ಸಾರ್ವಜನಿಕ ಭಾಷಣ ಹೀಗಿರಲಿ:
Voice Culture tips
ಧ್ವನಿಯ ಏರಿಳಿತಗಳು (voice modulation), ಪರಿಣಾಮಕಾರಿ ಪಬ್ಲಿಕ್ ಸ್ಪೀಕಿಂಗ್‌ನ ಒಂದು ಮುಖ್ಯ ಭಾಗ. ನಾವು ಉಚ್ಚರಿಸುವ ವಾಕ್ಯಗಳು ನೀರಸವಾಗಿರದೆ, ನಮ್ಮ ಧ್ವನಿ ಉತ್ಸಾಹ (voice enthusiasm) ಕೇಳುಗರನ್ನು ತಲುಪಬೇಕು. ಉದಾಹರಣೆಗೆ, waterಎಂಬ ಒಂದೇ ಪದವನ್ನು ಒಂದು ಹೇಳಿಕೆಯಾಗಿಯೂ, ಪ್ರಶ್ನೆಯಾಗಿಯೂ, ಆಶ್ಚರ್ಯ ಸೂಚಕವಾಗಿಯೂ ಅಥವಾ ಆಜ್ಞೆಯಾಗಿಯೂ ನಮ್ಮ ಧ್ವನಿಯಿಂದಲೇ ಸೂಚಿಸಬಹುದು.

ಈ ಕಲೆಯನ್ನು tonal shiftನಿಂದ ಕಲಿಯಬಹುದು, ವಾಕ್ಯವೊಂದರ ಒಂದೊಂದೇ ಪದವನ್ನು ಒತ್ತಿ ಹೇಳಿ (emphasize) ಅದರಲ್ಲಿರುವ ಅರ್ಥವ್ಯತ್ಯಾಸಗಳನ್ನು ಹೊಮ್ಮಿಸುವ ಕಲೆಯನ್ನು ನಾವು ಕ್ರಮೇಣ ಸಿದ್ಧಿಸಿಕೊಳ್ಳಬೇಕು.
ಈ ಕೆಳಗಿನ ವಾಕ್ಯ ಸಮೂಹವನ್ನು ಗಮನಿಸಿ:
1. I love ice-creams in summer.
2. I love ice-creams in summer.
3. I love ice-creams in summer.
4. I love ice-creams in summer.
ಈ ಕೆಳಗಿನ ವಾಕ್ಯ ಸಮೂಹವನ್ನು ಗಮನಿಸಿ:
1. I love ice-creams in summer.
2. I love ice-creams in summer.
3. I love ice-creams in summer.
4. I love ice-creams in summer.
ಬೋಲ್ಡ್ ಮಾಡಿದ ಪದಗಳನ್ನು ಒತ್ತಿ ಹೇಳಿದಾಗ toneನ ವ್ಯತ್ಯಾಸದಿಂದ ಅರ್ಥವ್ಯತ್ಯಾಸವೂ ಆಗುತ್ತಿರುತ್ತದೆ ಎಂಬುದನ್ನು ಗಮನಿಸಿ. ಇದನ್ನೇ tonal shift ಎನ್ನುತ್ತೇವೆ. ಇದು voice modulationನ ಒಂದು ಆಭ್ಯಾಸಕ್ರಮ. ಇದಕ್ಕೆ ಸಂಬಂಧಿಸಿದ ಇನ್ನೊಂದು ವಿಷಯವೆಂದರೆ While speaking, we should pause in between sense groups and not between words.
ಉದಾಹರಣೆಗೆ, The city of Varanasi is on the banks of river Ganges ಎಂಬ ವಾಕ್ಯವನ್ನು ಗಮನಿಸಿ.
ಉದಾಹರಣೆಗೆ, The city of Varanasi is on the banks of river Ganges ಎಂಬ ವಾಕ್ಯವನ್ನು ಗಮನಿಸಿ.
ಪರಿಣತಿ ಇಲ್ಲದವರು ಇದನ್ನು ಉಚ್ಚರಿಸುವಾಗ, ಅನೇಕ ಬಾರಿ ಬಿಡಿ ಪದಗಳ ನಡುವೆ pause ಮಾಡುತ್ತಾರೆ. ಹಾಗೆ ಮಾಡದೆ, ಈ ವಾಕ್ಯದಲ್ಲಿರುವ ಮೂರು sence groupಗಳ ನಡುವೆ ಮಾತ್ರ pause ಮಾಡಬೇಕು. ಆ sense groupಗಳೆಂದರೆ – The city of Varanasi, is on the banks of, river Ganges. ಹೀಗೆ ಮಾಡಿದಾಗ, ನಮ್ಮ ವಾಕ್ಯಕ್ಕೆ ಧ್ವನಿ ಮತ್ತು ಅರ್ಥಸಂಗಮದ ಚೆಲುವು ಒದಗಿಬರುತ್ತದೆ.
ನಮ್ಮ ಧ್ವನಿಯ ಕಸುವನ್ನು ಪೋಷಿಸಲು ಸಣ್ಣ ಪ್ರಮಾಣದ voice culture exercise ತುಂಬಾ ಉಪಯೋಗಕಾರಿ. ಇದರ ಒಂದು ವಿಧಾನ ಇಲ್ಲಿದೆ. ಮೊದಲು ಸಾವಧಾನವಾಗಿ inhale ಮಾಡಿ ಅನಂತರ ನಿಧಾನವಾಗಿ, ದೃಢದನಿಯಲ್ಲಿ ‘ಆ......’ ಎಂದು ಒಂದೇ ಸಮನೆ ಉಚ್ಚರಿಸಿ. ಇದು ಸಂಗೀತಗಾರನೊಬ್ಬ ಷಡ್ಜದ (ಸಪ್ತಸ್ವರದ ಮೊದನೆಯ ಸ್ವರ-ಸ) ಶೃತಿಹಿಡಿದು ಸ್ವರಸಾಧನೆ ಮಾಡಿದ ಹಾಗಿರುತ್ತದೆ.
ಈ ತರಹದ open vowel exhalationನಿಂದ ನಮ್ಮ ಧ್ವನಿತಂತು (breath thread) ದೀರ್ಘವಾಗುತ್ತಾ ಹೋಗುತ್ತದೆ. ಸಾಮಾನ್ಯವಾಗಿ, ಆ..... ಎಂದು open vowel exhalation ಮಾಡಿದಾಗ, ಸುಮಾರು 10-12 ಸೆಕೆಂಡುಗಳ ಹೊತ್ತಿಗೆ ನಮ್ಮ ದನಿ ಕ್ಷೀಣವಾಗುತ್ತಾ, ನಡುಗುತ್ತಾ, ಸತ್ವಕಳೆದು ಇಂಗಿಹೋಗಿರುತ್ತದೆ. ಆದರೆ, ನುರಿತ ಸಂಗೀತಗಾರರ ಧ್ವನಿ ಸುಮಾರು 30 ಸೆಕೆಂಡುಗಳಷ್ಟು ದೀರ್ಘವಾದ ದನಿತಂತನ್ನು ಹೊರಡಿಸಬಲ್ಲದು.
ಪಬ್ಲಿಕ್ ಸ್ಪೀಕಿಂಗ್‌ಗೆ ನಮಗೆ ಸುಮಾರು 20 ಸೆಕೆಂಡುಗಳಷ್ಟು ದೀರ್ಘವಾದ ನಿಶ್ವಾಸ ಸಾಕು. Open vowel exdhalationನ ಮುಖಾಂತರ ಖಂಡಿತವಾಗಿ ಇದನ್ನು ಬೆಳೆಸಿಕೊಳ್ಳಬಹುದು. ಕೊನೆಯದಾಗಿ, ಪಬ್ಲಿಕ್ ಸ್ಪೀಕಿಂಗ್‌ನಲ್ಲಿ nervous body gesturesನ ಬಗ್ಗೆ ಕೆಲವು ಮಾತುಗಳು. ವೇದಿಕೆಯ ಮೇಲೆ ಕಂಬದಂತೆ ಸೆಟೆತು ನಿಲ್ಲದೆ ತುಸು flexible ಆಗಿರಬೇಕು. ನಮ್ಮ ಹಸ್ತ ಹಾಗೂ ಕೈಬೆರಳುಗಳು ನಮ್ಮ ಅಗತ್ಯಕ್ಕೆ ದಕ್ಕುವಂತಿರಬೇಕು.
ನೀವು ನಿಮ್ಮ ಪ್ಯಾಂಟಿನ ಜೇಬುಗಳಲ್ಲಿ ಕೈಯಿಟ್ಟುಕೊಂಡರೆ ಇದು ಸಾಧ್ಯವಾಗುವುದಿಲ್ಲ, ಹಾಗೂ ವೇದಿಕೆಯ ಮೇಲಿನ ನಮ್ಮ ಚಲನೆ ಮಿತಿಮೀರದಂತಿರಬೇಕು. ಇನ್ನೊಂದು ವಿಷಯವೆಂದರೆ, ನಮ್ಮ nervous body gestures ಯಾವುದೆಂಬುದರ ಅರಿವು ನಮಗಿರಬೇಕು. ಇದು ಒಬ್ಬೊಬ್ಬರಿಗೆ ಒಂದೊಂದು ರೀತಿಯದ್ದಾಗಿರುತ್ತದೆ.
ಉದಾಹರಣೆಗೆ, ತಲೆಗೂದಲನ್ನು ಸವರಿಕೊಳ್ಳುವುದು, ನಮ್ಮ ಶರ್ಟ್ ಬಟನ್ ಅನ್ನು ಒಂದೇ ಸಮನೆ ಹಿಂಸಿಸುವುದು. ಕೆಲವು ಸಾರಿ ok, you know, alright ಎಂಬ non-wordsಅನ್ನು nervousnessನಿಂದ ಪದೇ ಪದೇ ಹೇಳುವುದು, ಕೈಕಟ್ಟಿ ನಿಂತುಕೊಳ್ಳುವುದು.
ಇವೆಲ್ಲವುಗಳ ಗೋಜಲಿನಿಂದ ಹೊರಬರಬೇಕು. ಎಲ್ಲಕ್ಕೂ ಮಿಗಿಲಾಗಿ. ಪಬ್ಲಿಕ್ ಸ್ಪೀಕಿಂಗ್‌ನಲ್ಲಿ ಯಾರನ್ನೋ ಮಾಡೆಲ್ ಆಗಿ ಮನಸ್ಸಿನಲ್ಲಿ ಪ್ರತಿಷ್ಠಾಪಿಸಿಕೊಂಡು, ಅವರಂತೆ ಮಾತನಾಡಲು ಪ್ರಯತ್ನಿಸುವುದು ಕೋಡಂಗಿತನಕ್ಕೆ ನಾವೇ ಕೊಡುವ ಆಹ್ವಾನ. ನಮ್ಮಂತೆ ನಾವಿದ್ದು, ಹೇಳಬಯಸಿದ್ದನ್ನು ಹೇಳಬೇಕು.

ದೂರವಾಣಿ ಶಿಷ್ಟಾಚಾರ ವಿಚಾರ:
ಟೆಲಿಫೋನ್ ಸಂಭಾಷಣೆಯು, ನಾವು ಇಂಗ್ಲಿಷ್ ಬಳಸುವ ಸಹಜ ಸಂದರ್ಭಗಳಲ್ಲಿ ಅತಿ ಮುಖ್ಯವಾದ ಭಾಗ, ಈ ಕೆಳಗೆ, ಸುಲಭವಾಗಿ ಕಲಿಯಬಹುದಾದಂತಹ ಟೆಲಿಫೋನ್ ಎಟಿಕೆಟ್‌ನ ಸಂಕ್ಷಿಪ್ತ ಪರಿಚಯವಿದೆ.
ಟೆಲಿಫೋನ್ ಸಂಭಾಷಣೆಗೆ ಸಂಬಂಧಿಸಿದ ಕೆಲವು ಪದಗಳನ್ನು ನಾವು ತಿಳಿದಿರಬೇಕು- ಅವೆಂದರೆ:
Answering machine–ನಾವು ಫೋನ್ ಮಾಡಿದಂತಹ ವ್ಯಕ್ತಿ ಫೋನ್‌ನ ಬಳಿ ಇಲ್ಲದಿದ್ದಾಗ, ನಮ್ಮ message ಅನ್ನು ರೆಕಾರ್ಡ್ ಮಾಡಿಕೊಳ್ಳುವಂತಹ ಒಂದು ಮಶೀನ್.
Call–ಫೋನ್ ಮಾಡುವುದು
Caller - ಫೋನ್ ಮಾಡುವವರು.
Call back -ನಮಗೆ ಮುಂಚೆಯೇ ಫೋನ್ ಮಾಡಿದವರಿಗೆ ಮತ್ತೆ ಫೋನ್ ಮಾಡುವುದು.
Call display - ಫೋನ್ ಮಾಡಿರುವವರ ನಂಬರ್ ಅಥವಾ ಹೆಸರನ್ನು ತೋರಿಸುವ ಸ್ಕ್ರೀನ್.
Hang up -ಫೋನ್‌ನಲ್ಲಿ ಮಾತನಾಡುವುದನ್ನು ನಿಲ್ಲಿಸುವುದು.
Pick up - ಫೋನ್ ರಿಂಗ್ ಆದಾಗ, ಅದಕ್ಕೆ ಉತ್ತರಿಸುವುದು.

ಟೆಲಿಫೋನ್‌ನಲ್ಲಿ ಮಾತನಾಡುವಾಗ, ನಾವು ಮಾತನಾಡುವ ರೀತಿಯ ಬಗ್ಗೆ ಹೆಚ್ಚು ಗಮನ ಹರಿಸಬೇಕು. ನಮ್ಮ ಭಾವನೆಗಳು ಫೋನ್‌ನಲ್ಲಿ ಕಾಣದಿರುವುದರಿಂದ ನಾವಾಡುವ ಮಾತುಗಳ ಬಗ್ಗೆ ಎಚ್ಚರವಹಿಸಬೇಕು. ಈ ನಿಟ್ಟಿನಲ್ಲಿ, ನಾವು ಅನುಸರಿಸಬೇಕಾದ ಕೆಲವು ಮುಖ್ಯವಾದ ಸೂತ್ರಗಳನ್ನು ಇಲ್ಲಿ ಗಮನಿಸಿ:
*ನಾವು ಮಾತನಾಡುವಾಗ, ನಮ್ಮ ಮುಖ ಅಥವಾ body language ಕಾಣದಿರುವುದರಿಂದ, ನಾವು ನಿಧಾನವಾಗಿ, ಸ್ಪಷ್ಟವಾಗಿ ಹಾಗೂ ಉತ್ಸಾಹದಿಂದ ಮಾತನಾಡಬೇಕು.
*ಎತ್ತರದ ದನಿಯಿಂದಲಾಗಲೀ ಅಥವಾ ತುಂಬಾ ಮೆಲುದನಿಯಿಂದಲಾಗಲೀ ಮಾತನಾಡಬಾರದು. ನಮ್ಮ ದನಿಯಲ್ಲಿ normal tone ಇರಬೇಕು.
*ಟೆಲಿಫೋನ್‌ನಲ್ಲಿ ಮಾತನಾಡುವಾಗ ಏನನ್ನಾದರೂ ತಿನ್ನುವುದು, ಕುಡಿಯುವುದು ಮಾಡಬಾರದು.
*ಹೌದು ಅಥವಾ ಇಲ್ಲ ಎಂದು ಉತ್ತರಿಸುವ ಸಂದರ್ಭದಲ್ಲಿ Ya ಎನ್ನುವುದಾಗಲೀ ಅಥವಾ ಬೇರೆ slangs ಉಪಯೋಗಿಸುವುದಾಗಲೀ ಮಾಡದೆ, ಶುದ್ಧವಾದ yes ಅಥವಾ no ಎಂದೇ ಉತ್ತರಿಸಬೇಕು.
*Caller ಅನ್ನು ಸರಿಯಾದ ರೀತಿಯಲ್ಲಿ address ಮಾಡಬೇಕು. ಉದಾ: Good morning Mr. Akshay, Good afternoon Ms. Ashwini...
*ಟೆಲಿಫೋನ್‌ನಲ್ಲಿ ಮಾತನಾಡುವಾಗ ವಿಷಯವನ್ನು ಸರಿಯಾಗಿ ಕೇಳಿಸಿಕೊಳ್ಳುವ ವ್ಯವಧಾನವಿರಬೇಕು. ನಾವು ಇನ್ನೊಬ್ಬರಿಂದ message ತೆಗೆದುಕೊಳ್ಳುವಾಗ, ಆ message ಅನ್ನು ರಿಪೀಟ್ ಮಾಡಿ ಅವರಿಗೆ ಹೇಳಬೇಕು. ಹಾಗೆ ಮಾಡಿದಾಗ, message ಕೊಟ್ಟವರಿಗೆ ನಾವು ಸರಿಯಾಗಿ ಅವರ message ಅನ್ನು ತೆಗೆದುಕೊಂಡಿದ್ದೇವೆ ಎಂಬ ಭರವಸೆಯುಂಟಾಗುತ್ತದೆ.

*Caller ಹೇಳುತ್ತಿರುವುದು ನಮಗೆ ಸರಿಯಾಗಿ ಕೇಳಿಸದಿದ್ದಾಗ, pardon me ಅಥವಾ could you come again please? ಎಂದು ಹೇಳಬೇಕು.
*Callerನ ದನಿ ಯಾವುದೇ ರೀತಿ ಇದ್ದರೂ ನಮ್ಮ ದನಿಯಲ್ಲಿನ ಶಾಂತತೆಯನ್ನು ನಾವು ಕಳೆದುಕೊಳ್ಳದೆ ಉತ್ತರಿಸಬೇಕು.
*ಇವು ನಾವು call receive ಮಾಡಿದಾಗ ಅನುಸರಿಸಬೇಕಾದ ಕೆಲವು ಸೂತ್ರಗಳಾದರೆ, ನಾವು call ಮಾಡುವಾಗ ಅನುಸರಿಸಬೇಕಾದ ಕೆಲವು ಕ್ರಮಗಳೆಂದರೆ-
*ಇವು ನಾವು call receive ಮಾಡಿದಾಗ ಅನುಸರಿಸಬೇಕಾದ ಕೆಲವು ಸೂತ್ರಗಳಾದರೆ, ನಾವು call ಮಾಡುವಾಗ ಅನುಸರಿಸಬೇಕಾದ ಕೆಲವು ಕ್ರಮಗಳೆಂದರೆ-
*ನಾವು call ಮಾಡಿದ ತಕ್ಷಣ ನಮ್ಮ ಪರಿಚಯವನ್ನು ಮಾಡಿಕೊಂಡ ನಂತರವೇ ವಿಷಯವನ್ನು ತಿಳಿಸಬೇಕಾಗುತ್ತದೆ.
ಉದಾ: Hello, good morning Mr. Suraj. This is Mr. Akshay from Infosys speaking.....
*ನಾವು ಇನ್ನೊಬ್ಬರಿಗೆ call ಮಾಡಿದಾಗ, ಥಟ್ಟನೆ ಮಾತಿಗಿಳಿಯುವ ಮುಂಚೆ ಹೀಗೆ ಹೇಳಬಹುದು Can I have a word with you? ಅಥವಾ Is it a good time to talk to you for a few minutes? ಎಂದು ಕೇಳಿ ಮುಂದುವರೆಯಬೇಕು.

ನಾವು ಏನನ್ನು ಹೇಳಬಯಸುತ್ತೇವೆಯೋ ಅದನ್ನು ಸಂಕ್ಷಿಪ್ತವಾಗಿ ಹೇಳಿ ಮುಗಿಸಬೇಕೇ ಹೊರತು ಸುತ್ತಿ ಬಳಸಿ ಮಾತನಾಡಬಾರದು. ನಾವು ಮಾತನಾಡುವಾಗ, ದನಿಯಲ್ಲಿ ಶಾಂತಿ, ಉತ್ಸಾಹ ಹಾಗೂ ಮಾತುಗಳಲ್ಲಿ ಸಭ್ಯತೆಯಿರಬೇಕು.
Key phrases for Telephone Conversation: ಸರಾಗವಾಗಿ ಟೆಲಿಫೋನ್ ಸಂಭಾಷಣೆಯನ್ನು ನಡೆಸಲು ಈ ಕೆಳಗಿನ ವಾಕ್ಯಗಳು ಬಹು ಉಪಯೋಗಕಾರಿ. ಟೆಲಿಫೋನ್‌ನಲ್ಲಿ ಮಾತನಾಡುವಾಗ, ವಿವಿಧ ಸಂದರ್ಭಗಳಲ್ಲಿ ಉಪಯೋಗಿಸುವಂತಹ ವಿವಿಧ ಪದಗಳು ಹಾಗೂ ಪದಪುಂಜಗಳನ್ನು ನಾವು ತಿಳಿದಿರಬೇಕು. ಟೆಲಿಫೋನ್ ಇಂಗ್ಲಿಷ್‌ನಲ್ಲಿ ಉಪಯೋಗಿಸಬಹುದಾದಂತಹ ಕೆಲವು phraseಗಳನ್ನು ಇಲ್ಲಿ ಗಮನಿಸಿ:
ನಾವೇ ಕರೆಯನ್ನು ಮಾಡಿದಾಗ ನಮ್ಮನ್ನು ನಾವು ಪರಿಚಯಿಸಿಕೊಳ್ಳಲು ಉಪಯೋಗಿಸಬಹುದಾದ ಕೆಲವು phraseಗಳು ಹೀಗಿವೆ-
*Hello, it is Akshay calling
*Hello, this is Akshay here
*Hello, it’s Akshay from Bangalore
*Hello, it is Akshay calling
*Hello, this is Akshay here
*Hello, it’s Akshay from Bangalore
ನಾವು ಫೋನ್ ಮಾಡಿದ ಮೇಲೆ ಯಾರ ಜೊತೆಯಲ್ಲಾದರೂ ಮಾತನಾಡಬೇಕಾದಾಗ ಹೀಗೆ ಕೇಳಬಹುದು.
ಅನೌಪಚಾರಿಕವಾಗಿ (informal) ಕೇಳಬೇಕಾದರೆ
Is Tarun in? ಅಥವಾ
Is Tarun there, please? ಎಂದು ಕೇಳಬಹುದು.
Formal ಆಗಿ ಕೇಳಬೇಕಾದ ಸಂದರ್ಭದಲ್ಲಿ ಬಳಸ ಬಹುದಾದ phraseಗಳೆಂದರೆ.
ಅನೌಪಚಾರಿಕವಾಗಿ (informal) ಕೇಳಬೇಕಾದರೆ
Is Tarun in? ಅಥವಾ
Is Tarun there, please? ಎಂದು ಕೇಳಬಹುದು.
Formal ಆಗಿ ಕೇಳಬೇಕಾದ ಸಂದರ್ಭದಲ್ಲಿ ಬಳಸ ಬಹುದಾದ phraseಗಳೆಂದರೆ.
*May I speak to Tarun?
*Could I have a word with Tarun?
*Can I speak to Tarun?
ನಾವು ಕರೆಯೊಂದನ್ನು ಸ್ವೀಕರಿಸುವಾಗ ಹೀಗೆ ಹೇಳಬಹುದು-
*Could I have a word with Tarun?
*Can I speak to Tarun?
ನಾವು ಕರೆಯೊಂದನ್ನು ಸ್ವೀಕರಿಸುವಾಗ ಹೀಗೆ ಹೇಳಬಹುದು-
*Hello, this is Akshay speaking, who is speaking?
*May I know who is on line?
*May I know who I am speaking to?
*Who is speaking please?
ನಾವು ಕರೆಯನ್ನು ಸ್ವೀಕರಿಸಿ callerಅನ್ನು ಇನ್ನೊಬ್ಬರಿಗೆ connect ಮಾಡುವಾಗ ಉಪಯೋಗಿಸುವ ವಾಕ್ಯಗಳೆಂದರೆ,
*May I know who is on line?
*May I know who I am speaking to?
*Who is speaking please?
ನಾವು ಕರೆಯನ್ನು ಸ್ವೀಕರಿಸಿ callerಅನ್ನು ಇನ್ನೊಬ್ಬರಿಗೆ connect ಮಾಡುವಾಗ ಉಪಯೋಗಿಸುವ ವಾಕ್ಯಗಳೆಂದರೆ,
lJust a second, I will get him
*Hang on one second
ಎಂದುInformal ಆಗಿಯೂ ಹಾಗೂ
*Please hold on, I will put him on to you
*Just a moment please
*Please be on line, I will connect you to her ಎಂದು formalಆಗಿಯೂ ಹೇಳಬಹುದು.
*Hang on one second
ಎಂದುInformal ಆಗಿಯೂ ಹಾಗೂ
*Please hold on, I will put him on to you
*Just a moment please
*Please be on line, I will connect you to her ಎಂದು formalಆಗಿಯೂ ಹೇಳಬಹುದು.
Caller ನಿಂದ ನಾವು message ತೆಗೆದುಕೊಳ್ಳಬೇಕಾದಾಗ ಉಪಯೋಗಿಸ ಬಹುದಾದ ಕೆಲವು ವಾಕ್ಯಗಳನ್ನು ಗಮನಿಸಿ:
*Would you like him to call you back?
*Can I take a message?
*Would you like to leave a message?
Phone ರಿಂಗ್ ಆದಾಗ ಅದು wrong number ಆಗಿದ್ದರೆ, ಹೀಗೆ ಹೇಳಬಹುದು-
*Would you like him to call you back?
*Can I take a message?
*Would you like to leave a message?
Phone ರಿಂಗ್ ಆದಾಗ ಅದು wrong number ಆಗಿದ್ದರೆ, ಹೀಗೆ ಹೇಳಬಹುದು-
*Sorry, it’s a wrong number
* am afraid you got the wrong number
*Wrong number please
ಕರೆಯ ಕೊನೆಯಲ್ಲಿ ಬಳಸಬಹುದಾದ ವಾಕ್ಯಗಳೆಂದರೆ-
* am afraid you got the wrong number
*Wrong number please
ಕರೆಯ ಕೊನೆಯಲ್ಲಿ ಬಳಸಬಹುದಾದ ವಾಕ್ಯಗಳೆಂದರೆ-
*Nice talking to you
*Talk to you later
*t was a pleasure talking to you
* have to sign off now, take care
*Thanks for calling, bye for now
ಮೇಲಿನ ಈ ವಾಕ್ಯಗಳು ಹೆಚ್ಚು ಕಷ್ಟವಿಲ್ಲದೆ, ನಮ್ಮ ಸ್ಮಾರ್ಟ್ ಇಂಗ್ಲಿಷ್ ಬತ್ತಳಿಕೆಯ ಭಾಗವಾಗುತ್ತಾ ಹೋಗುತ್ತವೆ.

ಮಾತಿನ ಮರದ ರೆಂಬೆ ಕೊಂಬೆ:
ಪ್ರತಿಯೊಂದು ಪದವನ್ನೂ ವಾಕ್ಯವೊಂದರಲ್ಲಿ ಮಾಡುವ ಕೆಲಸ ಅಥವಾ ವರ್ತಿಸುವ ರೀತಿಗನುಗುಣವಾಗಿ ಹೆಸರಿಸಬಹುದು.
ಪ್ರಮುಖವಾಗಿ ಇಂಗ್ಲಿಷ್ ಪದಗಳನ್ನು 8 ಗುಂಪುಗಳನ್ನಾಗಿ ವಿಂಗಡಿಸಬಹುದು. ಇಂಗ್ಲಿಷ್‌ನ ಎಲ್ಲಾ ಒಂದು ಮಿಲಿಯನ್ ಶಬ್ದಗಳೂ ಈ 8 ಗುಂಪುಗಳಲ್ಲಿ ಯಾವುದಾದರೂ ಒಂದಕ್ಕೆ ಸೇರಿರುತ್ತವೆ. ಅವುಗಳನ್ನೇ parts of speech ಎಂದು ಕರೆಯುತ್ತೇವೆ. ಇವುಗಳನ್ನು ಅರ್ಥಮಾಡಿಕೊಂಡು ಸರಿಯಾದ ರೀತಿಯಲ್ಲಿ ಉಪಯೋಗಿಸದಿದ್ದರೆ, ಸರಿಯಾದ ವಾಕ್ಯರಚನೆಯು ಸಾಧ್ಯವಾಗುವುದಿಲ್ಲ. ಈ 8 ಗುಂಪುಗಳನ್ನು ಇಲ್ಲಿ ಗಮನಿಸಿ:
1. Naming words (noun) -ಹೆಸರನ್ನು ಸೂಚಿಸುವ ಪದಗಳು.
ಉದಾ: Pallavi is a doctor.
Bangalore is a cool place.
The books are on the table.
1. Naming words (noun) -ಹೆಸರನ್ನು ಸೂಚಿಸುವ ಪದಗಳು.
ಉದಾ: Pallavi is a doctor.
Bangalore is a cool place.
The books are on the table.
2. Name substitutes (pronoun) - ಹೆಸರುಗಳಿಗೆ ಬದಲಾಗಿ ಉಪಯೋಗಿಸುವ ಪದಗಳು.
ಉದಾ: She is a doctor.
It is a cool place.
They are on the table.
ಉದಾ: She is a doctor.
It is a cool place.
They are on the table.
3. Action words (verb) - ಕ್ರಿಯೆಯನ್ನು ಸೂಚಿಸುವ ಪದಗಳು. ಉದಾ: She sings melodiously.
The baby dances well.
The baby dances well.
4. Action describing words (adverb) - ಕ್ರಿಯೆಯ ಬಗ್ಗೆ ಹೆಚ್ಚಿನ ಮಾಹಿತಿ ಕೊಡುವ ಪದಗಳು.
ಉದಾ: He runs fast.
She comes quickly.
ಉದಾ: He runs fast.
She comes quickly.
Name describing words (adjective) -ನಾಮಪದಗಳ ಬಗ್ಗೆ ಹೆಚ್ಚಿನ ಮಾಹಿತಿ ಕೊಡುವ ಪದಗಳು.
ಉದಾ:She is good. 2. The flower is beautiful.
ಉದಾ:She is good. 2. The flower is beautiful.
Relating words (preposition) - ವಾಕ್ಯವೊಂದರಲ್ಲಿ ಮುಖ್ಯವಾಗಿ ನಾಮಪದಗಳ ಗುಂಪಿನ ನಡುವೆ ಇರುವ ಸಂಬಂಧವನ್ನು ಸೂಚಿಸುವ ಪದಗಳು.
ಉದಾ: The book is on the table.
The dog is near the chair.
ಉದಾ: The book is on the table.
The dog is near the chair.
5. Connecting words (conjuctions) -ಎರಡು ಪದಗಳನ್ನು ಅಥವಾ ವಾಕ್ಯಗಳನ್ನು ಕೂಡಿಸುವ ಪದಗಳು.
ಉದಾ: Rama and Laxmana are brothers.
She ran fast but missed the bus.
ಉದಾ: Rama and Laxmana are brothers.
She ran fast but missed the bus.
6. Feeling words (interjection) - ನಮ್ಮಲ್ಲಿ ಹುಟ್ಟುವ ತೀವ್ರ ಭಾವನೆಗಳನ್ನು ಸೂಚಿಸುವ ಪದಗಳು.
ಉದಾ: Wow, what a beautiful garden!
What a wonderful cup of coffee!
ಉದಾ: Wow, what a beautiful garden!
What a wonderful cup of coffee!
ಇಲ್ಲಿ ನಾವು ಗಮನಿಸಬೇಕಾದ ಒಂದು ಮುಖ್ಯವಾದ ವಿಚಾರವೆಂದರೆ, ವಾಕ್ಯಗಳನ್ನು ರಚಿಸುವಾಗ ಒಂದು ಗುಂಪಿನ ಪದಗಳು ಇನ್ನೊಂದು ಗುಂಪಿನ ಪದಗಳಂತೆ ಕೆಲಸ ಮಾಡುವುದು ಸರ್ವೇಸಾಮಾನ್ಯ.
ಉದಾ: ‘well’ ಎನ್ನುವ ಪದ ಬಾವಿ ಎಂಬ ಅರ್ಥವುಳ್ಳ noun ಆಗಿಯೂ ‘ಉತ್ತಮ’ ಎಂಬ ಅರ್ಥವುಳ್ಳ adjective ಆಗಿಯೂ ಸಂದರ್ಭಾ ನುಸಾರವಾಗಿ ವರ್ತಿಸುತ್ತದೆ. ಭಾಷೆಯ ಬಳಕೆಯಲ್ಲಿ ಇದರ ಪ್ರಾಮುಖ್ಯತೆಯನ್ನು ಮುಂದೆ ನೋಡೋಣ.
ಉದಾ: ‘well’ ಎನ್ನುವ ಪದ ಬಾವಿ ಎಂಬ ಅರ್ಥವುಳ್ಳ noun ಆಗಿಯೂ ‘ಉತ್ತಮ’ ಎಂಬ ಅರ್ಥವುಳ್ಳ adjective ಆಗಿಯೂ ಸಂದರ್ಭಾ ನುಸಾರವಾಗಿ ವರ್ತಿಸುತ್ತದೆ. ಭಾಷೆಯ ಬಳಕೆಯಲ್ಲಿ ಇದರ ಪ್ರಾಮುಖ್ಯತೆಯನ್ನು ಮುಂದೆ ನೋಡೋಣ.
Form and Function in spoken English
ನಮ್ಮ ದಿನನಿತ್ಯದ ಸಂಭಾಷಣೆಯಲ್ಲಿ ಸಾಮಾನ್ಯವಾಗಿ ನಾವು ಉಪಯೋಗಿಸುವ ವಿವಿಧ ರೀತಿಯ ವಾಕ್ಯಗಳೆಂದರೆ, ಹೇಳಿಕೆಗಳು (statements), ಪ್ರಶ್ನೆಗಳು (questions), ಮನವಿಗಳು (requests), ಆದೇಶ/ ಆಜ್ಞಾಪನೆಗಳು (commands), ಉತ್ತಮ ಸಂಭಾಷಣೆಯಲ್ಲಿ, ಈ ವಾಕ್ಯಗಳ ಸ್ವರೂಪ ಮತ್ತು ಕ್ರಿಯೆ (form and function) ಎರಡೂ ಒಂದಕ್ಕೊಂದು ಸಂದರ್ಭಾನುಸಾರವಾಗಿ ಮಿಳಿತ ಗೊಂಡಿರುತ್ತವೆ.

ನಮ್ಮ ದಿನನಿತ್ಯದ ಸಂಭಾಷಣೆಯ ಬಹುಭಾಗ ಹೇಳಿಕೆಗಳಿಂದ ಕೂಡಿರುತ್ತದೆ ಎಂಬುದನ್ನು ನಾವು ಗಮನದಲ್ಲಿಡಬೇಕು. ಅವುಗಳ ರಚನೆಯ ಮೂಲರೂಪ Subject+verb ಆಗಿರುತ್ತದೆ. ಅವುಗಳ ಜೊತೆಗೆ ಕೆಲವು ಐಚ್ಚಿಕ ಅಂಶಗಳೂ (optional elements) ಇರುತ್ತವೆ. ಅವು ಯಾವುವೆಂದರೆ object ಅಥವಾ adjective ಅಥವಾ adverb ಆಗಿರಬಹುದು.
ಉದಾ: I (subject) am (verb) fine (adjective).
She (subject) has completed (verb) her work (object).
They (subject) are leaving (verb) today (adverb).
She (subject) has completed (verb) her work (object).
They (subject) are leaving (verb) today (adverb).
ಇನ್ನು ಪ್ರಶ್ನೆಗಳ ವಿಷಯಕ್ಕೆ ಬಂದರೆ, ನಮ್ಮ ಸಂಭಾಷಣೆಯಲ್ಲಿ ನಾವು ಕೇಳಬಹುದಾದ ಪ್ರಶ್ನೆಗಳು ಎರಡು ರೀತಿಯದ್ದಾಗಿ ರಬಹುದು. ನಾವು ಹೌದು ಅಥವಾ ಇಲ್ಲ ಎಂಬ ಉತ್ತರವನ್ನು ನಿರೀಕ್ಷಿಸುತ್ತಿದ್ದರೆ, yes/ no-questionಅನ್ನು ಕೇಳ ಬೇಕಾಗುತ್ತದೆ. ಹಾಗೆಯೇ, ವಿವರಣಾತ್ಮಕವಾದ ಉತ್ತರವನ್ನು ನಿರೀಕ್ಷಿಸುವಾಗ wh-question ಅನ್ನು ಕೇಳಬೇಕಾಗುತ್ತದೆ. ಯಾವುದೇ ಪ್ರಶ್ನೆಯ ರಚನೆಗೆ ಬೇಕಾಗುವಂತಹ ಮೂಲಾಂಶಗಳು ಹಾಗೂ ಅವುಗಳ ಕ್ರಮವನ್ನು ಗಮನಿಸೋಣ: verb+subject.
Yes/no-question ಅನ್ನು ಬಳಸುವಾಗ, ನಾವು ನೆನಪಿಟ್ಟುಕೊಳ್ಳಬೇಕಾದ ಒಂದು ವಿಷಯವೆಂದರೆ, ಆ ಪ್ರಶ್ನೆಗಳು to-be verbs (am, is , are, was, were) ಅಥವಾ to-have verbs (has, have, had) ಅಥವಾ Modals (will, would, shall, should, can, could, may, might, must)ಗಳಿಂದ ಪ್ರಾರಂಭವಾಗುತ್ತವೆ.

ಉದಾ: Am I right?, Have you got it?
May I help you?
May I help you?
ಹಾಗೆಯೇ wh-questions ಬಳಸುವಾಗ, ಪ್ರಶ್ನೆಯು wh-words (what, why, which, when, whose, where, how)ಗಳಿಂದ ಪ್ರಾರಂಭ ವಾಗುತ್ತದೆ. (ಸೂಚನೆ: wh-word ನಿಂದ ಪ್ರಾರಂಭವಾಗುವ ಯಾವುದಾದರೂ ಮೂರು ಪ್ರಶ್ನೆಗಳನ್ನು ನಿಮ್ಮ ಮನಸ್ಸಿನಲ್ಲಿಯೇ ಕೇಳಿಕೊಂಡು, ನಂತರ ಮುಂದೆ ಓದಿ).
wh–ಪದದ ನಂತರ, ಮೇಲೆ ಸೂಚಿಸಿರುವ ಮೂಲಾಂಶಗಳ ಕ್ರಮವನ್ನು (verb+subject) ಅನುಸರಿಸಬೇಕು. ಉದಾ: What is the time?, How are you?, When is your vacation?
ಇಲ್ಲಿ ನಾವು ಗಮನಿಸಬೇಕಾದ ವಿಷಯವೆಂದರೆ, ಹೇಳಿಕೆಗಳ ಸ್ವರೂಪವನ್ನು ಪ್ರಶ್ನೆಗಳಿಗೆ ಹೋಲಿಸಿದಾಗ ssubject+verbನ ಸ್ಥಾನಪಲ್ಲಟವಾಗಿರುವುದನ್ನು ಗಮನಿಸಿ:
1. This (subject) is (verb) good?
Is (verb) this (subject) good?
2. You (subject) have completed (verb) the work. 3. Have (verb) you (subject) completed the work?
Is (verb) this (subject) good?
2. You (subject) have completed (verb) the work. 3. Have (verb) you (subject) completed the work?
ಇನ್ನು ಮನವಿಗಳನ್ನು ಮಾಡಿಕೊಳ್ಳುವಾಗ please/ could/can ಎನ್ನುವ ಪದದಿಂದ ವಾಕ್ಯವನ್ನು ಪ್ರಾರಂಭಿಸಬೇಕು. ಉದಾ: Could you please get the book?, Can you please help me cross the road?, Please do this work for me.
ಆದೇಶ/ ಆಜ್ಞಾಪನೆಗಳನ್ನು ಕೊಡುವಾಗ ಉಪಯೋಗಿಸುವ ವಾಕ್ಯಗಳ ಸ್ವರೂಪ ಹೀಗಿರುತ್ತದೆ:
verb+object
verb+object
ಉದಾ: Close (verb) the door(object).
Complete(verb) your work(object).
Complete(verb) your work(object).
ಇಂಗ್ಲಿಷ್ ವಾಕ್ಯಗಳ ಅಭ್ಯಾಸವನ್ನು ಯಾಂತ್ರಿಕವಾಗಿ ಮಾಡುವ ಬದಲು ಅವುಗಳ ಸ್ವರೂಪ ಮತ್ತು ಕ್ರಿಯೆಗೆ ಗಮನಕೊಟ್ಟು ಕಲಿತಾಗ ನಮ್ಮ ಭಾಷಾ ಕೌಶಲ ತನಗೆ ತಾನೇ ಅರಳುತ್ತದೆ.
(ಈ ಸರಣಿ ಇಲ್ಲಿಗೆ ಮುಕ್ತಾಯವಾಗುತ್ತದೆ. ತಮ್ಮ ಅನಿಸಿಕೆಗಳನ್ನು ಇ–ಮೇಲ್ ಮಾಡಿ, shikshana@prajavani.co.in, ಮಾಹಿತಿಗೆ: 98452 13417
No comments:
Post a Comment