Friday 2 January 2015

Spoken English Prakash accident



ವಿರಾಮ ಚಿಹ್ನೆಗಳ ಉಪಯೋಗ

ನಾವು ಸಂಭಾಷಿಸುವಾಗ, ನಮ್ಮ ಮಾತುಗಳಲ್ಲಿನ ಸ್ಪಷ್ಟತೆಯನ್ನು sstress, intonation, pauses, body languageಗಳ ಮುಖಾಂತರ ವ್ಯಕ್ತಪಡಿಸುವ ಹಾಗೆ ನಮ್ಮ ಬರವಣಿಗೆಯಲ್ಲಿನ ಸ್ಪಷ್ಟತೆಯನ್ನು ಸರಿಯಾದ ವಿರಾಮ ಚಿಹ್ನೆಗಳನ್ನು ಉಪಯೋಗಿಸುವುದರ ಮುಖಾಂತರ ವ್ಯಕ್ತಪಡಿಸಬಹುದು.
ಇಂಗ್ಲಿಷ್ ಭಾಷೆಯಲ್ಲಿ ಬಳಸುವ ವಿರಾಮ ಚಿಹ್ನೆಗಳು ಮತ್ತು ಅವುಗಳನ್ನು ಎಲ್ಲಿ, ಹೇಗೆ ಬಳಸಬೇಕೆಂಬುದನ್ನು ಇಲ್ಲಿ ಗಮನಿಸಿ:
Full stop (.)
ಅಮೆರಿಕನ್ನರು full stop ಅನ್ನು periodಎನ್ನುತ್ತಾರೆ. ಇದನ್ನು ಯಾವುದೇ ವಾಕ್ಯವು ಕೊನೆಗೊಳ್ಳುವುದನ್ನು ಸೂಚಿಸುವುದಕ್ಕಾಗಿ ಬಳಸಲಾಗುತ್ತದೆ.
ಉದಾ: WWe learn grammar. This helps us in the correct use of language. Abbreviation ಮತ್ತು initialಗಳನ್ನು ಬಳಸುವಾಗ ಸಹಾ full stop ಅನ್ನು ಉಪಯೋಗಿಸುತ್ತೇವೆ.
ಉದಾ: 1. M.A. for Master of Arts (abbreviation)
2. K. Ashok (initial)
Comma (,)
ನಮ್ಮ ಬರವಣಿಗೆಯಲ್ಲಿ ಸಾಕಷ್ಟು ಬಾರಿ ಉಪಯೋಗಿಸುವ ವಿರಾಮ ಚಿಹ್ನೆಯೆಂದರೆ comma. ಇದನ್ನು ನಾಲ್ಕು ಸಂದರ್ಭಗಳಲ್ಲಿ ಬಳಸಬಹುದು.
a). Listing comma - ಮೂರು ಅಥವಾ ಮೂರಕ್ಕಿಂತ ಹೆಚ್ಚು ಪದಗಳ/ಪದಪುಂಜಗಳನ್ನು, ಒಂದರಿಂದ ಇನ್ನೊಂದನ್ನು ಬೇರ್ಪಡಿಸಲು ಬಳಸುವ commaವನ್ನು listing comma ಎನ್ನಬಹುದು.
ಉದಾ: 1. Orange, white and green are the colours in the Indian flag.
2. Arjuna, Bheema, Nakula and Sahadeva are brothers.
b). Joining Comma -ಎರಡು ವಾಕ್ಯಗಳನ್ನು ಸೇರಿಸಿ ಒಂದು ವಾಕ್ಯವನ್ನಾಗಿ ಮಾಡಲು ಬಳಸುವ commaವನ್ನು joining comma ಎನ್ನಬಹುದು.
ಉದಾ:I could have lied to you, but I did not.

c) Gapping Comma - ಹಿಂದೊಮ್ಮೆ ಸೂಚಿಸಿದಂತಹ ಪದಗಳನ್ನು ಮತ್ತೆ ಪುನರಾವರ್ತಿಸುವ ಬದಲಾಗಿ comma ವನ್ನು ಉಪಯೋಗಿಸಿ ವಾಕ್ಯವನ್ನು ಸಂಕ್ಷಿಪ್ತಗೊಳಿಸಬಹುದು ಹಾಗೂ ಏಕತಾನತೆಯನ್ನು (monotony) ತಡೆಗಟ್ಟಬಹುದು. ಇಂತಹ commaವನ್ನು ggapping commaಎಂದು ಕರೆಯುತ್ತೇವೆ. ಉದಾ:Some writers use punctuation correctly; others, not.
d) Bracketing Comma - bracket  ಒಳಗೆ ಉಪಯೋಗಿಸಬಹುದಾದ ಪದಪುಂಜ ಅಥವಾ ಒಂದು ಚಿಕ್ಕ ವಾಕ್ಯವನ್ನು bbracket ಇಲ್ಲದೆಯೇ ಇನ್ನೊಂದು ವಾಕ್ಯದೊಳಗೆ ಸೇರಿಸುವಾಗ ಬಳಸುವಂತಹ commaವನ್ನು bbracketing comma ಎನ್ನಬಹುದು.
ಉದಾ: 1. Ashok, who is a resident of Bangalore, is a good singer.
2. Milton, the great English poet, was blind.
ಸಾಮಾನ್ಯವಾಗಿ. ಎಲ್ಲಿ comma ಉಪಯೋಗಿಸಬೇಕೆಂಬ ಸಂದೇಹ ಬಂದಾಗ ನಾವು ಮಾಡಬೇಕಾಗಿರುವ ಕೆಲಸ ಇಷ್ಟೆ. ವಾಕ್ಯವನ್ನು ಜೋರಾಗಿ ಓದಿ, ಎಲ್ಲಿ ಅರ್ಥಪೂರ್ಣವಾಗಿ ನಿಲ್ಲಿಸಬೇಕಾಗುತ್ತದೋ ಅಥವಾ ಉಸಿರನ್ನು ತೆಗೆದುಕೊಳ್ಳ ಬೇಕಾಗುತ್ತದೋ ಅಲ್ಲಿ comma ಹಾಕುವುದು ಸೂಕ್ತ. ಇದು ಬಹುತೇಕ ಸಂದರ್ಭಗಳಲ್ಲಿ ಉಪಯುಕ್ತ ವಿಧಾನ.
ಮತ್ತಷ್ಟು ವಿರಾಮ ಚಿಹ್ನೆಗಳು
ಸೈದ್ಧಾಂತಿಕವಾಗಿ, ನಾವು ಬರೆಯುವ ವಾಕ್ಯವೊಂದು ಎಷ್ಟಾದರೂ ಉದ್ದವಿರಬಹುದು. ಉದಾಹರಣೆಗೆ, James Joyce ಎನ್ನುವ ಕಾದಂಬರಿಕಾರನ Ulysses ಎಂಬ ಕಾದಂಬರಿಯ ಕೊನೆಯ ವಾಕ್ಯ ವಿರಾಮ ಚಿಹ್ನೆಗಳನ್ನು ಉಪಯೋಗಿಸದೆಯೇ ಬರೆದದ್ದಾಗಿದ್ದು, ಅನೇಕ ಪುಟಗಳಷ್ಟು ಉದ್ದವಿದೆ. ಆದರೆ ಸಾಮಾನ್ಯವಾಗಿ ಓದುಗರ ಮೇಲೆ ಈ ರೀತಿಯ ಒತ್ತಡವನ್ನು ಹೇರಬಾರದು. ನಮ್ಮ ಮೆದುಳಿಗೆ ಸೀಮಿತ ಗ್ರಹಣಶಕ್ತಿಯಿರುವುದರಿಂದ ವಿರಾಮ ಚಿಹ್ನೆಗಳನ್ನು ಉಪಯೋಗಿಸಿ ಬಳಸುವ ಭಾಷೆ ಓದುಗರಿಗೆ ಸುಲಭವಾಗಿ ಅರ್ಥವಾಗುತ್ತದೆ. ಈ ಕಾರಣಕ್ಕೆ ನಾವು ವಿರಾಮ ಚಿಹ್ನೆಗಳ ಉಪಯೋಗದ ಮೇಲೆ ಹಿಡಿತ ಸಾಧಿಸಬೇಕು. ಈಗ ಇನ್ನೂ ಕೆಲವು ವಿರಾಮ ಚಿಹ್ನೆಗಳ ಬಗ್ಗೆ ತಿಳಿದುಕೊಳ್ಳೋಣ.
Semi Colon (;)
ಒಂದಕ್ಕೊಂದು ಸಂಬಂಧವಿರುವ ಎರಡು ಉಪವಾಕ್ಯಗಳನ್ನು (clauses), full stop ನಿಂದ ಬೇರ್ಪಡಿಸಲಾಗದ ಸಂದರ್ಭದಲ್ಲಿ  semi colon ಉಪಯೋಗಿಸಿ ಬೇರ್ಪಡಿಸಬಹುದು.
ಉದಾ: People continue to worry about the future; our failure to conserve natural resources has put the future at risk.
ಕೆಲವು comma ಗಳಿರುವಂತಹ ದೊಡ್ಡ ವಾಕ್ಯದಲ್ಲಿನ ಉಪವಾಕ್ಯಗಳನ್ನು ಬೇರ್ಪಡಿಸಬೇಕಾದರೆ semi colon ಅನ್ನು ಬಳಸಬೇಕು.
ಉದಾ: I went for a movie with fun loving, young friends; and we all enjoyed the movie.
ಇಲ್ಲಿ ನಾವು ಗಮನಿಸಬೇಕಾದ ವಿಷಯವೆಂದರೆ, comma ಬಿಂಬಿಸುವಂತಹ ವಿರಾಮಕ್ಕಿಂತ, ಹೆಚ್ಚು ಮಹತ್ವವುಳ್ಳ ವಿರಾಮವನ್ನು semi colon ಬಿಂಬಿಸುತ್ತದೆ.
Colon (:)
Semi colon ಗಿಂತ ದೀರ್ಘವಾದ, ಆದರೆ full stop ಗಿಂತ ಕಡಿಮೆಯಾದ ವಿರಾಮವನ್ನು colonಬಿಂಬಿಸುತ್ತದೆ.
ಯಾವುದಾದರೂ ಪಟ್ಟಿಯನ್ನು ಪರಿಚಯಿಸುವಾಗ colonಬಳಸಬೇಕು. ಉದಾ: There are three colours in the Indian flag: Orange, white and green..
ಉದಾಹರಣೆ ಅಥವಾ ವಿವರಣೆಯನ್ನು ಒಂದು ವಾಕ್ಯದ ನಂತರ ಕೊಡುವಂತಹ ಸಂದರ್ಭದಲ್ಲಿ. Colon ಅನ್ನು ಉಪಯೋಗಿಸಿ ಪ್ರಾರಂಭಿಸಬೇಕು.
ಉದಾ:There is one challenge above all others: the alleviation of poverty.
ಯಾವುದಾದರೂ ಉಲ್ಲೇಖ (question) ವನ್ನು ಪರಿಚಯಿಸುವಂತಹ ಸಂದರ್ಭದಲ್ಲಿಯೂ colon ಬಳಸುತ್ತೇವೆ.
ಉದಾ: Swami Vivekananda says: “Arise, awake, stop not till you  reach the goal.”
Inverted Commas (“ ”) (‘ ’)
ಇವುಗಳನ್ನು quotation marks ಅಥವಾ  quotes  ಎಂದೂ ಕರೆಯುತ್ತೇವೆ. ಇನ್ನೊಬ್ಬರ ಮಾತುಗಳನ್ನು ಉಲ್ಲೇಖಿಸಬೇಕಾದರೆ double inverted commas ಬಳಸುತ್ತೇವೆ.
ಉದಾ: Hamlet’s famous speech begins with “to be or not to be, that is the question”
ಆದರೆ ಒಂದು quotation ಒಳಗಡೆ ಮತ್ತೊಂದು quotation ಇದ್ದಾಗ single inverted commas ಬಳಸಬೇಕು. ಉದಾ: My teacher told me, “your use of the phrase’old is gold’ is a cliché”h
ವಿಶೇಷ ಗುಣವಿರುವ ಪದವನ್ನು ಸೂಚಿಸಲು ಕೂಡ single inverted commas ಬಳಸುತ್ತೇವೆ.
ಉದಾ: Under the circumstances, her courage was ‘stupendous’.

ಕಾರುಗಳ ಡಿಕ್ಕಿ: ಮೂವರ ಸಾವು :

 

ಮಂಡ್ಯ: ಬೆಂಗಳೂರು–ಮೈಸೂರು ರಸ್ತೆ­ಯಲ್ಲಿ ಎರಡು ಕಾರುಗಳು ಮುಖಾ­ಮುಖಿ ಡಿಕ್ಕಿ ಹೊಡೆದು ಮೂವರು ಮೃತಪಟ್ಟ ಘಟನೆ ಗುರುವಾರ ಬೆಳಿಗ್ಗೆ ತಾಲ್ಲೂಕಿನ ಹಳೆ ಬೂದನೂರು ಕ್ರಾಸ್‌ ಬಳಿ ನಡೆದಿದೆ. ಮೈಸೂರಿನ ನೇತಾಜಿನಗರದ ನಿವಾಸಿ­ಗಳಾದ ಪದ್ಮನಾಭಶೆಟ್ಟಿ ಎಂಬುವರ ಪತ್ನಿ ಸುಮಿತ್ರಾ (50) ಅವರ ಸಹೋದರ ರಘುನಂದನ್‌ (55) ಕಾರು ಚಾಲಕ ಪ್ರಕಾಶ್‌ (23) ಮೃತಪಟ್ಟಿದ್ದಾರೆ.
ರಘುನಂದನ್ ಅವರ ಪತ್ನಿ ಮೈಥಿಲಿ ತೀವ್ರವಾಗಿ ಗಾಯಗೊಂಡಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಕೊಲಂಬಿಯಾ ಏಷಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ. ರಘುನಂದನ್ ಅವರ ಸಹೋದರರ ಮನೆ ಗೃಹಪ್ರವೇಶಕ್ಕೆಂದು ನಾಲ್ವರು ಇಂಡಿಕಾ ಕಾರಿನಲ್ಲಿ ಮೈಸೂರಿನಿಂದ ಬೆಂಗಳೂರಿಗೆ ಹೋಗುತ್ತಿದ್ದಾಗ ಹಳೇ­ಬೂ­ದ­ನೂರು ಕ್ರಾಸ್ ಬಳಿ, ಬೆಂಗಳೂರು ಕಡೆಯಿಂದ ವೇಗವಾಗಿ ಬಂದ ಕಾರು ರಸ್ತೆ ವಿಭಜಕ ದಾಟಿ ಬಂದು ಇವರ ಕಾರಿಗೆ ಡಿಕ್ಕಿಯಾಗಿದೆ.
ಡಿಕ್ಕಿಯಾದ ರಭಸಕ್ಕೆ ಕಾರಿನ ಮೇಲೆ ಕಾರು ಕುಳಿತ ಕಾರಣ ಹೆಚ್ಚಿನ ಸಾವು ಸಂಭವಿಸಿದೆ. ಕಾರಿನ ಚಾಲಕ ಪರಾರಿಯಾಗಿದ್ದು, ಆತನಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ. ಕಾರಿನ ಚಕ್ರ ಸಿಡಿದು ಚಾಲಕನ ನಿಯಂತ್ರಣ ತಪ್ಪಿ ಅಪಘಾತ ಸಂಭವಿಸಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಮಂಡ್ಯ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜಿಲ್ಲಾ ಪೊಲೀಸ್‌ ವರಿಷ್ಠ ಭೂಷಣ ಬೊರಸೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.ಕೆಲಕಾಲ ಬೆಂಗಳೂರು–ಮೈಸೂರು ರಸ್ತೆಯಲ್ಲಿ ಸಂಚಾರ ವ್ಯತ್ಯಯವಾಗಿತ್ತು. ಕ್ರೇನ್‌ ಮೂಲಕ ಕಾರುಗಳನ್ನು ತೆರವುಗೊಳಿಸಿ ಸಂಚಾರ ಸುಗಮಗೊಳಿಸಲಾಯಿತು. ಜಿಲ್ಲಾ ಆಸ್ಪತ್ರೆಯ ಬಳಿ ಸೇರಿದ್ದ ಮೃತರ ಸಂಬಂಧಿಕರ ರೋದನ ಮುಗಿಲು­ಮುಟ್ಟಿತ್ತು.

No comments:

Post a Comment