Friday, 2 January 2015

Spoken English Prakash accident



ವಿರಾಮ ಚಿಹ್ನೆಗಳ ಉಪಯೋಗ

ನಾವು ಸಂಭಾಷಿಸುವಾಗ, ನಮ್ಮ ಮಾತುಗಳಲ್ಲಿನ ಸ್ಪಷ್ಟತೆಯನ್ನು sstress, intonation, pauses, body languageಗಳ ಮುಖಾಂತರ ವ್ಯಕ್ತಪಡಿಸುವ ಹಾಗೆ ನಮ್ಮ ಬರವಣಿಗೆಯಲ್ಲಿನ ಸ್ಪಷ್ಟತೆಯನ್ನು ಸರಿಯಾದ ವಿರಾಮ ಚಿಹ್ನೆಗಳನ್ನು ಉಪಯೋಗಿಸುವುದರ ಮುಖಾಂತರ ವ್ಯಕ್ತಪಡಿಸಬಹುದು.
ಇಂಗ್ಲಿಷ್ ಭಾಷೆಯಲ್ಲಿ ಬಳಸುವ ವಿರಾಮ ಚಿಹ್ನೆಗಳು ಮತ್ತು ಅವುಗಳನ್ನು ಎಲ್ಲಿ, ಹೇಗೆ ಬಳಸಬೇಕೆಂಬುದನ್ನು ಇಲ್ಲಿ ಗಮನಿಸಿ:
Full stop (.)
ಅಮೆರಿಕನ್ನರು full stop ಅನ್ನು periodಎನ್ನುತ್ತಾರೆ. ಇದನ್ನು ಯಾವುದೇ ವಾಕ್ಯವು ಕೊನೆಗೊಳ್ಳುವುದನ್ನು ಸೂಚಿಸುವುದಕ್ಕಾಗಿ ಬಳಸಲಾಗುತ್ತದೆ.
ಉದಾ: WWe learn grammar. This helps us in the correct use of language. Abbreviation ಮತ್ತು initialಗಳನ್ನು ಬಳಸುವಾಗ ಸಹಾ full stop ಅನ್ನು ಉಪಯೋಗಿಸುತ್ತೇವೆ.
ಉದಾ: 1. M.A. for Master of Arts (abbreviation)
2. K. Ashok (initial)
Comma (,)
ನಮ್ಮ ಬರವಣಿಗೆಯಲ್ಲಿ ಸಾಕಷ್ಟು ಬಾರಿ ಉಪಯೋಗಿಸುವ ವಿರಾಮ ಚಿಹ್ನೆಯೆಂದರೆ comma. ಇದನ್ನು ನಾಲ್ಕು ಸಂದರ್ಭಗಳಲ್ಲಿ ಬಳಸಬಹುದು.
a). Listing comma - ಮೂರು ಅಥವಾ ಮೂರಕ್ಕಿಂತ ಹೆಚ್ಚು ಪದಗಳ/ಪದಪುಂಜಗಳನ್ನು, ಒಂದರಿಂದ ಇನ್ನೊಂದನ್ನು ಬೇರ್ಪಡಿಸಲು ಬಳಸುವ commaವನ್ನು listing comma ಎನ್ನಬಹುದು.
ಉದಾ: 1. Orange, white and green are the colours in the Indian flag.
2. Arjuna, Bheema, Nakula and Sahadeva are brothers.
b). Joining Comma -ಎರಡು ವಾಕ್ಯಗಳನ್ನು ಸೇರಿಸಿ ಒಂದು ವಾಕ್ಯವನ್ನಾಗಿ ಮಾಡಲು ಬಳಸುವ commaವನ್ನು joining comma ಎನ್ನಬಹುದು.
ಉದಾ:I could have lied to you, but I did not.

c) Gapping Comma - ಹಿಂದೊಮ್ಮೆ ಸೂಚಿಸಿದಂತಹ ಪದಗಳನ್ನು ಮತ್ತೆ ಪುನರಾವರ್ತಿಸುವ ಬದಲಾಗಿ comma ವನ್ನು ಉಪಯೋಗಿಸಿ ವಾಕ್ಯವನ್ನು ಸಂಕ್ಷಿಪ್ತಗೊಳಿಸಬಹುದು ಹಾಗೂ ಏಕತಾನತೆಯನ್ನು (monotony) ತಡೆಗಟ್ಟಬಹುದು. ಇಂತಹ commaವನ್ನು ggapping commaಎಂದು ಕರೆಯುತ್ತೇವೆ. ಉದಾ:Some writers use punctuation correctly; others, not.
d) Bracketing Comma - bracket  ಒಳಗೆ ಉಪಯೋಗಿಸಬಹುದಾದ ಪದಪುಂಜ ಅಥವಾ ಒಂದು ಚಿಕ್ಕ ವಾಕ್ಯವನ್ನು bbracket ಇಲ್ಲದೆಯೇ ಇನ್ನೊಂದು ವಾಕ್ಯದೊಳಗೆ ಸೇರಿಸುವಾಗ ಬಳಸುವಂತಹ commaವನ್ನು bbracketing comma ಎನ್ನಬಹುದು.
ಉದಾ: 1. Ashok, who is a resident of Bangalore, is a good singer.
2. Milton, the great English poet, was blind.
ಸಾಮಾನ್ಯವಾಗಿ. ಎಲ್ಲಿ comma ಉಪಯೋಗಿಸಬೇಕೆಂಬ ಸಂದೇಹ ಬಂದಾಗ ನಾವು ಮಾಡಬೇಕಾಗಿರುವ ಕೆಲಸ ಇಷ್ಟೆ. ವಾಕ್ಯವನ್ನು ಜೋರಾಗಿ ಓದಿ, ಎಲ್ಲಿ ಅರ್ಥಪೂರ್ಣವಾಗಿ ನಿಲ್ಲಿಸಬೇಕಾಗುತ್ತದೋ ಅಥವಾ ಉಸಿರನ್ನು ತೆಗೆದುಕೊಳ್ಳ ಬೇಕಾಗುತ್ತದೋ ಅಲ್ಲಿ comma ಹಾಕುವುದು ಸೂಕ್ತ. ಇದು ಬಹುತೇಕ ಸಂದರ್ಭಗಳಲ್ಲಿ ಉಪಯುಕ್ತ ವಿಧಾನ.
ಮತ್ತಷ್ಟು ವಿರಾಮ ಚಿಹ್ನೆಗಳು
ಸೈದ್ಧಾಂತಿಕವಾಗಿ, ನಾವು ಬರೆಯುವ ವಾಕ್ಯವೊಂದು ಎಷ್ಟಾದರೂ ಉದ್ದವಿರಬಹುದು. ಉದಾಹರಣೆಗೆ, James Joyce ಎನ್ನುವ ಕಾದಂಬರಿಕಾರನ Ulysses ಎಂಬ ಕಾದಂಬರಿಯ ಕೊನೆಯ ವಾಕ್ಯ ವಿರಾಮ ಚಿಹ್ನೆಗಳನ್ನು ಉಪಯೋಗಿಸದೆಯೇ ಬರೆದದ್ದಾಗಿದ್ದು, ಅನೇಕ ಪುಟಗಳಷ್ಟು ಉದ್ದವಿದೆ. ಆದರೆ ಸಾಮಾನ್ಯವಾಗಿ ಓದುಗರ ಮೇಲೆ ಈ ರೀತಿಯ ಒತ್ತಡವನ್ನು ಹೇರಬಾರದು. ನಮ್ಮ ಮೆದುಳಿಗೆ ಸೀಮಿತ ಗ್ರಹಣಶಕ್ತಿಯಿರುವುದರಿಂದ ವಿರಾಮ ಚಿಹ್ನೆಗಳನ್ನು ಉಪಯೋಗಿಸಿ ಬಳಸುವ ಭಾಷೆ ಓದುಗರಿಗೆ ಸುಲಭವಾಗಿ ಅರ್ಥವಾಗುತ್ತದೆ. ಈ ಕಾರಣಕ್ಕೆ ನಾವು ವಿರಾಮ ಚಿಹ್ನೆಗಳ ಉಪಯೋಗದ ಮೇಲೆ ಹಿಡಿತ ಸಾಧಿಸಬೇಕು. ಈಗ ಇನ್ನೂ ಕೆಲವು ವಿರಾಮ ಚಿಹ್ನೆಗಳ ಬಗ್ಗೆ ತಿಳಿದುಕೊಳ್ಳೋಣ.
Semi Colon (;)
ಒಂದಕ್ಕೊಂದು ಸಂಬಂಧವಿರುವ ಎರಡು ಉಪವಾಕ್ಯಗಳನ್ನು (clauses), full stop ನಿಂದ ಬೇರ್ಪಡಿಸಲಾಗದ ಸಂದರ್ಭದಲ್ಲಿ  semi colon ಉಪಯೋಗಿಸಿ ಬೇರ್ಪಡಿಸಬಹುದು.
ಉದಾ: People continue to worry about the future; our failure to conserve natural resources has put the future at risk.
ಕೆಲವು comma ಗಳಿರುವಂತಹ ದೊಡ್ಡ ವಾಕ್ಯದಲ್ಲಿನ ಉಪವಾಕ್ಯಗಳನ್ನು ಬೇರ್ಪಡಿಸಬೇಕಾದರೆ semi colon ಅನ್ನು ಬಳಸಬೇಕು.
ಉದಾ: I went for a movie with fun loving, young friends; and we all enjoyed the movie.
ಇಲ್ಲಿ ನಾವು ಗಮನಿಸಬೇಕಾದ ವಿಷಯವೆಂದರೆ, comma ಬಿಂಬಿಸುವಂತಹ ವಿರಾಮಕ್ಕಿಂತ, ಹೆಚ್ಚು ಮಹತ್ವವುಳ್ಳ ವಿರಾಮವನ್ನು semi colon ಬಿಂಬಿಸುತ್ತದೆ.
Colon (:)
Semi colon ಗಿಂತ ದೀರ್ಘವಾದ, ಆದರೆ full stop ಗಿಂತ ಕಡಿಮೆಯಾದ ವಿರಾಮವನ್ನು colonಬಿಂಬಿಸುತ್ತದೆ.
ಯಾವುದಾದರೂ ಪಟ್ಟಿಯನ್ನು ಪರಿಚಯಿಸುವಾಗ colonಬಳಸಬೇಕು. ಉದಾ: There are three colours in the Indian flag: Orange, white and green..
ಉದಾಹರಣೆ ಅಥವಾ ವಿವರಣೆಯನ್ನು ಒಂದು ವಾಕ್ಯದ ನಂತರ ಕೊಡುವಂತಹ ಸಂದರ್ಭದಲ್ಲಿ. Colon ಅನ್ನು ಉಪಯೋಗಿಸಿ ಪ್ರಾರಂಭಿಸಬೇಕು.
ಉದಾ:There is one challenge above all others: the alleviation of poverty.
ಯಾವುದಾದರೂ ಉಲ್ಲೇಖ (question) ವನ್ನು ಪರಿಚಯಿಸುವಂತಹ ಸಂದರ್ಭದಲ್ಲಿಯೂ colon ಬಳಸುತ್ತೇವೆ.
ಉದಾ: Swami Vivekananda says: “Arise, awake, stop not till you  reach the goal.”
Inverted Commas (“ ”) (‘ ’)
ಇವುಗಳನ್ನು quotation marks ಅಥವಾ  quotes  ಎಂದೂ ಕರೆಯುತ್ತೇವೆ. ಇನ್ನೊಬ್ಬರ ಮಾತುಗಳನ್ನು ಉಲ್ಲೇಖಿಸಬೇಕಾದರೆ double inverted commas ಬಳಸುತ್ತೇವೆ.
ಉದಾ: Hamlet’s famous speech begins with “to be or not to be, that is the question”
ಆದರೆ ಒಂದು quotation ಒಳಗಡೆ ಮತ್ತೊಂದು quotation ಇದ್ದಾಗ single inverted commas ಬಳಸಬೇಕು. ಉದಾ: My teacher told me, “your use of the phrase’old is gold’ is a cliché”h
ವಿಶೇಷ ಗುಣವಿರುವ ಪದವನ್ನು ಸೂಚಿಸಲು ಕೂಡ single inverted commas ಬಳಸುತ್ತೇವೆ.
ಉದಾ: Under the circumstances, her courage was ‘stupendous’.

ಕಾರುಗಳ ಡಿಕ್ಕಿ: ಮೂವರ ಸಾವು :

 

ಮಂಡ್ಯ: ಬೆಂಗಳೂರು–ಮೈಸೂರು ರಸ್ತೆ­ಯಲ್ಲಿ ಎರಡು ಕಾರುಗಳು ಮುಖಾ­ಮುಖಿ ಡಿಕ್ಕಿ ಹೊಡೆದು ಮೂವರು ಮೃತಪಟ್ಟ ಘಟನೆ ಗುರುವಾರ ಬೆಳಿಗ್ಗೆ ತಾಲ್ಲೂಕಿನ ಹಳೆ ಬೂದನೂರು ಕ್ರಾಸ್‌ ಬಳಿ ನಡೆದಿದೆ. ಮೈಸೂರಿನ ನೇತಾಜಿನಗರದ ನಿವಾಸಿ­ಗಳಾದ ಪದ್ಮನಾಭಶೆಟ್ಟಿ ಎಂಬುವರ ಪತ್ನಿ ಸುಮಿತ್ರಾ (50) ಅವರ ಸಹೋದರ ರಘುನಂದನ್‌ (55) ಕಾರು ಚಾಲಕ ಪ್ರಕಾಶ್‌ (23) ಮೃತಪಟ್ಟಿದ್ದಾರೆ.
ರಘುನಂದನ್ ಅವರ ಪತ್ನಿ ಮೈಥಿಲಿ ತೀವ್ರವಾಗಿ ಗಾಯಗೊಂಡಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಕೊಲಂಬಿಯಾ ಏಷಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ. ರಘುನಂದನ್ ಅವರ ಸಹೋದರರ ಮನೆ ಗೃಹಪ್ರವೇಶಕ್ಕೆಂದು ನಾಲ್ವರು ಇಂಡಿಕಾ ಕಾರಿನಲ್ಲಿ ಮೈಸೂರಿನಿಂದ ಬೆಂಗಳೂರಿಗೆ ಹೋಗುತ್ತಿದ್ದಾಗ ಹಳೇ­ಬೂ­ದ­ನೂರು ಕ್ರಾಸ್ ಬಳಿ, ಬೆಂಗಳೂರು ಕಡೆಯಿಂದ ವೇಗವಾಗಿ ಬಂದ ಕಾರು ರಸ್ತೆ ವಿಭಜಕ ದಾಟಿ ಬಂದು ಇವರ ಕಾರಿಗೆ ಡಿಕ್ಕಿಯಾಗಿದೆ.
ಡಿಕ್ಕಿಯಾದ ರಭಸಕ್ಕೆ ಕಾರಿನ ಮೇಲೆ ಕಾರು ಕುಳಿತ ಕಾರಣ ಹೆಚ್ಚಿನ ಸಾವು ಸಂಭವಿಸಿದೆ. ಕಾರಿನ ಚಾಲಕ ಪರಾರಿಯಾಗಿದ್ದು, ಆತನಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ. ಕಾರಿನ ಚಕ್ರ ಸಿಡಿದು ಚಾಲಕನ ನಿಯಂತ್ರಣ ತಪ್ಪಿ ಅಪಘಾತ ಸಂಭವಿಸಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಮಂಡ್ಯ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜಿಲ್ಲಾ ಪೊಲೀಸ್‌ ವರಿಷ್ಠ ಭೂಷಣ ಬೊರಸೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.ಕೆಲಕಾಲ ಬೆಂಗಳೂರು–ಮೈಸೂರು ರಸ್ತೆಯಲ್ಲಿ ಸಂಚಾರ ವ್ಯತ್ಯಯವಾಗಿತ್ತು. ಕ್ರೇನ್‌ ಮೂಲಕ ಕಾರುಗಳನ್ನು ತೆರವುಗೊಳಿಸಿ ಸಂಚಾರ ಸುಗಮಗೊಳಿಸಲಾಯಿತು. ಜಿಲ್ಲಾ ಆಸ್ಪತ್ರೆಯ ಬಳಿ ಸೇರಿದ್ದ ಮೃತರ ಸಂಬಂಧಿಕರ ರೋದನ ಮುಗಿಲು­ಮುಟ್ಟಿತ್ತು.

spoken english




ಸಾರ್ವಜನಿಕ ಭಾಷಣ ಹೀಗಿರಲಿ:

Voice Culture tips
ಧ್ವನಿಯ ಏರಿಳಿತಗಳು (voice modulation), ಪರಿಣಾಮಕಾರಿ ಪಬ್ಲಿಕ್ ಸ್ಪೀಕಿಂಗ್‌ನ ಒಂದು ಮುಖ್ಯ ಭಾಗ. ನಾವು ಉಚ್ಚರಿಸುವ ವಾಕ್ಯಗಳು ನೀರಸವಾಗಿರದೆ, ನಮ್ಮ ಧ್ವನಿ ಉತ್ಸಾಹ (voice enthusiasm) ಕೇಳುಗರನ್ನು ತಲುಪಬೇಕು. ಉದಾಹರಣೆಗೆ, waterಎಂಬ ಒಂದೇ ಪದವನ್ನು ಒಂದು ಹೇಳಿಕೆಯಾಗಿಯೂ, ಪ್ರಶ್ನೆಯಾಗಿಯೂ, ಆಶ್ಚರ್ಯ ಸೂಚಕವಾಗಿಯೂ ಅಥವಾ ಆಜ್ಞೆಯಾಗಿಯೂ ನಮ್ಮ ಧ್ವನಿಯಿಂದಲೇ ಸೂಚಿಸಬಹುದು.
ಈ ಕಲೆಯನ್ನು tonal shiftನಿಂದ ಕಲಿಯಬಹುದು, ವಾಕ್ಯವೊಂದರ ಒಂದೊಂದೇ ಪದವನ್ನು ಒತ್ತಿ ಹೇಳಿ (emphasize) ಅದರಲ್ಲಿರುವ ಅರ್ಥವ್ಯತ್ಯಾಸಗಳನ್ನು ಹೊಮ್ಮಿಸುವ ಕಲೆಯನ್ನು ನಾವು ಕ್ರಮೇಣ ಸಿದ್ಧಿಸಿಕೊಳ್ಳಬೇಕು.
ಈ ಕೆಳಗಿನ ವಾಕ್ಯ ಸಮೂಹವನ್ನು ಗಮನಿಸಿ:
1. I love ice-creams in summer.
2. I love ice-creams in summer.
3. I love ice-creams in summer.
4. I love ice-creams in summer.
ಬೋಲ್ಡ್ ಮಾಡಿದ ಪದಗಳನ್ನು ಒತ್ತಿ ಹೇಳಿದಾಗ toneನ ವ್ಯತ್ಯಾಸದಿಂದ ಅರ್ಥವ್ಯತ್ಯಾಸವೂ ಆಗುತ್ತಿರುತ್ತದೆ ಎಂಬುದನ್ನು ಗಮನಿಸಿ. ಇದನ್ನೇ tonal shift ಎನ್ನುತ್ತೇವೆ. ಇದು voice modulationನ ಒಂದು ಆಭ್ಯಾಸಕ್ರಮ. ಇದಕ್ಕೆ ಸಂಬಂಧಿಸಿದ ಇನ್ನೊಂದು ವಿಷಯವೆಂದರೆ While speaking, we should pause in between sense groups and not between words.
ಉದಾಹರಣೆಗೆ, The city of Varanasi is on the banks of river Ganges ಎಂಬ ವಾಕ್ಯವನ್ನು ಗಮನಿಸಿ.
ಪರಿಣತಿ ಇಲ್ಲದವರು ಇದನ್ನು ಉಚ್ಚರಿಸುವಾಗ, ಅನೇಕ ಬಾರಿ ಬಿಡಿ ಪದಗಳ ನಡುವೆ pause ಮಾಡುತ್ತಾರೆ. ಹಾಗೆ ಮಾಡದೆ, ಈ ವಾಕ್ಯದಲ್ಲಿರುವ ಮೂರು sence groupಗಳ ನಡುವೆ ಮಾತ್ರ pause ಮಾಡಬೇಕು. ಆ sense groupಗಳೆಂದರೆ  – The city of Varanasi, is on the banks of, river Ganges. ಹೀಗೆ ಮಾಡಿದಾಗ, ನಮ್ಮ ವಾಕ್ಯಕ್ಕೆ ಧ್ವನಿ ಮತ್ತು ಅರ್ಥಸಂಗಮದ ಚೆಲುವು ಒದಗಿಬರುತ್ತದೆ.
ನಮ್ಮ ಧ್ವನಿಯ ಕಸುವನ್ನು ಪೋಷಿಸಲು ಸಣ್ಣ ಪ್ರಮಾಣದ voice culture exercise ತುಂಬಾ ಉಪಯೋಗಕಾರಿ. ಇದರ ಒಂದು ವಿಧಾನ ಇಲ್ಲಿದೆ. ಮೊದಲು ಸಾವಧಾನವಾಗಿ inhale ಮಾಡಿ ಅನಂತರ ನಿಧಾನವಾಗಿ, ದೃಢದನಿಯಲ್ಲಿ ‘ಆ......’ ಎಂದು ಒಂದೇ ಸಮನೆ ಉಚ್ಚರಿಸಿ. ಇದು ಸಂಗೀತಗಾರನೊಬ್ಬ ಷಡ್ಜದ (ಸಪ್ತಸ್ವರದ ಮೊದನೆಯ ಸ್ವರ-ಸ) ಶೃತಿಹಿಡಿದು ಸ್ವರಸಾಧನೆ ಮಾಡಿದ ಹಾಗಿರುತ್ತದೆ.
ಈ ತರಹದ open vowel exhalationನಿಂದ ನಮ್ಮ ಧ್ವನಿತಂತು (breath thread) ದೀರ್ಘವಾಗುತ್ತಾ ಹೋಗುತ್ತದೆ. ಸಾಮಾನ್ಯವಾಗಿ, ಆ..... ಎಂದು open vowel exhalation ಮಾಡಿದಾಗ, ಸುಮಾರು 10-12 ಸೆಕೆಂಡುಗಳ ಹೊತ್ತಿಗೆ ನಮ್ಮ ದನಿ ಕ್ಷೀಣವಾಗುತ್ತಾ, ನಡುಗುತ್ತಾ, ಸತ್ವಕಳೆದು ಇಂಗಿಹೋಗಿರುತ್ತದೆ. ಆದರೆ, ನುರಿತ ಸಂಗೀತಗಾರರ ಧ್ವನಿ ಸುಮಾರು 30 ಸೆಕೆಂಡುಗಳಷ್ಟು ದೀರ್ಘವಾದ ದನಿತಂತನ್ನು ಹೊರಡಿಸಬಲ್ಲದು.
ಪಬ್ಲಿಕ್ ಸ್ಪೀಕಿಂಗ್‌ಗೆ ನಮಗೆ ಸುಮಾರು 20 ಸೆಕೆಂಡುಗಳಷ್ಟು ದೀರ್ಘವಾದ ನಿಶ್ವಾಸ ಸಾಕು. Open vowel exdhalationನ ಮುಖಾಂತರ ಖಂಡಿತವಾಗಿ ಇದನ್ನು ಬೆಳೆಸಿಕೊಳ್ಳಬಹುದು. ಕೊನೆಯದಾಗಿ, ಪಬ್ಲಿಕ್ ಸ್ಪೀಕಿಂಗ್‌ನಲ್ಲಿ nervous body gesturesನ ಬಗ್ಗೆ ಕೆಲವು ಮಾತುಗಳು. ವೇದಿಕೆಯ ಮೇಲೆ ಕಂಬದಂತೆ ಸೆಟೆತು ನಿಲ್ಲದೆ ತುಸು flexible ಆಗಿರಬೇಕು. ನಮ್ಮ ಹಸ್ತ ಹಾಗೂ ಕೈಬೆರಳುಗಳು ನಮ್ಮ ಅಗತ್ಯಕ್ಕೆ ದಕ್ಕುವಂತಿರಬೇಕು.
ನೀವು ನಿಮ್ಮ ಪ್ಯಾಂಟಿನ ಜೇಬುಗಳಲ್ಲಿ ಕೈಯಿಟ್ಟುಕೊಂಡರೆ ಇದು ಸಾಧ್ಯವಾಗುವುದಿಲ್ಲ, ಹಾಗೂ ವೇದಿಕೆಯ ಮೇಲಿನ ನಮ್ಮ ಚಲನೆ ಮಿತಿಮೀರದಂತಿರಬೇಕು. ಇನ್ನೊಂದು ವಿಷಯವೆಂದರೆ, ನಮ್ಮ nervous body gestures ಯಾವುದೆಂಬುದರ ಅರಿವು ನಮಗಿರಬೇಕು. ಇದು ಒಬ್ಬೊಬ್ಬರಿಗೆ ಒಂದೊಂದು ರೀತಿಯದ್ದಾಗಿರುತ್ತದೆ.
ಉದಾಹರಣೆಗೆ, ತಲೆಗೂದಲನ್ನು ಸವರಿಕೊಳ್ಳುವುದು, ನಮ್ಮ ಶರ್ಟ್ ಬಟನ್‌ ಅನ್ನು ಒಂದೇ ಸಮನೆ ಹಿಂಸಿಸುವುದು. ಕೆಲವು ಸಾರಿ ok, you know, alright ಎಂಬ non-wordsಅನ್ನು nervousnessನಿಂದ ಪದೇ ಪದೇ ಹೇಳುವುದು, ಕೈಕಟ್ಟಿ ನಿಂತುಕೊಳ್ಳುವುದು.
ಇವೆಲ್ಲವುಗಳ ಗೋಜಲಿನಿಂದ ಹೊರಬರಬೇಕು. ಎಲ್ಲಕ್ಕೂ ಮಿಗಿಲಾಗಿ. ಪಬ್ಲಿಕ್ ಸ್ಪೀಕಿಂಗ್‌ನಲ್ಲಿ ಯಾರನ್ನೋ ಮಾಡೆಲ್ ಆಗಿ ಮನಸ್ಸಿನಲ್ಲಿ ಪ್ರತಿಷ್ಠಾಪಿಸಿಕೊಂಡು, ಅವರಂತೆ ಮಾತನಾಡಲು ಪ್ರಯತ್ನಿಸುವುದು ಕೋಡಂಗಿತನಕ್ಕೆ ನಾವೇ ಕೊಡುವ ಆಹ್ವಾನ. ನಮ್ಮಂತೆ ನಾವಿದ್ದು, ಹೇಳಬಯಸಿದ್ದನ್ನು ಹೇಳಬೇಕು.

ದೂರವಾಣಿ ಶಿಷ್ಟಾಚಾರ ವಿಚಾರ: 

ಟೆಲಿಫೋನ್ ಸಂಭಾಷಣೆಯು, ನಾವು ಇಂಗ್ಲಿಷ್ ಬಳಸುವ ಸಹಜ ಸಂದರ್ಭಗಳಲ್ಲಿ ಅತಿ ಮುಖ್ಯವಾದ ಭಾಗ, ಈ ಕೆಳಗೆ, ಸುಲಭವಾಗಿ ಕಲಿಯಬಹುದಾದಂತಹ ಟೆಲಿಫೋನ್ ಎಟಿಕೆಟ್‌ನ ಸಂಕ್ಷಿಪ್ತ ಪರಿಚಯವಿದೆ.
ಟೆಲಿಫೋನ್ ಸಂಭಾಷಣೆಗೆ ಸಂಬಂಧಿಸಿದ ಕೆಲವು ಪದಗಳನ್ನು ನಾವು ತಿಳಿದಿರಬೇಕು- ಅವೆಂದರೆ:
Answering machine–ನಾವು ಫೋನ್ ಮಾಡಿದಂತಹ ವ್ಯಕ್ತಿ ಫೋನ್‌ನ ಬಳಿ ಇಲ್ಲದಿದ್ದಾಗ, ನಮ್ಮ message ಅನ್ನು ರೆಕಾರ್ಡ್ ಮಾಡಿಕೊಳ್ಳುವಂತಹ ಒಂದು ಮಶೀನ್.
Call–ಫೋನ್ ಮಾಡುವುದು
Caller -  ಫೋನ್ ಮಾಡುವವರು.
Call back -ನಮಗೆ ಮುಂಚೆಯೇ ಫೋನ್ ಮಾಡಿದವರಿಗೆ ಮತ್ತೆ ಫೋನ್ ಮಾಡುವುದು.
Call display - ಫೋನ್ ಮಾಡಿರುವವರ ನಂಬರ್ ಅಥವಾ ಹೆಸರನ್ನು ತೋರಿಸುವ ಸ್ಕ್ರೀನ್.
Hang up -ಫೋನ್‌ನಲ್ಲಿ ಮಾತನಾಡುವುದನ್ನು ನಿಲ್ಲಿಸುವುದು.
Pick up - ಫೋನ್ ರಿಂಗ್ ಆದಾಗ, ಅದಕ್ಕೆ ಉತ್ತರಿಸುವುದು.
ಟೆಲಿಫೋನ್‌ನಲ್ಲಿ ಮಾತನಾಡುವಾಗ, ನಾವು ಮಾತನಾಡುವ ರೀತಿಯ ಬಗ್ಗೆ ಹೆಚ್ಚು ಗಮನ ಹರಿಸಬೇಕು. ನಮ್ಮ ಭಾವನೆಗಳು ಫೋನ್‌ನಲ್ಲಿ ಕಾಣದಿರುವುದರಿಂದ ನಾವಾಡುವ ಮಾತುಗಳ ಬಗ್ಗೆ ಎಚ್ಚರವಹಿಸಬೇಕು. ಈ ನಿಟ್ಟಿನಲ್ಲಿ, ನಾವು ಅನುಸರಿಸಬೇಕಾದ ಕೆಲವು ಮುಖ್ಯವಾದ ಸೂತ್ರಗಳನ್ನು ಇಲ್ಲಿ ಗಮನಿಸಿ:
*ನಾವು ಮಾತನಾಡುವಾಗ, ನಮ್ಮ ಮುಖ ಅಥವಾ body language ಕಾಣದಿರುವುದರಿಂದ, ನಾವು ನಿಧಾನವಾಗಿ, ಸ್ಪಷ್ಟವಾಗಿ ಹಾಗೂ ಉತ್ಸಾಹದಿಂದ ಮಾತನಾಡಬೇಕು.
*ಎತ್ತರದ ದನಿಯಿಂದಲಾಗಲೀ ಅಥವಾ ತುಂಬಾ ಮೆಲುದನಿಯಿಂದಲಾಗಲೀ ಮಾತನಾಡಬಾರದು. ನಮ್ಮ ದನಿಯಲ್ಲಿ normal tone ಇರಬೇಕು.
*ಟೆಲಿಫೋನ್‌ನಲ್ಲಿ ಮಾತನಾಡುವಾಗ ಏನನ್ನಾದರೂ ತಿನ್ನುವುದು, ಕುಡಿಯುವುದು ಮಾಡಬಾರದು.
*ಹೌದು ಅಥವಾ ಇಲ್ಲ ಎಂದು ಉತ್ತರಿಸುವ ಸಂದರ್ಭದಲ್ಲಿ Ya ಎನ್ನುವುದಾಗಲೀ ಅಥವಾ ಬೇರೆ slangs ಉಪಯೋಗಿಸುವುದಾಗಲೀ ಮಾಡದೆ, ಶುದ್ಧವಾದ yes ಅಥವಾ no ಎಂದೇ ಉತ್ತರಿಸಬೇಕು.
*Caller ಅನ್ನು ಸರಿಯಾದ ರೀತಿಯಲ್ಲಿ address ಮಾಡಬೇಕು. ಉದಾ: Good morning Mr. Akshay, Good afternoon Ms. Ashwini...
*ಟೆಲಿಫೋನ್‌ನಲ್ಲಿ ಮಾತನಾಡುವಾಗ ವಿಷಯವನ್ನು ಸರಿಯಾಗಿ ಕೇಳಿಸಿಕೊಳ್ಳುವ ವ್ಯವಧಾನವಿರಬೇಕು. ನಾವು ಇನ್ನೊಬ್ಬರಿಂದ message ತೆಗೆದುಕೊಳ್ಳುವಾಗ, ಆ message ಅನ್ನು ರಿಪೀಟ್ ಮಾಡಿ ಅವರಿಗೆ ಹೇಳಬೇಕು. ಹಾಗೆ ಮಾಡಿದಾಗ, message ಕೊಟ್ಟವರಿಗೆ ನಾವು ಸರಿಯಾಗಿ ಅವರ message ಅನ್ನು ತೆಗೆದುಕೊಂಡಿದ್ದೇವೆ ಎಂಬ ಭರವಸೆಯುಂಟಾಗುತ್ತದೆ.
*Caller ಹೇಳುತ್ತಿರುವುದು ನಮಗೆ ಸರಿಯಾಗಿ ಕೇಳಿಸದಿದ್ದಾಗ, pardon me ಅಥವಾ could you come again please? ಎಂದು ಹೇಳಬೇಕು.
*Callerನ ದನಿ ಯಾವುದೇ ರೀತಿ ಇದ್ದರೂ ನಮ್ಮ ದನಿಯಲ್ಲಿನ ಶಾಂತತೆಯನ್ನು ನಾವು ಕಳೆದುಕೊಳ್ಳದೆ ಉತ್ತರಿಸಬೇಕು.
*ಇವು ನಾವು call receive ಮಾಡಿದಾಗ ಅನುಸರಿಸಬೇಕಾದ ಕೆಲವು ಸೂತ್ರಗಳಾದರೆ, ನಾವು call ಮಾಡುವಾಗ ಅನುಸರಿಸಬೇಕಾದ ಕೆಲವು ಕ್ರಮಗಳೆಂದರೆ-
*ನಾವು  call ಮಾಡಿದ ತಕ್ಷಣ ನಮ್ಮ ಪರಿಚಯವನ್ನು ಮಾಡಿಕೊಂಡ ನಂತರವೇ ವಿಷಯವನ್ನು ತಿಳಿಸಬೇಕಾಗುತ್ತದೆ.
ಉದಾ: Hello, good morning Mr. Suraj. This is Mr. Akshay from Infosys speaking.....
*ನಾವು ಇನ್ನೊಬ್ಬರಿಗೆ call  ಮಾಡಿದಾಗ, ಥಟ್ಟನೆ ಮಾತಿಗಿಳಿಯುವ ಮುಂಚೆ ಹೀಗೆ ಹೇಳಬಹುದು  Can I have a word with you? ಅಥವಾ Is it a good time to talk to you for a few minutes? ಎಂದು ಕೇಳಿ ಮುಂದುವರೆಯಬೇಕು.
ನಾವು ಏನನ್ನು ಹೇಳಬಯಸುತ್ತೇವೆಯೋ ಅದನ್ನು ಸಂಕ್ಷಿಪ್ತವಾಗಿ ಹೇಳಿ ಮುಗಿಸಬೇಕೇ ಹೊರತು ಸುತ್ತಿ ಬಳಸಿ ಮಾತನಾಡಬಾರದು. ನಾವು  ಮಾತನಾಡುವಾಗ, ದನಿಯಲ್ಲಿ ಶಾಂತಿ, ಉತ್ಸಾಹ ಹಾಗೂ ಮಾತುಗಳಲ್ಲಿ ಸಭ್ಯತೆಯಿರಬೇಕು.
Key phrases for Telephone Conversation: ಸರಾಗವಾಗಿ ಟೆಲಿಫೋನ್ ಸಂಭಾಷಣೆಯನ್ನು ನಡೆಸಲು ಈ ಕೆಳಗಿನ ವಾಕ್ಯಗಳು ಬಹು ಉಪಯೋಗಕಾರಿ. ಟೆಲಿಫೋನ್‌ನಲ್ಲಿ ಮಾತನಾಡುವಾಗ, ವಿವಿಧ ಸಂದರ್ಭಗಳಲ್ಲಿ ಉಪಯೋಗಿಸುವಂತಹ ವಿವಿಧ ಪದಗಳು ಹಾಗೂ ಪದಪುಂಜಗಳನ್ನು ನಾವು ತಿಳಿದಿರಬೇಕು. ಟೆಲಿಫೋನ್ ಇಂಗ್ಲಿಷ್‌ನಲ್ಲಿ ಉಪಯೋಗಿಸಬಹುದಾದಂತಹ ಕೆಲವು phraseಗಳನ್ನು ಇಲ್ಲಿ ಗಮನಿಸಿ:
ನಾವೇ ಕರೆಯನ್ನು ಮಾಡಿದಾಗ ನಮ್ಮನ್ನು ನಾವು ಪರಿಚಯಿಸಿಕೊಳ್ಳಲು ಉಪಯೋಗಿಸಬಹುದಾದ ಕೆಲವು phraseಗಳು ಹೀಗಿವೆ-
*Hello, it is Akshay calling
*Hello, this is Akshay here
*Hello, it’s Akshay from Bangalore
ನಾವು ಫೋನ್ ಮಾಡಿದ ಮೇಲೆ ಯಾರ ಜೊತೆಯಲ್ಲಾದರೂ ಮಾತನಾಡಬೇಕಾದಾಗ ಹೀಗೆ ಕೇಳಬಹುದು.
ಅನೌಪಚಾರಿಕವಾಗಿ (informal) ಕೇಳಬೇಕಾದರೆ
Is Tarun in? ಅಥವಾ
Is Tarun there, please?  ಎಂದು ಕೇಳಬಹುದು.
Formal ಆಗಿ ಕೇಳಬೇಕಾದ ಸಂದರ್ಭದಲ್ಲಿ ಬಳಸ ಬಹುದಾದ phraseಗಳೆಂದರೆ.
*May I speak to Tarun?
*Could I have a word with Tarun?
*Can I speak to Tarun?
ನಾವು ಕರೆಯೊಂದನ್ನು ಸ್ವೀಕರಿಸುವಾಗ ಹೀಗೆ ಹೇಳಬಹುದು-
*Hello, this is Akshay speaking, who is speaking?
*May I know who is on line?
*May I know who I am speaking to?
*Who is speaking please?
ನಾವು ಕರೆಯನ್ನು ಸ್ವೀಕರಿಸಿ callerಅನ್ನು ಇನ್ನೊಬ್ಬರಿಗೆ connect ಮಾಡುವಾಗ ಉಪಯೋಗಿಸುವ ವಾಕ್ಯಗಳೆಂದರೆ,
lJust a second, I will get him
*Hang on one second
ಎಂದುInformal  ಆಗಿಯೂ ಹಾಗೂ
*Please hold on, I will put him on to you
*Just a moment please
*Please be on line, I will connect you to her ಎಂದು formalಆಗಿಯೂ ಹೇಳಬಹುದು.
Caller ನಿಂದ ನಾವು message ತೆಗೆದುಕೊಳ್ಳಬೇಕಾದಾಗ ಉಪಯೋಗಿಸ ಬಹುದಾದ ಕೆಲವು ವಾಕ್ಯಗಳನ್ನು ಗಮನಿಸಿ:
*Would you like him to call you back?
*Can I take a message?
*Would you like to leave a message?
Phone ರಿಂಗ್ ಆದಾಗ ಅದು wrong number  ಆಗಿದ್ದರೆ,  ಹೀಗೆ ಹೇಳಬಹುದು-
*Sorry, it’s a wrong number
* am afraid you got the wrong number
*Wrong number please
ಕರೆಯ ಕೊನೆಯಲ್ಲಿ ಬಳಸಬಹುದಾದ ವಾಕ್ಯಗಳೆಂದರೆ-
*Nice talking to you
*Talk to you later
*t was a pleasure talking to you
* have to sign off now, take care
*Thanks for calling, bye for now
ಮೇಲಿನ ಈ ವಾಕ್ಯಗಳು ಹೆಚ್ಚು ಕಷ್ಟವಿಲ್ಲದೆ, ನಮ್ಮ ಸ್ಮಾರ್ಟ್ ಇಂಗ್ಲಿಷ್ ಬತ್ತಳಿಕೆಯ ಭಾಗವಾಗುತ್ತಾ ಹೋಗುತ್ತವೆ. 

ಮಾತಿನ ಮರದ ರೆಂಬೆ ಕೊಂಬೆ:

ಪ್ರತಿಯೊಂದು ಪದವನ್ನೂ ವಾಕ್ಯವೊಂದರಲ್ಲಿ ಮಾಡುವ ಕೆಲಸ ಅಥವಾ ವರ್ತಿಸುವ ರೀತಿಗನುಗುಣವಾಗಿ ಹೆಸರಿಸಬಹುದು.
ಪ್ರಮುಖವಾಗಿ ಇಂಗ್ಲಿಷ್ ಪದಗಳನ್ನು 8 ಗುಂಪುಗಳನ್ನಾಗಿ ವಿಂಗಡಿಸಬಹುದು. ಇಂಗ್ಲಿಷ್‌ನ ಎಲ್ಲಾ ಒಂದು ಮಿಲಿಯನ್ ಶಬ್ದಗಳೂ ಈ 8 ಗುಂಪುಗಳಲ್ಲಿ ಯಾವುದಾದರೂ ಒಂದಕ್ಕೆ ಸೇರಿರುತ್ತವೆ. ಅವುಗಳನ್ನೇ parts of speech ಎಂದು ಕರೆಯುತ್ತೇವೆ. ಇವುಗಳನ್ನು ಅರ್ಥಮಾಡಿಕೊಂಡು ಸರಿಯಾದ ರೀತಿಯಲ್ಲಿ ಉಪಯೋಗಿಸದಿದ್ದರೆ, ಸರಿಯಾದ ವಾಕ್ಯರಚನೆಯು ಸಾಧ್ಯವಾಗುವುದಿಲ್ಲ. ಈ 8 ಗುಂಪುಗಳನ್ನು ಇಲ್ಲಿ ಗಮನಿಸಿ:
1. Naming words (noun) -ಹೆಸರನ್ನು ಸೂಚಿಸುವ ಪದಗಳು.
ಉದಾ: Pallavi is a doctor.
Bangalore is a cool place.
The books are on the table.
2. Name substitutes (pronoun) - ಹೆಸರುಗಳಿಗೆ ಬದಲಾಗಿ ಉಪಯೋಗಿಸುವ ಪದಗಳು.
ಉದಾ: She is a doctor.
It is a cool place.
They are on the table.
3. Action words (verb) -  ಕ್ರಿಯೆಯನ್ನು ಸೂಚಿಸುವ ಪದಗಳು. ಉದಾ: She sings melodiously.
The baby dances well.
4. Action describing words (adverb) - ಕ್ರಿಯೆಯ ಬಗ್ಗೆ ಹೆಚ್ಚಿನ ಮಾಹಿತಿ ಕೊಡುವ ಪದಗಳು.
ಉದಾ: He runs fast.
She comes quickly.
Name describing words (adjective) -ನಾಮಪದಗಳ ಬಗ್ಗೆ ಹೆಚ್ಚಿನ ಮಾಹಿತಿ ಕೊಡುವ ಪದಗಳು.
ಉದಾ:She is good. 2. The flower is beautiful.
Relating words (preposition) - ವಾಕ್ಯವೊಂದರಲ್ಲಿ ಮುಖ್ಯವಾಗಿ ನಾಮಪದಗಳ ಗುಂಪಿನ ನಡುವೆ ಇರುವ ಸಂಬಂಧವನ್ನು ಸೂಚಿಸುವ ಪದಗಳು.
ಉದಾ: The book is on the table.
The dog is near the chair.
5. Connecting words (conjuctions) -ಎರಡು ಪದಗಳನ್ನು ಅಥವಾ ವಾಕ್ಯಗಳನ್ನು ಕೂಡಿಸುವ ಪದಗಳು.
ಉದಾ: Rama and Laxmana are brothers.
She ran fast but missed the bus.
6. Feeling words (interjection) -  ನಮ್ಮಲ್ಲಿ ಹುಟ್ಟುವ ತೀವ್ರ ಭಾವನೆಗಳನ್ನು ಸೂಚಿಸುವ ಪದಗಳು.
ಉದಾ: Wow, what a beautiful garden!
What a wonderful cup of coffee!
ಇಲ್ಲಿ ನಾವು ಗಮನಿಸಬೇಕಾದ ಒಂದು ಮುಖ್ಯವಾದ ವಿಚಾರವೆಂದರೆ, ವಾಕ್ಯಗಳನ್ನು ರಚಿಸುವಾಗ ಒಂದು ಗುಂಪಿನ ಪದಗಳು ಇನ್ನೊಂದು ಗುಂಪಿನ ಪದಗಳಂತೆ ಕೆಲಸ ಮಾಡುವುದು ಸರ್ವೇಸಾಮಾನ್ಯ.
ಉದಾ:  ‘well’ ಎನ್ನುವ ಪದ ಬಾವಿ ಎಂಬ ಅರ್ಥವುಳ್ಳ noun ಆಗಿಯೂ ‘ಉತ್ತಮ’ ಎಂಬ ಅರ್ಥವುಳ್ಳ adjective ಆಗಿಯೂ ಸಂದರ್ಭಾ ನುಸಾರವಾಗಿ ವರ್ತಿಸುತ್ತದೆ. ಭಾಷೆಯ ಬಳಕೆಯಲ್ಲಿ ಇದರ ಪ್ರಾಮುಖ್ಯತೆಯನ್ನು ಮುಂದೆ ನೋಡೋಣ.
Form and Function in spoken English
ನಮ್ಮ ದಿನನಿತ್ಯದ ಸಂಭಾಷಣೆಯಲ್ಲಿ ಸಾಮಾನ್ಯವಾಗಿ ನಾವು ಉಪಯೋಗಿಸುವ ವಿವಿಧ ರೀತಿಯ ವಾಕ್ಯಗಳೆಂದರೆ, ಹೇಳಿಕೆಗಳು (statements), ಪ್ರಶ್ನೆಗಳು (questions), ಮನವಿಗಳು (requests), ಆದೇಶ/ ಆಜ್ಞಾಪನೆಗಳು (commands), ಉತ್ತಮ ಸಂಭಾಷಣೆಯಲ್ಲಿ, ಈ ವಾಕ್ಯಗಳ ಸ್ವರೂಪ ಮತ್ತು ಕ್ರಿಯೆ (form and function) ಎರಡೂ ಒಂದಕ್ಕೊಂದು ಸಂದರ್ಭಾನುಸಾರವಾಗಿ ಮಿಳಿತ ಗೊಂಡಿರುತ್ತವೆ.
ನಮ್ಮ ದಿನನಿತ್ಯದ ಸಂಭಾಷಣೆಯ ಬಹುಭಾಗ ಹೇಳಿಕೆಗಳಿಂದ ಕೂಡಿರುತ್ತದೆ ಎಂಬುದನ್ನು ನಾವು ಗಮನದಲ್ಲಿಡಬೇಕು. ಅವುಗಳ ರಚನೆಯ ಮೂಲರೂಪ Subject+verb  ಆಗಿರುತ್ತದೆ. ಅವುಗಳ ಜೊತೆಗೆ ಕೆಲವು ಐಚ್ಚಿಕ ಅಂಶಗಳೂ (optional elements) ಇರುತ್ತವೆ. ಅವು ಯಾವುವೆಂದರೆ object  ಅಥವಾ adjective ಅಥವಾ adverb ಆಗಿರಬಹುದು.
ಉದಾ: I (subject) am (verb) fine (adjective).
She (subject) has completed (verb) her work (object).
They (subject) are leaving (verb) today (adverb).
ಇನ್ನು ಪ್ರಶ್ನೆಗಳ ವಿಷಯಕ್ಕೆ ಬಂದರೆ, ನಮ್ಮ ಸಂಭಾಷಣೆಯಲ್ಲಿ ನಾವು ಕೇಳಬಹುದಾದ ಪ್ರಶ್ನೆಗಳು ಎರಡು ರೀತಿಯದ್ದಾಗಿ ರಬಹುದು. ನಾವು ಹೌದು ಅಥವಾ ಇಲ್ಲ ಎಂಬ ಉತ್ತರವನ್ನು ನಿರೀಕ್ಷಿಸುತ್ತಿದ್ದರೆ, yes/ no-questionಅನ್ನು ಕೇಳ ಬೇಕಾಗುತ್ತದೆ. ಹಾಗೆಯೇ, ವಿವರಣಾತ್ಮಕವಾದ ಉತ್ತರವನ್ನು ನಿರೀಕ್ಷಿಸುವಾಗ wh-question ಅನ್ನು ಕೇಳಬೇಕಾಗುತ್ತದೆ. ಯಾವುದೇ ಪ್ರಶ್ನೆಯ ರಚನೆಗೆ ಬೇಕಾಗುವಂತಹ ಮೂಲಾಂಶಗಳು ಹಾಗೂ ಅವುಗಳ ಕ್ರಮವನ್ನು ಗಮನಿಸೋಣ:  verb+subject.
Yes/no-question ಅನ್ನು ಬಳಸುವಾಗ, ನಾವು ನೆನಪಿಟ್ಟುಕೊಳ್ಳಬೇಕಾದ ಒಂದು ವಿಷಯವೆಂದರೆ, ಆ ಪ್ರಶ್ನೆಗಳು to-be verbs (am, is , are, was, were) ಅಥವಾ to-have verbs (has, have, had) ಅಥವಾ Modals (will, would, shall, should, can, could, may, might, must)ಗಳಿಂದ ಪ್ರಾರಂಭವಾಗುತ್ತವೆ.
ಉದಾ: Am I right?, Have you got it?
May I help you?
ಹಾಗೆಯೇ wh-questions ಬಳಸುವಾಗ, ಪ್ರಶ್ನೆಯು wh-words (what, why, which, when, whose, where, how)ಗಳಿಂದ ಪ್ರಾರಂಭ ವಾಗುತ್ತದೆ. (ಸೂಚನೆ: wh-word ನಿಂದ ಪ್ರಾರಂಭವಾಗುವ ಯಾವುದಾದರೂ ಮೂರು ಪ್ರಶ್ನೆಗಳನ್ನು ನಿಮ್ಮ ಮನಸ್ಸಿನಲ್ಲಿಯೇ ಕೇಳಿಕೊಂಡು, ನಂತರ ಮುಂದೆ ಓದಿ).
wh–ಪದದ ನಂತರ, ಮೇಲೆ ಸೂಚಿಸಿರುವ ಮೂಲಾಂಶಗಳ ಕ್ರಮವನ್ನು (verb+subject) ಅನುಸರಿಸಬೇಕು. ಉದಾ: What is the time?, How are you?, When is your vacation?
ಇಲ್ಲಿ ನಾವು ಗಮನಿಸಬೇಕಾದ ವಿಷಯವೆಂದರೆ, ಹೇಳಿಕೆಗಳ ಸ್ವರೂಪವನ್ನು ಪ್ರಶ್ನೆಗಳಿಗೆ ಹೋಲಿಸಿದಾಗ ssubject+verbನ ಸ್ಥಾನಪಲ್ಲಟವಾಗಿರುವುದನ್ನು ಗಮನಿಸಿ:
1. This (subject) is (verb) good?
Is (verb) this (subject) good?
2. You (subject) have completed (verb) the work. 3. Have (verb) you (subject) completed the work?
ಇನ್ನು ಮನವಿಗಳನ್ನು ಮಾಡಿಕೊಳ್ಳುವಾಗ please/ could/can ಎನ್ನುವ ಪದದಿಂದ ವಾಕ್ಯವನ್ನು ಪ್ರಾರಂಭಿಸಬೇಕು. ಉದಾ: Could you please get the book?, Can you please help me cross the road?, Please do this work for me.
ಆದೇಶ/ ಆಜ್ಞಾಪನೆಗಳನ್ನು ಕೊಡುವಾಗ ಉಪಯೋಗಿಸುವ ವಾಕ್ಯಗಳ ಸ್ವರೂಪ ಹೀಗಿರುತ್ತದೆ:
verb+object
ಉದಾ: Close (verb) the door(object).
Complete(verb) your work(object).
ಇಂಗ್ಲಿಷ್‌ ವಾಕ್ಯಗಳ ಅಭ್ಯಾಸವನ್ನು ಯಾಂತ್ರಿಕವಾಗಿ ಮಾಡುವ ಬದಲು ಅವುಗಳ ಸ್ವರೂಪ ಮತ್ತು ಕ್ರಿಯೆಗೆ ಗಮನಕೊಟ್ಟು ಕಲಿತಾಗ ನಮ್ಮ ಭಾಷಾ ಕೌಶಲ ತನಗೆ ತಾನೇ ಅರಳುತ್ತದೆ.
(ಈ ಸರಣಿ ಇಲ್ಲಿಗೆ ಮುಕ್ತಾಯವಾಗುತ್ತದೆ. ತಮ್ಮ ಅನಿಸಿಕೆಗಳನ್ನು ಇ–ಮೇಲ್‌ ಮಾಡಿ, shikshana@prajavani.co.in, ಮಾಹಿತಿಗೆ: 98452 13417

ಇಂಗ್ಲಿಷ್‌ನಲ್ಲಿ ಕವರ್‌ ಲೆಟರ್‌ spoken english

ಇಂಗ್ಲಿಷ್‌ನಲ್ಲಿ ಕವರ್‌ ಲೆಟರ್‌

ಇಂದಿನ ಜಗತ್ತಿನಲ್ಲಿ ಇಂಗ್ಲಿಷ್ ಭಾಷೆ ಮಾತ್ರವಲ್ಲ, ಅದು ಶಕ್ತಿಯ ಒಂದು ಸಾಧನ. ಅನೇಕ ಸಂದರ್ಭಗಳಲ್ಲಿ ಇದು ವೃತ್ತಿಪರ ಯಶಸ್ಸಿನ ರಹದಾರಿಯೂ ಕೂಡ. ಉದ್ಯೋಗ ಪಡೆಯಲು, ಸಂದರ್ಶನದಲ್ಲಿ ಯಶಸ್ವಿಯಾಗಲು ಮತ್ತು ಇತರ ಅನೇಕ ವೃತ್ತಿಪರ ಸಂದರ್ಭಗಳಲ್ಲಿ (professional situations), ಸ್ಮಾರ್ಟ್ ಇಂಗ್ಲಿಷ್ ಬಹು ಉಪಯೋಗಕಾರಿ. ಈ ನಿಟ್ಟಿನಲ್ಲಿ, ಉದ್ಯೋಗಕ್ಕೆ ಅರ್ಜೆ ಸಲ್ಲಿಸುವಾಗ ಒಂದು ಒಳ್ಳೆಯ cover letter ಅನ್ನು ಹೇಗೆ ಬರೆಯಬಹುದು ಎಂಬುದನ್ನು ತಿಳಿದುಕೊಳ್ಳೋಣ.
Cover letter ಎಂದರೆ employerನ ಮನಮುಟ್ಟುವ ರೀತಿಯಲ್ಲಿ ನಮ್ಮ ಕಿರುಪರಿಚಯವನ್ನು ಮಾಡಿಕೊಡುವ ಒಂದು ಪತ್ರ, cover letter ಅನ್ನು covering letter ಅಥವಾ motivational letter  ಅಥವಾ letter of motivation ಎಂದೂ ಕರೆಯುತ್ತಾರೆ. ಈ ಪತ್ರವನ್ನು ಸಾಮಾನ್ಯವಾಗಿ ನಮ್ಮ Bio-data ಅಥವಾ resume ಅಥವಾ curriculum vitae ಜೊತೆಯಲ್ಲಿ ಕಳುಹಿಸುತ್ತೇವೆ.
Cover letter ಅನ್ನು ಬರೆಯಬೇಕಾದರೆ, ಅದರಲ್ಲಿ ನಾವು ಏನನ್ನು ಬರೆಯಬೇಕು ಹಾಗೂ ಹೇಗೆ ಬರೆಯಬೇಕು ಎಂಬ ಎರಡು ಅಂಶಗಳತ್ತ ನಮ್ಮ ಗಮನಹರಿಸೋಣ.
Cover letter ಸಾಮಾನ್ಯವಾಗಿ ಒಂದು ಪುಟವನ್ನು ಮೀರದಂತಿರಬೇಕು ಹಾಗೂ ಇದರಲ್ಲಿ ಇರಬೇಕಾದ ಅಂಶಗಳೆಂದರೆ:
1. Addresses
2. Date
3. Salutation
4. Body of the letter
5. Complimentary close

ಮೊದಲಿಗೆ ನಮ್ಮ ವಿಳಾಸ ಹಾಗೂ eemployerನ ವಿಳಾಸಗಳನ್ನು ಒಂದರ ಕೆಳಗೆ ಒಂದನ್ನು ಬರೆಯಬೇಕು.
ದಿನಾಂಕವನ್ನು ಸಾಮಾನ್ಯವಾಗಿ ಎರಡು ವಿಳಾಸಗಳ ನಡುವೆ ಬರೆಯಬೇಕು ಹಾಗೂ ಅದನ್ನು ಬರೆಯುವ ರೀತಯನ್ನು ಗಮನಿಸಿ - 20th December 2014.
SSalutationಅನ್ನು ಈ ರೀತಿಯಲ್ಲಿ ಬರೆಯಬೇಕು  – Dear Sir/Madam ನಂತರ, Body of the letter ಅನ್ನು ಮೂರು paragraphಗಳಾಗಿ ವಿಂಗಡಿಸಬಹುದು. ಮೊದಲನೆಯ paragraphನಲ್ಲಿ, ಅರ್ಜಿಯ ಉದ್ದೇಶ ಹಾಗೂ ಆ ಉದ್ಯೋಗದ ಬಗ್ಗೆ ಎಲ್ಲಿ ಮತ್ತು ಹೇಗೆ ಮಾಹಿತಿ ದೊರಕಿತು ಎಂಬುದನ್ನು ತಿಳಿಸಬೇಕು. ಎರಡನೆಯ paragraphನಲ್ಲಿ, ನಮ್ಮ ವಿದ್ಯಾರ್ಹತೆ ಮತ್ತು ಕಾರ್ಯಾನುಭವದ ಬಗ್ಗೆ ಸಂಕ್ಷಿಪ್ತವಾಗಿ ತಿಳಿಸಬೇಕು ಹಾಗೂ ನಮ್ಮ ಪ್ರಸ್ತುತ ಸಾಮರ್ಥ ಮತ್ತು ಅರ್ಹತೆಗಳ ಹಿನ್ನೆಲೆಯಲ್ಲಿ ನಾವು ಏಕೆ ಈ ಉದ್ಯೋಗಕ್ಕೆ ಸೂಕ್ತರು ಎಂಬುದನ್ನು ಚೊಕ್ಕವಾಗಿ ವಿವರಿಸಬೇಕು. ಕೊನೆಯ paragraph ನಲ್ಲಿ, ನಮಗೆ ಆ ಉದ್ಯೋಗದಲ್ಲಿರುವ ಆಸಕ್ತಿ ಹಾಗೂ eemployerನ ಸಕಾರಾತ್ಮಕ ಪ್ರತ್ಯುತ್ತರಕ್ಕಾಗಿ ನಮ್ಮ ನಿರೀಕ್ಷೆಯನ್ನು ಸೂಚಿಸಬೇಕು.
ಆ ನಂತರ, complimentary closeನಲ್ಲಿ, Respectfully yours ಅಥವಾ Yours faithfullyಎಂದು ಬಳಸಬಹುದು. ಇಲ್ಲಿ ನಾವು ಗಮನಿಸಬೇಕಾದ ವಿಷಯವೆಂದರೆ, Yoursಎಂಬ ಪದದಲ್ಲಿ  s ಅಕ್ಷರದ ಹಿಂದೆ (’) ಯನ್ನು ಹಾಕಬಾರದು. ಹಾಗಾಗಿ Your’s ಎನ್ನುವುದು ತಪ್ಪಾದ ಬಳಕೆ. ಕೊನೆಯಲ್ಲಿ, ನಮ್ಮ ಸಹಿಯನ್ನು ಹಾಕಿ ಪತ್ರವನ್ನು ಸಂಪೂರ್ಣಗೊಳಿಸಬೇಕು.
ನಾವು ಹಿಂದೆ ನೋಡಿದ cover letterನ ಪರಿಕಲ್ಪನೆಗಳನ್ನು ಮೈಗೂಡಿಸಿಕೊಂಡಿರುವ ಈ ಪಕ್ಕದ ಉದಾಹರಣೆಯನ್ನು ಗಮನಿಸಿ:
ಸಾಮಾನ್ಯವಾಗಿ, cover letterಅನ್ನು ಬರೆಯುವಾಗ ನಾವು ಎಚ್ಚರವಹಿಸದಿದ್ದರೆ ಈ ಮೂರು ತಪ್ಪುಗಳಾಗುತ್ತವೆ: ಮೊದಲನೆಯದು, complimentary close ನಲ್ಲಿ, Your’sಗೆ ಹಾಕುವುದು. ಎರಡನೆಯದು, ದಿನಾಂಕವನ್ನು full formನಲ್ಲಿ ಬರೆಯದೇ ಇರುವುದು. ಮೂರನೆಯದಾಗಿ, salutation ಮತ್ತು subjectಗಳ ಸ್ಥಾನಪಲ್ಲಟವಾಗುವುದು (ಅಂದರೆ, salutationನ ನಂತರವೇ subject ಬರಬೇಕು.) ಈ ತಪ್ಪುಗಳಾಗದಂತೆ ಎಚ್ಚರ ವಹಿಸಿದಲ್ಲಿ, ನಮ್ಮ cover letterನ ಗುಣಮಟ್ಟ ತನಗೆ ತಾನೇ ಹೆಚ್ಚುತ್ತದೆ.

ಆಯಸ್ಕಾಂತವಾದ ಮೊಳೆ

ಸಾಮಗ್ರಿ: ಒಂದು ದೊಡ್ಡ ಕಬ್ಬಿಣದ ಮೊಳೆ, ನಿರೋಧವುಳ್ಳ ತಾಮ್ರದ ತಂತಿ, ಬ್ಯಾಟರಿ, ಗುಂಡು ಸೂಜಿಗಳು, ಬ್ಲೇಡ್, ಟೇಪ್.
ವಿಧಾನ: 1) ಒಂದು ದೊಡ್ಡ ಕಬ್ಬಿಣದ ಮೊಳೆಯನ್ನು ತೆಗೆದುಕೊಳ್ಳಿ. 2) ಚಿತ್ರದಲ್ಲಿ ತೋರಿಸಿದಂತೆ ತೆಳ್ಳನೆಯ, ನಿರೋಧವುಳ್ಳ ತಾಮ್ರದ ತಂತಿಯನ್ನು ಮೊಳೆಗೆ ಸುತ್ತಿ ಹಾಗೂ ಅದರ ಮೇಲೆ ಟೇಪ್ ಸುತ್ತಿರಿ. 3) ಎರಡೂ ಪ್ರತ್ಯೇಕ ತಂತಿಯ ತುದಿಗಳನ್ನು ಬ್ಲೇಡ್‌ನಿಂದ ತಿಕ್ಕಿ ನಿರೋಧ ಲೇಪನವನ್ನು ತೆಗೆದು ಹಾಕಿ. 4) ತಂತಿಯ ಒಂದು ತುದಿಯನ್ನು ಬ್ಯಾಟರಿಯ ತಳಕ್ಕೆ ಟೇಪ್‌ನಿಂದ ಹಚ್ಚಿರಿ. 5) ಇನ್ನೊಂದು ತುದಿಯನ್ನು ಬ್ಯಾಟರಿಯ ಮೇಲ್ಭಾಗದ ಲೋಹಕ್ಕೆ ಹಿಡಿಯಿರಿ.
ಪ್ರಶ್ನೆ: ಈಗ ಕಬ್ಬಿಣದ ಮೊಳೆಯನ್ನು ಗುಂಡುಸೂಜಿ/ಚಿಕ್ಕ ಕಬ್ಬಿಣದ ಮೊಳೆಗಳ ಹತ್ತಿರ ಹಿಡಿಯಿರಿ. ಏನಾಗುತ್ತದೆ? ಯಾಕೆ?
ಉತ್ತರ:
 ದೊಡ್ಡ ಕಬ್ಬಿಣದ ಮೊಳೆ ಗುಂಡುಸೂಜಿಗಳನ್ನು/ಚಿಕ್ಕ ಕಬ್ಬಿಣದ ಮೊಳೆಗಳನ್ನು ಆಕರ್ಷಿಸುತ್ತದೆ. ಯಾಕೆಂದರೆ ಕಬ್ಬಿಣದ ಮೊಳೆಯು ವಿದ್ಯುತ್‌ಕಾಂತವಾಗಿ ಮಾರ್ಪಾಟಾಗುತ್ತದೆ. ವಿದ್ಯುತ್‌, ತಂತಿಯಲ್ಲಿ ಚಲಿಸಿ, ತಂತಿಯ ಸುತ್ತಲೂ ಕಾಂತೀಯ ಕ್ಷೇತ್ರ ನಿರ್ಮಾಣವಾಗುತ್ತದೆ.
2014 ಆಗು–ಹೋಗು

ಮಲಾಲಗೆ ‘ಲಿಬರ್ಟಿ ಮೆಡಲ್‌’ ದ್ರಾವಿಡ್‌ಗೆ ಲಾರೆಸ್‌ ಅಕಾಡೆಮಿ ಸದಸ್ಯತ್ವ

ಜು.1: ಜುಲೈ ಒಂದರಿಂದ ಜಾರಿಗೆ ಬರುವಂತೆ ಅಫ್ಘಾನಿಸ್ತಾನ ಪ್ರಜೆಗಳಿಗೆ ಭಾರತ ಸರ್ಕಾರ ವೀಸಾ ಸರಳೀಕರಣ ಯೋಜನೆಯನ್ನು ಘೋಷಣೆ ಮಾಡಿತು. ಇದರ ಅನ್ವಯ ವೈದ್ಯಕೀಯ, ಶಿಕ್ಷಣ ಮತ್ತು ಸಮಾಜ ಸೇವೆ ನೆಲೆಗಟ್ಟಿನ ಅಡಿಯಲ್ಲಿ ಆಫ್ಘನ್‌ ಪ್ರಜೆಗಳು ಈ ವೀಸಾ ಸೌಲಭ್ಯ ಪಡೆಯಬಹುದು.
*ಜು. 1: ಫಿಲಿಡೆಲ್ಪಿಯಾ ದೇಶ ನೀಡುವ ಅತ್ಯುನ್ನತ ನಾಗರಿಕ ಪ್ರಶಸ್ತಿ ‘ಲಿಬರ್ಟಿ ಮೆಡಲ್‌’ ಪಾಕಿಸ್ತಾನದ ಯುವ ಸಾಮಾಜಿಕ ಸೇವಾಕರ್ತೆ ಮಲಾಲ ಯೂಸೂಫ್‌ಝೈಗೆ ಸಂದಿದೆ.
ಈ ಪ್ರಶಸ್ತಿಯನ್ನು ಇಲ್ಲಿನ ಸರ್ಕಾರ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡುವವರಿಗೆ 1998ರಿಂದ ನೀಡುತ್ತ ಬಂದಿದೆ.

*ಜು. 2: ಬಾಲಿವುಡ್‌ ನಟ ಶಾರೂಕ್‌ ಖಾನ್‌ ಅವರಿಗೆ ಫ್ರಾನ್ಸ್‌ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿ ‘ನೈಟ್‌ ಆಫ್‌ ದಿ ಲಿಜಿಯನ್‌ ಆಫ್‌ ಆನರ್‌’ (Knight of the Legion of Honor) ಪ್ರಶಸ್ತಿ ನೀಡಿ ಗೌರವಿಸಲಾಯಿತು. ಈ ಪ್ರಶಸ್ತಿಯನ್ನು ವಿಶ್ವದಾದ್ಯಂತ ಸಾಂಸ್ಕೃತಿಕ ಕ್ಷೇತ್ರದಲ್ಲಿ ಅಸಮಾನ್ಯ ಸೇವೆ ಸಲ್ಲಿಸಿದವರಿಗೆ ನೀಡಲಾಗುವುದು.
*ಜು.2: ರಾಜಸ್ತಾನ ಸರ್ಕಾರ ಒಂಟೆಯನ್ನು ರಾಜ್ಯ ಪ್ರಾಣಿಯನ್ನಾಗಿ ಘೋಷಣೆ ಮಾಡಿತು. ಜೈಪುರದಲ್ಲಿ ನಡೆದ ವಿಶೇಷ ವಿಧಾನಸಭಾ ಅಧಿವೇಶನದಲ್ಲಿ ಈ ನಿರ್ಣಯ ಕೈಗೊಳ್ಳಲಾಯಿತು.
*ಜು.3: ಚೀನಾ ಮತ್ತು ಉತ್ತರ ಕೊರಿಯಾ ದೇಶಗಳ ದ್ವಿಪಕ್ಷೀಯ ಸಭೆ ಸಿಯೋಲ್‌ನಲ್ಲಿ ನಡೆಯಿತು. ಈ ಸಭೆಯಲ್ಲಿ ಉಭಯ ದೇಶಗಳು ಯುದ್ಧ ತಂತ್ರ ಕುರಿತಂತೆ ಚರ್ಚೆ ನಡೆಸಿದವು.
*ಜು.4: ಗೋವಾದ ರಾಜ್ಯಪಾಲ ಬಿ.ವಿ.ವಾಂಚೂ ಅವರು ರಾಜೀನಾಮೆ ನೀಡಿದರು. ಭೂ ಹಗರಣಕ್ಕೆ ಸಂಬಂಧಿಸಿದಂತೆ ಸಿಬಿಐ ಅಧಿಕಾರಿಗಳ ಎದುರು ವಿಚಾರಣೆಗೆ ಹಾಜರಾಗಬೇಕಿರುವ ಹಿನ್ನೆಲೆಯಲ್ಲಿ ಅವರು ರಾಜೀನಾಮೆ ನೀಡಿದರು.
*ಜು.6: ಸಚಿನ್‌ ತೆಂಡೂಲ್ಕರ್‌ ನೇತೃತ್ವದ ಎಂಸಿಸಿ ಇಲೆವನ್‌ ಕ್ರಿಕೆಟ್‌ ತಂಡವು, ವಿಶ್ವ ಇಲೆವನ್‌ ತಂಡವನ್ನು ಮಣಿಸುವ ಮೂಲಕ 200ನೇ ಗೆಲುವನ್ನು ದಾಖಲಿಸಿತು. ಈ ಪಂದ್ಯ ಕ್ರಿಕೆಟ್‌ ಕಾಶಿ ಇಂಗ್ಲೆಂಡ್‌ನ ಲಾರ್ಡ್ಸ್‌ ಮೈದಾನದಲ್ಲಿ ನಡೆಯಿತು.
*ಜು.6: ನೊವೊಕ್‌ ಜೊಕೊವಿಕ್‌ ಅವರು 2014ನೇ ಸಾಲಿನ ವಿಂಬಲ್ಡನ್‌ ಪುರುಷರ ಸಿಂಗಲ್‌ ಪ್ರಶಸ್ತಿಯನ್ನು ಗೆದ್ದರು. ಈ ಪ್ರಶಸ್ತಿಯನ್ನು ಅವರು ಎರಡನೇ ಸಲ ಪಡೆದರು. ಈ ಹಿಂದೆ 2011ರಲ್ಲಿ ವಿಂಬಲ್ಡನ್‌ ಪ್ರಶಸ್ತಿ ಗೆದ್ದಿದ್ದರು.
*ಜು.7: ಸುಪ್ರೀಂ ಕೋರ್ಟ್‌ ಷರಿಯತ್‌ ಕೋರ್ಟ್‌ಗಳು ಕಾನೂನು ಬಾಹಿರ ಎಂದು ಮಹತ್ವದ ತೀರ್ಪು ಪ್ರಕಟಿಸಿತು.
*ಜು.8: ಭಾರತೀಯ ಸಂವಿಧಾನ ತಜ್ಞ ಗ್ರೇನೆವಿಲ್‌ ಅಸ್ಟೀನ್‌ ಅವರು ವಾಷಿಂಗ್ಟನ್‌ನಲ್ಲಿ ನಿಧನರಾದರು. ಅವರು ಭಾರತೀಯ ಸಂವಿಧಾನ ಕುರಿತಂತೆ ಹಲವಾರು ಪುಸ್ತಕಗಳನ್ನು ಬರೆದಿದ್ದಾರೆ.
*ಜು.8: ಸುಪ್ರೀಂ ಕೋರ್ಟ್‌ನ ನ್ಯಾಯಾಧೀಶರಾಗಿ ನ್ಯಾ. ಅರುಣ್‌ ಮಿಶ್ರಾ, ನ್ಯಾ.ಆದರ್ಶ್‌ ಕುಮಾರ್‌ ಗೋಯಲ್‌ ಮತ್ತು ಎಫ್‌.ನಾರಿಮನ್‌ ಅವರು ಪ್ರಮಾಣವಚನ ಸ್ವೀಕರಿಸಿದರು.
*ಜು.9: ನೈಜೀರಿಯಾ ತಂಡವನ್ನು ಅಂತರರಾಷ್ಟ್ರೀಯ ಫುಟ್‌ಬಾಲ್‌ ಪಂದ್ಯಾವಳಿಗಳಿಂದ ನಿಷೇಧಿಸಲಾಯಿತು. ಪ್ರಸಕ್ತ ವಿಶ್ವಕಪ್‌ ಪಂದ್ಯಾವಳಿಯಲ್ಲಿ ಅನುಚಿತ ವರ್ತನೆ ತೋರಿದಕ್ಕೆ ಫಿಫಾ ಈ ನಿರ್ಣಯ ಕೈಗೊಂಡಿತು.
*ಜು.10: ಬಾಲಿವುಡ್‌ ಹಿರಿಯ ನಟಿ ಜೋಹ್ರಾ ಸೆಹಗಲ್‌   ತಮ್ಮ 102ನೇ ವಯಸ್ಸಿಗೆ ನಿಧನರಾದರು.
ಅವರನ್ನು ಬಾಲಿವುಡನ್‌ ‘ಗ್ರ್ಯಾಂಡ್‌ ಓಲ್ಡ್‌ ಲೇಡಿ’ ಎಂದು ಕರೆಯಲಾಗುತ್ತದೆ.

*ಜು.13: 2014ನೇ ಸಾಲಿನ ಫಿಫಾ ವಿಶ್ವಕಪ್‌ ಪ್ರಶಸ್ತಿಯನ್ನು ಜರ್ಮನಿ ಗೆದ್ದುಕೊಂಡಿತು. ಅರ್ಜೆಂಟಿನಾ ವಿರುದ್ಧ ನಡೆದ ರೋಚಕ ಪಂದ್ಯದಲ್ಲಿ 1–0ಯಿಂದ ಜರ್ಮನಿ ವಿಶ್ವಕಪ್‌ ಗೆದ್ದಿತು. ಜರ್ಮನಿ ಪರವಾಗಿ ಗೊಟ್ಜೆ ಒಂದು ಗೋಲು ಭಾರಿಸಿದರು.

*ಜು.13: ವಿಶ್ವ ಹಿಂದೂ ಪರಿಷತ್‌ನ ಹಿರಿಯ ನಾಯಕ ಗಿರಿರಾಜ್‌ ಕಿಶೋರ್‌ ಅವರು ನವದೆಹಲಿಯಲ್ಲಿ ನಿಧನರಾದರು. ಅವರಿಗೆ 94 ವರ್ಷ ವಯಸ್ಸಾಗಿತ್ತು.

*ಜು.16: ಇಂಡಿಯನ್‌ ಆಯಿಲ್‌ ಕಾರ್ಪೊರೇಶನ್‌ನ ಅಧ್ಯಕ್ಷರಾಗಿ ಬಿ. ಅಶೋಕ್‌ ಅವರನ್ನು ಕೇಂದ್ರ ಸರ್ಕಾರ ನೇಮಕಮಾಡಿತು.
*ಜು.16: ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ ರಾಹುಲ್‌ ದ್ರಾವಿಡ್‌ ಅವರು ವಿಶ್ವದ ಲಾರೆಸ್‌ ಅಕಾಡೆಮಿಯ ಸದಸ್ಯರಾಗಿ ನೇಮಕಗೊಂಡರು.
*ಜು.17: ಕೇರಳದಲ್ಲಿ  ಜುಲೈ 17 ರಿಂದ ಆಗಸ್ಟ್‌ 16ರವರೆಗೆ ರಾಮಾಯಣ ಪಾರಾಯಾಣ ಅಭಿಯಾನ ನಡೆಯಿತು. ಹಿಂದೂ ಭಕ್ತರು ದೇವಾಲಯ ಮತ್ತು ಮನೆಗಳಲ್ಲಿ ಒಂದು ತಿಂಗಳ ಕಾಲ ರಾಮಾಯಣ ಪಾರಾಯಣ ಮಾಡಿದರು.
*ಜು. 17: 7ನೇ ಬ್ರಿಕ್ಸ್‌ ಸಮ್ಮೇಳನ ರಷ್ಯಾದಲ್ಲಿ ನಡೆಯಲಿದೆ ಎಂದು ಬ್ರಿಕ್ಸ್‌ ಸಂಘಟನೆಯ ಕಾರ್ಯಾಲಯ ಪ್ರಕಟಿಸಿತು.
*ಜು.17: ಗುಜರಾತ್‌ನ ರಾಜ್ಯಪಾಲರಾಗಿ ಓಂ ಪ್ರಕಾಶ್‌ ಕೊಹ್ಲಿ ಪ್ರಮಾಣ ವಚನ ಸ್ವೀಕರಿಸಿದರು. ಕಮಲ್‌ ಬೆನ್ನಿವಾಲ್‌ ಅವರಿದ್ದ ಸ್ಥಾನಕ್ಕೆ ಕೊಹ್ಲಿ ಅವರನ್ನು ನೇಮಕ ಮಾಡಲಾಯಿತು. ಬೆನ್ನಿವಾಲ್‌ ಅವರನ್ನು ಮಿಜೊರಾಂ ಮತ್ತು ನಾಗಲ್ಯಾಂಡ್‌ ರಾಜ್ಯಪಾಲರನ್ನಾಗಿ ವರ್ಗಾವಣೆ ಮಾಡಲಾಗಿದೆ.
*ಜು.17: ಪ್ರಧಾನಿ ನರೇಂದ್ರ ಮೋದಿ ಅವರು 6ನೇ ಬ್ರಿಕ್ಸ್‌ ಸಮೇಳನದಲ್ಲಿ ಭಾಗವಹಿಸಲು ಬ್ರೆಜಿಲ್‌ ದೇಶಕ್ಕೆ ಪ್ರಯಾಣ ಬೆಳೆಸಿದರು. ಈ ಸಂದರ್ಭದಲ್ಲಿ ಬ್ರಿಕ್ಸ್‌ ದೇಶಗಳ ಜೊತೆ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಸಹಿ ಹಾಕಿದರು.
*ಜು.18: 7ನೇ ಇಬ್ಸಾ ಸಮ್ಮೇಳನ 2015ರಲ್ಲಿ ನವದೆಹಲಿಯಲ್ಲಿ ನಡೆಯಲಿದೆ. ಈ ಸಮಾವೇಶದಲ್ಲಿ ಇಂಡಿಯಾ, ಬ್ರೆಜಿಲ್‌, ದಕ್ಷಿಣ ಆಫ್ರಿಕಾ ದೇಶಗಳು ಬಾಗವಹಿಸಲಿವೆ.
*ಜು.18: ಮಲೇಶಿಯಾ ನಾಗರಿಕ ವಿಮಾನ ಉಕ್ರೇನ್‌ ವಾಯುನೆಲೆಯಲ್ಲಿ ಅಪಘಾತಕ್ಕೆ ಈಡಾಯಿತು. ಈ ದುರಂತದಲ್ಲಿ 300ಕ್ಕೂ ಹೆಚ್ಚು ಜನರು ಸಾವನ್ನಪ್ಪಿದರು.
*ಜು.19: ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್‌ ಅವರು 2013ನೇ ಸಾಲಿನ ಆರೋಗ್ಯ ಪಾಲಿಸಿಯನ್ನು ದೇಶಕ್ಕೆ ಪರಿಚಯಿಸಿದರು.
*ಜು.19: ರಾಷ್ಟ್ರಪತಿ ಪ್ರಣವ್‌ ಮುಖರ್ಜಿ ಅವರು ನಿತಾರಿ ಕೊಲೆ ಪ್ರಕರಣದ ಐವರು ಅಪರಾಧಿಗಳಿಗೆ ದಯಾಮರಣ ನೀಡಲು ನಿರಾಕರಿಸಿದರು. ಇವರಲ್ಲಿ ಪ್ರಮುಖ ಅಪರಾಧಿ ಸುರೇಂದರ್‌ ಕೋಲಿ ಅವರು ಸೇರಿದ್ದಾರೆ


ಮಾತಿನ ಹೊನಲು ಹರಿಯಲಿ..

Public speakingನಲ್ಲಿ ವಿಷಯ ಮಂಡನೆಗೆ ಸಂಬಂಧಿಸಿದಂತೆ ಕೆಲವು ಸೂಚನೆಗಳು ಇಲ್ಲಿವೆ: ಎಷ್ಟೋ ಬಾರಿ ಮಾತನಾಡುತ್ತಿದ್ದ ಹಾಗೆಯೇ ನಮಗೆ ಖಾಲಿತನದ ಅನುಭವವಾಗುತ್ತದೆ. ಅಂದರೆ, ಎಲ್ಲವನ್ನೂ ಹಠಾತ್ ಮರೆತು ಹೋಗುವುದು. ಈ ಸಮಸ್ಯೆಯನ್ನು ನಿವಾರಿಸಿಕೊಳ್ಳಲು ಒಂದು ಸುಲಭ ಉಪಾಯವಿದೆ.
ಮರವೊಂದನ್ನು ಮನಸ್ಸಿನಲ್ಲಿ ಚಿತ್ರಿಸಿಕೊಳ್ಳಿ. ಬೇರು, ಕಾಂಡ ಮತ್ತು ರೆಂಬೆಗಳನ್ನು ಕಲ್ಪಿಸಿಕೊಳ್ಳಿ. ನಿಮ್ಮ ಮಾತಿನ ಮರದ ಕಾಂಡವೇ  ನಿಮ್ಮ ವಿಷಯ. ಈ ವಿಷಯ ಕಾಂಡಕ್ಕೆ ನೀವು ಆರು ರೆಂಬೆಗಳನ್ನು ಕಲ್ಪಿಸಿಕೊಳ್ಳಬಹುದು. ಅವೇ ಇಂಗ್ಲಿಷ್‌ನಲ್ಲಿರುವ wh-question why, what, where, when, how and which. ಉದಾ: The greatness of Indian civilization ಎಂಬುದು ನಿಮ್ಮ ಭಾಷಣದ ವಿಷಯ ಎಂದಿಟ್ಟುಕೊಳ್ಳಿ.
ನಿಮ್ಮ ನೆನಪಿನಲ್ಲಿದ್ದುದ್ದೆಲ್ಲಾ ಸೋರಿ ಹೋಗುತ್ತಿರುವ ಅನುಭವ ನಿಮಗೆ ವೇದಿಕೆಯ ಮೇಲೆ ಆಗುತ್ತಿದ್ದಾಗ ನೀವು ಈ wh ರೆಂಬೆಗಳನ್ನು ಮನಸ್ಸಿನಲ್ಲಿ ಸ್ಪರ್ಶಿಸಿ. ಅನೇಕ ಬಾರಿ ಇದರಿಂದ ಒಳಗೆ ಅವಿತಿರುವ ವಿಷಯದ ಹೊಳವುಗಳು ತಂತಾನೆ ನಿಮಗೆ ಮತ್ತೆ ಒದಗಿ ಬರತೊಡಗುತ್ತವೆ. ಅಭ್ಯಾಸ ಬಲದಿಂದ ಕೆಲವೇ ಸೆಕೆಂಡುಗಳಲ್ಲಿ ಯಾವುದೇ ವಿಷಯವನ್ನು ಕುರಿತಾದರೂ ಈ ತಂತ್ರವನ್ನು ಉಪಯೋಗಿಸಬಹುದು, ಇದನ್ನು stem and branch method ಎಂದು ಕರೆಯಲಾಗುತ್ತದೆ.
ಎರಡನೆಯ ಉಪಾಯವೆಂದರೆ, ವಿಷಯ ಮಂಡನೆಯಲ್ಲಿ ಪರಿಕಲ್ಪನೆಗಳಿಗಿಂತ ಹೆಚ್ಚಾಗಿ ಪದಚಿತ್ರಗಳನ್ನು ಉಪಯೋಗಿಸುವುದು. ಉದಾ: I bought a new vehicle ಎಂಬ ವಾಕ್ಯಕ್ಕೆ ಬದಲಾಗಿ I bought a brand new apple red Benz ಎಂದಾಗ ಅದರ ಪರಿಣಾಮವೇ ಬೇರೆ ರೀತಿ ಇರುತ್ತದೆ. ಏಕೆಂದರೆ ಎಲ್ಲಾ ಕೇಳುಗರೂ ಐದು ತಂತಿಗಳಿರುವಂತಹ ಪಂಚವೀಣೆಯಂತೆ. Sight, sound, touch, smell and taste - ಇವೇ ಆ ಪಂಚವೀಣೆಯ ತಂತಿಗಳು. ಪರಿಣಿತ ಭಾಷಣಕಾರನೊಬ್ಬ ತನ್ನ ವಿಷಯ ಮಂಡನೆಯನ್ನು ಕೇಳುಗರ ಪಂಚೇಂದ್ರಿಯಗಳ ಅನುಭವಕ್ಕೆ ದಕ್ಕುವಂತೆ ಕಲಾತ್ಮಕವಾಗಿ ಸಂಭಾಷಿಸುತ್ತಿರುತ್ತಾನೆ. ಬೇಂದ್ರೆಯವರ ‘ಮೂಡಲ ಮನೆಯ ಮುತ್ತಿನ..’ ಎಂಬ ಪದ್ಯದ ಮಾಂತ್ರಿಕತೆ ಈ ಅಂಶದಲ್ಲೇ ಅಡಗಿದೆ.
ಮೂರನೆಯದಾಗಿ, ನಮ್ಮ ಭಾಷಣ ಬತ್ತಳಿಕೆಯಲ್ಲಿ ವಿವಿಧ ಆಯ್ಕೆಗಳಿರಬೇಕು. Quotations(ಉಲ್ಲೇಖಗಳು), anecdotes(ಸ್ವಾರಸ್ಯಕರ ಅನುಭವಗಳು), relevant statistics(ಸಂದರ್ಭೋಚಿತ ಅಂಕಿ ಅಂಶಗಳು), illustrations (ದೃಷ್ಟಾಂತಗಳು) ಇವುಗಳಲ್ಲಿ ಕೆಲವು.
ಕಡೆಯದಾಗಿ, public speaking ಅನ್ನು ಅತ್ಯಂತ ಪರಿಣಾಮಕಾರಿಯಾಗಿ ಮಾಡುವುದು ನಮ್ಮಲ್ಲಿ ಇರಬೇಕಾದ ತೀಕ್ಷ್ಣವಾದ ಸಮಯಪ್ರಜ್ಞೆ, ಕೇಳುಗರ ಸಮಯ ಮತ್ತು ಗಮನಮಿತಿಯ (attention span) ಬಗ್ಗೆ ಪಬ್ಲಿಕ್ ಸ್ಪೀಕರ್‌ಗೆ ಅಪಾರವಾದ ಗೌರವ ವಿರಬೇಕು. ವಂದನಾರ್ಪಣೆಯನ್ನು ಮಾಡಲು ಹೋಗಿ ಆತ್ಮ ಚರಿತ್ರೆಯ ಜಾಡು ಹಿಡಿದು, ಕೇಳುಗರ ನಿದ್ದೆಗೆ ಕಾರಣರಾದ ಎಷ್ಟೋ ಜನ ಆಗಿಹೋಗಿದ್ದಾರೆಂಬುದನ್ನು ನಾವು ಮರೆಯಬಾರದು.

Monday, 8 December 2014

spoken english, ಇಂಗ್ಲಿಷ್‌ನಲ್ಲಿ ಆರ್ಟಿಕಲ್ಸ್‌ಗಳ ಪಾತ್ರ, 2014 ಆಗು–ಹೋಗು: ಮೇ

2014 ಆಗು–ಹೋಗು: ಮೇ

ಮೇ.‌1: ಕೇಂದ್ರ ಸಚಿವ ಸಂಪುಟವು ಮಹತ್ವದ ಪೋಲವರಂ ನೀರಾವರಿ ಯೋಜನೆಗೆ ಒಪ್ಪಿಗೆ ನೀಡಿತು. 16 ಸಾವಿರ ಕೋಟಿ ರೂಪಾಯಿ ವೆಚ್ಚದ ಈ ಯೋಜನೆಯಿಂದ ಆಂಧ್ರಪ್ರದೇಶ, ತೆಲಂಗಾಣ, ಒಡಿಶಾ ರಾಜ್ಯದ ಬರಡು ಜಿಲ್ಲೆಗಳಿಗೆ ಅನುಕೂಲವಾಗಲಿದೆ.

*ಮೇ. 2: ಭಾರತೀಯ ಮೂಲದ ಮಣೀಶ್‌ ಶಾ ಅಮೆರಿಕದ ಇಲಿನೊಯಿಸ್‌ನ (Illinois) ಫೆಡರಲ್‌ ನ್ಯಾಯಾಧೀಶರಾಗಿ ಆಯ್ಕೆಯಾದರು. ಇವರ ಪರವಾಗಿ ಅಮೆರಿಕದ ಸೆನೆಟ್‌ನಲ್ಲಿ 95 ಮತಗಳು ಬಿದ್ದವು.
*ಮೇ. 4: ಭಾರತ ಸರ್ಕಾರದ ಬಯೋಟೆಕ್ನಾಲಜಿ ವಿಭಾಗದ ಕಾರ್ಯದರ್ಶಿ ಕೃಷ್ಣಸ್ವಾಮಿ ವಿಜಯರಾಘವನ್‌ ಅಮೆರಿಕ ವಿಜ್ಞಾನ ಆಕಾಡೆಮಿಯ ವಿದೇಶಾಂಗ ಸಹಾಯಕರಾಗಿ ನೇಮಕಗೊಂಡರು.
*ಮೇ. 3: ಭಾರತದ ಸಾನಿಯಾ ಮಿರ್ಜಾ ಮತ್ತು ಕಾರಾ ಬ್ಲಾಕ್‌ ಅವರು ಡಬ್ಲ್ಯೂಟಿಎ ಪೊರ್ಚ್‌ಗಲ್‌ ಓಪನ್‌ ಟೆನಿಸ್‌ ಟೂರ್ನಿ (2014)ಯ ಮಹಿಳೆಯರ ಡಬಲ್ಸ್ ಪಂದ್ಯದಲ್ಲಿ ಪ್ರಶಸ್ತಿ ಗೆದ್ದರು. ಇವರು ರಷ್ಯಾದ ಎವಾ ಹರ್ಡಿನೋವಾ ಹಾಗೂ ವಲೇರಿಯಾ ಅವರನ್ನು ಸೋಲಿಸಿದರು.
*ಮೇ. 3: ಅಮೆರಿಕಾದ ಹೆಸರಾಂತ ಅರ್ಥಶಾಸ್ತ್ರಜ್ಞ ಹಾಗೂ ನೊಬೆಲ್‌ ಪ್ರಶಸ್ತಿ ಪುರಸ್ಕೃತ ಗ್ರೇ ಬೇಕರ್‌ (93) ನಿಧನರಾದರು. ಇವರು ಮಾನವ ಸ್ವಭಾವ ಮತ್ತು ಅಪರಾಧವನ್ನು ಅರ್ಥಶಾಸ್ತ್ರದ ಹಿನ್ನೆಲೆಯಲ್ಲಿ ವಿಶ್ಲೇಷಣೆ ಮಾಡಿದ್ದರು.
*ಮೇ. 6: ಇಂಗ್ಲೆಂಡ್‌ನಲ್ಲಿ ನಡೆದ 2014ನೇ ಸಾಲಿನ ವಿಶ್ವ ಸ್ನೋಕರ್‌ ಚಾಂಪಿಯನ್‌ಶಿಪ್‌ನಲ್ಲಿ ಮಾರ್ಕ್‌ ಸೆಲ್ಬಿ ಟ್ರೋಫಿ ಗೆದ್ದರು. ಇವರು ಮೊದಲ ಬಾರಿ ಗೆದ್ದ ಟ್ರೋಫಿ ಇದು. 2007ರಲ್ಲಿ ಈ ಟ್ರೋಫಿ ಗೆಲ್ಲುವಲ್ಲಿ ಸೆಲ್ಬಿ ವಿಫಲರಾಗಿದ್ದರು.
*ಮೇ. 6: ಹತ್ತು ವರ್ಷಕ್ಕೆ ಮೇಲ್ಪಟ್ಟ ಅಪ್ರಾಪ್ತರು ಬ್ಯಾಂಕ್‌ಗಳಲ್ಲಿ ಖಾತೆ ತೆರೆಯಬಹುದು ಎಂದು ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ಪ್ರಕಟಿಸಿತು. ಇವರು ಎಟಿಎಂ, ಚೆಕ್‌ ಪುಸ್ತಕಗಳನ್ನು ನಿರ್ವಹಣೆ ಮಾಡಬಹುದು ಎಂದು ಆರ್‌ಬಿಐ ತಿಳಿಸಿತು.
*ಮೇ. 7: ಸುಪ್ರೀಂ ಕೋರ್ಟ್‌ ‘ಜಲ್ಲಿಕಟ್ಟು’ ಮತ್ತು ಎತ್ತಿನಗಾಡಿ ಸ್ಪರ್ಧೆಗಳನ್ನು ನಿಷೇಧಿಸುವಂತೆ ಕೇಂದ್ರ ಸರ್ಕಾರಕ್ಕೆ ಮಹತ್ವದ ನಿರ್ದೇಶನ ನೀಡಿತು. ಪ್ರಾಣಿ ದಯಾ ಸಂಘದವರು ಈ ಸ್ಪರ್ಧೆಗಳನ್ನು ನಿಷೇಧಿಸುವಂತೆ ಅರ್ಜಿ ಸಲ್ಲಿಸಿದ್ದರು. ಕೆ.ಎಸ್‌. ರಾಧಕೃಷ್ಣ ಮತ್ತು ಪಿನಾಕಿ ಚಂದ್ರ ಅವರಿದ್ದ ನ್ಯಾಯಪೀಠ ಜಲ್ಲಿಕಟ್ಟು ನಿಷೇಧಿಸುವಂತೆ ಸೂಚಿಸಿತು.
*ಮೇ 9: ಅಮೆರಿಕ ಸಿನಿಮಾ ಉತ್ಸವದಲ್ಲಿ ಭಾರತದ ‘ಸೈಲೆಂಟ್‌ ಕ್ರೀಮ್‌’ ಸಾಕ್ಷ್ಯಚಿತ್ರ ವಿವಿಧ ವಿಭಾಗಗಳಲ್ಲಿ ಮೂರು ಪ್ರಶಸ್ತಿಗಳನ್ನು ಪಡೆಯಿತು. ಪ್ರಿಯಾ ಸೋಮಯ್ಯ ಈ ಚಿತ್ರದ ನಿರ್ದೇಶಕರು. ಇದು ಭಾರತದಲ್ಲಿ ನಡೆಯುತ್ತಿರುವ ಅತ್ಯಾಚಾರ ಪ್ರಕರಣಗಳ ಮೇಲೆ ಬೆಳಕು ಚೆಲ್ಲುತ್ತದೆ. ಇಂತಹ ಪ್ರಕರಣಗಳಲ್ಲಿ ಹಣ ಮತ್ತು ರಾಜಕೀಯ ಹೇಗೆ ಕೆಲಸ ಮಾಡುತ್ತದೆ ಎಂಬುದೇ ಇದರ ಕಥಾ ಹಂದರ.
*ಮೇ. 9: ಫ್ರಾನ್ಸ್‌ ದೇಶದ ಖಾಸಗಿ ವಿಮಾನ ನಿರ್ಮಾಣ ಸಂಸ್ಥೆಯೊಂದು ಬ್ಯಾಟರಿ ಚಾಲಿತ ವಿಮಾನವನ್ನು ತಯಾರಿಸಿರುವುದಾಗಿ ಪ್ರಕಟಿಸಿತು. ಇದು ಲಿಥೇನ್‌–ಅಯಾನ್‌– ಪಾಲಿಮಾರ್‌ ಬ್ಯಾಟರಿಗಳಿಂದ ಚಾಲನೆಯಾಗಲಿದೆ. ಇದಕ್ಕೆ ‘ಇ–ಪ್ಯಾನ್‌’ ಎಂದು ಹೆಸರಿಡಲಾಗಿದೆ.
*ಮೇ. 13: ಇಸ್ರೇಲ್‌ ದೇಶದ ಮಾಜಿ ಪ್ರಧಾನಿ ಈದ್‌ ಆಲ್‌ಮಾರ್ಟ್‌ ಅವರಿಗೆ ತೆಲ್‌ ಅವಿವ್‌ ಜಿಲ್ಲಾ ನ್ಯಾಯಾಲಯ ಜೀವಾವಧಿ ಶಿಕ್ಷೆ ನೀಡಿತು. ಆಲ್‌ಮಾರ್ಟ್‌ ಅವರು ಹೋಲಿಲ್ಯಾಂಡ್‌ ಪ್ರಕರಣದಲ್ಲಿ ಸಾವಿರಾರು ಕೋಟಿ ರೂಪಾಯಿ ಅವ್ಯವಹಾರ ನಡೆಸಿದ್ದರು.
*ಮೇ. 14: ಇತಿಹಾಸ ತಜ್ಞ ಬ್ಯಾರಿ ಕ್ಲಿಫ್‌ಪೋರ್ಡ್‌ ನೇತೃತ್ವದ ತಂಡ 500 ವರ್ಷಗಳ ಹಿಂದಿನ ಕ್ಲಿಸ್ಟಫರ್‌ ಕೊಲಂಬಸ್‌ ಅವರ ‘ಸಂತಾ ಮಾರಿಯಾ’ ಹಡಗಿನ ಅವಶೇಷಗಳನ್ನು ಕೆರಿಬಿಯನ್‌ ಸಾಗರದ ತಟದಲ್ಲಿ ಪತ್ತೆ ಮಾಡಿತು. ಹೈಟಿ ದೇಶದ ಉತ್ತರ ಕರಾವಳಿ ತೀರದಲ್ಲಿ ಹಡಗಿನ ಅವಶೇಷಗಳು ದೊರೆತವು.
*ಮೇ.14: ಕೇಂದ್ರ ಸರ್ಕಾರ ಎಲ್‌ಟಿಟಿಈ (ಲಿಬರೇಶನ್‌ ಟೈಗರ್ಸ್‌ ಅಫ್‌ ತಮಿಳ್‌ ಈಳಂ) ಸಂಘಟನೆ ಮೇಲೆ ಮತ್ತೆ 5 ವರ್ಷಗಳವರೆಗೆ ನಿಷೇಧವನ್ನು ಮುಂದುವರೆಸಿತು. 1967ರ ಅಪರಾಧ ಕಾಯ್ದೆ ಅಡಿಯಲ್ಲಿ (ಕಾನೂನು ಬಾಹಿರ) ನಿಷೇಧಿಸಿತು.
*ಮೇ. 15: ಕೇಂದ್ರೀಯ ಜಲ ಮಂಡಳಿಯ ಅಧ್ಯಕ್ಷರನ್ನಾಗಿ ಎ.ಬಿ. ಪಾಂಡ್ಯ ಅವರನ್ನು ಕೇಂದ್ರ ಸರ್ಕಾರ ನೇಮಕಮಾಡಿ ಆದೇಶ ಹೊರಡಿಸಿತು.
*ಮೇ. 15: ದೇಶದಲ್ಲಿ ಕಾಗದದ ನೋಟಿನ ಬದಲಾಗಿ ಪ್ಲಾಸ್ಟಿಕ್‌ ನೋಟುಗಳನ್ನು ಬರುವ 2015ನೇ ವರ್ಷದಲ್ಲಿ ಪರಿಚಯಿಸುವುದಾಗಿ ಭಾರತೀಯ ರಿಸರ್ವ್‌ ಬ್ಯಾಂಕ್‌ನ ಗೌರ್ನರ್‌ ರಘುರಾಂ ರಾಜನ್‌ ಪ್ರಕಟಿಸಿದರು. ಇದಕ್ಕೆ ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದೆ. ಪ್ಲಾಸ್ಟಿಕ್‌ ನೋಟಿನ ಬಳಕೆಯಿಂದ ನಕಲಿ ನೋಟುಗಳ ಹಾವಳಿ ತಪ್ಪಲಿದೆ ಎಂಬುದು ಹಣಕಾಸು ತಜ್ಞರ ಅಭಿಪ್ರಾಯ.
*ಮೇ.17: ಲೋಕಸಭೆ ಚುನಾವಣೆಯ ಸೋಲಿನ ಹಿನ್ನೆಲೆಯಲ್ಲಿ ಬಿಹಾರದ ಮುಖ್ಯಮಂತ್ರಿ ನಿತಿಶ್‌ಕುಮಾರ್‌ ರಾಜೀನಾಮೆ ಸಲ್ಲಿಸಿದರು. 40 ಸ್ಥಾನಗಳ ಪೈಕಿ ನಿತಿಶ್‌ ಕುಮಾರ್‌ ನೇತೃತ್ವದ ಸಂಯುಕ್ತ ಜನತಾದಳ ಪಕ್ಷ ಕೇವಲ ಎರಡು ಸ್ಥಾನಗಳನ್ನು ಪಡೆಯಿತು.
*ಮೇ.17: ಭಾರತೀಯ ಯೋಜನಾ ಆಯೋಗದ ಉಪಾಧ್ಯಕ್ಷ ಮಾಂಟೆಕ್‌ ಸಿಂಗ್‌ ಅಹ್ಲುವಾಲಿಯ ರಾಜೀನಾಮೆ ನೀಡಿದರು. ಯೋಜನಾ ಆಯೋಗದಲ್ಲಿ 8 ಜನ ಸದಸ್ಯರು ಇರುತ್ತಾರೆ. ಪ್ರಧಾನ ಮಂತ್ರಿ ಯೋಜನಾ ಆಯೋಗದ ಅಧ್ಯಕ್ಷರಾಗಿರುತ್ತಾರೆ.
*ಮೇ.18: ಅರುಣಾಚಲ ಪ್ರದೇಶದ ಮುಖ್ಯಮಂತ್ರಿಯಾಗಿ ನಬಮ್‌ ತುಕಿ ಇಟಾನಗರದಲ್ಲಿ ಅಧಿಕಾರ ಸ್ವೀಕರಿಸಿದರು. ಜೆ.ಗ್ಯಾಮ್ಲಿನ್‌ ಅವರು ರಾಜೀನಾಮೆ ನೀಡಿದ್ದರಿಂದ ಮುಖ್ಯಮಂತ್ರಿಯಾದರು. ಕಾಂಗ್ರೆಸ್‌ ಪಕ್ಷದ ಹಿರಿಯ ನಾಯಕರಾದ ತುಕಿ ಅವರು ಕೃಷಿ, ನೀರಾವರಿ ಮತ್ತು ಆಹಾರ ಸಚಿವರಾಗಿ ಸೇವೆ ಸಲ್ಲಿಸಿದ್ದರು.
*ಮೇ.18: ಹಿರಿಯ ಪರಮಾಣು ವಿಜ್ಞಾನಿ ಎನ್‌.ಶ್ರೀನಿವಾಸನ್‌ ನಿಧನರಾದರು. ಇವರು ಪರಮಾಣು ವಿಭಾಗದ ವಿವಿಧ ಅಕಾಡೆಮಿ ಮತ್ತು ಸಮಿತಿಗಳಲ್ಲಿ ಕೆಲಸ ಮಾಡಿದ್ದರು. ಇವರಿಗೆ ಭಾರತ ಸರ್ಕಾರ ಪದ್ಮಭೂಷಣ(2000) ಪುರಸ್ಕಾರ ನೀಡಿತ್ತು.
*ಮೇ. 22: ಗುಜರಾತ್‌ ರಾಜ್ಯದ ಮೊದಲ ಮಹಿಳಾ ಮುಖ್ಯಮಂತ್ರಿಯಾಗಿ ಆನಂದಿ ಬೆನ್‌ ಪಟೇಲ್‌ ಅಧಿಕಾರ ಸ್ವೀಕರಿಸಿದರು.
ಈ ಹಿಂದೆ ನರೇಂದ್ರ ಮೋದಿ ಮುಖ್ಯಮಂತ್ರಿಯಾಗಿದ್ದರು.
*ಮೇ.25: ಆಂಧ್ರಪ್ರದೇಶದ 13 ವರ್ಷದ ಬಾಲಕಿ ಮಲವತ್‌ ಪೂರ್ಣ ಮೌಂಟ್‌ ಎವರೆಸ್ಟ್‌ ಶಿಖರ ಹತ್ತಿದ್ದ ಅತ್ಯಂತ ಕಿರಿಯ ಪರ್ವತಾರೋಹಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
*ಮೇ.26: ಭಾರತದ 15ನೇ ಪ್ರಧಾನಮಂತ್ರಿಯಾಗಿ ನರೇಂದ್ರ ಮೋದಿ ಪ್ರಮಾಣ ವಚನ ಸ್ವೀಕರಿಸಿದರು.
ಇವರೊಂದಿಗೆ 23 ಸಚಿವರು ಅಧಿಕಾರ ವಹಿಸಿಕೊಂಡರು.
ಈ ಸಮಾರಂಭಕ್ಕೆ ಸಾರ್ಕ್‌ ರಾಷ್ಟ್ರಗಳ ಮುಖ್ಯಸ್ಥರು ಆಗಮಿಸಿದ್ದರು.
*ಮೇ.27: ಮಾಜಿ ಕ್ರಿಕೆಟಿಗ ಸಚಿನ್‌ ತೆಂಡೂಲ್ಕರ್‌ 35ನೇ ರಾಷ್ಟ್ರೀಯ ಕ್ರೀಡಾಕೂಟದ ರಾಯಭಾರಿಯಾಗಿ ನೇಮಕಗೊಂಡರು.
ಕೇರಳದಲ್ಲಿ  2015ರ ಜನವರಿ ಮತ್ತು ಫೆಬ್ರುವರಿಯಲ್ಲಿ ರಾಷ್ಟ್ರೀಯ ಕ್ರೀಡಾಕೂಟ ನಡೆಯಲಿದೆ.
*ಮೇ. 28: ಮುಕುಲ್ ರೊಹಟಗಿ ಭಾರತದ 14ನೇ ಅಟಾರ್ನಿ ಜನರಲ್‌ ಆಗಿ ನೇಮಕಗೊಂಡರು.
ಈ ಸ್ಥಾನದಲ್ಲಿ ಗುಲಾಂ ವಾಹನ್ವತಿ ಅವರಿದ್ದರು.
ರೊಹಟಗಿ ಗುಜರಾತ್‌ ಹೈಕೋರ್ಟ್‌ ಹಾಗೂ ಸುಪ್ರೀಂ ಕೋರ್ಟ್‌ನಲ್ಲಿ ಕಾರ್ಯನಿವರ್ಹಿಸಿದ್ದರು.

*ಮೇ. 29: ಹಿಂದಿಯ ಹೆಸರಾಂತ ಸಾಹಿತಿ ವಿಶ್ವನಾಥ್‌ ತ್ರಿಪಾಠಿ ಅವರು ಪ್ರತಿಷ್ಠಿತ ‘ವ್ಯಾಸ್‌ ಸಮ್ಮಾನ್‌’ ಪುರಸ್ಕಾರವನ್ನು ಪಡೆದರು.
ಈ ಪ್ರಶಸ್ತಿ 2.5 ಲಕ್ಷ ರೂಪಾಯಿ ನಗದು ಹಾಗೂ ಸ್ಮರಣಿಕೆಯನ್ನು ಒಳಗೊಂಡಿದೆ.


 ನ.1: 1984ರಲ್ಲಿ ಭೋಪಾಲ್‌ (ಮಧ್ಯಪ್ರದೇಶದ ರಾಜಧಾನಿ) ಅನಿಲ ದುರಂತಕ್ಕೆ ಕಾರಣವಾಗಿದ್ದ ಯೂನಿಯನ್‌ ಕಾರ್ಬೈಡ್‌ ಕಂಪೆನಿಯ ಮುಖ್ಯಸ್ಥರಾಗಿದ್ದ ವಾರನ್‌ ಆ್ಯಂಡರ್‌ಸನ್‌ನಿಧನರಾದರು.
ಅವರಿಗೆ 92 ವರ್ಷ ವಯಸ್ಸಾಗಿತ್ತು. ವಿವಿಧ ಸ್ವಯಂ ಸೇವಾ ಸಂಸ್ಥೆಗಳು ಅವರ ವಿರುದ್ಧ ಹಲವು ಪ್ರಕರಣಗಳನ್ನು ದಾಖಲಿಸಿದ್ದವು. ಭಾರತೀಯ ನ್ಯಾಯಾಲಯದಲ್ಲಿ ಆ ಪ್ರಕರಣಗಳು ಇನ್ನೂ ವಿಚಾರಣೆ ಹಂತದಲ್ಲಿವೆ.
* ನ. 2: ವಿಶ್ವದ ಖ್ಯಾತ ಕ್ಲಾರಿಯೋನೆಟ್ ವಾದಕ ಅಕರ್‌ ಬಿಕ್‌ ಲಂಡನ್‌ನಲ್ಲಿ ನಿಧನರಾದರು. ಅವರ ‘ಜಾಜ್‌’ ಆಲ್ಬಂ ಭಾರೀ ಜನಪ್ರಿಯ ಪಡೆದಿತ್ತು.
* ನ.3: ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌ ಜಪಾನ್‌ ದೇಶದ ಪ್ರತಿಷ್ಠಿತ ಗೌರವ ಪ್ರಶಸ್ತಿ ‘ದಿ ಗ್ರ್ಯಾಂಡ್‌ ಕಾರ್ಡನ್‌ ಆಫ್‌ ದಿ ಆರ್ಡರ್‌ ಆಫ್‌ ದಿ ಪೌಲೊವಿನಾ ಫ್ಲವರ್‌–2014’(The Grand Cordon of the Order of the Paulownia Flowers 2014)ಗೆ ಆಯ್ಕೆಯಾಗಿದ್ದಾರೆ.
* ನ. 4: ಭಾರತ ಮತ್ತು ಶ್ರೀಲಂಕಾ ದೇಶಗಳ ವಿಶೇಷ ಸೇನಾ ಪಡೆಗಳ ಜಂಟಿ ಸಮರ ಅಭ್ಯಾಸಕ್ಕೆ ಚಾಲನೆ ನೀಡಲಾಯಿತು. ಇದಕ್ಕೆ ‘ಮಿತ್ರ ಶಕ್ತಿ’ ಎಂದು ಹೆಸರಿಡಲಾಗಿದೆ. ಇದು ಮೂರು ವಾರ ನಡೆಯಲಿದೆ.
* ನ 5: ರಾಜ್ಯದ ಹಂಪಿ ಸಮೀಪದಲ್ಲಿ ಹರಪ್ಪ ಕಾಲದ (ಸಿಂಧೂ ನಾಗರಿಕತೆ) ಚಿತ್ರಗಳು ಮತ್ತು ಲಿಪಿಗಳು (ಕಲ್ಲಿನ ಮೇಲೆ ಕೆತ್ತನೆ ಮಾಡಿರುವ) ಪತ್ತೆಯಾಗಿವೆ ಎಂದು ಇತಿಹಾಸ ಮತ್ತು ಪ್ರಾಕ್ತಾನಶಾಸ್ತ್ರ ಇಲಾಖೆಯ ಅಧಿಕಾರಿಗಳು ಪ್ರಕಟಿಸಿದರು.
* ನ 6: ಕ್ರಿಕೆಟಿಗ ಸಚಿನ್‌ ತೆಂಡೂಲ್ಕರ್‌ ಅವರ ಆತ್ಮಕಥೆ ‘ಪ್ಲೇಯಿಂಗ್‌ ಇಟ್‌ ಮೈ ವೇ’ ಪುಸ್ತಕ ಅನಾವರಣಗೊಂಡಿತು. ಈ ಸಂದರ್ಭದಲ್ಲಿ ಸಚಿನ್‌ ಕುಟುಂಬದವರು ಮತ್ತು ಗೆಳೆಯರು ಉಪಸ್ಥಿತರಿದ್ದರು.
* ನ, 07 : ಯೂರೋಪ್‌ ಮತ್ತು ಅಮೆರಿಕದ ಔಷಧಿ ವಿಜ್ಞಾನಿಗಳ ತಂಡ ಆ್ಯಂಟಿಬಯೊಟಿಕ್‌ ಔಷಧಿಗೆ ಪರ್ಯಾಯವಾಗಿ‘ ಸ್ಟಪೆಫ್‌’ ಎಂಬ ಔಷಧಿಯನ್ನು ಸಿದ್ಧಪಡಿಸಿರುವುದಾಗಿ ಪ್ರಕಟಿಸಿತು.
* ನ 8:  ಗೋವಾ ಮುಖ್ಯಮಂತ್ರಿ ಮನೋಹರ್‌ ಗೋಪಾಲಕೃಷ್ಣ ಪ್ರಭು ಪರಿಕ್ಕರ್‌ ರಾಜಿನಾಮೆ ನೀಡಿದರು. ಕೇಂದ್ರ ಸಚಿವ ಸಂಪುಟಕ್ಕೆ ಸೆರ್ಪಡೆಯಾಗಲಿರುವ ಹಿನ್ನೆಲೆಯಲ್ಲಿ ರಾಜೀನಾಮೆ ಸಲ್ಲಿಸಿದರು.
* ನ 9: ಕ್ರಿಕೆಟಿಗ ವಿರಾಟ್‌ ಕೊಹ್ಲಿ ಏಕದಿನ ಕ್ರಿಕೆಟ್‌ನಲ್ಲಿ ಅತಿ ಕಡಿಮೆ ಪಂದ್ಯಗಳಲ್ಲಿ ಆರು ಸಾವಿರ ರನ್‌ ಪೂರೈಸುವ ಮೂಲಕ ಹೊಸ ಇತಿಹಾಸ ಬರೆದರು. ವೆಸ್ಟ್‌ಇಂಡಿಸ್‌ನ ವಿವಿಯನ್‌ ರಿಚರ್ಡ್ಸ್‌ ದಾಖಲೆಯನ್ನು ಕೊಹ್ಲಿ ಮುರಿದರು.
* ನ, 10: ಪ್ರಧಾನಿ ನರೇಂದ್ರ ಮೋದಿ ಮೊದಲ ಬಾರಿಗೆ ಸಂಪುಟ ವಿಸ್ತರಣೆ ಮಾಡಿದರು. ಈ ಸಂದರ್ಭದಲ್ಲಿ 21 ಸಚಿವರು ಪ್ರಮಾಣ ವಚನ ಸ್ವೀಕರಿಸಿದರು.
* ನ, 11: ಹಿಂದಿ ಕವಿ ಕೇದಾರನಾಥ್‌ ಸಿಂಗ್‌ ಅವರಿಗೆ 2013ನೇ ಸಾಲಿನ ‘ಜ್ಞಾನಪೀಠ ಪ್ರಶಸ್ತಿಯನ್ನು ಘೋಷಿಸಲಾಯಿತು. ಭಾರತೀಯ ಸಾಹಿತ್ಯಕ್ಕೆ ಅವರು ನೀಡಿದ ಕೊಡುಗೆಯನ್ನು ಪರಿಗಣಿಸಿ ಈ ಪ್ರಶಸ್ತಿ ನೀಡಲಾಗಿದೆ.
* ನ, 12: ಕೇರಳ ರಾಜ್ಯ ಶೇ.100% ರಷ್ಟು ಬ್ಯಾಂಕ್‌ ಖಾತೆ ಹೊಂದಿರುವ ದೇಶದ ಮೊದಲ ರಾಜ್ಯ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು.
* ನ, 13: ಕ್ರಿಕೆಟಿಗ ರೋಹಿತ್‌ ಶರ್ಮಾ ಏಕದಿನ ಕ್ರಿಕೆಟ್‌ ಪಂದ್ಯದಲ್ಲಿ 264 ರನ್‌ ಗಳಿಸುವ ಮೂಲಕ ನೂತನ ದಾಖಲೆ ಬರೆದರು. ರೋಹಿತ್‌ ಶರ್ಮಾ ಎರಡು ಸಲ ದ್ವಿಶತಕ ಬಾರಿಸಿದ್ದಾರೆ.
* ನ, 14: 2014ನೇ ಸಾಲಿನ ಗಾಂಧಿ ಫಿಲಾಸಫಿ ಮತ್ತು ಪಬ್ಲಿಕ್‌ ಸರ್ವಿಸ್‌ ಬ್ರಾಡ್‌ಕಾಸ್ಟಿಂಗ್‌ ಪ್ರಶಸ್ತಿಯನ್ನು ಜಮ್ಮು ಕಾಶ್ಮೀರ ರೇಡಿಯೋ ಪಡೆಯಿತು.
* ನ, 15: ಅಲ್ಪಸಂಖ್ಯಾತ ಯುವಕರಿಗೆ ಕೌಶಲ ತರಬೇತಿ ನೀಡುವ ಸಲುವಾಗಿ ಕೇಂದ್ರ ಸರ್ಕಾರ ಮೌಲಾನಾ ಆಜಾದ್‌ ರಾಷ್ಟ್ರೀಯ ಕೌಶಲಾಭಿವೃದ್ಧಿ ಅಕಾಡೆಮಿಯನ್ನು ಪ್ರಾರಂಭಿಸುವುದಾಗಿ ಪ್ರಕಟಿಸಿತು.
* ನ, 16: ಸೈನಾ ನೆಹ್ವಾಲ್‌ ಮತ್ತು ಕೆ. ಶ್ರೀಕಾಂತ್‌ ಅವರು ಕ್ರಮವಾಗಿ ಮಹಿಳೆ ಮತ್ತು ಪುರುಷರ ಚೀನಾ ಓಪನ್‌ ಬ್ಯಾಡ್ಮಿಂಟನ್‌ ಸಿಂಗಲ್ಸ್‌ ಟ್ರೋಫಿಯನ್ನು ಮುಡಿಗೇರಿಸಿಕೊಂಡರು.
* ನ, 17: 2014ನೇ ಸಾಲಿನ ಜಿ–20 ಶೃಂಗಸಭೆಯು ಬ್ರಿಸ್‌ಬೇನ್‌ನಲ್ಲಿ ನಡೆಯಿತು. ಈ ಸಮಾವೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಪಾಲ್ಗೊಂಡಿದ್ದರು. ಇದೇ ಸಂದರ್ಭದಲ್ಲಿ ಆಸ್ಟ್ರೇಲಿಯಾ ಸಂಸತ್‌ನಲ್ಲಿ ಮೋದಿ ಹಿಂದಿಯಲ್ಲಿ ಭಾಷಣ ಮಾಡಿದರು.
* ನ, 18: ಇಂಗ್ಲೆಂಡ್‌ನಲ್ಲಿ ಮೊದಲ ಬಾರಿಗೆ ಚರ್ಚ್‌ ಆಫ್‌ ಇಂಗ್ಲೆಂಡ್‌ ಸಂಪ್ರದಾಯವನ್ನು ಮುರಿದು ಮಹಿಳಾ ಬಿಷಪ್‌ ನೇಮಕ ಮಾಡಿತು. ಇದನ್ನು ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ನೂತನ ಕ್ರಾಂತಿ ಎಂದು ಬಣ್ಣಿಸಲಾಗಿದೆ.
* ನ, 19: ಭಾರತೀಯ ಮೂಲದ ನೇಹಾ ಗುಪ್ತ ಅವರು 2014ನೇ ಸಾಲಿನ ಅಂತರರಾಷ್ಟ್ರೀಯ ಮಕ್ಕಳ ಶಾಂತಿ ಪ್ರಶಸ್ತಿಗೆ ಆಯ್ಕೆಯಾದರು.
* ನ, 20: ಭಾರತೀಯ ಮೂಲದ ಹೊಟೇಲ್‌ ಕಾವಲುಗಾರ ಕೊಟ್ಟರಪಟ್ಟು ಚಟ್ಟು ಅವರು ಶ್ರೀಲಂಕಾದಲ್ಲಿ ನಿಧನರಾದರು. ಅವರು ಗಾಂಧೀಜಿ, ಮೌಂಟ್‌ಬ್ಯಾಟನ್‌ ಅವರು ತಂಗಿದ್ದ ಕೋಣೆಗಳಿಗೆ ಕಾವಲುಗಾರನಾಗಿ ಕೆಲಸ ಮಾಡಿದ್ದರು.
* ನ, 21: ಅಂತರರಾಷ್ಟ್ರೀಯ ಖ್ಯಾತಿಯ ಗಣಿತ ತಜ್ಞ ಅಲೆಕ್ಸಾಂಡರ್‌ ಗ್ರೋಂಥೆಡಿಕ್‌ ಅವರು ಫ್ರಾನ್ಸ್‌ನಲ್ಲಿ ನಿಧನರಾದರು. ಅವರಿಗೆ 86 ವರ್ಷ ವಯಸ್ಸಾಗಿತ್ತು.
* ನ, 22: ಅಮೆರಿಕ ಅಧ್ಯಕ್ಷ ಬರಾಕ್‌ ಒಬಾಮಾ ಅವರು ಜನವರಿ 26ರಂದು ಗಣರಾಜ್ಯೋತ್ಸವ ದಿನಾಚರಣೆಗೆ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ ಎಂದು ಪ್ರಧಾನಮಂತ್ರಿ ಕಾರ್ಯಾಲಯ ಅಧಿಕೃತವಾಗಿ ಪ್ರಕಟಿಸಿತು.
* ನ, 23: ಕಾಂಗ್ರೆಸ್‌ ಪಕ್ಷದ ಹಿರಿಯ ನಾಯಕ ಹಾಗೂ ಮಾಜಿ ಕೇಂದ್ರ ಸಚಿವ ಮುರುಳಿ ದೇವ್ರಾ ಮುಂಬೈನಲ್ಲಿ ನಿಧನರಾದರು. ಅವರಿಗೆ 80 ವರ್ಷ ವಯಸ್ಸಾಗಿತ್ತು.
* ನ, 24: ಕೇಂದ್ರ ಲೋಕಸೇವಾ ಆಯೋಗದ ಅಧ್ಯಕ್ಷರನ್ನಾಗಿ ದೀಪಕ್‌ ಗುಪ್ತ ಅವರನ್ನು ಕೇಂದ್ರ ಸರ್ಕಾರ ನೇಮಕ ಮಾಡಿತು.
* ನ, 25: ಹಿರಿಯ ಕಥಕ್‌ ನೃತ್ಯಗಾರ್ತಿ ಸಿತಾರ ದೇವಿ ಮುಂಬೈನಲ್ಲಿ ನಿಧನರಾದರು. ಅವರಿಗೆ 92 ವರ್ಷ ವಯಸ್ಸಾಗಿತ್ತು. ಪದ್ಮಭೂಷಣ ಸೇರಿದಂತೆ ಹಲವಾರು ಪ್ರಶಸ್ತಿಗಳನ್ನು ಪಡೆದಿದ್ದರು.
* ನ, 28:  ಲೋಕಸಭೆಯ ನೂತನ ಪ್ರಧಾನ ಕಾರ್ಯದರ್ಶಿಯನ್ನಾಗಿ ಅನೂಪ್‌ ಮಿಶ್ರಾ ಅವರನ್ನು ನೇಮಕ ಮಾಡಲಾಯಿತು. ಅವರು ಈ ಹಿಂದೆ ಉತ್ತರ ಪ್ರದೇಶ ಸರ್ಕಾರದ ಮುಖ್ಯ ಕಾರ್ಯದರ್ಶಿಯಾಗಿದ್ದರು.
* ನ, 30: ಪಾಕಿಸ್ತಾನದ ಪ್ರಧಾನಿ ನವಾಜ್‌ ಷರೀಫ್‌ ಅವರು ಚೀನಾ ಸರ್ಕಾರದ ಜೊತೆ ‘ಪಾಕ್‌–ಚೀನಾ ಆರ್ಥಿಕ ಕಾರಿಡಾರ್‌’ ಯೋಜನೆಗೆ ಸಹಿ ಹಾಕಿದರು. ಈ ಯೋಜನೆ ಪಾಕ್‌ ಆಕ್ರಮಿತ ಕಾಶ್ಮೀರವನ್ನು ಒಳಗೊಂಡಿದೆ ಎಂದು ಷರೀಫ್‌ ಪ್ರಕಟಿಸಿದರು.

ಹೋಮ್‌ವರ್ಕ್‌ ಮಾಡಿಸುವುದು ಹೇಗೆ?

ದೊಡ್ಡ ಮಕ್ಕಳಂತೂ ತಮ್ಮ ಹೋಮ್‌ ವರ್ಕ್‌ ಮಾಡಿಕೊಳ್ಳುತ್ತಾರೆ. ಅವರಿಗೆ ತರಗತಿಯಲ್ಲಿ ಅವಮಾನಕ್ಕೆ ಒಳಗಾಗುವುದಕ್ಕಿಂತ ಮನೆಪಾಠ ಮುಗಿಸುವುದು ಒಳಿತು ಎನಿಸುತ್ತದೆ. ಆದರೆ ಪುಟ್ಟ ಮಕ್ಕಳ ಮನೆಪಾಠವನ್ನು ಮುಗಿಸುವುದೆಂತು?
ಕ್ಷಣಕ್ಷಣಕ್ಕೂ ಚಂಚಲಚಿತ್ತರಾಗುವ ತುಂಟ ಮಕ್ಕಳನ್ನು ಹಿಡಿದು ಕೂಡಿಸುವುದೇ ಸಾಹಸದ ಕೆಲಸ. ಇನ್ನು ದಿನಕ್ಕೆ ಎರಡು ಮೂರು ವಿಷಯಗಳ ಮನೆಪಾಠ ಮಾಡಿಸುವುದರಲ್ಲಿ ಅಮ್ಮಂದಿರ ಸಹನೆಯೂ ಕರಗಿ ಹೋಗಿರುತ್ತದೆ. ಮೊದಲೆರಡು ವಿಷಯ ಮುಗಿಸಿದಂತೆ ಕೊನೆಯದ್ದು ಮುಗಿಸಲಾಗದು. ಮಗುವಿಗೂ ಸುಸ್ತಾಗಿ ನಿರಾಸಕ್ತಿ ತೋರುತ್ತಿದ್ದರೆ, ಅಮ್ಮನಿಗೂ ಸಂಯಮ ಮೀರಿ ಸಿಡುಕುತ್ತಿರುತ್ತಾರೆ.
ಕೊನೆ ಕ್ಷಣಗಳನ್ನು ನಿರ್ವಹಿಸುವುದು ಹೇಗೆ?
*ಆದಷ್ಟೂ ಹೋಮ್‌ ವರ್ಕ್‌ನ ನಂತರ ಅವರಿಗಿಷ್ಟದ ಆಟ, ಟಿ.ವಿ. ಶೋ ಅಥವಾ ತಿಂಡಿಯ ಆಮಿಶ ನೀಡಿ.
*ಬರೆಯುವಾಗ ಆದಷ್ಟೂ ಬೇರೆ ವಿಷಯಗಳನ್ನು ಹೇಳುತ್ತಲೇ ಪುಸಲಾಯಿಸಿ.
*ಅವರ ಕೈಬರಹವನ್ನು ಹೊಗಳಿ.
*ವೇಗವನ್ನು ಹೆಚ್ಚಿಸುವಂತೆ, ಅವರ ಕ್ಷಮತೆಯನ್ನು ಹೆಚ್ಚುಗಾರಿಕೆಯೆಂಬಂತೆ ಹೇಳಿ.
*ಬರೆಯುತ್ತಿರುವುದನ್ನು ತಿರುವು ಮರುವಾಗಿ ಹೇಳಿ, ಅವರಲ್ಲಿ ನಗೆಯುಕ್ಕಿಸಿ.
*ಮತ್ತೆ ಮನೆಪಾಠ ಮಾಡುವಲ್ಲಿ ಅವರೇ ಹೆಚ್ಚು ಉತ್ಸಾಹಿತರು ಎಂಬಂಥ ಚಿತ್ರಣ ನೀಡಿ.
*ಪ್ರತಿ ಮನೆಪಾಠ ಮುಗಿದಾಗಲೂ ಅವರ ಶಾಲೆಯಲ್ಲಿ ನಡೆದ ವಿಷಯಗಳನ್ನು ಗಮನವಿಟ್ಟು ಕೇಳಿ.
*ಪ್ರತಿಯೊಂದು ವಿಷಯದ ನಡುವೆಯೂ ಒಂದಷ್ಟು ಬಿಡುವು ನೀಡಿ, ಮುಂದುವರಿಸುವುದು ಒಳಿತು.
*ಅವರ ತರಗತಿಯ ತುಂಟ ಹುಡುಗರ ಬಗ್ಗೆ ವಿಚಾರಿಸಿ, ಜಾಣ ಮಕ್ಕಳ ಬಗ್ಗೆಯೂ ಕೇಳಿ. ಯಾವುದೇ ಕಾರಣಕ್ಕೂ ಅವರೊಂದಿಗೆ ನಿಮ್ಮ ಮಕ್ಕಳನ್ನು ಹೋಲಿಸಬೇಡಿ.
ಮನೆಪಾಠದ ಸಮಯ ನಿಮ್ಮಿಬ್ಬರಿಗೆ ಮಾತ್ರ ಮೀಸಲಾಗಿರಲಿ. ಈ ಸಮಯದಲ್ಲಿ ಟಿ.ವಿ ನೋಡುವುದಾಗಲೀ, ಫೋನ್‌ ಮಾಡುವುದಾಗಲೀ ಬೇಡ. ಮಕ್ಕಳೊಂದಿಗೆ ಮಕ್ಕಳಾಗುತ್ತಲೇ ಓದಿಸಿದರೆ ಅದು ಸಂತಸದ ಸಮಯವಾಗಬಲ್ಲದು.

ಬೆರಳು ಕತ್ತರಿಸುವ ನೀರು

 

ಬೇಕಾಗುವ ಸಲಕರಣೆ ಒಂದು ಪಾರದರ್ಶಕ ಗಾಜಿನ ಗ್ಲಾಸು/ಬೀಕರ್, ನೀರು, ಪೆನ್.
ವಿಧಾನ: ಒಂದು ಬೀಕರಿನಲ್ಲಿ ಮುಕ್ಕಾಲು ಭಾಗ ನೀರು ತೆಗೆದುಕೊಳ್ಳಿ. ನೀರಿನಲ್ಲಿ ಒಂದು ಪೆನ್ ಇಡಿ. ಪೆನ್ ಹೊರ ತೆಗೆದು ನಿಮ್ಮ ಒಂದು ಬೆರಳನ್ನು ನೀರಿನಲ್ಲಿ ಅದ್ದಿರಿ.
ಪ್ರಶ್ನೆ: ನೀರಿನಲ್ಲಿ ಮುಳುಗಿರುವ ಹಾಗೂ ನೀರಿನ ಹೊರಗಿರುವ ಪೆನ್ ಹೇಗೆ ಕಾಣುತ್ತದೆ? ನಮ್ಮ ಇಡೀ ಬೆರಳು ಹೇಗೆ ಕಾಣುತ್ತದೆ? ಯಾಕೆ?
ಉತ್ತರ: 1) ಬೆರಳು ಕತ್ತರಿಸಿದಂತೆ ಕಾಣುತ್ತದೆ. ಯಾಕೆಂದರೆ ಬೆರಳಿನ ಕೆಳಭಾಗ (ತುದಿ) ದಿಂದ ಬರುವ ಕಿರಣಗಳು ತ್ರಿಜ್ಯೀಯ ರೇಖೆ ಮೂಲಕ ಬಂದು ನಮ್ಮ ಕಣ್ಣುಗಳನ್ನು ಸೇರುವುದಿಲ್ಲ. ಕಿರಣಗಳು ಕೋನವನ್ನು ಮಾಡುವುದರಿಂದ ಹಾಗೂ ಅವು ವಾತಾವರಣವನ್ನು ಪ್ರವೇಶಿಸುವುದರಿಂದ ಕತ್ತರಿಸಿದಂತೆ ಭಾಸವಾಗುತ್ತದೆ. ಯಾವುದೇ ವಸ್ತುವಿನಿಂದ ಬರುವ ಕಿರಣಗಳು ದಟ್ಟ ಮಾಧ್ಯಮದಿಂದ ಕಡಿಮೆ ದಟ್ಟ ಮಾಧ್ಯಮದ ಕಡೆಗೆ ಅಥವಾ ಕಡಿಮೆ ದಟ್ಟ ಮಾಧ್ಯಮದಿಂದ ಹೆಚ್ಚು ದಟ್ಟ ಮಾಧ್ಯಮದ ಕಡೆಗೆ ಚಲಿಸಿದಾಗ ಅವು ಬಾಗುತ್ತವೆ.
2) ನೀರಿನಲ್ಲಿ ಒಂದು ಪೆನ್/ಪೆನ್ಸಿಲ್ ಇಳಿ ಬಿಟ್ಟು ನೋಡಿ ಅದೂ ಕತ್ತರಿಸಿದಂತೆ ಗೋಚರಿಸುತ್ತದೆ.

ಸಂಭಾಷಣೆಯಲ್ಲಿ ಪ್ರಿಫಿಕ್ಸ್‌ ಉಪಯೋಗ

ನಮ್ಮ ಪದ ಸಂಪತ್ತನ್ನು (ವೊಕ್ಯಾಬ್ಯುಲರಿಯನ್ನು) ಹೆಚ್ಚಿಸಿಕೊಳ್ಳುವಲ್ಲಿ prefix ಮತ್ತು suffixಗಳ ಪಾತ್ರ ಮಹತ್ವದ್ದು. ಪದವೊಂದನ್ನು ಮೂಲಪದ (root word), ಪೂರ್ವ ಪ್ರತ್ಯಯ (prefix) ಹಾಗೂ ಅಂತ್ಯಪ್ರತ್ಯಯ (suffix) ಎಂಬ ಮೂರು ಭಾಗಗಳಾಗಿ ವಿಂಗಡಿಸಬಹುದು.

ಯಾವುದಾದರೊಂದು ಮೂಲಪದದ ಹಿಂದೆ ಕೆಲವು ಅಕ್ಷರಗಳನ್ನು ಸೇರಿಸಿ, ಇನ್ನೊಂದು ಅರ್ಥಪೂರ್ಣವಾಗಿರುವ ಪದವನ್ನು ಸೃಷ್ಟಿಸಬಹುದು. ಅಂತಹ ಅಕ್ಷರಗಳನ್ನು prefix ಎನ್ನುತ್ತೇವೆ.
ಉದಾ: 1. Kind ಎನ್ನುವ ಮೂಲಪದದ ಹಿಂದೆ ‘un’ ಎನ್ನುವ 2 ಅಕ್ಷರಗಳ prefix ಅನ್ನು ಸೇರಿಸಿ unkind ಎನ್ನುವ ಇನ್ನೊಂದು ಪದವನ್ನು ಮಾಡಬಹುದು.
2. Agreeಯ ಹಿಂದೆ dis ಎನ್ನುವ 3 ಅಕ್ಷರಗಳ prefix ಅನ್ನು ಸೇರಿಸಿದಾಗ disagree ಎನ್ನುವ ಬೇರೊಂದು ಪದದ ಸೃಷ್ಟಿಯಾಗುತ್ತದೆ.
3. Activeನ ಹಿಂದೆ hyper ಎನ್ನುವ 4 ಅಕ್ಷರಗಳ prefix ಅನ್ನು ಸೇರಿಸಿ hyperactive ಮಾಡಬಹುದು.
ಇಂಗ್ಲಿಷ್ ಪದಗಳು ಸಾಮಾನ್ಯವಾಗಿ ಈ ಕೆಳಗಿನ prefix ಗಳೊಂದಿಗೆ ಕಾಣಿಸಿಕೊಳ್ಳುತ್ತವೆ:
Un, dis, mis, il, im, ir, de, sub, re, pre, hyper, hypo, over, under...
PPrefixಗಳನ್ನು ಸರಿಯಾಗಿ ಬಳಸಿದಾಗ ಮಾತ್ರ ಅರ್ಥಪೂರ್ಣವಾದ ಪದಗಳು ಸೃಷ್ಟಿಯಾಗುತ್ತಾ ಹೋಗುತ್ತವೆ. ಬೇರೆ ಬೇರೆ ರೀತಿಯ ಪದಗಳನ್ನು ರಚಿಸಬೇಕಾದರೆ, ವಿವಿಧ prefix ಗಳನ್ನು ಉಪಯೋಗಿಸಬೇಕಾಗುತ್ತದೆ.
ಮೂಲಪದದ ವಿರುದ್ಧಾರ್ಥವನ್ನು ಸೂಚಿಸಲು un, im, il, ir, de, dis, mis ಎನ್ನುವಂತಹ prefixಗಳನ್ನು ಉಪಯೋಗಿಸಬೇಕಾಗುತ್ತದೆ.
ಉದಾ: kind - unkind,
Possible - impossible,
Legal - illegal,
Regular - irregular,
Hydrate - dehydrate,
Agree - disagree,
Management - mismanagement
Re ಎನ್ನುವ prefix, ಮತ್ತೆ ಎನ್ನುವ ಅರ್ಥವನ್ನು ಸೂಚಿಸುತ್ತದೆ.
ಉದಾ: open – reopen
Act – react
Organise – reorganise
Pre ಎನ್ನುವ prefix ಅನ್ನು ‘ಮುಂಚೆ’ ಎಂಬ ಅರ್ಥವನ್ನು ಸೂಚಿಸಲು ಉಪಯೋಗಿಸಬಹುದು.
ಉದಾ: Paid – prepaid,
Caution – precaution,
Requisite – prerequisite...
Co ಎಂಬ prefix, ‘ಜೊತೆಗೆ’ ಎನ್ನುವ ಅರ್ಥವನ್ನು ಸೂಚಿಸುತ್ತದೆ.
ಉದಾ: Operate – cooperate,
Ordinate – coordinate,
Education – coeducation
Hyper, hypo ಎನ್ನುವ prefix ಗಳು ಕೂಡ ‘ಅತಿ ಹೆಚ್ಚು’ ಹಾಗೂ ‘ತುಂಬಾ ಕಡಿಮೆ’ ಎನ್ನುವ ಅರ್ಥಗಳನ್ನು ಸೂಚಿಸುತ್ತವೆ.
ಉದಾ: hyperthyroid, hypothyroid...
Over, under ಎನ್ನುವ prefix ಗಳು ಕೂಡ ‘ಅತಿ ಹೆಚ್ಚು’ ಹಾಗೂ ‘ತುಂಬಾ ಕಡಿಮೆ’ ಎನ್ನುವ ಅರ್ಥಗಳನ್ನು ಸೂಚಿಸಲು ಸಹಾಯ ಮಾಡುತ್ತವೆ.
ಉದಾ: active – overactive,
Paid – underpaid.
Sub ಎನ್ನುವ prefix, ‘ಕೆಳ’/‘ಒಳ’ ಎನ್ನುವ ಅರ್ಥಗಳನ್ನು ಸೂಚಿಸುತ್ತವೆ.
ಉದಾ: Conscious – subconscious,
Branch – subbranch
ಈ ಮೇಲೆ ಕೊಟ್ಟಿರುವ ಉದಾಹರಣೆಗಳು, ಇಂಗ್ಲಿಷ್‌ನ ಸಾಮಾನ್ಯ ಬಳಕೆಯಲ್ಲಿರುವಂತಹ prefixಗಳು. ಹೀಗೆ, ಅವುಗಳ ಜ್ಞಾನ, ಉದ್ದೇಶ ಹಾಗೂ ಅರ್ಥಗಳನ್ನು ತಿಳಿದುಕೊಂಡು ಬಳಸುತ್ತಾ ಹೋದಂತೆ, ನಾವು ಮೂಲ ಪದಗಳ ಜೊತೆಜೊತೆಗೆ ಅವುಗಳಿಂದ ಹುಟ್ಟುವ ಇನ್ನೂ ಹಲವಾರು ಪದಗಳನ್ನು ತಿಳಿದುಕೊಂಡು, ಬಳಸಿ, ನಮ್ಮ ವೊಕ್ಯಾಬ್ಯುಲರಿಯನ್ನು ಹೆಚ್ಚಿಸಿಕೊಳ್ಳಬಹುದು. ಅಷ್ಟೇ ಅಲ್ಲದೆ prefixಗಳ ಬಳಕೆಯಿಂದ ನಮ್ಮ ಸಂಭಾಷಣೆಗೆ ಆಕರ್ಷಕವಾದ ಸಂಕ್ಷಿಪ್ತತೆ ದೊರಕುತ್ತದೆ.
Prefix ಗಳ ಬಳಕೆಯ ಜೊತೆಗೆ suffix ಗಳ ಬಳಕೆಯ ಬಗ್ಗೆಯೂ ತಿಳಿದು ಕೊಳ್ಳುವುದು ಮುಖ್ಯ. ಮೂಲಪದದ ಮುಂದೆ ಕೆಲವು ಅಕ್ಷರಗಳನ್ನು ಸೇರಿಸಿ ಇನ್ನೊಂದು ಅರ್ಥಪೂರ್ಣವಾಗಿರುವ ಪದವನ್ನು ಮಾಡಬಹುದು. ಅಂತಹ ಅಕ್ಷರಗಳನ್ನು suffix ಎಂದು ಕರೆಯುತ್ತೇವೆ.
ಉದಾ: Kind ಎನ್ನುವ ಮೂಲ ಪದದ ಮುಂದೆ ly ಎನ್ನುವ suffixಅನ್ನು ಸೇರಿಸಿ, kindly ಎನ್ನುವ ಇನ್ನೊಂದು ಪದವನ್ನು ಮಾಡಬಹುದು.
ಒಂದೊಂದು ರೀತಿಯ suffix ಅನ್ನು ಸೇರಿಸಿದಾಗ, ಮೂಲಪದವು ಒಂದೊಂದು ರೀತಿಯಲ್ಲಿ ಬದಲಾಗುತ್ತಾ ಹೋಗುತ್ತದೆ.
Er, est ಎನ್ನುವ suffixಗಳನ್ನು ಸಣ್ಣ ಗಾತ್ರದ adjective ಗಳಿಗೆ ಸೇರಿಸಿದಾಗ, ಅವುಗಳ ಹೋಲಿಕೆಯ ಪ್ರಮಾಣವನ್ನು (degree of comparison) ಸೂಚಿಸಬಹುದು.
ಉದಾ: strongಗೆ ‘er’ ಸೇರಿಸಿ stronger ಹಾಗೂ ‘est’ ಸೇರಿಸಿ strongest ಮಡಬಹುದು. ಅದೇ ರೀತಿ ಇನ್ನೂ ಕೆಲವು ಪದಗಳನ್ನು ಗಮನಿಸಿ:
Tall, taller, tallest
Short, shorter, shortest
S ಎನ್ನುವ suffix ಅನ್ನು ಯಾವುದಾದರೂ common nounನ ಮುಂದೆ ಬಳಸಿದಾಗ, ಅದು ಬಹುವಚನವಾಗುತ್ತದೆ.
ಉದಾ: table – tables, pen-pens
ಆದರೆ, s/es/ies ಎನ್ನುವ suffix ಅನ್ನು ಯಾವುದಾದರೂ ಕ್ರಿಯಾಪದದ ಮುಂದೆ ಬಳಸಿದಾಗ, ಅದು ಏಕವಚನವಾಗುತ್ತದೆ.
ಉದಾ: come – comes, go–goes, study-studieses ಹಾಗೆಯೇ, verbಗಳ tense ಅನ್ನು ಬದಲಾಯಿಸಬೇಕಾದರೆ ಸೂಕ್ತ ರೀತಿಯ suffixಗಳನ್ನು ಉಪಯೋಗಿಸಬೇಕು.
ED/d/ied ಎನ್ನುವ suffixನಿಂದ ವರ್ತಮಾನ ಕಾಲದ ಕ್ರಿಯಾಪದವನ್ನು ಭೂತಕಾಲದ ಕ್ರಿಯಾಪದವನ್ನಾಗಿ ಬದಲಾಯಿಸಬಹುದು.
ಉದಾ: start–started,
Charge–charged,
Study-studied
Ing ಎನ್ನುವusuffix ಅನ್ನು ಕ್ರಿಯಾಪದದ ಮುಂದೆ ಬಳಸಿದಾಗ continuous tense ಆಗುತ್ತದೆ.
ಉದಾ: go–going
Learn–learning
Write - writing
ಕೆಲವು ಸಂದರ್ಭಗಳಲ್ಲಿ ing ಅನ್ನುssuffix ಆಗಿ ಬಳಸಿದಾಗ ಕ್ರಿಯಾಪದವು ನಾಮಪದವಾಗಿ ಬದಲಾಗುತ್ತದೆ.
ಉದಾ: meet - meeting
ಇಲ್ಲಿ ನಾವು ಗಮನಿಸಬೇಕಾದ ವಿಷಯವೆಂದರೆ, ನಮ್ಮ ಸಂಭಾಷಣೆ ಸರಳವಾಗಿರಬೇಕಾದರೆ, ನಾಮಪದದ ರೂಪದಲ್ಲಿರುವ ಶಬ್ದವನ್ನು ಆದಷ್ಟು ಮಟ್ಟಿಗೆ ಕ್ರಿಯಾಪದದ ರೂಪದಲ್ಲಿ ಉಪಯೋಗಿಸಲು ಪ್ರಯತ್ನಿಸಬೇಕು.
ಉದಾ: I have a meeting (noun) with the director.- ಈ ರೀತಿಯ ವಾಕ್ಯಕ್ಕೆ ಬದಲಾಗಿ,
II have to meet (verb) the director. - ಈ ರೀತಿಯ ವಾಕ್ಯವು ನಮ್ಮ ಸಂಭಾಷಣೆಗೆ ಸರಳತೆ ಮತ್ತು ಖಚಿತತೆಯನ್ನು ತಂದುಕೊಡುತ್ತದೆ.
Lyಅನ್ನು adjectiveಗಳ ಮುಂದೆ ಸೇರಿಸಿದಾಗ adverbಗಳಾಗುತ್ತವೆ.
ಉದಾ: beautiful – beautifully
Quick - quickly
Dom/ion/nessಎಂಬ suffixಗಳನ್ನು ಪದಗಳಿಗೆ ಸೇರಿಸಿದಾಗ, ಆ ಪದಗಳು nounಗಳಾಗಿ ಪರಿವರ್ತನೆಗೊಳ್ಳುತ್ತವೆ.
ಉದಾ: stardom
Examination
Cleanlinessss
ಈ ಮೇಲಿನ ಉದಾಹಣೆಗಳಿಂದ ನಾವು ತಿಳಿಯಬಹುದಾದ ಒಂದು ಸ್ವಾರಸ್ಯಕರವಾದ ವಿಷಯವೆಂದರೆ, s ಎಂಬ suffixಅನ್ನು ಹೊಂದಿರುವ ಪದಗಳು ಸಾಮಾನ್ಯವಾಗಿ noun ಅಥವಾ verb ಆಗಿರುತ್ತವೆ.
Ed/ing/en, suffix ಆಗಿದ್ದರೆ, ಅವು ಬಹುತೇಕ verb ಗಳಾಗಿರುತ್ತವೆ.
Ly, suffix ಆಗಿದ್ದರೆ, ಆ ಪದಗಳು ಸಾಮಾನ್ಯವಾಗಿ adverbbಗಳಾಗಿರುತ್ತವೆ ಹಾಗೂ dom/ion/ness, suffix ಆಗಿದ್ದರೆ, ಆ ಪದಗಳು ಸಾಮಾನ್ಯವಾಗಿ nounಗಳಾಗಿರುತ್ತವೆ.
suffixಗಳ ಸಹಾಯದಿಂದ ಪದಗಳು ಯಾವ ಗುಂಪಿಗೆ ಸೇರುತ್ತವೆ ಎಂಬುದನ್ನು ಸುಲಭವಾಗಿ ಗುರುತಿಸಬಹುದು.
ಮಾಹಿತಿಗೆ: 98452 13417

ಗುರುತ್ವ ಕೇಂದ್ರ


ವಿಧಾನ: ಚಿತ್ರ 1ರಲ್ಲಿ ತೋರಿಸಿದಂತೆ ಒಂದು ಕುರ್ಚಿಯ ಮೇಲೆ ಎದೆ ಸೆಟಿಸಿ, ನೆಟ್ಟಗೆ ಕುಳಿತುಕೊಳ್ಳಿರಿ. ನಿಮ್ಮ ದೇಹವನ್ನು ಹಾಗೂ ಕೈಕಾಲುಗಳನ್ನು ಹಿಂದಕ್ಕೆ ಮುಂದಕ್ಕೆ ಬಾಗಿಸಬೇಡಿ. ಚಿತ್ರ 2ರಲ್ಲಿ ತೋರಿಸಿದಂತೆ ಸ್ವಲ್ಪ ಮುಂದಕ್ಕೆ ಬಾಗಿ.
ಪ್ರಶ್ನೆ: 1)  ಚಿತ್ರ 1ರಲ್ಲಿ ತೊರಿಸಿದಂತೆ ಕುಳಿತುಕೊಂಡು ಮೇಲೇಳಿ. ಸಾಧ್ಯವಾಯಿತೇ? ಯಾಕೆ?
ಚಿತ್ರ 2ರಲ್ಲಿ ತೋರಿಸಿದಂತೆ ಮುಂದಕ್ಕೆ ಬಾಗಿ ಏಳಿ. ಸಾಧ್ಯವಾಯಿತೆ? ಯಾಕೆ?
ಉತ್ತರ: ಚಿತ್ರ 1ರಲ್ಲಿ ತೋರಿಸಿದಂತೆ ಕುಳಿತುಕೊಂಡಾಗ, ಗುರುತ್ವ ಕೇಂದ್ರ (Center of gravity) ದಗುಂಟ ಎಳೆದ ಶೃಂಗೀಯ ರೇಖೆಯು (Vertical line), ಪಾಯದಲ್ಲಿ ಹಾಯ್ದುಹೋಗಿ ದೇಹವು ಸ್ಥಿರವಾಗಿರುತ್ತದೆ. ಇಲ್ಲಿ ನಿಮ್ಮ ದೇಹದ ಗುರುತ್ವ ಕೇಂದ್ರವು ನಿಮ್ಮ ಕಾಲುಗಳ ಒಳಗೆ ಬೀಳುವುದರಿಂದ ಮೇಲೇಳಲು ಆಗುವುದೇ ಇಲ್ಲ.
ಚಿತ್ರ 2ರಲ್ಲಿ ತೋರಿಸಿದಂತೆ ನೀವು ಬಾಗಿದಾಗ ಶೃಂಗೀಯ ರೇಖೆಯು ಪಾಯದ ಹೊರಗೆ ಬಿದ್ದು, ಅಂದರೆ ನಿಮ್ಮ ಪಾದಗಳಲ್ಲಿ ಬಿದ್ದು ದೇಹವು ಅಸ್ಥಿರವಾಗುತ್ತದೆ. ಆಗ ಮೇಲೇಳಲು ಸಾಧ್ಯವಾಗುತ್ತದೆ. ಹೀಗೆಯೇ ಗೋಡೆಗೆ ನೇರವಾಗಿ ನಿಂತುಕೊಂಡು, ಮುಂದೆ ಚಲಿಸದೇ ನಿಮ್ಮ ಮುಂದೆ ಕರವಸ್ತ್ರವನ್ನು ಹಾಕಿ ಎತ್ತಿಕೊಳ್ಳುವುದು ಅಷ್ಟೇ ಕಷ್ಟ.

ಇಂಗ್ಲಿಷ್‌ನಲ್ಲಿ ಆರ್ಟಿಕಲ್ಸ್‌ಗಳ ಪಾತ್ರ


ಕನ್ನಡದಲ್ಲಿ articlesಗೆ ಸಮಾನವಾದ ಪದಗಳಿಲ್ಲ. ಆದ್ದರಿಂದ ಇವುಗಳನ್ನು ನಾವು ಎಚ್ಚರಿಕೆಯಿಂದ ಬಳಸಬೇಕು. ಇಂಗ್ಲಿಷ್‌ನಲ್ಲಿ a, an, the ಎನ್ನುವ ಮೂರು adjectiveಗಳನ್ನು articles ಎಂದು ಕರೆಯುತ್ತೇವೆ. ಈ ಮೂರರಲ್ಲಿ a, an ಗಳನ್ನು indefinite articles ಎನ್ನುತ್ತೇವೆ ಹಾಗೂ the ಅನ್ನು definite article ಎಂದು ಕರೆಯುತ್ತೇವೆ. ಇಲ್ಲಿ definite ಎಂದರೆ ನಿರ್ದಿಷ್ಟ ಹಾಗೂ indefinite ಎಂದರೆ ನಿರ್ದಿಷ್ಟ ವಲ್ಲದುದು ಎಂದರ್ಥ. ನಮ್ಮ ಸಂಭಾಷಣೆಯಲ್ಲಿ ಯಾವುದಾದರೂ ವಸ್ತು/ವಿಷಯ/ವ್ಯಕ್ತಿಯ ಬಗ್ಗೆ ಮಾತನಾಡುವಾಗ ಅವುಗಳು ನಮಗೆ ನಿರ್ದಿಷ್ಟವಾಗಿ ತಿಳಿಯದೆ ಇದ್ದಾಗ a ಅಥವಾ an ಎನ್ನುವ indefinite articlesesಅನ್ನು ಬಳಸಬೇಕಾಗುತ್ತದೆ.
ಉದಾ: There is a letter for you.
An apple a day is good for health.
ಈ ಮೇಲಿನ ವಾಕ್ಯಗಳಲ್ಲಿ  a letter, an apple ಎಂದರೆ ನಿರ್ದಿಷ್ಟವಲ್ಲದ ಯಾವುದೋ ಪತ್ರ ಹಾಗೂ ಯಾವುದಾದರೂ ಸೇಬು ಎಂದರ್ಥ.
ಹಾಗೆಯೇ, ನಾವು ಯಾರ ಬಗ್ಗೆ ಅಥವಾ ಯಾವುದರ ಬಗ್ಗೆ ಮಾತನಾಡುತ್ತಿದ್ದೇವೆ ಎನ್ನುವುದು ನಿರ್ದಿಷ್ಟವಾಗಿ ತಿಳಿದಿದ್ದಲ್ಲಿ, the ಎನ್ನುವ definite article ಅನ್ನು ಬಳಸಬೇಕಾಗುತ್ತದೆ.
ಉದಾ: I know the clinic - ಈ ವಾಕ್ಯದಲ್ಲಿ, the clinic ಎಂದರೆ ಒಂದು ನಿರ್ದಿಷ್ಟವಾದ clinic ಎಂದರ್ಥ.
Indefinite ಅನ್ನು ಬಳಸುವಾಗ ಎಲ್ಲಿ a ಹಾಗೂ ಎಲ್ಲಿ an ಬಳಸಬೇಕು ಎಂಬುದರ ಬಗ್ಗೆ ಗಮನಹರಿಸೋಣ. ಯಾವ ಪದಗಳು consonant sound ನಿಂದ ಪ್ರಾರಂಭವಾಗುತ್ತವೆಯೋ ಅವುಗಳ ಹಿಂದೆ a ಉಪಯೋಗಿಸಬೇಕು.
ಉದಾ:A boy, a girl...
ಆದರೆ, hour, honest, heir ಗಳಂತಹ ಪದಗಳನ್ನು ಬಳಸುವಾಗ a ಉಪಯೋಗಿಸದಂತೆ ಎಚ್ಚರವಹಿಸಬೇಕು. ಏಕೆಂದರೆ, ಈ ಪದಗಳಲ್ಲಿ h ಅನ್ನು ಉಚ್ಚರಿಸುವುದಿಲ್ಲ. ಹವರ್/ಹಾನೆಸ್ಟ್/ಹೇರ್ ಗೆ ಬದಲಾಗಿ ಅವರ್/ಆನೆಸ್ಟ್/ಏರ್ ಎಂದು ಉಚ್ಚರಿಸುತ್ತೇವೆ. ಹಾಗಾಗಿ, an hour, an honest man, an heir ಬಳಸಬೇಕಾಗುತ್ತದೆ.
A ಎನ್ನುವ article ಅನ್ನು ನಮ್ಮ ಸಂಭಾಷಣೆಯಲ್ಲಿ ಬಳಸುವಾಗ, ಅದರ ಉಚ್ಚಾರಣೆಯ ಕಡೆಗೂ ನಮ್ಮ ಗಮನವಿರಬೇಕು. ಅದನ್ನು ವಾಕ್ಯಗಳಲ್ಲಿ ಬಳಸುವಾಗ ಎ ಎನ್ನದೆ ಅ ಎಂದು ಉಚ್ಚರಿಸಬೇಕು.
ಉದಾ: I am a teacher - ಈ ವಾಕ್ಯವನ್ನು ಐಯಾಮ್ ಎ ಟೀಚರ್ ಎನ್ನದೆ ಐಯಾಮ್ ಅ ಟೀಚರ್ ಎಂದು ಉಚ್ಚರಿಸಬೇಕಾಗುತ್ತದೆ.
A, e, i, o, u ಎಂಬುವು vowels ಎಂಬುದು ಸಾಮಾನ್ಯ ತಿಳುವಳಿಕೆ. ಇದಕ್ಕೆ ಅಪವಾದಗಳೂ ಇವೆ ಎಂಬುದನ್ನು ಮುಂದೆ ನೋಡೋಣ. ಯಾವ ಪದಗಳು vowel sound ನಿಂದ ಪ್ರಾರಂಭವಾಗುತ್ತವೆಯೋ ಅವುಗಳ ಹಿಂದೆ an ಬಳಸಬೇಕು.
ಉದಾ: an orange, an umbrella...
ಆದರೆ, university, European, useful ಎನ್ನುವಂತಹ ಪದಗಳನ್ನು ಬಳಸುವಾಗ an ಉಪಯೋಗಿಸಬಾರದು. ಏಕೆಂದರೆ, ಈ ಪದಗಳ ಮೊದಲನೆಯ ಅಕ್ಷರ vowel ಆದರೂ ಸಹ ಇವುಗಳನ್ನು ಉಚ್ಚರಿಸಬೇಕಾದರೆ ‘yu’ (ಯು) ಎನ್ನುವ consonant sound ನಿಂದ ಪ್ರಾರಂಭವಾಗುತ್ತವೆ. ಹಾಗಾಗಿ  a university, a European, a useful thing... ಎಂದು ಬಳಸಬೇಕಾಗುತ್ತದೆ.
Articles ನ ಸರಿಯಾದ ಬಳಕೆ ಬರಿ ಕಂಠಪಾಠದಿಂದ ದಕ್ಕುವಂತಹುದಲ್ಲ. ಕುಶಲ ಸಂಭಾಷಣಾಕಾರರ ಮಾತುಗಳನ್ನು ಗಮನವಿಟ್ಟು ಆಲಿಸಿ, ಈ articlesನ ಸೂಕ್ಷ್ಮಗಳನ್ನು ನಿಧಾನವಾಗಿ ಮನದಟ್ಟು ಮಾಡಿಕೊಳ್ಳಬೇಕು.
Definite articles ಉಪಯೋಗದ ಬಗ್ಗೆ ನೋಡೋಣ.
The ಎನ್ನುವ definite article ಅನ್ನು ಎಲ್ಲೆಲ್ಲಿ ಹಾಗೂ ಹೇಗೆ ಉಪಯೋಗಿಸಬಹುದು ಎಂಬುದನ್ನು ತಿಳಿದು ಕೊಳ್ಳೋಣ.
ನದಿ, ಸಮುದ್ರ, ದ್ವೀಪ ಅಥವಾ ಪರ್ವತಗಳನ್ನು ಕುರಿತು ಮಾತನಾಡುವಾಗ, ಅವುಗಳ ಹೆಸರಿನ ಹಿಂದೆ the ಬಳಸಬೇಕಾಗುತ್ತದೆ.
ಉದಾ: The Kaveri flows through the two states.
We can walk on some parts of the Arctic ocean, as it is frozen.
ಕೆಲವು ಪುಸ್ತಕಗಳ ಹೆಸರಿನ ಹಿಂದೆಯೂ the ಬಳುಸುತ್ತೇವೆ.
ಉದಾ: Valmiki wrote the Ramayana.
The Mahabharatha is a massive epic.
ನಮ್ಮ ಸಂಭಾಷಣೆಯಲ್ಲಿ, ಭೂಮಿ, ಆಕಾಶ, ಸೂರ್ಯ, ಚಂದ್ರ, ದಿಕ್ಕುಗಳು ಮುಂತಾದ ಅನನ್ಯ ಮತ್ತು ಏಕಮಾತ್ರ ವಾದವುಗಳ ಬಗ್ಗೆ ಮಾತನಾಡುವಾಗ, ಅವುಗಳ ಹಿಂದೆ  the ಉಪಯೋಗಿಸುತ್ತೇವೆ.
ಉದಾ: The sun rises in the east.
The sky has grown very dark.
ವಾದ್ಯಗಳ ಹೆಸರಿನ ಹಿಂದೆಯೂ the ಬಳಸಬೇಕು.
ಉದಾ: He plays the guitar very effectively.
ಕ್ರಮಸೂಚಕಗಳ (first, second, third, ....) ಹಿಂದೆ the ಉಪಯೋಗಿಸುತ್ತೇವೆ.
ಉದಾ: I would be the first to admit my mistakes.
My child has secured the first rank.
ಇಲ್ಲಿ ಗಮನಿಸಬೇಕಾದ ವಿಷಯವೆಂದರೆ, ಕ್ರಮಸೂಚಕಗಳು noun ಅಥವಾ adjective ಆಗಿದ್ದ ಸಂದರ್ಭದಲ್ಲಿ ಮಾತ್ರ ಅವುಗಳ ಹಿಂದೆ the ಬಳಸುತ್ತೇವೆ. ಆದರೆ, ಅದೇ ಕ್ರಮಸೂಚಕಗಳು (ordinals) adverb ಆಗಿದ್ದರೆ, ಅವುಗಳ ಹಿಂದೆ the ಬಳಸಬಾರದು.
ಉದಾ: My child stood first in the class.
Tallest, strongest, most beautiful, most intelligent ಮುಂತಾದ ssuperlative degree adjective  ಗಳ ಹಿಂದೆ the ಉಪಯೋಗಿಸಬೇಕು.
ಉದಾ: She is the cutest girl in the family.
He is the most intelligent boy in the class.
Proper nounಗಳ ಹಿಂದೆ the ಬಳಸಬಾರದು. ಹಾಗಾಗಿ, ಈ ಕೆಳಗೆ ಸೂಚಿಸಿರುವ ಸಾಮಾನ್ಯ ತಪ್ಪುಗಳಿಂದ ದೂರವಿರಿ:
1. The Bangalore is a place of opportunities (ತಪ್ಪು).
Bangalore is a place of opprotunities  (ಸರಿ).
2. I am learning the English (ತಪ್ಪು).
II am learning English (ಸರಿ).
The ನ ಸರಿಯಾದ ಬಳಕೆಯ ಜೊತೆಗೆ, ಅದರ ಸರಿಯಾದ ಉಚ್ಚಾರಣೆಯೂ ನಮಗೆ ತಿಳಿದಿರಬೇಕು. Consonant sound ಇಂದ ಪ್ರಾರಂಭವಾಗುವ ಪದದ ಹಿಂದೆ the ಬಂದರೆ, ಅದನ್ನು ‘ದ’ ಎಂದೂ ಹಾಗೂ vowel sound ಇಂದ ಪ್ರಾರಂಭವಾಗುವ ಪದದ ಹಿಂದೆ the ಬಂದರೆ, ಅದನ್ನು ‘ದಿ’ ಎಂದು ಉಚ್ಚರಿಸಬೇಕು.
ಉದಾ: The end of the film is fascinating. ಈ ವಾಕ್ಯವನ್ನು ಓದುವ ರೀತಿ ಹೀಗಿದೆ:
ದಿ ಎಂಡ್ ಆಫ್ ದ ಫಿಲ್ಮ್ ಈಸ್‌ಫ್ಯಾಸಿನೇಟಿಂಗ್.
the ಎನ್ನುವ ಪದ ಇಂಗ್ಲಿಷ್ ಭಾಷೆಯಲ್ಲಿಯೇ ಅತಿ ಹೆಚ್ಚು ಉಪಯೋಗಸಲಾಗುವ ಪದ. ಅದರ ಸರಿಯಾದ ಬಳಕೆಯನ್ನು ಗಮನವಿಟ್ಟು ಕಲಿಯಬೇಕು