ಇಂಗ್ಲಿಷ್‌ನಲ್ಲಿ ಕವರ್ ಲೆಟರ್
ಇಂದಿನ ಜಗತ್ತಿನಲ್ಲಿ ಇಂಗ್ಲಿಷ್ ಭಾಷೆ ಮಾತ್ರವಲ್ಲ, ಅದು ಶಕ್ತಿಯ ಒಂದು ಸಾಧನ. ಅನೇಕ ಸಂದರ್ಭಗಳಲ್ಲಿ ಇದು ವೃತ್ತಿಪರ ಯಶಸ್ಸಿನ ರಹದಾರಿಯೂ ಕೂಡ. ಉದ್ಯೋಗ ಪಡೆಯಲು, ಸಂದರ್ಶನದಲ್ಲಿ ಯಶಸ್ವಿಯಾಗಲು ಮತ್ತು ಇತರ ಅನೇಕ ವೃತ್ತಿಪರ ಸಂದರ್ಭಗಳಲ್ಲಿ (professional situations), ಸ್ಮಾರ್ಟ್ ಇಂಗ್ಲಿಷ್ ಬಹು ಉಪಯೋಗಕಾರಿ. ಈ ನಿಟ್ಟಿನಲ್ಲಿ, ಉದ್ಯೋಗಕ್ಕೆ ಅರ್ಜೆ ಸಲ್ಲಿಸುವಾಗ ಒಂದು ಒಳ್ಳೆಯ cover letter ಅನ್ನು ಹೇಗೆ ಬರೆಯಬಹುದು ಎಂಬುದನ್ನು ತಿಳಿದುಕೊಳ್ಳೋಣ.
Cover letter ಎಂದರೆ employerನ ಮನಮುಟ್ಟುವ ರೀತಿಯಲ್ಲಿ ನಮ್ಮ ಕಿರುಪರಿಚಯವನ್ನು ಮಾಡಿಕೊಡುವ ಒಂದು ಪತ್ರ, cover letter ಅನ್ನು covering letter ಅಥವಾ motivational letter ಅಥವಾ letter of motivation ಎಂದೂ ಕರೆಯುತ್ತಾರೆ. ಈ ಪತ್ರವನ್ನು ಸಾಮಾನ್ಯವಾಗಿ ನಮ್ಮ Bio-data ಅಥವಾ resume ಅಥವಾ curriculum vitae ಜೊತೆಯಲ್ಲಿ ಕಳುಹಿಸುತ್ತೇವೆ.
Cover letter ಅನ್ನು ಬರೆಯಬೇಕಾದರೆ, ಅದರಲ್ಲಿ ನಾವು ಏನನ್ನು ಬರೆಯಬೇಕು ಹಾಗೂ ಹೇಗೆ ಬರೆಯಬೇಕು ಎಂಬ ಎರಡು ಅಂಶಗಳತ್ತ ನಮ್ಮ ಗಮನಹರಿಸೋಣ.
Cover letter ಅನ್ನು ಬರೆಯಬೇಕಾದರೆ, ಅದರಲ್ಲಿ ನಾವು ಏನನ್ನು ಬರೆಯಬೇಕು ಹಾಗೂ ಹೇಗೆ ಬರೆಯಬೇಕು ಎಂಬ ಎರಡು ಅಂಶಗಳತ್ತ ನಮ್ಮ ಗಮನಹರಿಸೋಣ.
Cover letter ಸಾಮಾನ್ಯವಾಗಿ ಒಂದು ಪುಟವನ್ನು ಮೀರದಂತಿರಬೇಕು ಹಾಗೂ ಇದರಲ್ಲಿ ಇರಬೇಕಾದ ಅಂಶಗಳೆಂದರೆ:
1. Addresses
2. Date
3. Salutation
4. Body of the letter
5. Complimentary close
ಮೊದಲಿಗೆ ನಮ್ಮ ವಿಳಾಸ ಹಾಗೂ eemployerನ ವಿಳಾಸಗಳನ್ನು ಒಂದರ ಕೆಳಗೆ ಒಂದನ್ನು ಬರೆಯಬೇಕು.
ದಿನಾಂಕವನ್ನು ಸಾಮಾನ್ಯವಾಗಿ ಎರಡು ವಿಳಾಸಗಳ ನಡುವೆ ಬರೆಯಬೇಕು ಹಾಗೂ ಅದನ್ನು ಬರೆಯುವ ರೀತಯನ್ನು ಗಮನಿಸಿ - 20th December 2014.
1. Addresses
2. Date
3. Salutation
4. Body of the letter
5. Complimentary close
ಮೊದಲಿಗೆ ನಮ್ಮ ವಿಳಾಸ ಹಾಗೂ eemployerನ ವಿಳಾಸಗಳನ್ನು ಒಂದರ ಕೆಳಗೆ ಒಂದನ್ನು ಬರೆಯಬೇಕು.
ದಿನಾಂಕವನ್ನು ಸಾಮಾನ್ಯವಾಗಿ ಎರಡು ವಿಳಾಸಗಳ ನಡುವೆ ಬರೆಯಬೇಕು ಹಾಗೂ ಅದನ್ನು ಬರೆಯುವ ರೀತಯನ್ನು ಗಮನಿಸಿ - 20th December 2014.
SSalutationಅನ್ನು ಈ ರೀತಿಯಲ್ಲಿ ಬರೆಯಬೇಕು – Dear Sir/Madam ನಂತರ, Body of the letter ಅನ್ನು ಮೂರು paragraphಗಳಾಗಿ ವಿಂಗಡಿಸಬಹುದು. ಮೊದಲನೆಯ paragraphನಲ್ಲಿ, ಅರ್ಜಿಯ ಉದ್ದೇಶ ಹಾಗೂ ಆ ಉದ್ಯೋಗದ ಬಗ್ಗೆ ಎಲ್ಲಿ ಮತ್ತು ಹೇಗೆ ಮಾಹಿತಿ ದೊರಕಿತು ಎಂಬುದನ್ನು ತಿಳಿಸಬೇಕು. ಎರಡನೆಯ paragraphನಲ್ಲಿ, ನಮ್ಮ ವಿದ್ಯಾರ್ಹತೆ ಮತ್ತು ಕಾರ್ಯಾನುಭವದ ಬಗ್ಗೆ ಸಂಕ್ಷಿಪ್ತವಾಗಿ ತಿಳಿಸಬೇಕು ಹಾಗೂ ನಮ್ಮ ಪ್ರಸ್ತುತ ಸಾಮರ್ಥ ಮತ್ತು ಅರ್ಹತೆಗಳ ಹಿನ್ನೆಲೆಯಲ್ಲಿ ನಾವು ಏಕೆ ಈ ಉದ್ಯೋಗಕ್ಕೆ ಸೂಕ್ತರು ಎಂಬುದನ್ನು ಚೊಕ್ಕವಾಗಿ ವಿವರಿಸಬೇಕು. ಕೊನೆಯ paragraph ನಲ್ಲಿ, ನಮಗೆ ಆ ಉದ್ಯೋಗದಲ್ಲಿರುವ ಆಸಕ್ತಿ ಹಾಗೂ eemployerನ ಸಕಾರಾತ್ಮಕ ಪ್ರತ್ಯುತ್ತರಕ್ಕಾಗಿ ನಮ್ಮ ನಿರೀಕ್ಷೆಯನ್ನು ಸೂಚಿಸಬೇಕು.
ಆ ನಂತರ, complimentary closeನಲ್ಲಿ, Respectfully yours ಅಥವಾ Yours faithfullyಎಂದು ಬಳಸಬಹುದು. ಇಲ್ಲಿ ನಾವು ಗಮನಿಸಬೇಕಾದ ವಿಷಯವೆಂದರೆ, Yoursಎಂಬ ಪದದಲ್ಲಿ s ಅಕ್ಷರದ ಹಿಂದೆ (’) ಯನ್ನು ಹಾಕಬಾರದು. ಹಾಗಾಗಿ Your’s ಎನ್ನುವುದು ತಪ್ಪಾದ ಬಳಕೆ. ಕೊನೆಯಲ್ಲಿ, ನಮ್ಮ ಸಹಿಯನ್ನು ಹಾಕಿ ಪತ್ರವನ್ನು ಸಂಪೂರ್ಣಗೊಳಿಸಬೇಕು.
ನಾವು ಹಿಂದೆ ನೋಡಿದ cover letterನ ಪರಿಕಲ್ಪನೆಗಳನ್ನು ಮೈಗೂಡಿಸಿಕೊಂಡಿರುವ ಈ ಪಕ್ಕದ ಉದಾಹರಣೆಯನ್ನು ಗಮನಿಸಿ:
ಸಾಮಾನ್ಯವಾಗಿ, cover letterಅನ್ನು ಬರೆಯುವಾಗ ನಾವು ಎಚ್ಚರವಹಿಸದಿದ್ದರೆ ಈ ಮೂರು ತಪ್ಪುಗಳಾಗುತ್ತವೆ: ಮೊದಲನೆಯದು, complimentary close ನಲ್ಲಿ, Your’sಗೆ ಹಾಕುವುದು. ಎರಡನೆಯದು, ದಿನಾಂಕವನ್ನು full formನಲ್ಲಿ ಬರೆಯದೇ ಇರುವುದು. ಮೂರನೆಯದಾಗಿ, salutation ಮತ್ತು subjectಗಳ ಸ್ಥಾನಪಲ್ಲಟವಾಗುವುದು (ಅಂದರೆ, salutationನ ನಂತರವೇ subject ಬರಬೇಕು.) ಈ ತಪ್ಪುಗಳಾಗದಂತೆ ಎಚ್ಚರ ವಹಿಸಿದಲ್ಲಿ, ನಮ್ಮ cover letterನ ಗುಣಮಟ್ಟ ತನಗೆ ತಾನೇ ಹೆಚ್ಚುತ್ತದೆ.
ಸಾಮಾನ್ಯವಾಗಿ, cover letterಅನ್ನು ಬರೆಯುವಾಗ ನಾವು ಎಚ್ಚರವಹಿಸದಿದ್ದರೆ ಈ ಮೂರು ತಪ್ಪುಗಳಾಗುತ್ತವೆ: ಮೊದಲನೆಯದು, complimentary close ನಲ್ಲಿ, Your’sಗೆ ಹಾಕುವುದು. ಎರಡನೆಯದು, ದಿನಾಂಕವನ್ನು full formನಲ್ಲಿ ಬರೆಯದೇ ಇರುವುದು. ಮೂರನೆಯದಾಗಿ, salutation ಮತ್ತು subjectಗಳ ಸ್ಥಾನಪಲ್ಲಟವಾಗುವುದು (ಅಂದರೆ, salutationನ ನಂತರವೇ subject ಬರಬೇಕು.) ಈ ತಪ್ಪುಗಳಾಗದಂತೆ ಎಚ್ಚರ ವಹಿಸಿದಲ್ಲಿ, ನಮ್ಮ cover letterನ ಗುಣಮಟ್ಟ ತನಗೆ ತಾನೇ ಹೆಚ್ಚುತ್ತದೆ.
ಆಯಸ್ಕಾಂತವಾದ ಮೊಳೆ
ಸಾಮಗ್ರಿ: ಒಂದು ದೊಡ್ಡ ಕಬ್ಬಿಣದ ಮೊಳೆ, ನಿರೋಧವುಳ್ಳ ತಾಮ್ರದ ತಂತಿ, ಬ್ಯಾಟರಿ, ಗುಂಡು ಸೂಜಿಗಳು, ಬ್ಲೇಡ್, ಟೇಪ್.
ವಿಧಾನ: 1) ಒಂದು ದೊಡ್ಡ ಕಬ್ಬಿಣದ ಮೊಳೆಯನ್ನು ತೆಗೆದುಕೊಳ್ಳಿ. 2) ಚಿತ್ರದಲ್ಲಿ ತೋರಿಸಿದಂತೆ ತೆಳ್ಳನೆಯ, ನಿರೋಧವುಳ್ಳ ತಾಮ್ರದ ತಂತಿಯನ್ನು ಮೊಳೆಗೆ ಸುತ್ತಿ ಹಾಗೂ ಅದರ ಮೇಲೆ ಟೇಪ್ ಸುತ್ತಿರಿ. 3) ಎರಡೂ ಪ್ರತ್ಯೇಕ ತಂತಿಯ ತುದಿಗಳನ್ನು ಬ್ಲೇಡ್‌ನಿಂದ ತಿಕ್ಕಿ ನಿರೋಧ ಲೇಪನವನ್ನು ತೆಗೆದು ಹಾಕಿ. 4) ತಂತಿಯ ಒಂದು ತುದಿಯನ್ನು ಬ್ಯಾಟರಿಯ ತಳಕ್ಕೆ ಟೇಪ್‌ನಿಂದ ಹಚ್ಚಿರಿ. 5) ಇನ್ನೊಂದು ತುದಿಯನ್ನು ಬ್ಯಾಟರಿಯ ಮೇಲ್ಭಾಗದ ಲೋಹಕ್ಕೆ ಹಿಡಿಯಿರಿ.
ವಿಧಾನ: 1) ಒಂದು ದೊಡ್ಡ ಕಬ್ಬಿಣದ ಮೊಳೆಯನ್ನು ತೆಗೆದುಕೊಳ್ಳಿ. 2) ಚಿತ್ರದಲ್ಲಿ ತೋರಿಸಿದಂತೆ ತೆಳ್ಳನೆಯ, ನಿರೋಧವುಳ್ಳ ತಾಮ್ರದ ತಂತಿಯನ್ನು ಮೊಳೆಗೆ ಸುತ್ತಿ ಹಾಗೂ ಅದರ ಮೇಲೆ ಟೇಪ್ ಸುತ್ತಿರಿ. 3) ಎರಡೂ ಪ್ರತ್ಯೇಕ ತಂತಿಯ ತುದಿಗಳನ್ನು ಬ್ಲೇಡ್‌ನಿಂದ ತಿಕ್ಕಿ ನಿರೋಧ ಲೇಪನವನ್ನು ತೆಗೆದು ಹಾಕಿ. 4) ತಂತಿಯ ಒಂದು ತುದಿಯನ್ನು ಬ್ಯಾಟರಿಯ ತಳಕ್ಕೆ ಟೇಪ್‌ನಿಂದ ಹಚ್ಚಿರಿ. 5) ಇನ್ನೊಂದು ತುದಿಯನ್ನು ಬ್ಯಾಟರಿಯ ಮೇಲ್ಭಾಗದ ಲೋಹಕ್ಕೆ ಹಿಡಿಯಿರಿ.
ಪ್ರಶ್ನೆ: ಈಗ ಕಬ್ಬಿಣದ ಮೊಳೆಯನ್ನು ಗುಂಡುಸೂಜಿ/ಚಿಕ್ಕ ಕಬ್ಬಿಣದ ಮೊಳೆಗಳ ಹತ್ತಿರ ಹಿಡಿಯಿರಿ. ಏನಾಗುತ್ತದೆ? ಯಾಕೆ?
ಉತ್ತರ: ದೊಡ್ಡ ಕಬ್ಬಿಣದ ಮೊಳೆ ಗುಂಡುಸೂಜಿಗಳನ್ನು/ಚಿಕ್ಕ ಕಬ್ಬಿಣದ ಮೊಳೆಗಳನ್ನು ಆಕರ್ಷಿಸುತ್ತದೆ. ಯಾಕೆಂದರೆ ಕಬ್ಬಿಣದ ಮೊಳೆಯು ವಿದ್ಯುತ್‌ಕಾಂತವಾಗಿ ಮಾರ್ಪಾಟಾಗುತ್ತದೆ. ವಿದ್ಯುತ್, ತಂತಿಯಲ್ಲಿ ಚಲಿಸಿ, ತಂತಿಯ ಸುತ್ತಲೂ ಕಾಂತೀಯ ಕ್ಷೇತ್ರ ನಿರ್ಮಾಣವಾಗುತ್ತದೆ.
ಉತ್ತರ: ದೊಡ್ಡ ಕಬ್ಬಿಣದ ಮೊಳೆ ಗುಂಡುಸೂಜಿಗಳನ್ನು/ಚಿಕ್ಕ ಕಬ್ಬಿಣದ ಮೊಳೆಗಳನ್ನು ಆಕರ್ಷಿಸುತ್ತದೆ. ಯಾಕೆಂದರೆ ಕಬ್ಬಿಣದ ಮೊಳೆಯು ವಿದ್ಯುತ್‌ಕಾಂತವಾಗಿ ಮಾರ್ಪಾಟಾಗುತ್ತದೆ. ವಿದ್ಯುತ್, ತಂತಿಯಲ್ಲಿ ಚಲಿಸಿ, ತಂತಿಯ ಸುತ್ತಲೂ ಕಾಂತೀಯ ಕ್ಷೇತ್ರ ನಿರ್ಮಾಣವಾಗುತ್ತದೆ.
2014 ಆಗು–ಹೋಗು
ಮಲಾಲಗೆ ‘ಲಿಬರ್ಟಿ ಮೆಡಲ್’ ದ್ರಾವಿಡ್‌ಗೆ ಲಾರೆಸ್ ಅಕಾಡೆಮಿ ಸದಸ್ಯತ್ವ
ಜು.1: ಜುಲೈ ಒಂದರಿಂದ ಜಾರಿಗೆ ಬರುವಂತೆ ಅಫ್ಘಾನಿಸ್ತಾನ ಪ್ರಜೆಗಳಿಗೆ ಭಾರತ ಸರ್ಕಾರ ವೀಸಾ ಸರಳೀಕರಣ ಯೋಜನೆಯನ್ನು ಘೋಷಣೆ ಮಾಡಿತು. ಇದರ ಅನ್ವಯ ವೈದ್ಯಕೀಯ, ಶಿಕ್ಷಣ ಮತ್ತು ಸಮಾಜ ಸೇವೆ ನೆಲೆಗಟ್ಟಿನ ಅಡಿಯಲ್ಲಿ ಆಫ್ಘನ್ ಪ್ರಜೆಗಳು ಈ ವೀಸಾ ಸೌಲಭ್ಯ ಪಡೆಯಬಹುದು.
*ಜು. 1: ಫಿಲಿಡೆಲ್ಪಿಯಾ ದೇಶ ನೀಡುವ ಅತ್ಯುನ್ನತ ನಾಗರಿಕ ಪ್ರಶಸ್ತಿ ‘ಲಿಬರ್ಟಿ ಮೆಡಲ್’ ಪಾಕಿಸ್ತಾನದ ಯುವ ಸಾಮಾಜಿಕ ಸೇವಾಕರ್ತೆ ಮಲಾಲ ಯೂಸೂಫ್‌ಝೈಗೆ ಸಂದಿದೆ.
ಈ ಪ್ರಶಸ್ತಿಯನ್ನು ಇಲ್ಲಿನ ಸರ್ಕಾರ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡುವವರಿಗೆ 1998ರಿಂದ ನೀಡುತ್ತ ಬಂದಿದೆ.
ಈ ಪ್ರಶಸ್ತಿಯನ್ನು ಇಲ್ಲಿನ ಸರ್ಕಾರ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡುವವರಿಗೆ 1998ರಿಂದ ನೀಡುತ್ತ ಬಂದಿದೆ.
*ಜು. 2: ಬಾಲಿವುಡ್ ನಟ ಶಾರೂಕ್ ಖಾನ್ ಅವರಿಗೆ ಫ್ರಾನ್ಸ್ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿ ‘ನೈಟ್ ಆಫ್ ದಿ ಲಿಜಿಯನ್ ಆಫ್ ಆನರ್’ (Knight of the Legion of Honor) ಪ್ರಶಸ್ತಿ ನೀಡಿ ಗೌರವಿಸಲಾಯಿತು. ಈ ಪ್ರಶಸ್ತಿಯನ್ನು ವಿಶ್ವದಾದ್ಯಂತ ಸಾಂಸ್ಕೃತಿಕ ಕ್ಷೇತ್ರದಲ್ಲಿ ಅಸಮಾನ್ಯ ಸೇವೆ ಸಲ್ಲಿಸಿದವರಿಗೆ ನೀಡಲಾಗುವುದು.
*ಜು.2: ರಾಜಸ್ತಾನ ಸರ್ಕಾರ ಒಂಟೆಯನ್ನು ರಾಜ್ಯ ಪ್ರಾಣಿಯನ್ನಾಗಿ ಘೋಷಣೆ ಮಾಡಿತು. ಜೈಪುರದಲ್ಲಿ ನಡೆದ ವಿಶೇಷ ವಿಧಾನಸಭಾ ಅಧಿವೇಶನದಲ್ಲಿ ಈ ನಿರ್ಣಯ ಕೈಗೊಳ್ಳಲಾಯಿತು.
*ಜು.3: ಚೀನಾ ಮತ್ತು ಉತ್ತರ ಕೊರಿಯಾ ದೇಶಗಳ ದ್ವಿಪಕ್ಷೀಯ ಸಭೆ ಸಿಯೋಲ್‌ನಲ್ಲಿ ನಡೆಯಿತು. ಈ ಸಭೆಯಲ್ಲಿ ಉಭಯ ದೇಶಗಳು ಯುದ್ಧ ತಂತ್ರ ಕುರಿತಂತೆ ಚರ್ಚೆ ನಡೆಸಿದವು.
*ಜು.4: ಗೋವಾದ ರಾಜ್ಯಪಾಲ ಬಿ.ವಿ.ವಾಂಚೂ ಅವರು ರಾಜೀನಾಮೆ ನೀಡಿದರು. ಭೂ ಹಗರಣಕ್ಕೆ ಸಂಬಂಧಿಸಿದಂತೆ ಸಿಬಿಐ ಅಧಿಕಾರಿಗಳ ಎದುರು ವಿಚಾರಣೆಗೆ ಹಾಜರಾಗಬೇಕಿರುವ ಹಿನ್ನೆಲೆಯಲ್ಲಿ ಅವರು ರಾಜೀನಾಮೆ ನೀಡಿದರು.
*ಜು.6: ಸಚಿನ್ ತೆಂಡೂಲ್ಕರ್ ನೇತೃತ್ವದ ಎಂಸಿಸಿ ಇಲೆವನ್ ಕ್ರಿಕೆಟ್ ತಂಡವು, ವಿಶ್ವ ಇಲೆವನ್ ತಂಡವನ್ನು ಮಣಿಸುವ ಮೂಲಕ 200ನೇ ಗೆಲುವನ್ನು ದಾಖಲಿಸಿತು. ಈ ಪಂದ್ಯ ಕ್ರಿಕೆಟ್ ಕಾಶಿ ಇಂಗ್ಲೆಂಡ್‌ನ ಲಾರ್ಡ್ಸ್ ಮೈದಾನದಲ್ಲಿ ನಡೆಯಿತು.
*ಜು.6: ನೊವೊಕ್ ಜೊಕೊವಿಕ್ ಅವರು 2014ನೇ ಸಾಲಿನ ವಿಂಬಲ್ಡನ್ ಪುರುಷರ ಸಿಂಗಲ್ ಪ್ರಶಸ್ತಿಯನ್ನು ಗೆದ್ದರು. ಈ ಪ್ರಶಸ್ತಿಯನ್ನು ಅವರು ಎರಡನೇ ಸಲ ಪಡೆದರು. ಈ ಹಿಂದೆ 2011ರಲ್ಲಿ ವಿಂಬಲ್ಡನ್ ಪ್ರಶಸ್ತಿ ಗೆದ್ದಿದ್ದರು.
*ಜು.7: ಸುಪ್ರೀಂ ಕೋರ್ಟ್ ಷರಿಯತ್ ಕೋರ್ಟ್‌ಗಳು ಕಾನೂನು ಬಾಹಿರ ಎಂದು ಮಹತ್ವದ ತೀರ್ಪು ಪ್ರಕಟಿಸಿತು.
*ಜು.8: ಭಾರತೀಯ ಸಂವಿಧಾನ ತಜ್ಞ ಗ್ರೇನೆವಿಲ್ ಅಸ್ಟೀನ್ ಅವರು ವಾಷಿಂಗ್ಟನ್‌ನಲ್ಲಿ ನಿಧನರಾದರು. ಅವರು ಭಾರತೀಯ ಸಂವಿಧಾನ ಕುರಿತಂತೆ ಹಲವಾರು ಪುಸ್ತಕಗಳನ್ನು ಬರೆದಿದ್ದಾರೆ.
*ಜು.8: ಸುಪ್ರೀಂ ಕೋರ್ಟ್‌ನ ನ್ಯಾಯಾಧೀಶರಾಗಿ ನ್ಯಾ. ಅರುಣ್ ಮಿಶ್ರಾ, ನ್ಯಾ.ಆದರ್ಶ್ ಕುಮಾರ್ ಗೋಯಲ್ ಮತ್ತು ಎಫ್.ನಾರಿಮನ್ ಅವರು ಪ್ರಮಾಣವಚನ ಸ್ವೀಕರಿಸಿದರು.
*ಜು.9: ನೈಜೀರಿಯಾ ತಂಡವನ್ನು ಅಂತರರಾಷ್ಟ್ರೀಯ ಫುಟ್‌ಬಾಲ್ ಪಂದ್ಯಾವಳಿಗಳಿಂದ ನಿಷೇಧಿಸಲಾಯಿತು. ಪ್ರಸಕ್ತ ವಿಶ್ವಕಪ್ ಪಂದ್ಯಾವಳಿಯಲ್ಲಿ ಅನುಚಿತ ವರ್ತನೆ ತೋರಿದಕ್ಕೆ ಫಿಫಾ ಈ ನಿರ್ಣಯ ಕೈಗೊಂಡಿತು.
*ಜು.10: ಬಾಲಿವುಡ್ ಹಿರಿಯ ನಟಿ ಜೋಹ್ರಾ ಸೆಹಗಲ್ ತಮ್ಮ 102ನೇ ವಯಸ್ಸಿಗೆ ನಿಧನರಾದರು.
ಅವರನ್ನು ಬಾಲಿವುಡನ್ ‘ಗ್ರ್ಯಾಂಡ್ ಓಲ್ಡ್ ಲೇಡಿ’ ಎಂದು ಕರೆಯಲಾಗುತ್ತದೆ.
ಅವರನ್ನು ಬಾಲಿವುಡನ್ ‘ಗ್ರ್ಯಾಂಡ್ ಓಲ್ಡ್ ಲೇಡಿ’ ಎಂದು ಕರೆಯಲಾಗುತ್ತದೆ.
*ಜು.13: 2014ನೇ ಸಾಲಿನ ಫಿಫಾ ವಿಶ್ವಕಪ್ ಪ್ರಶಸ್ತಿಯನ್ನು ಜರ್ಮನಿ ಗೆದ್ದುಕೊಂಡಿತು. ಅರ್ಜೆಂಟಿನಾ ವಿರುದ್ಧ ನಡೆದ ರೋಚಕ ಪಂದ್ಯದಲ್ಲಿ 1–0ಯಿಂದ ಜರ್ಮನಿ ವಿಶ್ವಕಪ್ ಗೆದ್ದಿತು. ಜರ್ಮನಿ ಪರವಾಗಿ ಗೊಟ್ಜೆ ಒಂದು ಗೋಲು ಭಾರಿಸಿದರು.
*ಜು.13: ವಿಶ್ವ ಹಿಂದೂ ಪರಿಷತ್‌ನ ಹಿರಿಯ ನಾಯಕ ಗಿರಿರಾಜ್ ಕಿಶೋರ್ ಅವರು ನವದೆಹಲಿಯಲ್ಲಿ ನಿಧನರಾದರು. ಅವರಿಗೆ 94 ವರ್ಷ ವಯಸ್ಸಾಗಿತ್ತು.
*ಜು.16: ಇಂಡಿಯನ್ ಆಯಿಲ್ ಕಾರ್ಪೊರೇಶನ್‌ನ ಅಧ್ಯಕ್ಷರಾಗಿ ಬಿ. ಅಶೋಕ್ ಅವರನ್ನು ಕೇಂದ್ರ ಸರ್ಕಾರ ನೇಮಕಮಾಡಿತು.
*ಜು.16: ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ ರಾಹುಲ್ ದ್ರಾವಿಡ್ ಅವರು ವಿಶ್ವದ ಲಾರೆಸ್ ಅಕಾಡೆಮಿಯ ಸದಸ್ಯರಾಗಿ ನೇಮಕಗೊಂಡರು.
*ಜು.17: ಕೇರಳದಲ್ಲಿ ಜುಲೈ 17 ರಿಂದ ಆಗಸ್ಟ್ 16ರವರೆಗೆ ರಾಮಾಯಣ ಪಾರಾಯಾಣ ಅಭಿಯಾನ ನಡೆಯಿತು. ಹಿಂದೂ ಭಕ್ತರು ದೇವಾಲಯ ಮತ್ತು ಮನೆಗಳಲ್ಲಿ ಒಂದು ತಿಂಗಳ ಕಾಲ ರಾಮಾಯಣ ಪಾರಾಯಣ ಮಾಡಿದರು.
*ಜು. 17: 7ನೇ ಬ್ರಿಕ್ಸ್ ಸಮ್ಮೇಳನ ರಷ್ಯಾದಲ್ಲಿ ನಡೆಯಲಿದೆ ಎಂದು ಬ್ರಿಕ್ಸ್ ಸಂಘಟನೆಯ ಕಾರ್ಯಾಲಯ ಪ್ರಕಟಿಸಿತು.
*ಜು.17: ಗುಜರಾತ್‌ನ ರಾಜ್ಯಪಾಲರಾಗಿ ಓಂ ಪ್ರಕಾಶ್ ಕೊಹ್ಲಿ ಪ್ರಮಾಣ ವಚನ ಸ್ವೀಕರಿಸಿದರು. ಕಮಲ್ ಬೆನ್ನಿವಾಲ್ ಅವರಿದ್ದ ಸ್ಥಾನಕ್ಕೆ ಕೊಹ್ಲಿ ಅವರನ್ನು ನೇಮಕ ಮಾಡಲಾಯಿತು. ಬೆನ್ನಿವಾಲ್ ಅವರನ್ನು ಮಿಜೊರಾಂ ಮತ್ತು ನಾಗಲ್ಯಾಂಡ್ ರಾಜ್ಯಪಾಲರನ್ನಾಗಿ ವರ್ಗಾವಣೆ ಮಾಡಲಾಗಿದೆ.
*ಜು.17: ಪ್ರಧಾನಿ ನರೇಂದ್ರ ಮೋದಿ ಅವರು 6ನೇ ಬ್ರಿಕ್ಸ್ ಸಮೇಳನದಲ್ಲಿ ಭಾಗವಹಿಸಲು ಬ್ರೆಜಿಲ್ ದೇಶಕ್ಕೆ ಪ್ರಯಾಣ ಬೆಳೆಸಿದರು. ಈ ಸಂದರ್ಭದಲ್ಲಿ ಬ್ರಿಕ್ಸ್ ದೇಶಗಳ ಜೊತೆ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಸಹಿ ಹಾಕಿದರು.
*ಜು.18: 7ನೇ ಇಬ್ಸಾ ಸಮ್ಮೇಳನ 2015ರಲ್ಲಿ ನವದೆಹಲಿಯಲ್ಲಿ ನಡೆಯಲಿದೆ. ಈ ಸಮಾವೇಶದಲ್ಲಿ ಇಂಡಿಯಾ, ಬ್ರೆಜಿಲ್, ದಕ್ಷಿಣ ಆಫ್ರಿಕಾ ದೇಶಗಳು ಬಾಗವಹಿಸಲಿವೆ.
*ಜು.18: ಮಲೇಶಿಯಾ ನಾಗರಿಕ ವಿಮಾನ ಉಕ್ರೇನ್ ವಾಯುನೆಲೆಯಲ್ಲಿ ಅಪಘಾತಕ್ಕೆ ಈಡಾಯಿತು. ಈ ದುರಂತದಲ್ಲಿ 300ಕ್ಕೂ ಹೆಚ್ಚು ಜನರು ಸಾವನ್ನಪ್ಪಿದರು.
*ಜು.19: ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಅವರು 2013ನೇ ಸಾಲಿನ ಆರೋಗ್ಯ ಪಾಲಿಸಿಯನ್ನು ದೇಶಕ್ಕೆ ಪರಿಚಯಿಸಿದರು.
*ಜು.19: ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರು ನಿತಾರಿ ಕೊಲೆ ಪ್ರಕರಣದ ಐವರು ಅಪರಾಧಿಗಳಿಗೆ ದಯಾಮರಣ ನೀಡಲು ನಿರಾಕರಿಸಿದರು. ಇವರಲ್ಲಿ ಪ್ರಮುಖ ಅಪರಾಧಿ ಸುರೇಂದರ್ ಕೋಲಿ ಅವರು ಸೇರಿದ್ದಾರೆ
ಮಾತಿನ ಹೊನಲು ಹರಿಯಲಿ..
Public speakingನಲ್ಲಿ ವಿಷಯ ಮಂಡನೆಗೆ ಸಂಬಂಧಿಸಿದಂತೆ ಕೆಲವು ಸೂಚನೆಗಳು ಇಲ್ಲಿವೆ: ಎಷ್ಟೋ ಬಾರಿ ಮಾತನಾಡುತ್ತಿದ್ದ ಹಾಗೆಯೇ ನಮಗೆ ಖಾಲಿತನದ ಅನುಭವವಾಗುತ್ತದೆ. ಅಂದರೆ, ಎಲ್ಲವನ್ನೂ ಹಠಾತ್ ಮರೆತು ಹೋಗುವುದು. ಈ ಸಮಸ್ಯೆಯನ್ನು ನಿವಾರಿಸಿಕೊಳ್ಳಲು ಒಂದು ಸುಲಭ ಉಪಾಯವಿದೆ.
ಮರವೊಂದನ್ನು ಮನಸ್ಸಿನಲ್ಲಿ ಚಿತ್ರಿಸಿಕೊಳ್ಳಿ. ಬೇರು, ಕಾಂಡ ಮತ್ತು ರೆಂಬೆಗಳನ್ನು ಕಲ್ಪಿಸಿಕೊಳ್ಳಿ. ನಿಮ್ಮ ಮಾತಿನ ಮರದ ಕಾಂಡವೇ ನಿಮ್ಮ ವಿಷಯ. ಈ ವಿಷಯ ಕಾಂಡಕ್ಕೆ ನೀವು ಆರು ರೆಂಬೆಗಳನ್ನು ಕಲ್ಪಿಸಿಕೊಳ್ಳಬಹುದು. ಅವೇ ಇಂಗ್ಲಿಷ್‌ನಲ್ಲಿರುವ wh-question why, what, where, when, how and which. ಉದಾ: The greatness of Indian civilization ಎಂಬುದು ನಿಮ್ಮ ಭಾಷಣದ ವಿಷಯ ಎಂದಿಟ್ಟುಕೊಳ್ಳಿ.
ನಿಮ್ಮ ನೆನಪಿನಲ್ಲಿದ್ದುದ್ದೆಲ್ಲಾ ಸೋರಿ ಹೋಗುತ್ತಿರುವ ಅನುಭವ ನಿಮಗೆ ವೇದಿಕೆಯ ಮೇಲೆ ಆಗುತ್ತಿದ್ದಾಗ ನೀವು ಈ wh ರೆಂಬೆಗಳನ್ನು ಮನಸ್ಸಿನಲ್ಲಿ ಸ್ಪರ್ಶಿಸಿ. ಅನೇಕ ಬಾರಿ ಇದರಿಂದ ಒಳಗೆ ಅವಿತಿರುವ ವಿಷಯದ ಹೊಳವುಗಳು ತಂತಾನೆ ನಿಮಗೆ ಮತ್ತೆ ಒದಗಿ ಬರತೊಡಗುತ್ತವೆ. ಅಭ್ಯಾಸ ಬಲದಿಂದ ಕೆಲವೇ ಸೆಕೆಂಡುಗಳಲ್ಲಿ ಯಾವುದೇ ವಿಷಯವನ್ನು ಕುರಿತಾದರೂ ಈ ತಂತ್ರವನ್ನು ಉಪಯೋಗಿಸಬಹುದು, ಇದನ್ನು stem and branch method ಎಂದು ಕರೆಯಲಾಗುತ್ತದೆ.
ಎರಡನೆಯ ಉಪಾಯವೆಂದರೆ, ವಿಷಯ ಮಂಡನೆಯಲ್ಲಿ ಪರಿಕಲ್ಪನೆಗಳಿಗಿಂತ ಹೆಚ್ಚಾಗಿ ಪದಚಿತ್ರಗಳನ್ನು ಉಪಯೋಗಿಸುವುದು. ಉದಾ: I bought a new vehicle ಎಂಬ ವಾಕ್ಯಕ್ಕೆ ಬದಲಾಗಿ I bought a brand new apple red Benz ಎಂದಾಗ ಅದರ ಪರಿಣಾಮವೇ ಬೇರೆ ರೀತಿ ಇರುತ್ತದೆ. ಏಕೆಂದರೆ ಎಲ್ಲಾ ಕೇಳುಗರೂ ಐದು ತಂತಿಗಳಿರುವಂತಹ ಪಂಚವೀಣೆಯಂತೆ. Sight, sound, touch, smell and taste - ಇವೇ ಆ ಪಂಚವೀಣೆಯ ತಂತಿಗಳು. ಪರಿಣಿತ ಭಾಷಣಕಾರನೊಬ್ಬ ತನ್ನ ವಿಷಯ ಮಂಡನೆಯನ್ನು ಕೇಳುಗರ ಪಂಚೇಂದ್ರಿಯಗಳ ಅನುಭವಕ್ಕೆ ದಕ್ಕುವಂತೆ ಕಲಾತ್ಮಕವಾಗಿ ಸಂಭಾಷಿಸುತ್ತಿರುತ್ತಾನೆ. ಬೇಂದ್ರೆಯವರ ‘ಮೂಡಲ ಮನೆಯ ಮುತ್ತಿನ..’ ಎಂಬ ಪದ್ಯದ ಮಾಂತ್ರಿಕತೆ ಈ ಅಂಶದಲ್ಲೇ ಅಡಗಿದೆ.
ಮೂರನೆಯದಾಗಿ, ನಮ್ಮ ಭಾಷಣ ಬತ್ತಳಿಕೆಯಲ್ಲಿ ವಿವಿಧ ಆಯ್ಕೆಗಳಿರಬೇಕು. Quotations(ಉಲ್ಲೇಖಗಳು), anecdotes(ಸ್ವಾರಸ್ಯಕರ ಅನುಭವಗಳು), relevant statistics(ಸಂದರ್ಭೋಚಿತ ಅಂಕಿ ಅಂಶಗಳು), illustrations (ದೃಷ್ಟಾಂತಗಳು) ಇವುಗಳಲ್ಲಿ ಕೆಲವು.
ಕಡೆಯದಾಗಿ, public speaking ಅನ್ನು ಅತ್ಯಂತ ಪರಿಣಾಮಕಾರಿಯಾಗಿ ಮಾಡುವುದು ನಮ್ಮಲ್ಲಿ ಇರಬೇಕಾದ ತೀಕ್ಷ್ಣವಾದ ಸಮಯಪ್ರಜ್ಞೆ, ಕೇಳುಗರ ಸಮಯ ಮತ್ತು ಗಮನಮಿತಿಯ (attention span) ಬಗ್ಗೆ ಪಬ್ಲಿಕ್ ಸ್ಪೀಕರ್‌ಗೆ ಅಪಾರವಾದ ಗೌರವ ವಿರಬೇಕು. ವಂದನಾರ್ಪಣೆಯನ್ನು ಮಾಡಲು ಹೋಗಿ ಆತ್ಮ ಚರಿತ್ರೆಯ ಜಾಡು ಹಿಡಿದು, ಕೇಳುಗರ ನಿದ್ದೆಗೆ ಕಾರಣರಾದ ಎಷ್ಟೋ ಜನ ಆಗಿಹೋಗಿದ್ದಾರೆಂಬುದನ್ನು ನಾವು ಮರೆಯಬಾರದು.
No comments:
Post a Comment