದು. ಕನ್ನಡ ಲೇಖಕರುಗಳೇ ಗಮನಿಸುತ್ತಿದ್ದೀರಾ?
ವಾರದ ಆಪ್ (app)
ಇನ್‌ಬ್ರೌಸರ್

ಇದು ಆಂಡ್ರಾಯಿಡ್ ಫೋನ್ ಮತ್ತು ಟ್ಯಾಬ್ಲೆಟ್‌ಗಳಲ್ಲಿ ಕೆಲಸ ಮಾಡುವ ಕಿರುತಂತ್ರಾಂಶ InBrowser Incognito Browsing (ಆಪ್). ಇದು ಕೂಡ ಒಂದು ಬ್ರೌಸರ್, ಅಂದರೆ ಜಾಲತಾಣ ವೀಕ್ಷಣೆ ಮಾಡಲು ಸಹಾಯ ಮಾಡುವ ಆಪ್. ಬ್ರೌಸರ್ ಆಪ್‌ಗಳು ಗೂಗ್ಲ್ ಪ್ಲೇ ಸ್ಟೋರ್‌ನಲ್ಲಿ ಬೇಕಾದಷ್ಟಿವೆ. ಹಾಗಿರುವಾಗ ಇದರಲ್ಲೇನು ವಿಶೇಷ ಎಂದು ಕೇಳುತ್ತೀರಾ? ಇದರ ವಿಶೇಷವೇನೆಂದರೆ, ಇದು ನೀವು ಭೇಟಿ ನೀಡುವ ಜಾಲತಾಣಗಳನ್ನು ನೆನಪಿಟ್ಟುಕೊಳ್ಳುವುದಿಲ್ಲ. ನೀವು ಏನನ್ನು ಹುಡುಕಾಡುತ್ತೀರೋ ಅದಕ್ಕೆ ಸಂಬಂಧಪಟ್ಟ ಜಾಹೀರಾತುಗಳು ನಿಮಗೆ ಇತರೆ ಆಪ್‌ಗಳಲ್ಲಿ ಬರುವುದನ್ನು ಇದರಿಂದ ತಪ್ಪಿಸಬಹುದು.
ಗ್ಯಾಜೆಟ್ ಸುದ್ದಿ
ಡ್ರೋನ್‌ಗಳಿಗೆ ಭಾರತದಲ್ಲಿ ನಿಷೇಧ

ಚಾಲಕನಿಲ್ಲದ ಚಿಕ್ಕ ಆಕಾಶನೌಕೆ ಅಥವಾ ಚಿಕ್ಕ ಹೆಲಿಕಾಪ್ಟರ್ ಅನ್ನು ಡ್ರೋನ್ ಎನ್ನಬಹುದು. ಇದನ್ನು ದೂರನಿಯಂತ್ರಣ ತಂತ್ರಜ್ಞಾನದ ಮೂಲಕ ಹಾರಾಡಿಸಲಾಗುತ್ತದೆ. ಅಮೆಜಾನ್ ಕಂಪೆನಿ ಇದನ್ನು ಬಳಸಿ ಗ್ರಾಹಕರ ಮನೆ ಬಾಗಿಲಿಗೆ ಅವರು ಕೊಂಡ ವಸ್ತುಗಳನ್ನು ತಲುಪಿಸುವುದಾಗಿ ಹೇಳಿಕೊಂಡಿದೆ. ಅದರ ಬಗ್ಗೆ ಒಂದು ಕಿರುವಿಡಿಯೊ ಕೂಡ ತಯಾರಿಸಿದ್ದಾರೆ. ನೀವು ಒಂದು ಉತ್ಪನ್ನವನ್ನು ಆಜ್ಞೆ ಮಾಡಿದರೆ 30 ನಿಮಿಷಗಳಲ್ಲಿ ಅದು ನಿಮ್ಮನ್ನು ತಲುಪುತ್ತದೆ ಎಂದು ಅಮೆಜಾನ್ ಹೇಳಿಕೊಂಡಿದೆ. ಭಾರತದಲ್ಲಿ ಅದನ್ನು ಪ್ರಯೋಗಾತ್ಮಕವಾಗಿ ಪ್ರಾರಂಭಿಸಲಾಗುವುದು ಎಂದೂ ತಿಳಿಸಿದೆ. ಈಗ ಭಾರತದ ನಾಗರಿಕ ವಾಯುಯಾನ ಪ್ರಾಧಿಕಾರವು ಸಾರ್ವಜನಿಕ ಡ್ರೋನ್ ಬಳಕೆಗೆ ನಿರ್ಬಂಧ ವಿಧಿಸಿದೆ. ಅದರ ಬಗ್ಗೆ ಎಲ್ಲ ನಿಯಮಗಳನ್ನು ಮಾಡಿದ ನಂತರ ಮಾತ್ರ ಡ್ರೋನ್‌ಗಳನ್ನು ಭಾರತದಲ್ಲಿ ಬಳಸಬಹುದು ಎಂದು ಅದು ಸೂಚಿಸಿದೆ.
ಗ್ಯಾಜೆಟ್ ತರ್ಲೆ
ನೀವು ಅಮೆಜಾನ್ ಜಾಲತಾಣದಿಂದ ಒಂದು ಡ್ರೋನ್ ಅನ್ನು ಕೊಂಡುಕೊಂಡರೆ ಅದನ್ನು ಅವರು ಕೊರಿಯರ್ ಮೂಲಕ ಕಳುಹಿಸಿಕೊಡುತ್ತಾರಾ ಅಥವಾ ಡ್ರೋನ್ ತಾನಾಗಿಯೇ ಹಾರಿಕೊಂಡು ನಿಮ್ಮ ಮನೆಗೆ ಬರುತ್ತದೋ?
ಗ್ಯಾಜೆಟ್ ಸಲಹೆ
ಶರತ್ ಅವರ ಪ್ರಶ್ನೆ: ನನಗೆ ಒಂದು ಉತ್ತಮ ಆಂಡ್ರಾಯಿಡ್ ಮೊಬೈಲ್ ಟ್ರ್ಯಾಕರ್ ಆಪ್ ಬೇಕು. ಯಾವುದು ಬಳಸಬಹುದು?
ಉ: ಇದೇ ಅಂಕಣದಲ್ಲಿ ತುಂಬ ಹಿಂದೆಯೇ ಸೂಚಿಸಿದ Prey ಬಳಸಬಹುದು.

ಮೋಂಬತ್ತಿಯೆಂಬ ಪ್ರಯೋಗಾಲಯ

ಸಾಮಗ್ರಿಗಳು: ಮೋಂಬತ್ತಿ, ಬೆಂಕಿ ಪೆಟ್ಟಿಗೆ, ಚಿಮ್ಮಟ.
ವಿಧಾನ: 
1) ಒಂದು ಹೊಸ ಮೋಂಬತ್ತಿಯನ್ನು ತೆಗೆದುಕೊಂಡು ಅದನ್ನು ಬೆಂಕಿಕಡ್ಡಿಯಿಂದ ಉರಿಸಿರಿ.
2) ಕನಿಷ್ಟ ಐದು ನಿಮಿಷ ಮೋಂಬತ್ತಿ ಉರಿಯುವುದನ್ನು ಸರಿಯಾಗಿ ವೀಕ್ಷಿಸಿರಿ.
3) ಐದು ನಿಮಿಷಗಳ ನಂತರ ಚಿಮ್ಮಟದ ಸಹಾಯದಿಂದ ಮೋಂಬತ್ತಿಯ ಉರಿಯುತ್ತಿರುವ ಬತ್ತಿಯ (ದಾರ) ತಳಭಾಗನ್ನು ಗಟ್ಟಿಯಾಗಿ ಚಿವುಟಿ ಹಿಡಿಯಿರಿ.
ಪ್ರಶ್ನೆ:
1) ಮೋಂಬತ್ತಿಯ ಮೇಣವನ್ನಷ್ಟೇ ತೆಗೆದುಕೊಂಡು ಅದನ್ನು ಉರಿಸಿದರೆ ಅದು ಉರಿಯುತ್ತಿದೆಯೇ? ಯಾಕೆ ?
2) ಕೇವಲ ಮೋಂಬತ್ತಿಯ ಬತ್ತಿ (ದಾರ)ಯನ್ನು ಉರಿಸಿದರೆ ಅದು ಉರಿಯುತ್ತಿದೆಯೇ? ಯಾಕೆ ?
3) ಚಿಮ್ಮಟದ ಸಹಾಯದಿಂದ ಮೋಂಬತ್ತಿಯ ‘ಬತ್ತಿ’ಯನ್ನು ಗಟ್ಟಿಯಾಗಿ ಚಿವುಟಿ ಬಿಟ್ಟಾಗ ಮೋಂಬತ್ತಿ
ಉರಿಯುತ್ತದೆಯೇ. ಯಾಕೆ ?
4) ಮೋಂಬತ್ತಿ ಉರಿಯುವ ಕ್ರಿಯೆಯನ್ನು ವಿವರಿಸಿರಿ.
ಉತ್ತರ:
1) ಮೋಂಬತ್ತಿಯ ಮೇಣವನ್ನಷ್ಟೇ ತೆಗೆದುಕೊಂಡು ಉರಿಸಿದರೆ ಅದು ಉರಿಯುವುದಿಲ್ಲ.
2) ಮೋಂಬತ್ತಿಯ ಬತ್ತಿಯನ್ನಷ್ಟೇ ತೆಗೆದುಕೊಂಡು ಉರಿಸಿದರೆ ಅದು ಉರಿಯುವುದಿಲ್ಲ. ಅದು ಸುಟ್ಟು ಹೋಗುತ್ತದೆ.
3) ಚಿಮ್ಮಟದ ಸಹಾಯದಿಂದ ಬತ್ತಿಯನ್ನು ಹಿಚುಕಿದರೆ ಮೋಂಬತ್ತಿ ನಂದುತ್ತದೆ. ಯಾಕೆಂದರೆ ಮೋಂಬತ್ತಿ ಉರಿಯುವಾಗ ಅದು ಘನ ಮೇಣವನ್ನು ಕರಗಿಸುತ್ತದೆ. ದ್ರವ ಮೇಣವು ಬತ್ತಿಯ  ಮುಖಾಂತರ ಲೋಮನಾಳ ತತ್ವದಿಂದ ಮೇಲೆ ಏರಿ ಜ್ವಾಲೆಯ ಸಂಪರ್ಕದಿಂದ ಕಾಯ್ದು ಮೇಣ ಆವಿಯಾಗಿ, ಈ ಬಿಸಿಮೇಣದ ಆವಿ ಬತ್ತಿಯ ಸುತ್ತಲೂ ಉರಿಯುತ್ತದೆ. ಉರಿಯುತ್ತಿರುವ ಬತ್ತಿಯ ತಳಭಾಗವನ್ನು ಹಿಚುಕಿದಾಗ ದ್ರವ ಮೇಣವು ಮೇಲೇರುವುದು ನಿಂತು ಜ್ವಾಲೆ ನಂದುತ್ತದೆ.
4)  ಮೋಂಬತ್ತಿಯ ಬತ್ತಿಗೆ ಬೆಂಕಿ ಕಡ್ಡಿಯಿಂದ ಬೆಂಕಿ ಹಚ್ಚಿದಾಗ ಬತ್ತಿಯು ಲಗುಬಗೆಯಿಂದ ಉರಿಯುತ್ತ, ‘ಬತ್ತಿ’ಯ ಕೆಳಗೆ ಚಲಿಸುತ್ತದೆ. ಅದು ಉರಿಯುವುದು ಸ್ವಲ್ಪ ನಿಲ್ಲುತ್ತದೆ ಹಾಗೂ ಅದರ ಸುತ್ತಲೂ ಚಿಕ್ಕ ಜ್ವಾಲೆ ಕಾಣಿಸುತ್ತದೆ. ಆ ನಂತರ ಅದು ದೊಡ್ಡದಾಗಿ ಸ್ಥಿರವಾಗಿ ಉರಿಯುತ್ತದೆ. ‘ಬತ್ತಿ’ಯ ಜ್ವಾಲೆ, ಕರಗಿದ ಹಾಗೂ ಘನ ಮೇಣದ ಮಧ್ಯ ನೇರವಾದ ಸಂಪರ್ಕವಿಲ್ಲ. ಜ್ವಾಲೆ ಹಾಗೂ ಕರಗಿದ ಮೇಣದ ಮಧ್ಯ ‘ಬತ್ತಿ’ಯ ಸ್ವಲ್ಪ ಭಾಗ ಉರಿಯುತ್ತಿಲ್ಲ. ಜ್ವಾಲೆಯು ಕೆಳಮುಖವಾಗಿ ಚಲಿಸಿ ಘನ ಮತ್ತು ದ್ರವ ಮೇಣವನ್ನು ಸುಡುವುದಿಲ್ಲ. ಕರಗಿದ ಮೇಣದ ಸುತ್ತಲು ಘನ ಮೇಣವನ್ನು  ಗಮನಿಸಿ. ಮೋಂಬತ್ತಿ ಜ್ವಾಲೆಯಲ್ಲಿ ವಿವಿಧ ಬಣ್ಣಗಳನ್ನು ಕಾಣುವಿರಲ್ಲವೇ?

ಬಯೊಡೇಟಾ ಒಂದು ಸ್ಥೂಲ ಪರಿಚಯ

ಕೆಲಸಕ್ಕೆ ಅರ್ಜಿ ಸಲ್ಲಿಸುವಾಗ ಒಂದು ಒಳ್ಳೆಯ cover letterನ ಜೊತೆಯಲ್ಲಿ, ನಮ್ಮ ಬಗ್ಗೆ ಒಂದು ಸಂಕ್ಷಿಪ್ತ ಮಾಹಿತಿಯನ್ನು ಕೊಡುವಂತಹ Bio-dataವನ್ನು ಕಳುಹಿಸುವುದು ಬಹು ಮುಖ್ಯ.
Bio ಎಂದರೆ ಸ್ವ (self) data ಎಂದರೆ ‘ಮಾಹಿತಿ’ ಎಂದರ್ಥ. Bio-dataವನ್ನು ಅಮೆರಿಕನ್ ಇಂಗ್ಲಿಷ್‌ನಲ್ಲಿ resume (ರೆಸ್ಯೂಮೆ) ಎಂದು, ಬ್ರಿಟಿಷ್ ಇಂಗ್ಲಿಷ್‌ನಲ್ಲಿ CV (Curriculum Vitae) ಎಂದು ಕರೆಯುತ್ತಾರೆ. ಸಾಮಾನ್ಯವಾಗಿ, resume ನಲ್ಲಿರುವ ನಮ್ಮ ಮಾಹಿತಿಗಳು ಆದಷ್ಟು ಸಂಕ್ಷಿಪ್ತವಾಗಿದ್ದು, ಒಂದು ಪುಟದ ಮಿತಿಯಲ್ಲಿರಬೇಕು. ಆದರೆ CVಯಲ್ಲಿ, ನಾವು ಕೊಡುವ ಮಾಹಿತಿಗಳ ಸಂಪೂರ್ಣ ವಿವರ ಕೂಲಂಕಷವಾಗಿದ್ದು, ಇಷ್ಟೇ ಪುಟಗಳಿರಬೇಕೆಂಬ ನಿಬಂಧನೆಯಿಲ್ಲ.
ಇನ್ನೂ ನಿಖರವಾಗಿ ಹೇಳಬೇಕೆಂದರೆ, CVಯಲ್ಲಿ, ನಮ್ಮ ವಿದ್ಯಾರ್ಹತೆಗೆ ಸಂಬಂಧಿಸಿದ ವಿವರಗಳನ್ನು (academic details) ತಿಳಿಸಬೇಕು. ಹಾಗಾಗಿ, education ಮತ್ತು researchಗೆ ಸಂಬಂಧಪಟ್ಟ ಉದ್ಯೋಗಗಳಿಗೆ (teacher, lecturer, research scholar, scientist...) CVಯನ್ನೂ, ಇತರ ಉದ್ಯೋಗ ಗಳಿಗೆ (police, clerk, typist, receptionist, IT company ಯಲ್ಲಿನ ಕೆಲಸಗಳು....) resume  ಅನ್ನೊ ಕಳುಹಿಸುವುದು ಸೂಕ್ತ.
Bio-data ಒಳ್ಳೆಯ ಕೆಲಸ ಪಡೆಯವುದಕ್ಕೆ ಇರುವಂತಹ ಪ್ರಮುಖ ಸಾಧನ. ಆದ್ದರಿಂದ, ಅದರ ರಚನೆ ಹಾಗೂ ಸ್ವರೂಪದ ಬಗ್ಗೆ ಎಚ್ಚರವಹಿಸಬೇಕು. Bio-dataದಲ್ಲಿ ಸಾಮಾನ್ಯವಾಗಿ ನಾವು ಕೊಡಬೇಕಾದ ಮಾಹಿತಿಗಳ ಪಟ್ಟಿಯನ್ನು ಗಮನಿಸಿ:
Name / ಹೆಸರು:
Age / ವಯಸ್ಸು:
Date of Birth / ಜನ್ಮ ದಿನಾಂಕ:
Address for communication / ವಿಳಾಸ:
Phone/Mobile / ದೂರವಾಣಿ, ಮೊಬೈಲ್‌ ಸಂಖ್ಯೆ:
Email/ ಇಮೇಲ್‌ ವಿಳಾಸ:
Career Objective / ವೃತ್ತಿಪರ ನಿಲುವು:
Educational Qualifications/ ಶೈಕ್ಷಣಿಕ ಅರ್ಹತೆ:
Work Experience / ವೃತ್ತಿ ಅನುಭವ
Achievements and Extra Curricular Activities/ ಸಾಧನೆ, ಪಠ್ಯೇತರ ಚಟುವಟಿಕೆ:
About Yourself / ಸ್ವ ವಿವರ:
Personal Information/ ವೈಯಕ್ತಿಕ ಮಾಹಿತಿ:
Father’s Name/ ತಂದೆಯ ಹೆಸರು:
Mother’s Name/ ತಾಯಿಯ ಹೆಸರು:
Hobbies/Interests/ ಹವ್ಯಾಸ/ ಆಸಕ್ತಿ:
Marital Status: ವಿವಾಹ ಮಾಹಿತಿ:
Languages known/ ಭಾಷಾ ಜ್ಞಾನ:
Place/ ಸ್ಥಳ:
References will be provided on Request/ ಕೋರಿಕೆಯ ಮೇರೆಗೆ ಶಿಫಾರಸ್ಸು ನೀಡಲಾಗುವುದು.
ಇಲ್ಲಿ career objectiveಎಂದು ಇರುವ ಜಾಗದಲ್ಲಿ ನಮಗೆ ಯಾವ ಉದ್ಯೋಗದ ಬಗ್ಗೆ ಒಲವಿದೆ ಎಂಬುದನ್ನು ಸೂಚ್ಯವಾಗಿ ವಿವರಿಸಬೇಕು.
Educational Qualifications ಬಗ್ಗೆ ಮಾಹಿತಿ ನೀಡುವಾಗ, ವರ್ತಮಾನದ ವಿವರಗಳನ್ನು ಮೊದಲು ನೀಡಿ ಅನಂತರ ಹಿಂದಿನ ವರ್ಷದ ವಿವರಗಳನ್ನು ನೀಡುತ್ತಾ ಹೋಗಬೇಕು. (ಉದಾ: Ph. D., M. Phil., M.A., B.A., -ಈ ಕ್ರಮದಲ್ಲಿರಬೇಕು)
About Yourselfನ ಜಾಗದಲ್ಲಿ, ಉದ್ಯೋಗಕ್ಕೆ ಸಂಬಂಧಿಸಿದಂತೆ ನಮ್ಮಲ್ಲಿರುವ ವಿಶೇಷ ಶಕ್ತಿ, ಸಾಮರ್ಥ್ಯಗಳನ್ನು ಪರಿಚಯಿಸಬೇಕು. ಇಲ್ಲಿ ನಮ್ಮ ಬಗ್ಗೆ ನಾವೇ ಬಡಾಯಿ ಕೊಚ್ಚಿಕೊಳ್ಳುವುದನ್ನು ಹಾಗೂ ಅನಗತ್ಯ ಹಿಂಜರಿಕೆಯನ್ನು ತೋರಬಾರದು.
Bio-dataದ ಕೊನೆಯಲ್ಲಿ ಸಹಿ ಇರಬಾರದೆಂಬುದು ಒಂದು ಮುಖ್ಯ ನಿಯಮ.
ಕೊನೆಯದಾಗಿ,MS wordನಲ್ಲಿ ತಯಾರಿಸಿದಂತ Bio-dataದ print out ತೆಗೆಯುವಾಗ ಕೆಲವು ನಿರ್ದಿಷ್ಟ ಅಂಶಗಳನ್ನು ನೆನಪಿಡಬೇಕು. ಸಾಮಾನ್ಯವಾಗಿ, sstyle:Times New Roman, Font Size : 12, Line Space : 1.5, ಹಾಗೂ A4 ಅಳತೆಯ ಹಾಳೆಯಲ್ಲಿ ಮೂಡಿಬರುವ Bio-data ಅಂದವಾಗಿಯೂ, ಚೊಕ್ಕವಾಗಿಯೂ ಇರುತ್ತದೆ.
Bio-dataದ ಒಂದು ಮಾದರಿ
ನಾವು ಉದ್ಯೋಗವೊಂದನ್ನು ಅರಸಿ ಯಶಸ್ವಿಯಾಗಿ ಪಡೆದುಕೊಳ್ಳುವುದು ಹಲವು ಹಂತಗಳಲ್ಲಿರುವ ಒಂದು ಪ್ರಕ್ರಿಯೆ. Cover letterನ ನಂತರ ಈ ಪ್ರಕ್ರಿಯೆಯ ಮುಖ್ಯ ಭಾಗ ಒಂದು ಪರಿಣಾಮಕಾರಿ Bio-dataವನ್ನು ರೂಪಿಸುವುದು. ಹಿಂದಿನ ಭಾಗದ ಸ್ಥೂಲ ಪರಿಚಯ ಹಿನ್ನೆಲೆಯಲ್ಲಿ, ಈ ಕೆಳಗಿನ Bio-dataದ ಮಾದರಿಯನ್ನು ಪರಿಶೀಲಿಸಿ ಮನದಟ್ಟು ಮಾಡಿಕೊಳ್ಳಿ. ಇಲ್ಲೊಂದು ಉದಾಹರಣೆ ನೀಡಲಾಗಿದೆ.
Bio-dataದ ಕೊನೆಯಲ್ಲಿ ಬರುವ Referencesಎಂದರೆ, ಯಾರಾದರೂ ಇಬ್ಬರು ಪ್ರಮುಖ ವ್ಯಕ್ತಿಗಳು, ಅಭ್ಯರ್ಥಿಯ ಪರಿಚಯವಿದೆ ಎಂದು ಹೇಳುವ ಅನುಮೋದನೆ. ಇದರಿಂದ, ಅಭ್ಯರ್ಥಿಯ credibility (ವಿಶ್ವಾಸಾರ್ಹತೆ) ಹೆಚ್ಚುತ್ತದೆ.
ಮಾಹಿತಿಗೆ: 98452 13417 
2014 ಆಗು–ಹೋಗು

ಸೀಮಾಂಧ್ರದ ರಾಜಧಾನಿಯಾಗಿ ವಿಜಯವಾಡ

ಆ. 1: ಈಸ್ಟ್‌ ಬೆಂಗಾಲ್‌ ಕ್ಲಬ್‌ ನೀಡುವ 2014ನೇ ಸಾಲಿನ ‘ಭಾರತ್‌ ಗೌರವ್‌’ ಪ್ರಶಸ್ತಿಯನ್ನು ಬಚೇಂದ್ರಿ ಪಾಲ್‌ ಅವರಿಗೆ ನೀಡಲಾಯಿತು. ಬಚೇಂದ್ರಿ ಪಾಲ್‌ ಮೌಂಟ್‌ ಎವರೆಸ್ಟ್‌ ಶಿಖರ ಹತ್ತಿದ ಭಾರತದ ಮೊದಲ ಮಹಿಳೆ.
ಆ. 2: 2014ನೇ ಸಾಲಿನ ರಾಜೀವ್ ಗಾಂಧಿ ಸದ್ಭಾವನ ಪ್ರಶಸ್ತಿಗೆ ಹಿರಿಯ ಸಾಮಾಜಿಕ ಸೇವಾಕರ್ತ ಮುಜಾಫರ್‌ ಆಲಿ ಆಯ್ಕೆಯಾದರು. ಆಲಿ ಅವರು ಕೋಮುವಾದದ ವಿರುದ್ಧ ಹೋರಾಟ ಮಾಡುತ್ತಿದ್ದಾರೆ.
ಆ. 3: ಗ್ಲಾಸ್ಗೊದಲ್ಲಿ ನಡೆದ ಕಾಮನ್‌ವೆಲ್ತ್‌ ಕ್ರೀಡಾಕೂಟಕ್ಕೆ ತೆರೆ ಬಿದ್ದಿತು. ಈ ಟೂರ್ನಿಯಲ್ಲಿ ಭಾರತ ಒಟ್ಟು 64 ಪದಕಗಳನ್ನು ಗೆಲ್ಲುವ ಮೂಲಕ ಐದನೇ ಸ್ಥಾನ ಪಡೆಯಿತು.
ಆ. 3: ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಭಾರತದ ಪಿ.ಕಶ್ಯಪ್‌ ಪುರುಷರ ಸಿಂಗಲ್ಸ್‌ ಬ್ಯಾಡ್ಮಿಂಟನ್‌ ಪಂದ್ಯದಲ್ಲಿ ಚಿನ್ನದ ಪದಕ ಗೆದ್ದರು. ಕಾಮನ್‌ವೆಲ್ತ್‌ ಕ್ರೀಡಾಕೂಟಗಳಲ್ಲಿ ಬ್ಯಾಡ್ಮಿಂಟನ್‌ ವಿಭಾಗದಲ್ಲಿ ಚಿನ್ನದ ಪದಕ ಗೆದ್ದ ಮೂರನೇ ಆಟಗಾರ ಎಂಬ ಹೆಗ್ಗಳಿಕೆ ಕಶ್ಯಪ್‌ ಅವರದ್ದು.
ಆ. 4: ಮಾಜಿ ವಿದೇಶಾಂಗ ಅಧಿಕಾರಿ ಅರವಿಂದ್‌ ಗುಪ್ತ ಅವರನ್ನು ಕೇಂದ್ರ ಸರ್ಕಾರ ರಾಷ್ಟ್ರೀಯ ಭದ್ರತಾ ಉಪ ಸಲಹೆಗಾರರನ್ನಾಗಿ ನೇಮಕ ಮಾಡಿತು. ಗುಪ್ತ ಈ ಹಿಂದೆ ಆಸ್ಟ್ರೇಲಿಯಾ, ನ್ಯೂಜಿಲೆಂಡ್‌ ಮತ್ತು ಮಧ್ಯಪ್ರಾಚ್ಯ ದೇಶಗಳಲ್ಲಿ ರಾಯಭಾರಿಯಾಗಿ ಕಾರ್ಯನಿರ್ವಹಿಸಿದ್ದರು.
ಆ. 5: ಖ್ಯಾತ ಕಾರ್ಟೂನಿಸ್ಟ್‌ ‘ಪ್ರಾಣ್‌’ ನಿಧನರಾದರು. ಅವರು ರಚಿಸಿದ ಧಾರಾವಾಹಿ (ಕಾರ್ಟೂನ್‌) ‘ಚಾಚಾ ಚೌಧರಿ’ ಭಾರಿ ಜನಪ್ರಿಯತೆ ಪಡೆದಿತ್ತು.
ಆ. 6: ಹೂಡಿಕೆ ಮತ್ತು ವಾಣಿಜ್ಯ ವಿಷಯಗಳಿಗೆ ಸಂಬಂಧಿಸಿದಂತೆ ಸೆಕ್ಯೂರಿಟಿಸ್‌ ಲಾ ವಿಧೇಯಕವನ್ನು ಲೋಕಸಭೆಯಲ್ಲಿ ಧ್ವನಿ ಮತದ ಮೂಲಕ ಅಂಗೀಕರಿಸಲಾಯಿತು.
ಆ. 7; ಮಾಜಿ ಕ್ರಿಕೆಟಿಗ ಕಪಿಲ್‌ದೇವ್‌ ಅವರನ್ನು ಅರ್ಜುನ ಪ್ರಶಸ್ತಿಯ ಆಯ್ಕೆ ಸಮಿತಿಯ ಮುಖ್ಯಸ್ಥರನ್ನಾಗಿ ಮತ್ತು ಮಾಜಿ ಹಾಕಿ ಆಟಗಾರ ಅಜಿತ್‌ಪಾಲ್‌ ಸಿಂಗ್‌ ಅವರನ್ನು ‘ದ್ರೋಣಾಚಾರ್ಯ ಪ್ರಶಸ್ತಿಯ ಆಯ್ಕೆ ಸಮಿತಿಯ ಮುಖ್ಯಸ್ಥರನ್ನಾಗಿ ನೇಮಕ ಮಾಡಲಾಯಿತು.
ಆ. 8: ಕಾರ್ಖಾನೆಗಳು ಸಿಲಿಕಾನ್‌ ಬಳಸಿದ ನಂತರ ಅದರ ತ್ಯಾಜ್ಯವನ್ನು ಏನು ಮಾಡುತ್ತವೇ ಎಂಬುದನ್ನು ತಿಳಿಯಲು ಉತ್ತರಖಂಡ ಸರ್ಕಾರ ಹಿರಿಯ ವಿಜ್ಞಾನಿ ಎಸ್‌. ರಾಜಾ ನೇತೃತ್ವದಲ್ಲಿ ಸಮಿತಿಯನ್ನು ರಚಿಸಿತು.
ಆ. 10: ಪೊಲ್ಯಾಂಡ್‌ನಲ್ಲಿ  ನಡೆದ ವಿಶ್ವಕಪ್‌ ಅರ್ಚರಿಯಲ್ಲಿ ಭಾರತದ ಮಹಿಳಾ ತಂಡ ಚಿನ್ನದ ಪದಕವನ್ನು ಗೆದ್ದಿತು. ದೀಪಿಕಾ ಕುಮಾರಿ ಈ ತಂಡದ ನಾಯಕಿಯಾಗಿದ್ದರು.
ಆ. 11: ಭಾರತದ ಮೊದಲ ಲೋಕಸಭೆಗೆ ಆಯ್ಕೆಯಾಗಿದ್ದ ಹಿರಿಯ ರಾಜಕಾರಣಿ ರೇಷ್ಮಾಲಾಲ್‌ ಜಂಗಡೆ ನಿಧನರಾದರು. ಮೂಲತಃ ಮಧ್ಯಪ್ರದೇಶ ರಾಜ್ಯದವರಾದ ಇವರು ಕಾಂಗ್ರೆಸ್‌ ಪಕ್ಷದಲ್ಲಿ ಗುರುತಿಸಿಕೊಂಡಿದ್ದರು.
ಆ. 12: ರಾಜ್ಯದ ಜನಪ್ರಿಯ ಜಾನಪದ ಕಲಾವಿದೆ ಬುರ್ರಾ ಕಥಾ ಈರಮ್ಮ ನಿಧನರಾದರು. ಇವರು ಬಳ್ಳಾರಿ ಜಿಲ್ಲೆಯವರು.
ಆ.12: ಅತ್ಯುತ್ತಮ ಸಂಸದೀಯ ಪಟು ಪ್ರಶಸ್ತಿಗೆ ಬಿಜೆಪಿಯ ಹಿರಿಯ ನಾಯಕ ಅರುಣ್‌ ಜೇಟ್ಲಿ, ಕಾಂಗ್ರೆಸ್‌ನ ಕರಣ್‌ ಸಿಂಗ್‌ ಮತ್ತು ಸಂಯುಕ್ತ ಜನತಾದಳ ಪಕ್ಷದ ಶರದ್‌ ಯಾದವ್‌ ಅವರನ್ನು ಆಯ್ಕೆ ಮಾಡಲಾಯಿತು. ಈ ಪ್ರಶಸ್ತಿಯನ್ನು ರಾಷ್ಟ್ರಪತಿ ನೀಡುತ್ತಾರೆ.
ಆ. 13: ಭಾರತೀಯ ರಿಸರ್ವ್‌ ಬ್ಯಾಂಕ್‌ನ ಮಾಜಿ ಗೌರ್ನರ್‌ ಭೀಮಲ್‌ ಜಲನ್‌ ಅವರನ್ನು ‘ವೆಚ್ಚ ವ್ಯವಸ್ಥಾಪನ ಮಂಡಳಿ’ಯ ಮುಖ್ಯಸ್ಥರನ್ನಾಗಿ ನೇಮಕ ಮಾಡಲಾಯಿತು.
ಆ.13: ಲೋಕಸಭೆಯ ಡೆಪ್ಯೂಟಿ  ಸ್ಪೀಕರ್‌ ಆಗಿ ಎಂ. ತಂಬಿದೊರೈ ಆಯ್ಕೆಯಾಗಿದ್ದಾರೆ. ಇವರು ಎಐಎಡಿಎಂಕೆ ಪಕ್ಷದ ಸಂಸದರು.
ಆ.13: ಸೀಮಾಂಧ್ರ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ವಿಜಯವಾಡ ಆಂಧ್ರದ ರಾಜಧಾನಿಯಾಗಲಿದೆ ಎಂದು ಪ್ರಕಟಿಸಿದರು.
ಆ.14: ಭಾರತವು ಮೊದಲ ಭಾರಿಗೆ 2015ರ ಪ್ಯಾರಾ–ಗ್ಲೈಡಿಂಗ್‌ ವಿಶ್ವಕಪ್‌ನ ಆತಿಥ್ಯ ವಹಿಸಲಿದೆ. ಇದು ಹಿಮಾಚಲ ಪ್ರದೇಶದಲ್ಲಿ ನಡೆಯಲಿದೆ.
ಆ. 14: ಇರಾಕ್‌ ಪ್ರಧಾನಿ ನೂರಿ ಅಲ್‌–ಮಲಿಕಿ ಅವರು ರಾಜೀನಾಮೆ ನೀಡಿದರು.
ಆ. 15: ಕೇಂದ್ರ ಸರ್ಕಾರ 60 ವರ್ಷಕ್ಕೂ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಪಿಂಚಣಿ ನೀಡುವ ಭೀಮಾ ಯೋಜನೆಯನ್ನು ಅನುಷ್ಠಾನಗೊಳಿಸುವುದಾಗಿ ಪ್ರಕಟಿಸಿತು.
ಆ.16: ಕೇಂದ್ರ ಲೋಕಸೇವಾ ಆಯೋಗದ ಅಧ್ಯಕ್ಷರಾಗಿ ರಜನಿ ರಾಜ್ದಾನ್‌ ಅವರನ್ನು ನೇಮಕ ಮಾಡಲಾಯಿತು.
ಆ.17: ಚಿಂಚಿನಾಟಿ ಟೆನಿಸ್‌ ಓಪನ್‌ ಟೂರ್ನಿಯ ಪುರುಷರ ಸಿಂಗಲ್ಸ್‌ ಪಂದ್ಯದಲ್ಲಿ ರೋಜರ್‌ ಫೇಡರರ್‌ ಚಿಂಚಿನಾಟಿ ಟ್ರೋಫಿ ಗೆದ್ದರು. ಆ ಮೂಲಕ ಅವರು ಒಟ್ಟು 80 ಅಂತರರಾಷ್ಟ್ರೀಯ ಟ್ರೋಫಿಗಳನ್ನು ಗೆದ್ದಂತಾಗಿದೆ.
ಆ. 18: ಬ್ರೆಜಿಲ್‌ನ ಅಧ್ಯಕ್ಷೀಯ ಅಭ್ಯರ್ಥಿ ಎಡ್ವರ್ಡೊ ಕಾಂಪೊಸ್‌ ನಿಗೂಢವಾಗಿ ಸಾವನ್ನಪ್ಪಿರುವ ವಿಷಯವನ್ನು ಬ್ರೆಜಿಲ್‌ ಸರ್ಕಾರ ಖಚಿತಪಡಿಸಿತು. ಕಾಂಪೊಸ್‌ ಆಗಸ್ಟ್‌ 13ರಂದು ಮೃತಪಟ್ಟಿದ್ದರು.
ಆ. 19: ಮಾಜಿ ಕ್ರಿಕೆಟಿಗ ರವಿಶಾಸ್ತ್ರಿ ಅವರನ್ನು ಭಾರತೀಯ ಕ್ರಿಕೆಟ್‌ ತಂಡದ ನಿರ್ದೇಶಕರನ್ನಾಗಿ ನೇಮಕ ಮಾಡಲಾಯಿತು.
ಆ. 22; ಕರ್ನಾಟಕದ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಯು.ಆರ್‌. ಅನಂತಮೂರ್ತಿ ನಿಧನರಾದರು. ಅವರಿಗೆ 82 ವರ್ಷ ವಯಸ್ಸಾಗಿತ್ತು. ಅವರ ಸಂಸ್ಕಾರ ಕಾದಂಬರಿ 15ಕ್ಕೂ ಹೆಚ್ಚು ಭಾರತೀಯ ಮತ್ತು ವಿದೇಶಿ ಭಾಷೆಗಳಿಗೆ ಅನುವಾದಗೊಂಡಿದೆ.
ಆ.24: ಗಾಂಧಿ ಚಿತ್ರವನ್ನು ನಿರ್ಮಾಣ ಮಾಡಿದ್ದ ರಿಚರ್ಡ್‌ ಅಟೆನ್‌ಬರ್ಗ್‌ ಅವರು ಲಂಡನ್‌ನಲ್ಲಿ ನಿಧನರಾದರು. ಈ ಚಿತ್ರ ಆಸ್ಕರ್‌ ಪ್ರಶಸ್ತಿಯನ್ನು ಪಡೆದಿತ್ತು.
ಆ. 25: ವಿಶ್ವದಲ್ಲಿಯೇ ಮೊದಲ ಬಳಕೆಯ ತಾಮ್ರ ಲೋಹವು ಇಸ್ರೇಲ್‌ ದೇಶದಲ್ಲಿ ಪತ್ತೆಯಾಗಿದೆ. ಇಲ್ಲಿಯೇ ಮಾನವನ ಮೊದಲ ನಾಗರಿಕತೆ ಆರಂಭವಾಗಿರಬಹುದು ಎಂದು ಇತಿಹಾಸ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಆ. 26: ಕರ್ನಾಟಕದ ರಾಜ್ಯಪಾಲರನ್ನಾಗಿ ವಜುಬಾಯಿ ವಾಲ ಅವರನ್ನು ಕೇಂದ್ರ ಸರ್ಕಾರ ನೇಮಕ ಮಾಡಿತು.
ಆ 28: ಕೇಂದ್ರ ಸರ್ಕಾರ ಡಾಟ್‌ ಕಾಮ್‌, ಡಾಟ್‌ ಇನ್‌ ಡೊಮೈನ್‌ಗಳ ಮಾದರಿಯಂತೆ ‘ಡಾಟ್‌ ಭಾರತ್‌’ ಡೊಮೈನ್‌ ಅನ್ನು ಲೋಕಾರ್ಪಣೆ ಮಾಡಿತು. ಇದು ದೇವನಾಗರಿ ಭಾಷೆಯಲ್ಲಿ ಸಹ ಲಭ್ಯವಿದೆ.


ಸ್ಪಷ್ಟ ಭಾಷೆ, ನಿಖರ ನಿಲುವು

ಸಂದರ್ಶನದಲ್ಲಿ ಕೇಳಬಹುದಾದ ನಮ್ಮ ಹಿಂದಿನ ವೃತ್ತಿಗೆ ಸಂಬಂಧಿಸಿದ ಕೆಲವು ಪ್ರಶ್ನೆಗಳು ಹಾಗೂ ಅವುಗಳಿಗೆ ಕೊಡಬಹುದಾದ ಸೂಕ್ತ ಉತ್ತರಗಳನ್ನು ಗಮನಿಸಿ:
1.Tell me briefly about your previous work experience.
ನಮ್ಮ ಹಿಂದಿನ ಕೆಲಸದ ಬಗ್ಗೆಯಾಗಲೀ ಅಥವಾ ಅದರ employerನ ಬಗ್ಗೆಯಾಗಲೀ ಮಾತನಾಡುವಾಗ, ಎಂದಿಗೂ ನಕಾರಾತ್ಮಕವಾದ ಅಭಿಪ್ರಾಯಗಳನ್ನು ಸೂಚಿಸಬಾರದು. ಒಂದು ಕೆಲಸ ಬಿಟ್ಟು ಮತ್ತೊಂದು ಕೆಲಸಕ್ಕೆ ಸೇರುವಾಗ, employerಗೆ, ನಾವು ಹಿಂದಿನ ಕೆಲಸವನ್ನು ಬಿಟ್ಟ ಕಾರಣಗಳ ಬಗ್ಗೆ ವಿಶೇಷ ಆಸಕ್ತಿ ಇರುತ್ತದೆ. ಏಕೆಂದರೆ ಈ ಒಂದು ವಿಷಯದಿಂದಲೇ ಸೂಕ್ಷ್ಮಮತಿಯಾದ employer ನಮ್ಮ ವೃತ್ತಿ ವ್ಯಕ್ತಿತ್ವದ ಬಗ್ಗೆ ಬಹುಮುಖ್ಯ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಾಧ್ಯತೆಯಿದೆ. ಆದ್ದರಿಂದ, ನಮಗೆ ನಮ್ಮ ಪ್ರತಿಭೆಯನ್ನು ತೋರಲು ಹಾಗೂ ಬೆಳೆಸಿಕೊಳ್ಳಲು ಅಲ್ಲಿ ಸಿಕ್ಕ ಅವಕಾಶಗಳ ಬಗ್ಗೆ ಹಾಗೂ ಅದರಿಂದ ಆದ ನಮ್ಮ ಸ್ವಂತ ಹಾಗೂ ಸಂಸ್ಥೆಯ ಬೆಳವಣಿಗೆಯ ಬಗ್ಗೆ ಮಾತನಾಡುವುದು ಸೂಕ್ತ.
Though I enjoyed my previous assignment, currently I am looking for an organization which would provide me with greater learning opportunities. In my previous assignment as a process associate for nearly 2 years, I learnt the basics of medical insurance documentation. Now I am looking for a more challenging assignment with enhanced learning opportunities.
2. What has been the most challenging aspect of your previous work?
Answer:
Working successfully with teams, meeting sharp deadlines and also
creating and sustaining working relationships between colleagues of diverse  temperaments and worldviews.
ಈ ಮೇಲಿನ ಉತ್ತರದಲ್ಲಿ ಖಚಿತವಾಗಿ ನಾವು ಏನು ಸಾಧಿಸಿದ್ದೇವೆ ಮತ್ತು ನಮ್ಮ ಮುಂದಿನ ವೃತ್ತಿಪರ ಆಶಯಗಳು (professional goals) ಏನೆಂಬುದು ಸ್ಪಷ್ಟವಾಗಿ ಸೂಚಿತವಾಗಿದೆ. ಇದರಿಂದ, ಎಲ್ಲಾ ವೃತ್ತಿಸಂದರ್ಭಗಳಲ್ಲೂ ಅತ್ಯಂತ ಉಪಯುಕ್ತವಾದ ಅಂತರ್‌ವ್ಯಕ್ತಿ ಕೌಶಲ (interpersonal skill) ನಮಗಿದೆ ಎಂಬುದು ಸಾಬೀತಾಗುತ್ತದೆ.
3. Have you ever faced a problem with your supervisor?
ಈ ಪ್ರಶ್ನೆಗೆ ನಾವು ನೇರವಾದ ಉತ್ತರವನ್ನು ಕೊಡಲು ಸಾಧ್ಯವಿಲ್ಲ. ಯಾವುದಾದರೊಂದು ಸನ್ನಿವೇಶವನ್ನು ವಿವರಿಸಿ, ಆ ಸಂದರ್ಭದಲ್ಲಿ ಹೇಗೆ ನಮ್ಮ ಮತ್ತು supervisorನ ನಡುವೆ ಉದ್ಭವಿಸಿದ ಸಂವಹನ ಸಮಸ್ಯೆಗಳನ್ನು ಜಾಣತನದಿಂದ ನಿವಾರಿಸಿದ ರೀತಿಯ ಬಗ್ಗೆ ಹೇಳಬಹುದು.
ಸಂದರ್ಶನದಲ್ಲಿ, ನಾವು ಹಿಂದಿನ ವೃತ್ತಿ ಅನುಭವದ ಬಗ್ಗೆ ಮಾತನಾಡುವಾಗ ಆದಷ್ಟೂ ನಿರ್ದಿಷ್ಟವಾದ ಮಾಹಿತಿ ನೀಡಬೇಕು. ನಾವು ಯಶಸ್ವಿಯಾಗಿ ತೊಡಗಿಸಿಕೊಂಡ ಹಾಗೂ ಗುರಿಮುಟ್ಟಿಸಿದ projectಗಳ ಬಗ್ಗೆ ಖಚಿತವಾದ ವಿವರಗಳನ್ನು ನೀಡಬೇಕು ಹಾಗೂ ಅವಕಾಶವಿರುವ ಕಡೆ ನಮ್ಮ ಯಾವ ಗುಣಗಳು ಯಶಸ್ಸಿಗೆ ಕಾರಣವಾಗಿವೆ ಎಂಬುದನ್ನು ಜಂಬದ ಲೇಪವಿಲ್ಲದಂತೆ ಸೂಕ್ಷ್ಮವಾಗಿ ವಿವರಿಸಬೇಕು.
ಇತರ ಕೆಲವು ಪ್ರಮುಖ ಸಂದರ್ಶನ ಪ್ರಶ್ನೆಗಳು
ಸಂದರ್ಶನದಲ್ಲಿ ಕೇಳಬಹುದಾದ ಇನ್ನೂ ಕೆಲವು ಮುಖ್ಯ ಪ್ರಶ್ನೆಗಳು ಹಾಗೂ ಅವುಗಳಿಗೆ ಕೊಡಬಹುದಾದ ಸೂಕ್ತ ಉತ್ತರಗಳನ್ನು ಗಮನಿಸಿ:
1. What do you find interesting about this job?
Ans: I sense that this job would provide me a platform to move to the next level in
        terms of actualizing my potential abilities and I also feel certain that this is a bigger challenge compared to the one that I have been exposed to before.
ಈ ರೀತಿಯ ಉತ್ತರ, ನಮ್ಮಲ್ಲಿರುವ ಆತ್ಮವಿಶ್ವಾಸ ಮತ್ತು ಕಲಿಕೆಯ ಹಂಬಲವನ್ನು ವ್ಯಕ್ತಪಡಿಸುತ್ತದೆ.
2. Why should the organization hire you?
ಈ ಪ್ರಶ್ನೆಗೆ ಉತ್ತರಿಸುವಾಗ, ನಮ್ಮ ಸಾಮರ್ಥ್ಯದ ಬಗ್ಗೆ ನಮಗಿರುವ ನಂಬಿಕೆಯನ್ನು ವಿನಯದಿಂದ ವ್ಯಕ್ತಪಡಿಸಬೇಕು. ಈ ಸಂದರ್ಭದಲ್ಲಿ ನಮ್ಮ ಬಗ್ಗೆ ಅತಿ ಎನಿಸುವಂತಹ ವಿಶ್ವಾಸವನ್ನು (over confidence) ತೋರ್ಪಡಿಸಬಾರದು.
Ans: Because I think my current skills set matches the needs of this job which I think are among other things, ability to work with teams, promote interpersonal effectiveness and meet deadlines successfully. I am looking forward to and confident of making a contribution in this direction.
3. Where do you see yourself in the next 10 years?
Ans: In the rapidly changing world today. 10 years is really a long time to think about.
But I can say confidently that in long run I would be equipping myself with the skills necessary to move up to a leadership position in the company.
ಈ ರೀತಿಯ ಉತ್ತರವನ್ನು ಕೊಡುವಾಗ ನಮ್ಮ ಪ್ರತಿಕ್ರಿಯೆ ವಿನಯಪೂರ್ವಕವಾಗಿಯೂ, ವಾಸ್ತವದ ಸ್ಪರ್ಶ ಇರುವಂಥದ್ದೂ ಆಗಿರಬೇಕು.
4. What made you choose this field of work?
ನಮ್ಮ ಕೆಲಸದ ಆಯ್ಕೆಯ ನಿರ್ಧಾರದ ಬಗ್ಗೆ ಮಾತನಾಡುವಾಗ ನಮ್ಮ ಉತ್ತರ ದೃಢವಾಗಿರಬೇಕು.
It has always been my passion to work in this field. It gives me ample chances to utilize my competence to the fullest which results in a better growth personally and professionally.
ಈ ಮೇಲಿನ ಉತ್ತರದ ಮಾದರಿಗಳನ್ನು ಗಮನಿಸಿದಾಗ, ಅಲ್ಲಿ ಕೆಲವು language functionಗಳು ಅಡಕವಾಗಿರುವುದು ಕಂಡು ಬರುತ್ತವೆ. ಇವುಗಳಲ್ಲಿ ಕೆಲವೆಂದರೆ eexplaining, summarizing, communicating statistical information, narratingg ಮುಂತಾದವುಗಳು. ಈ language function ಗಳನ್ನು ಕರಗತ ಮಾಡಿಕೊಂಡರೆ ಅವು ಹತ್ತಾರು ವಿಧದ ಸಂದರ್ಶನಗಳಲ್ಲಿ ಸಂದರ್ಭಕ್ಕೆ ತಕ್ಕಂತೆ ನಮ್ಮ ನೆರವಿಗೆ ಬರುತ್ತವೆ.
ಮಾಹಿತಿಗೆ: 98452 13417 

ಸತ್ಯಾರ್ಥಿಗೆ ನೊಬೆಲ್‌, ಆರ್ಕುಟ್‌ ಸ್ಥಗಿತ

* ಅ.1: ಭಾರತದ ಮಹಿಳಾ ಬಾಕ್ಸರ್‌ ಮೇರಿ ಕೋಮ್‌ ಏಷ್ಯಾನ್‌ ಗೇಮ್ಸ್‌ನಲ್ಲಿ ಚಿನ್ನದ ಪದಕ ಮುಡಿಗೇರಿಸಿಕೊಂಡರು. ಮೇರಿ ಕೋಮ್‌ ಏಷ್ಯಾನ್‌ ಗೇಮ್ಸ್‌ನಲ್ಲಿ ಪಡೆದ ಮೊದಲ ಚಿನ್ನದ ಪದಕ ಇದಾಗಿದೆ.
* ಅ. 2: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಗಾಂಧಿ ಜಯಂತಿ ದಿನ ದೇಶದಾದ್ಯಂತ ‘ಸ್ವಚ್ಛ ಭಾರತ’ ಅಭಿಯಾನಕ್ಕೆ ಚಾಲನೆ ನೀಡಿದರು. ದೆಹಲಿಯ ಕೊಳೆಗೇರಿ ಪ್ರದೇಶದಲ್ಲಿ ಕಸ ಗುಡಿಸಿ ಅಭಿಯಾನಕ್ಕೆ ಚಾಲನೆ ನೀಡಿದರು.
* ಅ. 3: ಬಿಹಾರದ ರಾಜಧಾನಿ ಪಟ್ನಾದ ಗಾಂಧಿ ಮೈದಾನದಲ್ಲಿ ದಸರಾ ಪ್ರಯುಕ್ತ ಏರ್ಪಡಿಸುವ ದೇವತೆಗಳ ಉತ್ಸವ ಸಂದರ್ಭದಲ್ಲಿ ಕಾಲ್ತುಳಿತದಿಂದ 32 ಜನರು ಮೃತಪಟ್ಟು 15 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು.
* ಅ. 4 : ಗೂಗಲ್‌ನ ಸಾಮಾಜಿಕ ಜಾಲತಾಣವಾಗಿದ್ದ ‘ಆರ್ಕುಟ್‌’ಅನ್ನು ಸ್ಥಗಿತಗೊಳಿಸುವುದಾಗಿ ಗೂಗಲ್‌ ಕಂಪೆನಿ ಘೋಷಿಸಿತು. ಫೇಸ್‌ಬುಕ್‌ ಮತ್ತು ಟ್ವಿಟ್ಟರ್‌ ಜನಪ್ರಿಯವಾದ ಹಿನ್ನೆಲೆಯಲ್ಲಿ ‘ಆರ್ಕುಟ್‌’ ಬಳಸುವವರ ಸಂಖ್ಯೆ ಕಡಿಮೆಯಾದ್ದರಿಂದ ಸ್ಥಗಿತಗೊಳಿಸಲಾಯಿತು ಎಂದು ಕಂಪೆನಿ ತಿಳಿಸಿತು.
* ಅ. 5: ಮಹೇಂದ್ರ ಸಿಂಗ್‌ ದೋನಿ ನೇತೃತ್ವದ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡವು 2014 ರ ಚಾಂಪಿಯನ್‌ ಲೀಗ್‌ ಕ್ರಿಕೆಟ್‌ ಟ್ರೋಪಿಯನ್ನು ಗೆದ್ದುಕೊಂಡಿತು. ಬೆಂಗಳೂರಿನಲ್ಲಿ ನಡೆದ ಫೈನಲ್‌ ಪಂದ್ಯದಲ್ಲಿ ಕೆಕೆಆರ್‌ ತಂಡವನ್ನು ಮಣಿಸಿತು.
* ಅ.5: ರಾಜಸ್ತಾನದ ಬಿಕನೇರ್‌ ಸಮೀಪದಲ್ಲಿ ‘ಆಲಿವ್‌’ ಮರದ ಎಣ್ಣೆ ತಯಾರಕ ಘಟಕವನ್ನು ರಾಜಸ್ತಾನ ಸರ್ಕಾರ ಆರಂಭಿಸಿತು. ಆ ಮೂಲಕ ಭಾರತದಲ್ಲೇ ಆಲಿವ್‌ ಮರದ ಎಣ್ಣೆ ಘಟಕ ಆರಂಭಿಸಿದ ಮೊದಲ ರಾಜ್ಯ ಎಂಬ ಹೆಗ್ಗಳಿಕೆಗೂ ಪಾತ್ರವಾಯಿತು.
* ಅ. 6: ಸೈಕಲಾಜಿ ಅಥವಾ ಔಷಧಿ ವಿಭಾಗದಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದ ಮೂವರು ವಿಜ್ಞಾನಿಗಳಿಗೆ 2014 ನೇ ಸಾಲಿನ ನೊಬೆಲ್‌ ಪ್ರಶಸ್ತಿಯನ್ನು ಘೋಷಿಸಲಾಯಿತು. ಜಾನ್ ಓ ಕೀಫೆ, ಬ್ರಿಟ್‌ ಮೋಸರ್‌ ಮತ್ತು ಎಡ್ವರ್ಡ್‌ ಐ ಈ ಪ್ರಶಸ್ತಿ ಪಡೆದಿದ್ದಾರೆ.
* ಅ.6: ಭಾರತದ ಯಶಸ್ವಿ ಮಂಗಳಯಾನ ಯೋಜನೆ ಕುರಿತಂತೆ ಅಮೆರಿಕದ ‘ನ್ಯೂಯಾರ್ಕ್‌ ಟೈಮ್ಸ್‌’ ಪತ್ರಿಕೆ ಆಕ್ಷೇಪಾರ್ಹ ವ್ಯಂಗ್ಯ ಚಿತ್ರ ಪ್ರಕಟಿಸಿದ್ದಕ್ಕಾಗಿ ಪತ್ರಿಕೆ ಭಾರತದ ಕ್ಷಮೆಯಾಚಿಸಿತು.
* ಅ.9: ರಾಷ್ಟ್ರೀಯ ಸಂಗೀತ ನಾಟಕ ಅಕಾಡೆಮಿ ಅಧ್ಯಕ್ಷ ಸ್ಥಾನಕ್ಕೆ ಲೀಲಾ ಸ್ಯಾಮ್ಸನ್‌ ರಾಜೀನಾಮೆ ನೀಡಿದರು. ಅವರ ರಾಜೀನಾಮೆಯನ್ನು ಕೇಂದ್ರ ಸಂಸ್ಕೃತಿ ಸಚಿವಾಲಯ ಅಂಗೀಕರಿಸಿತು.
* ಅ.9: ಫ್ರಾನ್ಸ್‌ನ ಹಿರಿಯ ಲೇಖಕ ಹಾಗೂ ಜನಪ್ರಿಯ ಕಾದಂಬರಿಕಾರರಾದ ಪ್ಯಾಟ್ರಿಕ್‌ ಮೊಡಿಯಾನೊ 2014 ನೇ ಸಾಲಿನ ಸಾಹಿತ್ಯ ನೊಬೆಲ್‌ ಪ್ರಶಸ್ತಿಯನ್ನು ಪಡೆದರು. ಅವರ ಒಟ್ಟು ಸಾಹಿತ್ಯ ಸೇವೆಗೆ ಈ ಪ್ರಶಸ್ತಿ ಸಂದಿದೆ.
* ಅ,10: 2014 ನೇ ಸಾಲಿನ ನೊಬೆಲ್‌ ಶಾಂತಿ ಪ್ರಶಸ್ತಿಯನ್ನು ಪ್ರಕಟಿಸಲಾಯಿತು. ಭಾರತದ ಕೈಲಾಶ್‌ ಸತ್ಯಾರ್ಥಿ ಮತ್ತು ಪಾಕಿಸ್ತಾನದ ಅತಿ ಕಿರಿಯ ಸಮಾಜ ಸೇವಕಿ ಮಲಾಲಗೆ ಜಂಟಿಯಾಗಿ ಈ ಪ್ರಶಸ್ತಿ ನೀಡಲಾಯಿತು.
* ಅ 11: ಅಮೆರಿಕದ ವೈದ್ಯಕೀಯ ವಿಜ್ಞಾನಿಗಳ ತಂಡವು ಎಚ್‌ಐವಿ ವೈರಾಣುವನ್ನು ನೋಡಬಹದಾದ ಅತಿ ಸೂಕ್ಷ್ಮ ಸಾಧನವನ್ನು ಅಭಿವೃದ್ಧಿಪಡಿಸಿರುವುದಾಗಿ ಪ್ರಕಟಿಸಿದೆ.
* ಅ. 13: ಅರ್ಥಶಾಸ್ತ್ರ ವಿಭಾಗಕ್ಕೆ ನೀಡುವ 2014 ಸಾಲಿನ ನೊಬೆಲ್‌ ಪ್ರಶಸ್ತಿ ಫ್ರಾನ್ಸ್ ದೇಶದ ಆರ್ಥಿಕ ತಜ್ಞ ಜಿನ್‌ ಟಿರೋಲ್‌ ಅವರಿಗೆ ಸಂದಿದೆ.
* ಅ. 14 : ಬಾಲಿವುಡ್‌ನ ಖ್ಯಾತ ಚಿತ್ರ ಸಾಹಿತಿ ’ಸಮೀರ್‌’ ಅವರಿಗೆ 2013ನೇ ಸಾಲಿನ ರಾಷ್ಟ್ರೀಯ ಕಿಶೋರ್‌ ಕುಮಾರ್‌ ಪ್ರಶಸ್ತಿ ಲಭಿಸಿತು.
* ಅ.14 : ಯಮನ್‌ ದೇಶದ ಪ್ರಧಾನಿಯಾಗಿ ಖಲೇದ ಬ್ಹಾ ಅವರನ್ನು ನೇಮಕ ಮಾಡಲಾಯಿತು.
* ಅ.15: ಆಸ್ಟ್ರೇಲಿಯಾದ ಲೇಖಕ ರಿಚರ್ಡ್‌ ಪ್ಲಾನಗನ್‌ ಅವರಿಗೆ 2014 ನೇ ಸಾಲಿನ ಮ್ಯಾನ್‌ ಆಫ್‌ ದಿ ಬೂಕರ್‌ ಪ್ರಶಸ್ತಿ ಲಭಿಸಿದೆ. ಅವರ ಯುದ್ಧಕಾಲಿನ ಕಾದಂಬರಿ ‘ ದಿ ನ್ಯಾರೊ ರೋಡ್‌ ಟು ದಿ ಡೀಪ್‌ ನಾರ್ತ್‌’ ಕೃತಿಗೆ ಈ ಪುರಸ್ಕಾರ ಸಂದಿದೆ.
* ಅ. 15: ತೆಲುಗಿನ ಖ್ಯಾತ ಬರಹಗಾರ್ತಿ ತುರಗ ಜಾನಕಿ ರಾಣಿ ನಿಧನರಾದರು. ಇವರು ಆಂಧ್ರಪ್ರದೇಶದ ಬಾನುಲಿಯಲ್ಲಿ ಸುದ್ದಿ ನಿರೂಪಕಿಯಾಗಿ ಭಾರೀ ಜನಪ್ರಿಯತೆ ಪಡೆದಿದ್ದರು.
* ಅ. 17: ಕರ್ನಾಟಕ ರಾಜ್ಯದ 12 ನಗರಗಳ ಮರು ನಾಮಕರಣಕ್ಕೆ ಕೇಂದ್ರ ಗೃಹ ಸಚಿವಾಲಯ ಅನುಮೋದನೆ ನೀಡಿತು. ನಗರಗಳ ಹೆಸರು ಬದಲಾವಣೆಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೇಂದ್ರ ಸರ್ಕಾರಕ್ಕೆ ವಿಶೇಷ ಮನವಿ ಮಾಡಿದ್ದರು.
* ಅ. 18: ಕೇಂದ್ರ ಸರ್ಕಾರ ಜಮ್ಮು ಮತ್ತು ಕಾಶ್ಮೀರ ರಾಜ್ಯಕ್ಕಾಗಿ ವಿಶೇಷ ಆರೋಗ್ಯ ಯೋಜನೆಯನ್ನು ಪ್ರಕಟಿಸಿತು. ಅದನ್ನು ಜಮ್ಮು ಕಾಶ್ಮೀರ ಆರೋಗ್ಯ ಗ್ರಾಮ ಯೋಜನೆ ಎಂದು ಕರೆಯಲಾಗುವುದು. ಇದನ್ನು ಕೇಂದ್ರ ಆರೋಗ್ಯ ಸಚಿವರು ಮತ್ತು ಮುಖ್ಯಮಂತ್ರಿ ಓಮರ್‌ ಅಬ್ದುಲ್ಲಾ ಲೋಕಾರ್ಪಣೆ ಮಾಡಿದರು.
* ಅ. 22: ತಿಹರ್‌ ಜೈಲಿನಲ್ಲಿ ಮಹಿಳಾ ಕೈದಿಗಳಿಗಾಗಿ ಇ–ಗ್ರಂಥಾಲಯವನ್ನು ಆರಂಭಿಸಲಾಯಿತು.
* ಅ. 27: ಹರಿಯಾಣ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಮನೋಹರ್‌ ಲಾಲ್‌ ಖಟ್ಟರ್‌ ಅವರು ಪ್ರಮಾಣ ವಚನ ಸ್ವೀಕರಿಸಿದರು. ಹರಿಯಾಣದಲ್ಲಿ ಮೊದಲ ಸಲ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಿದೆ.
* ಅ. 29: ಪ್ರಸಾರ ಭಾರತೀಯ ಮುಖ್ಯಸ್ಥರಾಗಿ ಸೂರ್ಯ ಪ್ರಕಾಶ್‌ ಅಧಿಕಾರ ಸ್ವೀಕರಿಸಿದರು. ಇವರ ಅಧಿಕಾರ ಅವಧಿ ಮೂರು ವರ್ಷಗಳವರೆಗೆ ಇರಲಿದೆ.
* ಅ. 30: ಕೇಂದ್ರ ಸರ್ಕಾರ ವಿದೇಶದಲ್ಲಿ ಕಪ್ಪು ಹಣ ಇಟ್ಟಿರುವ 615 ಜನರ ಮಾಹಿತಿಯನ್ನು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿತು.
* ಅ. 31: ದೇವೇಂದ್ರ ಫಡ್ನವೀಸ್‌ ಅವರು ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ಮಹಾರಾಷ್ಟ್ರದಲ್ಲಿ ಬಿಜೆಪಿ ಮತ್ತು ಶಿವಸೇನಾ ಪಕ್ಷಗಳ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬಂದಿದೆ.

ಓದಲು ಕುಳಿತಾಗ.

ಹದಿಹರೆಯದ ಮಕ್ಕಳು ಓದಲು ಕುಳಿತಾಗ ಇತರರೂ ಟೀವಿ ನೋಡುವುದನ್ನು ಕಡಿಮೆ ಮಾಡಲಿ. ಟೀವಿಯ ಧ್ವನಿ ಆದಷ್ಟು ಸಣ್ಣದಾಗಿರಲಿ.

* ಬಹಳಷ್ಟು ಹೊತ್ತು ಓದಲು ಕೂತಾಗ ಹಸಿವಾಗುವುದು ಸಹಜ. ತಾಜಾ ಹಣ್ಣುಗಳು ಯಾವಾಗಲೂ ಅವರ ಕೈಗೆ ಸಿಗುವಂತಿರಲಿ. ಸೌತೆಕಾಯಿ, ಕ್ಯಾರೆಟ್‌ ಸಲಾಡ್‌ ಸಹ ನೀಡಬಹುದು. ಕರಿದ ತಿಂಡಿಗಳಿಂದ ದೂರವಿದ್ದರೆ ಸಾಕು.
* ಹುರಿದ ಬದಾಮಿ, ಒಣದ್ರಾಕ್ಷಿ, ಕಲ್ಲುಸಕ್ಕರೆಯ ಮಿಶ್ರಣದ ಡಬ್ಬವೊಂದನ್ನು ಅವರ ಅಭ್ಯಾಸದ ಟೇಬಲ್‌ ಮೇಲಿರಿಸಬಹುದು. ನಿದ್ದೆ ತಡೆಯಲು, ಆ್ಯಸಿಡಿಟಿ ತಡೆಯಲು ಕಲ್ಲುಸಕ್ಕರೆ ಹಾಗೂ ಒಣದ್ರಾಕ್ಷಿ ಸಹಾಯಕವಾಗಿರುತ್ತವೆ.
* ಓದಿನ ನಡುವೆ ಬಿಡುವು ಬೇಕೆನಿಸಿದಾಗ ಸಂಗೀತ ಕೇಳಲು ಪ್ರೋತ್ಸಾಹಿಸಿ
* ಒಂದೆರಡು ಪ್ಲೇಸ್ಟೇಷನ್‌ ಅಥವಾ ಮೊಬೈಲ್‌ಗಳಲ್ಲಿ ಒಂದೆರಡೇ ಗೇಮ್‌ ಆಡುವುದಾಗಿ ಮಕ್ಕಳು ಕೇಳುವುದು ಸಹಜ. ಆದರೆ ಅದರಲ್ಲಿಯೇ ಅವರು ಕಳೆದುಹೋಗುವ ಸಾಧ್ಯತೆಗಳಿರುತ್ತವೆ. ನಿರ್ದಿಷ್ಟ ಸಮಯದ ನಂತರ ಹೋಗಿ ಎಚ್ಚರಿಸಲು ಮರೆಯದಿರಿ. ಓದಿಗಿಂತ ಮುಂಚೆ ಒಂದಷ್ಟು ಹೊತ್ತು ಆಟವಾಡಲು ಬಿಡುವುದು ಒಳ್ಳೆಯ ಅಭ್ಯಾಸ.
* ಖಾಲಿ ಹೊಟ್ಟೆಯಲ್ಲಿ ಮಕ್ಕಳು ಓದುವುದಾಗಲೀ, ಮಲಗುವುದಾಗಲೀ ಮಾಡಿದರೆ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಆದಷ್ಟು ಮಕ್ಕಳಿಗೆ ಕಡಿಮೆ ಮಸಾಲೆ ಇರುವ ಆಹಾರವನ್ನು ಸೇವಿಸಲು ನೀಡಿರಿ.

 

ನೀರು ಕುಡಿಯುವ ಒಣದ್ರಾಕ್ಷಿ

ಸಾಮಗ್ರಿಗಳು: ತುಂಬು (ತೊಟ್ಟು) ತೆಗೆಯದ 2-3 ಒಣದ್ರಾಕ್ಷಿಗಳು (Raisins, Dry Grapes),  ನೀರು, ಲೋಟ.
ವಿಧಾನ: ಒಂದು ಲೋಟದಲ್ಲಿ ಸ್ವಲ್ಪ ನೀರು ತೆಗೆದುಕೊಂಡು, ಅದರೊಳಗೆ 2-3 ತುಂಬು ತೆಗೆಯದ ಒಣ ದ್ರಾಕ್ಷಿಗಳನ್ನು ಹಾಕಿರಿ. 8-10 ಗಂಟೆಗಳ ನಂತರ ದ್ರಾಕ್ಷಿಗಳನ್ನು ಪರೀಕ್ಷಿಸಿ.
ಪ್ರಶ್ನೆ: ಒಣದ್ರಾಕ್ಷಿಗಳಲ್ಲಾದ ಬದಲಾವಣೆಗಳೇನು? ಏಕೆ?
ಉತ್ತರ: ಒಣದ್ರಾಕ್ಷಿಗಳಲ್ಲಿ ನೀರು ತುಂಬಿಕೊಂಡು ಉಬ್ಬುತ್ತವೆ. ಒಣದ್ರಾಕ್ಷಿಯ ಹೊರವಲಯದಲ್ಲಿ ಪಾರಕ ಹಾಗೂ ಅರೆಪಾರಕ ಪರೆ (Permiable and Semipermeable membrane)ಗಳು ಹಾಗೂ ಅದರ ಒಳಾವರಣದಲ್ಲಿ ಜೀವಕೋಶಗಳು ಇವೆ. ಜೀವಕೋಶಗಳೊಳಗೆ ಸಕ್ಕರೆಯ ಅಂಶವುಳ್ಳ ಸಾರೀಕೃತ ದ್ರಾವಣವಿದೆ.
ಒಳಪರಾಸರಣ (Endosmosis) ಕ್ರಿಯೆಯಿಂದ ಲೋಟದಲ್ಲಿಯ ನೀರು ಒಣ ದ್ರಾಕ್ಷಿಯನ್ನು ಸೇರುವುದರಿಂದ ಅವು ಉಬ್ಬುತ್ತವೆ. ಭೂಮಿಯಿಂದ ನೀರು ಬೇರುಗಳ ಮುಖಾಂತರ ಸಸ್ಯದೊಳಗೆ ನುಗ್ಗುವುದು ಪರಾಸರಣ (Osmosis) ದಿಂದಲೇ. ಸಸ್ಯದೊಳಗಿನ ಜೀವಕೋಶಗಳಲ್ಲಿ ಪರಾಸರಣದಿಂದ ನೀರು ಒಂದು ಕೋಶದಿಂದ ಮತ್ತೊಂದಕ್ಕೆ ಹರಿಯುತ್ತದೆ.

 ಸಂದರ್ಶನದಲ್ಲಿ ಉತ್ತರಿಸುವ ಬಗೆ

ಸಂದರ್ಶನಕ್ಕೆ ಕರೆ ಬಂದಾಗ ಸಂತೋಷವೂ ಆತಂಕವೂ ಒಟ್ಟಿಗೇ ಮನಸ್ಸಿನಲ್ಲಿ ಮೂಡುತ್ತದೆ. ಸಂದರ್ಶನದಲ್ಲಿ ಯಶಸ್ವಿಯಾಗಲು ಆತ್ಮವಿಶ್ವಾಸ ಮತ್ತು ಭಾಷಾಕೌಶಲ ಎರಡೂ ಮೇಳೈಸಿದ ವರ್ತನೆಯನ್ನು ನಾವು ಸಿದ್ಧಿಸಿಕೊಳ್ಳಬೇಕು. ಈ ನಿಟ್ಟಿನಲ್ಲಿ, ಸಂದರ್ಶನದಲ್ಲಿ ನಾವು ಎದುರಿಸಬಹುದಾದ ಪ್ರಶ್ನೆಗಳನ್ನು, ಅವುಗಳಿಗೆ ನೀಡಬೇಕಾದ ಸಮರ್ಪಕ ಉತ್ತರಗಳನ್ನು ಒಮ್ಮೆ ಮನಸ್ಸಿನಲ್ಲಿಯೇ ಪೂರ್ವಸಿದ್ಧತೆ ಮಾಡಿಕೊಂಡಿದ್ದರೆ, ಆ ಪ್ರಯತ್ನ, ಯಶಸ್ಸಿಗೆ ಪೂರಕವಾಗಿರುತ್ತದೆ.
ಸಾಮಾನ್ಯವಾಗಿ ವೃತ್ತಿಸಂದರ್ಶನದಲ್ಲಿ (job interview) ಮೂರು ಬಗೆಯ ಪ್ರಶ್ನೆಗಳು ಕಂಡುಬರುತ್ತವೆ.
1. ವೈಯಕ್ತಿಕ ಗುಣವಿಶೇಷಗಳು (personal traits)
2. ವೃತ್ತಿ ಸಂಬಂಧಿ ಅನುಭವ (work related experience)
3. ಸಂಸ್ಥೆಯ ವಿವರಗಳು ಮತ್ತು ಉದ್ಯೋಗ ವ್ಯಾಪ್ತಿ (company history and job profile)
ಸಂದರ್ಶನದಲ್ಲಿ ಕೇಳಬಹುದಾದ ಕೆಲವು ಸಾಮಾನ್ಯ ಉತ್ತರಗಳನ್ನು ಇಲ್ಲಿ ನೋಡೋಣ:
ನಮ್ಮ ಬಗ್ಗೆ ಒಂದು ಕಿರುಪರಿಚಯವನ್ನು ನಿರೀಕ್ಷಿಸುವ ಪ್ರಶ್ನೆ ಇದು...
1. Tell me briefly about yourself.
ಇಲ್ಲಿ ಮೊದಲನೆಯ ವಾಕ್ಯವನ್ನು I am Ashok  ಎಂದು ಪ್ರಾರಂಭಿಸಬೇಕೇ ಹೊರತು Myself Ashok...  ಎಂದಲ್ಲ. ನಂತರ ನಮ್ಮ ವಿದ್ಯಾರ್ಹತೆ ಬಗ್ಗೆ ಹೇಳಿ, ಭವಿಷ್ಯದಲ್ಲಿ ಹೆಚ್ಚಿನ ಅರ್ಹತೆಗಳನ್ನು ಗಳಿಸುವಂತಹ ಯೋಜನೆಯಿದ್ದಲ್ಲಿ, ಅದನ್ನೂ ಹೇಳಬಹುದು. ಈ ರೀತಿಯ ಉತ್ತರದಿಂದ, ಜ್ಞಾನವನ್ನು ಹೆಚ್ಚಿಸಿಕೊಳ್ಳಲು ನಮಗಿರುವ ಆಸಕ್ತಿಯನ್ನು ವ್ಯಕ್ತಪಡಿಸಬಹುದು. ಇದರಿಂದ ಸಂದರ್ಶಕರಲ್ಲಿ positive impression ಮೂಡುವ ಸಾಧ್ಯತೆ ಹೆಚ್ಚುತ್ತದೆ. ಈಗ ಈ ಉತ್ತರವನ್ನು ಗಮನಿಸಿ:
I am Ashok. I have a post graduation in Biology. Currently I am pursuing a doctorate in Evolutionary Biology. I have always been interested in the natural world and am excited by the joy of learning more and more about it.
2. What do you think is your greatest weakness?
ನಮ್ಮ weakness (ಕೊರತೆ) ಬಗ್ಗೆ ಹೇಳುವಾಗ, ನಾವು ಅದನ್ನು ಸಕಾರಾತ್ಮಕವಾಗಿ ಹೇಳಬೇಕೇ ಹೊರತು ನಕಾರಾತ್ಮಕವಾಗಿ ಅಲ್ಲ.
ಉದಾ:  I have the habit of procrastination. I tend to postpone things. But now I am working on it and my time management skills are getting better. ಈ ಉತ್ತರದಿಂದ ನಮಗೆ ನಮ್ಮ ಕೊರತೆಯ ಅರಿವಿರುವುದರ ಜೊತೆಗೆ ಅದನ್ನು ನಿವಾರಿಸುವ ಪ್ರಾಮಾಣಿಕ ಪ್ರಯತ್ನವೂ ಅಡಗಿರುವ ಅಂಶ ವ್ಯಕ್ತವಾಗುತ್ತದೆ.
3. How do you handle stress?
ಉತ್ತರ: I often work well under pressure. But when things get to be too much, I find myself consciously relaxing, breathing deeply and slowly and sometimes go for long walks.
ಈ ಉತ್ತರದಲ್ಲಿಯೂ ಕೂಡ ನಮ್ಮ ಸಮಸ್ಯೆಯ ಅರಿವು ಹಾಗೂ ಅದನ್ನು ನಿವಾರಿಸಿ ಕೊಳ್ಳುವ ಛಾತಿಯೂ ಪ್ರಕಟಗೊಂಡಿದೆ ಎಂಬುದನ್ನು ಗಮನಿಸಿ.
ಮತ್ತಷ್ಟು ಸಂದರ್ಶನ ಪ್ರಶ್ನೆಗಳು: ವೈಯಕ್ತಿಕ ಗುಣವಿಶೇಷಗಳಿಗೆ ಸಂಬಂಧಿಸಿದಂತೆ, ಸಂದರ್ಶನದಲ್ಲಿ ಕೇಳಬಹುದಾದ ಕೆಲವು ಪ್ರಶ್ನೆಗಳು ಹಾಗೂ ಅವುಗಳಿಗೆ ಕೊಡಬಹುದಾದ ಸೂಕ್ತ ಉತ್ತರಗಳನ್ನು ಗಮನಿಸಿ:
1. What is your career goal?
Ans: I am looking for an opportunity at the senior management level, where I can put my technical and interpersonal abilities to best use towards organizational objective and personal fulfilment.
ಈ ಉತ್ತರದಲ್ಲಿ, ಸ್ಪಷ್ಟತೆ (clarity), ನಿರ್ದಿಷ್ಟತೆ (focus) ಹಾಗೂ ಮಹತ್ವಾಕಾಂಕ್ಷೆ (ambition) ಎಲ್ಲವೂ ಮಿಳಿತವಾಗಿವೆ.
2. Would you prefer taking your work home?
ಇಂತಹ ಪ್ರಶ್ನೆ ನಮ್ಮನ್ನು ಗೊಂದಲಕ್ಕೀಡುಮಾಡುತ್ತದೆ. ಈ ಪ್ರಶ್ನೆಗೆ ನಾವು ಹೌದು ಎಂದು ಉತ್ತರ ಕೊಟ್ಟರೆ, ನಮಗೆ ಕೊಟ್ಟ ಕೆಲಸವನ್ನು ಸಮಯಕ್ಕೆ ಮುಂಚೆ ಮುಗಿಸುವ ಸಾಮರ್ಥ್ಯವಿಲ್ಲವೆಂದಾಗುತ್ತದೆ. ಇಲ್ಲ ಎಂದು ಉತ್ತರಿಸಿದರೆ, ನಮಗೆ ಸಂದರ್ಭಾನುಸಾರ ಹೆಚ್ಚು ಹೊಣೆಗಾರಿಕೆಯನ್ನು ನಿಭಾಯಿಸುವ ಇಷ್ಟವಿಲ್ಲವೆಂದಾಗುತ್ತದೆ. ಹಾಗಾಗಿ, ಇಂತಹ ಸಂದರ್ಭಗಳಲ್ಲಿ ಚತುರತೆಯಿಂದ ಉತ್ತರಿಸಬೇಕು.
ಉದಾ: Usually, I prefer not to take work home because it could sometime affect work-life balance. But under exceptional circumstances I would gladly do so.
3. What is your opinion about corporate-social responsibility?
Ans: I think, it is a very good idea. When properly practised, it can lead to gradual development of infrastructure that benefits everybody.
4. What steps would you take to slove a problem?
ಇಲ್ಲಿ ನಮ್ಮ ಉತ್ತರದಿಂದ, ತರ್ಕಬದ್ಧವಾಗಿ ತೀರ್ಮಾನ ತೆಗೆದುಕೊಳ್ಳುವ ನಮ್ಮ ಜಾಣ್ಮೆಯ ಪರಿಚಯವನ್ನು ಸಂದರ್ಶಕರಿಗೆ ಮಾಡಿಕೊಡಬಹುದು.
I would grasp the situation and decide on, what needs to be done and consider the options and the resources available. Finally, choose the best course of action under the circumstances.
ಮೇಲಿನ ಪ್ರಶ್ನೆಗಳ ಸ್ವರೂಪವನ್ನು ಸ್ಪಷ್ಟವಾಗಿ ಗಮನಿಸಿದಾಗ, ಸಂದರ್ಶನದಲ್ಲಿ oopen ended questions ಮತ್ತು closed questionsಎಂಬ ಎರಡು ವಿಧದ ಪ್ರಶ್ನೆಗಳು ನಮಗೆದುರಾಗುವುದನ್ನು ಕಾಣಬಹುದು.
Wh What is your date of birth? ಎನ್ನುವಂತಹ ಪ್ರಶ್ನೆಗಳನ್ನು closed questionss ಎನ್ನುತ್ತೇವೆ. ಇಂತಹ ಪ್ರಶ್ನೆಗಳಿಗೆ ಸರಿಯಾದ ಉತ್ತರ ಒಂದೇ ಆಗಿರುತ್ತದೆ. ಆದರೆ ಮೇಲೆ ಕಂಡು ಬರುವ ನಾಲ್ಕು ಪ್ರಶ್ನೆಗಳು open-ended  ಆಗಿವೆ. ಅಂದರೆ, ಇವುಗಳಿಗೆ ಹಲವು ರೀತಿಯಲ್ಲಿ, ಹಲವು ಆಯಾಮಗಳಲ್ಲಿ ಉತ್ತರಿಸಬಹುದು.
ಮೇಲೆ ಹೇಳಿರುವ ಮಾತುಗಳು ಒಂದು ಸ್ಥೂಲ ಪರಿಚಯ ಅಷ್ಟೆ. ಸಂದರ್ಭಾನುಸಾರವಾಗಿ ಸಂದರ್ಶನದಲ್ಲಿ ನಾವು ನಮ್ಮ ಸ್ಫೂರ್ತಿ ಮತ್ತು ಪರಿಣತಿಗಳ ಮಿತಿಯಲ್ಲಿ ಸತ್ಯನಿಷ್ಠವಾದ ಉತ್ತರಗಳನ್ನು ಕೊಟ್ಟಾಗ ನಮ್ಮ ಯಶಸ್ಸಿನ ಸಾಧ್ಯತೆ ಅಗಾಧವಾಗಿ ಹೆಚ್ಚುತ್ತದೆ.

ಕೆಲ್ಸಾ ಬೇಕಾ? ಮಿಸ್ ಕಾಲ್ ಕೊಡಿ!

ಕೆಲಸ ಹುಡುಕಿ ಸುಸ್ತಾಗಿದೆಯೇ? ಹಾಗಿದ್ರೆ, ಅಲೆಯುವುದನ್ನು ಈ ಕೂಡಲೇ ನಿಲ್ಲಿಸಿ ನಮಗೊಂದು ಮಿಸ್‌ ಕಾಲ್‌ ಕೊಡಿ, ನಿಮಗೆ ಕೆಲಸವನ್ನು ನಾವು ಕೊಡಿಸುತ್ತೇವೆ’ ಎನ್ನುತ್ತಿದೆ ಬಾಬಾಜಾಬ್‌.ಕಾಮ್‌. 2007ರಲ್ಲಿ ಆರಂಭಗೊಂಡ ಈ ಸಂಸ್ಥೆ ಈವರೆಗೆ 25 ಲಕ್ಷಕ್ಕೂ ಅಧಿಕ ಜನರಿಗೆ ಕೆಲಸ ಕೊಡಿಸಿದೆ. ಮಧ್ಯವರ್ತಿಗಳ ಹಾವಳಿ ಇಲ್ಲದೇ ಉಚಿತವಾಗಿ ಕೆಲಸ ಕೊಡಿಸುವುದು ಈ ಸಂಸ್ಥೆಯ ಉದ್ದೇಶ.

ಎಸ್ಸೆಸ್ಸೆಲ್ಸಿ, ಪಿಯುಸಿ, ಪದವಿ, ಐಟಿಐ ಹೀಗೆ ಯಾವುದೇ ವಿಷಯದಲ್ಲಿ ಓದಿಕೊಂಡ ಅಭ್ಯರ್ಥಿಗಳು ಇಲ್ಲಿ ಕೆಲಸ ಗಿಟ್ಟಿಸಿಕೊಳ್ಳಬಹುದು. ಕೆಲಸದ ಅಗತ್ಯವಿರುವ ಅಭ್ಯರ್ಥಿಗಳು 888 000 4444 ಹಾಟ್‌ಲೈನ್‌ಗೆ ಮಿಸ್‌ಕಾಲ್‌ ಕೊಟ್ಟರೆ ಅವರಿಗೆ ಮೂರರಿಂದ ಐದು ದಿನದೊಳಗೆ ಕೆಲಸ ದೊರಕಿಸಿಕೊಡುತ್ತದೆ. 18ರಿಂದ 60 ವರ್ಷ ವಯಸ್ಸಿನವರೆಲ್ಲರೂ ಈ ಸೇವೆಯನ್ನು ಪಡೆದುಕೊಳ್ಳಬಹುದು.
ಕೆಲಸ ಗಿಟ್ಟಿಸಿಕೊಳ್ಳುವುದು ಹೇಗೆ?
ಕೆಲಸದ ಅವಶ್ಯಕತೆ ಇರುವ ಅಭ್ಯರ್ಥಿಗಳು ಮೊದಲಿಗೆ ಬಾಬಾಜಾಬ್‌.ಕಾಮ್‌ನ ಹಾಟ್‌ಲೈನ್‌ಗೆ ಮಿಸ್‌ಕಾಲ್‌ ಕೊಡಬೇಕು. ಮಿಸ್‌ ಕಾಲ್‌ ಕೊಟ್ಟವರಿಗೆ ಆ ಕ್ಷಣವೇ ಅವರ ಕಡೆಯಿಂದ ಕರೆ ಬರುತ್ತದೆ. ಕರೆ ಮಾಡಿದವರು ನಿಮ್ಮ ವಿದ್ಯಾರ್ಹತೆ, ಊರು, ವಯಸ್ಸು, ವಿಳಾಸ, ಯಾವ ಬಗೆಯ ಕೆಲಸದ ಹುಡುಕಾಟದಲ್ಲಿದ್ದೀರಾ, ಸಂಬಳ ಎಷ್ಟು ನಿರೀಕ್ಷೆ ಮಾಡುತ್ತಿದ್ದೀರ ಎಂಬ ವಿಷಯದ ಬಗ್ಗೆ ಮಾಹಿತಿ ಪಡೆದುಕೊಂಡು ನೋಂದಣಿ ಮಾಡಿಕೊಳ್ಳುತ್ತಾರೆ.
ಆನಂತರ ಬಾಬಾಜಾಬ್‌.ಕಾಮ್‌ನವರು ನೀವು ನೀಡಿದ ಮಾಹಿತಿಯನ್ನು ಅನುಸರಿಸಿ ನಿಮ್ಮದೊಂದು ಬಯೊಡೇಟಾ ಸಿದ್ಧಪಡಿಸಿ ಅವುಗಳನ್ನು ಕಂಪೆನಿಗಳಿಗೆ ಕಳುಹಿಸಿಕೊಡುತ್ತಾರೆ. ಈ ಪ್ರಕ್ರಿಯೆ ಮುಗಿದ ಎರಡು ಮೂರು ದಿನಗಳಲ್ಲಿ ನಿಮಗೆ ಕಂಪೆನಿಯವರಿಂದ ಕರೆ ಬರುತ್ತದೆ. ಸಂದರ್ಶನ ಎದುರಿಸಿ ಯಶಸ್ವಿಯಾದರೆ ಅಲ್ಲಿ ನಿಮಗೆ ಉದ್ಯೋಗ ಗ್ಯಾರಂಟಿ. ಮಧ್ಯವರ್ತಿಗಳಿಗೆ ಹಣ ನೀಡದೇ ನೀವು ನೇರವಾಗಿ ಕಂಪೆನಿಗಳಲ್ಲಿ ಉದ್ಯೋಗ ಗಿಟ್ಟಿಸಿಕೊಳ್ಳಬಹುದು.
ನಿಮ್ಮ ಏರಿಯಾದಲ್ಲೇ ಉದ್ಯೋಗ
ಫ್ಲಿಫ್‌ಕಾರ್ಟ್‌, ಮಿಂಟ್ರಾ, ಒಲಾ, ಟ್ಯಾಕ್ಸಿ ಫಾರ್‌ ಶ್ಯೂರ್‌, ಡಾಮಿನೋಸ್‌ ಪಿಜ್ಜಾ, ಬಿಗ್‌ಬಜಾರ್‌ ಹೀಗೆ 80 ಸಾವಿರಕ್ಕೂ ಅಧಿಕ ಕಂಪೆನಿಗಳೊಂದಿಗೆ ಒಪ್ಪಂದ ಮಾಡಿಕೊಂಡಿರುವ ಬಾಬಾಜಾಬ್‌.ಕಾಮ್‌ ಆ ಕಂಪೆನಿಗಳಿಗೆ ಅಗತ್ಯವಿರುವ ಕೆಲಸಗಾರರನ್ನು ಒದಗಿಸುತ್ತಿದೆ.
‘ನಮ್ಮಲ್ಲಿ ನೋಂದಣಿ ಮಾಡಿಕೊಂಡ ಅಭ್ಯರ್ಥಿಗಳು ಯಾವ ಸ್ಥಳದಲ್ಲಿ ಕೆಲಸ ಮಾಡಲು ಇಚ್ಛಿಸುತ್ತಾರೆ ಎಂಬುದನ್ನು ಅರಿತು ಅದರಂತೆ ಅವರಿಗೆ ಉದ್ಯೋಗ ದೊರಕಿಸಿಕೊಡುವ ಪ್ರಯತ್ನ ಮಾಡುತ್ತೇವೆ. ಉದಾಹರಣೆಗೆ, ಅಭ್ಯರ್ಥಿ ಬೆಂಗಳೂರಿನವರಾಗಿದ್ದರೆ, ಅವರ ವಿದ್ಯಾರ್ಹತೆಗೆ ತಕ್ಕಂತೆ ಅವರು ವಾಸವಿರುವ 8 ಕಿಲೋ ಮೀಟರ್‌ ವ್ಯಾಪ್ತಿಯೊಳಗೆ ಇರುವ ಕಂಪೆನಿಗಳಲ್ಲಿ ಉದ್ಯೋಗ ದೊರಕಿಸಿಕೊಡುತ್ತೇವೆ. ವಿದ್ಯಾರ್ಹತೆ ಇಲ್ಲದವರಿಗೂ ಕೆಲಸಗಳು ಸಾಕಷ್ಟಿವೆ. ಅಂಥವರೂ ನಮಗೆ ಮಿಸ್‌ಕಾಲ್‌ ಕೊಟ್ಟರೆ ನಾವು ಕೆಲಸ ಕೊಡಿಸುತ್ತೇವೆ’ ಎನ್ನುತ್ತಾರೆ ಬಾಬಾಜಾಬ್‌. ಕಾಮ್‌ನ ಮಾರಾಟ ವಿಭಾಗದ ಮುಖ್ಯಸ್ಥ ಅಂಜನ್‌ ಕುಮಾರ್‌.
ಮಹಿಳಾ ಅಭ್ಯರ್ಥಿಗಳಿಗೆ ಡಿಮ್ಯಾಂಡ್‌
ಉದ್ಯೋಗ ಮಾಡಲು ಬಯಸುವ ಹೆಣ್ಣು ಮಕ್ಕಳಿಗೆ ಇಂದು ಹಲವು ಕ್ಷೇತ್ರಗಳಲ್ಲಿ ಬೇಡಿಕೆ ಇದೆ. ವಿದ್ಯಾರ್ಹತೆ ಇಲ್ಲದವರು ಸಹ ಹೌಸ್‌ ಕೀಪಿಂಗ್‌ ಕೆಲಸ ಮಾಡಿ ಎಂಟ್ಹತ್ತು ಸಾವಿರ ದುಡಿಮೆ ಮಾಡಬಹುದು. ‘ಮಹಿಳಾ ಅಭ್ಯರ್ಥಿಗಳಿಗೆ ಕಂಪೆನಿ ಕಡೆಗಳಿಂದ ತುಂಬ ಡಿಮ್ಯಾಂಡ್‌ ಇದೆ. ಅದರಲ್ಲೂ ಮಹಿಳಾ ಕ್ಯಾಬ್‌ ಡ್ರೈವರ್‌ಗಳು ಬೇಕೆಂದು ಕೇಳುವ ಐಟಿ ಕಂಪೆನಿಗಳ ಸಂಖ್ಯೆ ಹೆಚ್ಚಿವೆ.
ನಮ್ಮ ಕಡೆಯಿಂದ ಉದ್ಯೋಗ ಪಡೆದ ಮಹಿಳಾ ಡ್ರೈವರ್‌ಗಳು ಈಗ ತಿಂಗಳಿಗೆ ಏನಿಲ್ಲವೆಂದರೂ ₨15ರಿಂದ 20 ಸಾವಿರದಷ್ಟು ಹಣ ಸಂಪಾದನೆ ಮಾಡುತ್ತಾರೆ. ಹೆಚ್ಚಿನ ವಿದ್ಯಾಭ್ಯಾಸ ಮಾಡಿದವರು ಡೊಮೆಸ್ಟಿಕ್‌ ಕಾಲ್‌ಸೆಂಟರ್‌ನಲ್ಲೂ ಉದ್ಯೋಗ ಗಿಟ್ಟಿಸಿಕೊಂಡಿದ್ದಾರೆ’ ಎಂಬ ಮಾಹಿತಿ ನೀಡುತ್ತಾರೆ ಅಂಜನ್‌.
ಹೊಸದಾಗಿ ಎಂಜಿನಿಯರಿಂಗ್‌ ಪದವಿ ಪಡೆದ ಅಭ್ಯರ್ಥಿಗಳಿಗೂ ನೀವು ಕೆಲಸ ದೊರಕಿಸಿಕೊಡುತ್ತೀರಾ ಎಂಬ ಪ್ರಶ್ನೆಗೆ ಅಂಜನ್‌ ಉತ್ತರಿಸಿದ್ದು ಹೀಗೆ: ‘ವರ್ಷಕ್ಕೆ 80 ಸಾವಿರ ಎಂಜಿನಿಯರಿಂಗ್‌ ಪದವೀಧರರು ತಯಾರಾಗುತ್ತಿದ್ದಾರೆ. ಅವರೆಲ್ಲರಿಗೂ ಒಳ್ಳೆಯ ಕಂಪೆನಿಗಳಲ್ಲಿ ದೊಡ್ಡ ಮೊತ್ತದ ಸಂಬಳ ದೊರಕುವುದು ತುಸು ಕಷ್ಟವೇ ಸರಿ. ಓದಿಗೆ ತಕ್ಕ ಕೆಲಸವೇ ಬೇಕು ಎಂದು ಕುಳಿತರೆ ಅವರಿಗೆ ಕೆಲಸದ ಅನುಭವವೇ ಆಗುವುದಿಲ್ಲ.
ಹಾಗಾಗಿ, ಒಳ್ಳೆ ಕೆಲಸ ಸಿಗುವವರೆಗೆ ಬೇರೆ ಕ್ಷೇತ್ರಗಳಲ್ಲಿ ಕೆಲಸ ಮಾಡಿ ಒಳ್ಳೆ ಕೌಶಲ ಪಡೆಯುವತ್ತ ಗಮನ ಹರಿಸಬೇಕು. ಆನಂತರವಷ್ಟೇ ಅವರ ಕೌಶಲಕ್ಕೆ ತಕ್ಕ ಕೆಲಸ ಕೊಡಿಸುವುದು ಸಾಧ್ಯ’. ಅಂದಹಾಗೆ, ಬಾಬಾಜಾಬ್‌.ಕಾಮ್‌ನಲ್ಲಿ ನೋಂದಣಿ ಮಾಡಿಸಿಕೊಂಡವರಿಗೆ ಹೆಚ್ಚಾಗಿ ಬಿಪಿಒ, ಸೇಲ್ಸ್‌ ಅಂಡ್‌ ಮಾರ್ಕೆಟಿಂಗ್‌, ಡೆಲಿವರಿ ಬಾಯ್ಸ್‌, ಡ್ರೈವರ್‌, ರೀಟೇಲ್‌ ಸೆಕ್ಟರ್‌ನಲ್ಲಿ ಉದ್ಯೋಗವಕಾಶ ದೊರಕಿಸಿಕೊಡಲಾಗುತ್ತದೆ.
ಕಡಿಮೆ ಓದಿದವರಿಗೆ ಬಾಬಾಜಾಬ್.ಕಾಮ್‌ ಒಳ್ಳೆ ಸಂಬಳದ ಕೆಲಸವನ್ನೇನೋ ದೊರಕಿಸಿಕೊಡುತ್ತಿದೆ. ಆದರೆ, ಹೆಚ್ಚು ಓದಿದವರಿಗೆ ಇಲ್ಲಿ ಸೂಕ್ತ ಉದ್ಯೋಗ ಸಿಗುತ್ತದೆ ಎಂದು ಹೇಳಲಾಗುವುದಿಲ್ಲ. ಕೌಶಲ ಪಡೆದುಕೊಂಡ ಅಭ್ಯರ್ಥಿಗಳಿಗೆ ಮಾತ್ರ ಒಳ್ಳೆ ಕೆಲಸ ಕೊಡಿಸುವ ಭರವಸೆಯನ್ನಂತೂ ಅದು ಭಿತ್ತುತ್ತಿದೆ.
ಕಂಪೆನಿಗಳು ಮತ್ತು ಉದ್ಯೋಗಾಕಾಂಕ್ಷಿಗಳ ನಡುವಿನ ಅಂತರವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಕೆಲಸ ನಿರ್ವಹಿಸುತ್ತಿರುವ ಬಾಬಾಜಾಬ್‌.ಕಾಮ್‌ ಮುಂದಿನ ದಿನಗಳಲ್ಲಿ ಅಭ್ಯರ್ಥಿಗಳ ಓದಿಗೆ ತಕ್ಕಂತಹ ಉತ್ತಮ ಉದ್ಯೋಗವಕಾಶವನ್ನು ದೊರಕಿಸಿಕೊಡುವ ಕನಸು ಹೊಸೆಯುತ್ತಿದೆ.
ನಯಾಪೈಸೆ ಖರ್ಚಿಲ್ಲ
ಮೈಕ್ರೋಸಾಫ್ಟ್‌ ಕಂಪೆನಿ ಉದ್ಯೋಗಿಯಾಗಿದ್ದ ಅಮೆರಿಕದ ಸಿಯಾನ್‌ ಬ್ಲಾಗ್‌ಸ್ವೆಟ್‌ ಅವರಿಗೆ ಒಮ್ಮೆ ಮನೆಗೆಲಸದವರು ಸಿಗದೆ ತುಂಬ ತೊಂದರೆ ಅನುಭವಿಸಿದರು. ಮನೆ ಕೆಲಸದವರನ್ನು ಹುಡುಕಲು ಅವರು ದಲ್ಲಾಳಿಗೆ ಸಾಕಷ್ಟು ಹಣ ನೀಡಬೇಕಾಯ್ತು. ಆಗ ಅವರಿಗೆ ಮಧ್ಯವರ್ತಿಗಳ ಹಾವಳಿಯಿಲ್ಲದೇ ಕೆಲಸಗಾರರು ಸಿಗುವಂತೆ ಮಾಡಬೇಕು ಎಂಬ ಯೋಚನೆ ಬಂದಾಗ ಹುಟ್ಟಿಕೊಂಡಿದ್ದೇ ಬಾಬಾಜಾಬ್‌.ಕಾಮ್‌. ಬಾಬ್‌ಜಾಬ್‌ ಮುಖಾಂತರ ಅಭ್ಯರ್ಥಿಗಳು ನಯಾಪೈಸೆ ಖರ್ಚು ಮಾಡದೇ ಉದ್ಯೋಗ ದೊರಕಿಸಿಕೊಳ್ಳಬಹುದು. ಮಾಹಿತಿಗೆ: www.babajob.com
 

 

*ಸೆ.1: ಜಿಂಬಾಬ್ವೆ ರಾಜಧಾನಿ ಹರಾರೆಯಲ್ಲಿ ನಡೆದ ಆಸ್ಟ್ರೇಲಿಯಾ ಮತ್ತು ಜಿಂಬಾಬ್ವೆ ನಡುವಿನ ಏಕದಿನ ಕ್ರಿಕೆಟ್‌ ಪಂದ್ಯದಲ್ಲಿ ಜಿಂಬಾಬ್ವೆ 31 ವರ್ಷಗಳ ಬಳಿಕ ಆಸ್ಟ್ರೇಲಿಯಾ ತಂಡವನ್ನು ಮಣಿಸುವ ಮೂಲಕ ನೂತನ ದಾಖಲೆ ಬರೆಯಿತು.
*ಸೆ.2: ಭಾರತದ ಮಾಜಿ ಅಟಾರ್ನಿ ಜನರಲ್‌ ಜಿ. ಇ. ವಹನ್ವತಿ ನಿಧನರಾದರು. ಅವರು ಸುಪ್ರಿಂ ಕೋರ್ಟ್‌ನಲ್ಲಿ ನ್ಯಾಯಾಧೀಶರಾಗಿದ್ದರು.
*ಸೆ.3: ಸಾರ್ವಜನಿಕ ಸ್ಥಳ ಹಾಗೂ ಧಾರ್ಮಿಕ ಕೇಂದ್ರಗಳಲ್ಲಿ ಪ್ರಾಣಿ ಬಲಿಯನ್ನು ನಿಷೇಧಿಸುವಂತೆ ಹಿಮಾಚಲ ಪ್ರದೇಶ ಹೈಕೋರ್ಟ್‌ ಸರ್ಕಾರಕ್ಕೆ ಮಹತ್ವದ ನಿರ್ದೇಶನ ನೀಡಿತು.
*ಸೆ.3: ಸುಪ್ರಿಂ ಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ಪಿ. ಸದಾಶಿವಂ ಅವರನ್ನು ಕೇಂದ್ರ ಸರ್ಕಾರ ಕೇರಳ ರಾಜ್ಯದ ರಾಜ್ಯಪಾಲರನ್ನಾಗಿ ನೇಮಕ ಮಾಡಿತು.
*ಸೆ.3: ಸುಪ್ರಿಂ ಕೋರ್ಟ್‌ನ 42ನೇ ಮುಖ್ಯ ನ್ಯಾಯಮೂರ್ತಿಯನ್ನಾಗಿ ಕನ್ನಡಿಗ ಎಚ್‌.ಎಲ್‌ ದತ್ತು ಅವರನ್ನು ನೇಮಕ ಮಾಡಿ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರು ಆದೇಶ ಹೊರಡಿಸಿದರು.
*ಸೆ. 4: ನ್ಯಾಯಮೂರ್ತಿ ಧರ್ಮಾಧಿಕಾರಿ ನೇತೃತ್ವದ ಸಮಿತಿ ಮಹಾರಾಷ್ಟ್ರದಲ್ಲಿ ಎಲ್ಲಾ ರೀತಿಯ ಡ್ಯಾನ್ಸ್‌ ಬಾರ್‌ಗಳನ್ನು ನಿಷೇಧಿಸುವಂತೆ ಬಾಂಬೆ ಹೈಕೋರ್ಟ್‌ಗೆ ವರದಿ ಸಲ್ಲಿಸಿತು.
*ಸೆ.4: ಅಮೆರಿಕದ ಖ್ಯಾತ ಹಾಸ್ಯಗಾರ ಹಾಗೂ ಭಾಷಣಕಾರ ಜಾನ್‌ ರಿವರ್‌ ನಿಧನರಾದರು. ಅವರು ವಿಶ್ವದಾದ್ಯಂತ ಹಲವಾರು ಹಾಸ್ಯ ಕಾರ್ಯಕ್ರಮಗಳನ್ನು ನೀಡುವ ಮೂಲಕ ಜನಪ್ರಿಯರಾಗಿದ್ದರು.
*ಸೆ.5: ಬೌದ್ಧ ಗುರು ದಲೈಲಾಮ ಅವರಿಗೆ ದಕ್ಷಿಣ ಆಫ್ರಿಕಾ ಸರ್ಕಾರ ವೀಸಾ ನೀಡಲು ನಿರಾಕರಿಸಿತು. ದಲೈಲಾಮ ಅವರನ್ನು ನೊಬೆಲ್‌ ಪ್ರಶಸ್ತಿ ಪ್ರದಾನ ಸಮಿತಿಯು ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಆಹ್ವಾನಿಸಿತ್ತು.
*ಸೆ.5: ರಾಷ್ಟ್ರೀಯ ಸಣ್ಣ ಕೈಗಾರಿಕ ನಿಗಮದ (ಎನ್‌ಎಸ್‌ಐಸಿ) ವ್ಯವಸ್ಥಾಪಕ ನಿರ್ದೇಶಕರಾಗಿ ರವೀಂದ್ರನಾಥ್‌ ಅಧಿಕಾರ ಸ್ವೀಕರಿಸಿದರು. ಅವರು ಈ ಹಿಂದೆ ರಾಷ್ಟ್ರೀಯ ಕೈಗಾರಿಕ ಹಣಕಾಸು ನಿಗಮದಲ್ಲಿ ಉನ್ನತ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದರು.
*ಸೆ.5: ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಅಡ್ವಾನ್ಸ್‌ ಸ್ಟಡಿ (ಐಐಎಎಸ್‌)ಯ ಮುಖ್ಯಸ್ಥರಾಗಿ ಚಂದ್ರಕಲಾ ಪಾಡಿಯ ಅವರು ನೇಮಕಗೊಂಡರು. ಪಾಡಿಯಾ ಅವರು ಈ ಸಂಸ್ಥೆಗೆ ನೇಮಕಗೊಂಡ ಮೊದಲ ಮಹಿಳಾ ಅಧ್ಯಕ್ಷರಾಗಿದ್ದಾರೆ.
*ಸೆ.6: ಆಸ್ಟ್ರೇಲಿಯಾದ ಪ್ರಧಾನಿ ಟೋನಿ ಅಬ್ಬಾಟ್‌ ಅವರು 11ನೇ ಶತಮಾನದ ಭಾರತೀಯ ವಿಗ್ರಹಗಳನ್ನು ಭಾರತ ಸರ್ಕಾರಕ್ಕೆ ಒಪ್ಪಿಸುವುದಾಗಿ ಪ್ರಕಟಿಸಿದರು. ಈ ವಿಗ್ರಹಗಳನ್ನು ಸುಮಾರು ಹತ್ತು ಶತಮಾನಗಳ ಹಿಂದೆ ಕಳವು ಮಾಡಿ ಅವುಗಳನ್ನು ಆಸ್ಟ್ರೇಲಿಯಾದಲ್ಲಿ ಇಡಲಾಗಿತ್ತು.
*ಸೆ.7: ಜವಾಹರ ಲಾಲ್‌ ನೆಹರೂ ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾದ ಪ್ರಿಯದರ್ಶಿನಿ ಮುಖರ್ಜಿ ಅವರಿಗೆ ಚೀನಾದ ಪ್ರತಿಷ್ಠಿತ ‘ಚೀನಾ ಬುಕ್‌ ಅವಾರ್ಡ್‌’ ಪ್ರಶಸ್ತಿ ಸಂದಿದೆ.
*ಸೆ.8: ಭಾರತದ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್‌ ಅವರು ಬಹರೇನ್‌ ದೇಶಕ್ಕೆ ತೆರಳಿದರು. ಬಹರೇನ್‌ ದೇಶಕ್ಕೆ ಭೇಟಿ ನೀಡಿದ ಮೊದಲ ಮಹಿಳಾ ವಿದೇಶಾಂಗ ಸಚಿವೆ ಎಂಬ ಹೆಗ್ಗಳಿಕೆಗೆ ಸುಷ್ಮಾ ಸ್ವರಾಜ್‌ ಪಾತ್ರರಾಗಿದ್ದಾರೆ.
*ಸೆ.9: ಭಾರತದ ವೃತ್ತಿಪರ ಸ್ನೂಕರ್‌ ಆಟಗಾರ ಪಂಕಜ್‌ ಅಡ್ವಾಣಿ ನಿವೃತ್ತಿ ಘೋಷಿಸಿದರು. ಪಂಕಜ್‌ ಸ್ನೂಕರ್‌ ವಿಶ್ವ ಕಿರೀಟ ಸೇರಿದಂತೆ ಹಲವಾರು ಅಂತರರಾಷ್ಟ್ರೀಯ ಟ್ರೋಫಿಗಳನ್ನು ಜಯಿಸಿದ್ದಾರೆ.
*ಸೆ.10: ಭಾರತದ ಹಿರಿಯ ಐಎಎಸ್‌ ಅಧಿಕಾರಿ ಸುಭಾಶ್‌ ಚಂದ್ರ ಗಾರ್ಗ್‌ ಅವರನ್ನು ವಿಶ್ವಬ್ಯಾಂಕ್‌ನ ಎಕ್ಸಿಕ್ಯೂಟಿವ್‌ ನಿರ್ದೇಶಕರನ್ನಾಗಿ ನೇಮಕ ಮಾಡಲಾಯಿತು.
*ಸೆ.11: ಸ್ವಾತಂತ್ರ್ಯ ಹೋರಾಟಗಾರ ಮತ್ತು ಹಿರಿಯ ಪತ್ರಕರ್ತ ಜಿತೇಂದ್ರ ಪಾಲ್‌ ನಿಧನರಾದರು. ಅವರು ಸ್ವಾತಂತ್ರ್ಯ ಪೂರ್ವದ ಹಲವು ಪತ್ರಿಕೆಗಳಲ್ಲಿ ವರದಿಗಾರರಾಗಿ ಕೆಲಸ ಮಾಡಿದ್ದರು.
*ಸೆ.12: ಬಾಲಿವುಡ್‌ನ ಹಿರಿಯ ನಟ ನಾಸಿರುದ್ದೀನ್‌ ಶಾ ಅವರ ಆತ್ಮಕತೆ ‘ಅಂಡ್‌ ದೆನ್‌ ಒನ್‌ ಡೇ: ಎ ಮೆಮೊರ್‌’(And then One Day: A Memoir) ಪುಸ್ತಕವನ್ನು ಬಿಡುಗಡೆ ಮಾಡಲಾಯಿತು.
*ಸೆ.13: ಐಎಸ್‌ಐಎಸ್‌ ಉಗ್ರರು ಬ್ರಿಟಿಷ್‌ ಪ್ರಜೆ ಡೇವಿಡ್‌ ಹೇನ್ಸ್‌ ಅವರ ತಲೆ ಕತ್ತರಿಸಿದ ವಿಡಿಯೊ ತುಣುಕನ್ನು ‘ಜಿಹಾದಿ’ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದರು. ಡೇವಿಡ್‌ ಹೇನ್ಸ್‌ ಅವರನ್ನು ಸಿರಿಯಾ ದೇಶದಿಂದ ಅಪಹರಿಸಲಾಗಿತ್ತು.
*ಸೆ.14: ದೇಶದಲ್ಲಿ ಮೊಟ್ಟ ಮೊದಲ ಬಾರಿಗೆ ದೆಹಲಿ ಪೊಲೀಸರು ‘ಇ–ಪೊಲೀಸ್‌ ಠಾಣೆಯನ್ನು ಆರಂಭಿಸಿದರು. ಈ ಠಾಣೆಯಲ್ಲಿ ವಾಹನ ಕಳೆದುಕೊಂಡವರು ದೂರು ಸಲ್ಲಿಸಬಹುದು.
*ಸೆ.15: ದೂರದರ್ಶನದಲ್ಲಿ ಸುದ್ದಿ ವಾಚನ ಮಾಡುವ ಮೂಲಕ ದ್ವಿಲಿಂಗಿ ಪದ್ಮಿನಿ ಪ್ರಕಾಶ್‌ ನೂತನ ದಾಖಲೆ ಬರೆದರು.
*ಸೆ.17: ರಾಷ್ಟ್ರಪತಿ ಪ್ರಣವ್‌ ಮುಖರ್ಜಿ ಎರಡು ದಿನಗಳ ಸೌಹಾರ್ದ ಭೇಟಿಗಾಗಿ ವಿಯೆಟ್ನಾಂ ದೇಶಕ್ಕೆ ಪ್ರಯಾಣ ಬೆಳೆಸಿದರು. ವಿಯೆಟ್ನಾಂ ಸೋಶಿಯಲ್‌ ರಿಪಬ್ಲಿಕ್‌ ದೇಶವಾಗಿವೆ.
*ಸೆ.18: ಲಲಿತಾ ಕುಮಾರ ಮಗಳಂ ಅವರನ್ನು ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಯಿತು.
*ಸೆ.19: ಪ್ರಾಚೀನ ನಳಂದ ವಿಶ್ವವಿದ್ಯಾಲಯವನ್ನು 800 ವರ್ಷಗಳ ಬಳಿಕ ಪುನರಾರಂಭಿಸಲಾಯಿತು.
*ಸೆ.23: ಹಿಂದಿ ಸಾಹಿತಿ ಗೋವಿಂದ್‌ ಮಿಶ್ರಾ 2013ನೇ ಸಾಲಿನ ಸರಸ್ವತಿ ಸಮ್ಮಾನ್‌ ಪ್ರಶಸ್ತಿಯನ್ನು ಸ್ವೀಕರಿಸಿದರು. 2008ರಲ್ಲಿ ಪ್ರಕಟವಾದ ‘ದೂಲ್‌ ಪದೂನ್‌ ಪರ್‌’  ಕಾದಂಬರಿಗೆ ಈ ಪುರಸ್ಕಾರ ಸಂದಿದೆ.
*ಸೆ.24: ಪ್ರಧಾನಿ ನರೇಂದ್ರ ಮೋದಿ ಅವರು ಕರ್ನಾಟಕದ ತುಮಕೂರು ಸಮೀಪ ದೇಶದ ಮೊದಲ ಫುಡ್‌ಪಾರ್ಕ್‌ ಘಟಕವನ್ನು ಲೋಕಾರ್ಪಣೆ ಮಾಡಿದರು.
*ಸೆ.25: ಸಚಿನ್‌ ತೆಂಡೂಲ್ಕರ್‌ ಮತ್ತು ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಸ್ಟಿವಾ ಅವರು 201*ನೇ ಸಾಲಿನ ಬ್ರಾಡ್‌ಮನ್‌ ಪುರಸ್ಕಾರಕ್ಕೆ ಆಯ್ಕೆಯಾಗಿದ್ದರು.
*ಸೆ. 29: ತಮಿಳುನಾಡಿನ ಮುಖ್ಯಮಂತ್ರಿಯಾಗಿ ಒ ಪನ್ನಿರ್‌ ಸೆಲ್ವಂ ಪ್ರಮಾಣವಚನ ಸ್ವೀಕರಿಸಿದರು.
*ಸೆ.30: ಟರ್ಕಿ ಸರ್ಕಾರ ಶಾಲಾ ಮಕ್ಕಳು ಟ್ಯಾಟು ಹಾಕುವುದರ ಮೇಲೆ ನಿಷೇಧ ಹಾಕಿತು. ಇದನ್ನು ವಿರೋಧಿಸಿ ಸರ್ಕಾರದ ವಿರುದ್ಧ ನಡೆದ ಪ್ರತಿಭಟನೆಯಲ್ಲಿ ನೂರಕ್ಕೂ ಹೆಚ್ಚು ಮಕ್ಕಳು ಪೊಲೀಸರ ಗುಂಡಿಗೆ ಬಲಿಯಾದರು.